ಮೈಸೂರು: ಕಾವ್ಯ ಒಂದು ಬಗೆಯ ಚಿಕಿತ್ಸೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅವರು ಅಭಿಪ್ರಾಯಿಸಿದರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಕರ್ನಾಟಕ ಕಾವಲು ಪಡೆ ಸಾಂಸ್ಕೃತಿಕ ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯುವಕವಿ ಕೆ.ಎಸ್.ಪ್ರದೀಪ್ ಕುಮಾರ್ ಅವರ `ಪಯಣ’ ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರದೀಪ್ ಕುಮಾರ್, ಮಾನಸಿಕ ಆಘಾತದಿಂದ ಹೊರಬರಲು ಕಾವ್ಯ ರಚನೆ ಮಾರ್ಗ ಹಿಡಿದಿದ್ದಾರೆ. ನನ್ನನ್ನೂ ಒಳಗೊಂಡಂತೆ ಎಲ್ಲರೂ ಮಾನಸಿಕ ಒತ್ತಡಕ್ಕೆ ಒಳಗಾದವರೇ ಆಗಿದ್ದಾರೆ. ಈ ಬಗ್ಗೆ…
ಸಾಮಾಜಿಕ, ಮಾನವೀಯ ಮೌಲ್ಯಗಳು ಅಪಮೌಲ್ಯವಾಗುತ್ತಿವೆ: ಹಿರಿಯ ಸಾಹಿತಿ ಸಿ.ಪಿ. ಕೃಷ್ಣಕುಮಾರ್ ಅಭಿಮತ
July 23, 2018ಮೈಸೂರು: ಈಗಿನ ಕೌಟುಂಬಿಕ ಜೀವನದಲ್ಲಿ ಮೌಲ್ಯಗಳ ಪಲ್ಲಟವಾಗುತ್ತಿರುವುದರಿಂದ ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳು ಅಪ ಮೌಲ್ಯವಾಗುತ್ತಿವೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಬೇಸರ ವ್ಯಕ್ತಪಡಿಸಿದರು. ಜೆಎಲ್‍ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ಅಖಿಲ ಭಾರತ ಸರ್ವಜ್ಞ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅವರ 74ನೇ ಜನ್ಮದಿನ ಅಂಗವಾಗಿ ಗಣ್ಯರಿಗೆ ಅಭಿನಂದನೆ ಹಾಗೂ `ಭೈರವ ವಿಜಯಾಂಜಲಿ’ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ದಾಂಪತ್ಯ ಕಟ್ಟಡದ ಇಟ್ಟಿಗೆಗಳು ಸಡಿಲವಾಗುತ್ತಿವೆ. ಪರಂಪರಾ…
ವಿಶ್ವ ಸಾಹಿತ್ಯ ಕ್ಷೇತ್ರದಲ್ಲಿ ಕಾಳಿದಾಸರ `ಅಭಿಜ್ಞಾನ ಶಾಕುಂತಲ’ ಇತರೆ ನಾಟಕಗಳಿಗೆ ಅಗ್ರಪಂಕ್ತಿ ಇದೆ
July 22, 2018ಹಿರಿಯ ಸಾಹಿತಿ ಡಾ.ಸಿಪಿಕೆ ಅಭಿಮತ ಡಾ.ಕೆ.ಕೃಷ್ಣ ಮೂರ್ತಿ ಸಂಸ್ಮರಣೆ ಹಾಗೂ ಕಾಳಿದಾಸನ ನಾಟಕಗಳು ಮರುಮುದ್ರಣ ಕೃತಿ ಬಿಡುಗಡೆ ಮೈಸೂರು: ವಿಶ್ವ ಸಾಹಿತ್ಯ ಕ್ಷೇತ್ರದಲ್ಲಿ ಕಾಳಿದಾಸರ `ಅಭಿಜ್ಞಾನ ಶಾಕುಂತಲ’ ಸೇರಿದಂತೆ ಹಲವು ನಾಟಕಗಳು ಅಗ್ರಪಂಕ್ತಿ ಪಡೆದಿವೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು. ಮೈಸೂರು ಅರಮನೆ ಉತ್ತರ ದ್ವಾರದ ಪಕ್ಕದಲ್ಲಿರುವ ಕಸಾಪ ಸಭಾಂಗಣದಲ್ಲಿ ಡಾ.ಕೆ.ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ 95ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ `ಡಾ.ಕೆ.ಕೃಷ್ಣಮೂರ್ತಿ-ಸಂಸ್ಮರಣೆ ಹಾಗೂ ಕಾಳಿದಾಸನ ನಾಟಕಗಳು’…
ಸರ್ಕಾರದ ನಾನಾ ಭಾಗ್ಯಗಳಿಗಿಂತ `ವಿದ್ಯಾಭಾಗ್ಯ’ ದೊಡ್ಡದು
July 19, 2018ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಮತ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಡಾ. ಅಂಚಿ ಸಣ್ಣ ಸ್ವಾಮಿಗೌಡರಿಗೆ ಅಭಿನಂದನೆ ಮೈಸೂರು: ಸರ್ಕಾರ ನೀಡುವ ಎಲ್ಲಾ ಭಾಗ್ಯಗಳಿಗಿಂತ ವಿದ್ಯಾಭಾಗ್ಯ ದೊಡ್ಡದು. ಆದ್ದರಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಜ್ಞಾನವಂತರಾಗಲು ವಿವಿಧ ರೂಪದಲ್ಲಿ ಪ್ರೊತ್ಸಾಹಿಸುವುದು ಉತ್ತಮ ಬೆಳವಣಿಗೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ತಿಳಿಸಿದರು. ಮೈಸೂರಿನ ಪಡುವಾರಹಳ್ಳಿ(ವಿನಾಯಕ ನಗರ) ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭೂಮಿಗಿರಿ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಡಾ.ಅಂಚಿ ಸಣ್ಣಸ್ವಾಮಿಗೌಡರಿಗೆ ಅಭಿನಂದನೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್…
ಸರ್ವ ಕಾಲಕ್ಕೂ ಪುಸ್ತಕ ಸಂಸ್ಕೃತಿ ಪುನರುತ್ಥಾನವಾಗಲಿ
June 26, 2018ಶ್ರವಣಬೆಳಗೊಳ: ಮೂರ್ತ ಸಂಸ್ಕೃತಿ ಯಾಗಿರುವ ಪುಸ್ತಕಗಳು ಇಂದು ಅವನತಿಯಲ್ಲಿದ್ದು, ತತ್ಸಮಾನವಾಗಿ ವಿದ್ಯುನ್ಮಾನ ಮಾಧ್ಯಮಗಳಿದ್ದರೂ ಸರ್ವ ಕಾಲಕ್ಕೂ ಪುಸ್ತಕ ಸಂಸ್ಕೃತಿ ಪುನರುತ್ಥಾನ ವಾಗಬೇಕು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ ಆಶಯ ವ್ಯಕ್ತಪಡಿಸಿದರು. ಅವರು ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ನಡೆದ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದಿನ ಜನತೆ ಪುಸ್ತಕವನ್ನು ಮುಟ್ಟಬೇಕು, ಮೇಯಬೇಕು ನಂತರ ಜೀರ್ಣಿಸಿ ಕೊಳ್ಳಬೇಕೆಂದು ಎಂದು ಸಲಹೆ ನೀಡಿದರು. ಪುಸ್ತಕ ಪ್ರೀತಿಗಿಂತಲೂ ಮುಂಚಿತವಾಗಿ ಸಂಸ್ಕೃತಿ ಯನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯದ…