ಸರ್ಕಾರದ ನಾನಾ ಭಾಗ್ಯಗಳಿಗಿಂತ `ವಿದ್ಯಾಭಾಗ್ಯ’ ದೊಡ್ಡದು
ಮೈಸೂರು

ಸರ್ಕಾರದ ನಾನಾ ಭಾಗ್ಯಗಳಿಗಿಂತ `ವಿದ್ಯಾಭಾಗ್ಯ’ ದೊಡ್ಡದು

July 19, 2018
  • ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಮತ
  • ರಾಷ್ಟ್ರ ಪ್ರಶಸ್ತಿ ಪುರಸ್ಕøತ ಡಾ. ಅಂಚಿ ಸಣ್ಣ ಸ್ವಾಮಿಗೌಡರಿಗೆ ಅಭಿನಂದನೆ

ಮೈಸೂರು: ಸರ್ಕಾರ ನೀಡುವ ಎಲ್ಲಾ ಭಾಗ್ಯಗಳಿಗಿಂತ ವಿದ್ಯಾಭಾಗ್ಯ ದೊಡ್ಡದು. ಆದ್ದರಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಜ್ಞಾನವಂತರಾಗಲು ವಿವಿಧ ರೂಪದಲ್ಲಿ ಪ್ರೊತ್ಸಾಹಿಸುವುದು ಉತ್ತಮ ಬೆಳವಣಿಗೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ತಿಳಿಸಿದರು.

ಮೈಸೂರಿನ ಪಡುವಾರಹಳ್ಳಿ(ವಿನಾಯಕ ನಗರ) ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭೂಮಿಗಿರಿ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಡಾ.ಅಂಚಿ ಸಣ್ಣಸ್ವಾಮಿಗೌಡರಿಗೆ ಅಭಿನಂದನೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿಕ್ಕ ಮಕ್ಕಳು ನಿಷ್ಕಲ್ಮಶ ಹೃದಯಿಗಳಾಗಿರುತ್ತಾರೆ. ಇಂತಹ ಮಕ್ಕಳಿಗೆ ಉತ್ತಮ ವಾತಾವರಣದಲ್ಲಿ ವಿದ್ಯೆ, ವಿನಯ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಕಲಿಸಲು ಶಿಕ್ಷಕರು ಶ್ರಮಿಸುತ್ತಾರೆ. ಇಂದಿನ ಮಕ್ಕಳಿಗೆ ಶಾಲಾ ಹಂತದಲ್ಲಿ ಸ್ವಾಮಿ ವಿವೇಕಾನಂದ, ಕುವೆಂಪು ಸೇರಿದಂತೆ ಅನೇಕ ಸಾಧಕರ ಜೀವನಚರಿತ್ರೆಗಳನ್ನು ತಿಳಿಸಿಕೊಡಬೇಕು. ಇದು ವಿದ್ಯಾರ್ಥಿಗಳ ಮುಂದಿನ ಬದುಕಿಗೆ ಸಹಕಾರಿಯಾಗಲಿದೆ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಡಾ.ಅಂಚಿ ಸಣ್ಣ ಸ್ವಾಮಿಗೌಡ ಅವರ ಸಾಧನೆಯನ್ನು ಗುರುತಿಸಿ, ಮಕ್ಕಳ ಮುಂದೆ ಅಭಿನಂದಿಸುತ್ತಿರುವುದು ಒಳ್ಳೆಯ ಕೆಲಸ. ಇದರಿಂದ ಶಿಕ್ಷಕರ ಬಗ್ಗೆ ಮಕ್ಕಳ ಮನಸಿನಲ್ಲಿ ಉತ್ತಮ ಭಾವನೆ ಮೂಡುತ್ತದೆ ಎಂದು ತಿಳಿಸಿದರು.

ಈ ವೇಳೆ ಭೂಮಿಗಿರಿ ಪ್ರಕಾಶನದ ಎನ್.ಬೆಟ್ಟೇಗೌಡರ ಜನ್ಮಾದಿನಾಚರಣೆ ಪ್ರಯುಕ್ತ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್, ಇತರೆ ಸಾಮಾಗ್ರಿಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ವಿಪ್ರ ಮುಖಂಡ ಕೆ.ರಘುರಾಂ, ಹಿರಿಯ ಜಾನಪದ ವಿದ್ವಾಂಸ ಪ್ರೊ.ಜಿ.ಎಸ್.ಭಟ್, ಹಾಡ್ರ್ವಿಕ್ ಪಿಯು ಕಾಲೇಜಿನ ಪ್ರಾಂಶುಪಾಲ ಹಿರಿಮರಳಿ ಧರ್ಮರಾಜು, ಮುಖ್ಯ ಶಿಕ್ಷಕ ಟಿ.ಜಿ.ಆನಂದ್, ಪಡುವಾರಳ್ಳಿ ಮುಖಂಡರಾದ ರಾಮಣ್ಣ, ನಿವೃತ್ತ ಡಿವೈಎಸ್ಪಿ ಶಿವಬಸಪ್ಪ ಸೇರಿದಂತೆ ಇತರರಿದ್ದರು.

ಮೈಸೂರಿನ ಪಡುವಾರಹಳ್ಳಿ(ವಿನಾಯಕ ನಗರ) ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭೂಮಿಗಿರಿ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಡಾ.ಅಂಚಿ ಸಣ್ಣಸ್ವಾಮಿಗೌಡರಿಗೆ ಅಭಿನಂದನೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಉದ್ಘಾಟಿಸಿದರು.

Translate »