ಮೈಸೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಸೆ.13ರಂದು ಗಣೇಶ ವಿಗ್ರಹಗಳ ವಿಸರ್ಜನೆಗಾಗಿ ಪರಿಸರ ಸ್ನೇಹಿ ಸಂಚಾರಿ ವಿಸರ್ಜನಾ ವ್ಯವಸ್ಥೆಯನ್ನು ಮೂರು ವಾಹನಗಳ ಮೂಲಕ ಮಾಡಲಾಗಿದೆ. ಮೊದಲನೇ ವಾಹನ: ಸಂಜೆ 4ರಿಂದ 5.15 ರವರೆಗೆ ಮೇಟಗಳ್ಳಿ, ಆರಕ್ಷಕ ಠಾಣೆ ಹತ್ತಿರ, ಸಂಜೆ 5.30 ರಿಂದ 6.45 ವಿಜಯನಗರ 2ನೇ ಹಂತದ ಕೆ.ಡಿ. ಸರ್ಕಲ್ ಹತ್ತಿರ, ಸಂಜೆ 7ರಿಂದ 8.15 ಒಂಟಿಕೊಪ್ಪಲ್ ಚಂದ್ರಮೌಳೇಶ್ವರ ದೇವಸ್ಥಾನ/ ಮಾತೃಮಂಡಳಿ ಹತ್ತಿರ ರಾತ್ರಿ 8.30 ರಿಂದ 10.30 ಕುಕ್ಕರಹಳ್ಳಿಕೆರೆ ಮುಖ್ಯದ್ವಾರ ದಲ್ಲಿ…
ಮೈಸೂರಿನ ನೂರೊಂದು ಗಣಪತಿ ದೇವಸ್ಥಾನದಲ್ಲಿ ಇಂದಿನಿಂದ ಗಣೇಶೋತ್ಸವ
September 13, 2018ಇಂದು ಮಹಾ ರುದ್ರಾಭಿಷೇಕ, ವಿಶೇಷ ಹೂವಿನ ಅಲಂಕಾರ ಮೈಸೂರು: ಮೈಸೂರಿನ ಕೆ.ಆರ್.ಮೊಹಲ್ಲಾ, ತ್ಯಾಗರಾಜ ರಸ್ತೆ ನೂರೊಂದು ಗಣಪತಿ ದೇವಸ್ಥಾನದಲ್ಲಿ ಸೆ.12 ರಿಂದ 16ರವರೆಗೆ 64ನೇ ವಾರ್ಷಿಕೋತ್ಸವ, ಗಣೇಶ ಹಬ್ಬದ ಪೂಜಾ ಮಹೋತ್ಸವ ನಡೆಯಲಿದೆ. ಸೆ.13ರಂದು ಪ್ರಾತಃಕಾಲದಲ್ಲಿ ದೇವತಾ ಪ್ರಾರ್ಥನೆ, ನೂರೊಂದು ಗಣಪತಿಗೆ ತೈಲಾಭಿಷೇಕ, ಕ್ಷೀರಾಭಿ ಷೇಕ, ಮಹಾರುದ್ರಾಭಿಷೇಕ, ವಿಶೇಷ ಹೂವಿನ ಅಲಂಕಾರ, ಮಹಾನೈವೇದ್ಯ ನಡೆಯಲಿದೆ. ಸಂಜೆ 4 ಗಂಟೆಗೆ ವಿಶೇಷ ಪೂಜಾ ಕಾರ್ಯಗಳು ನೆರ ವೇರಲಿವೆ. ಗಣೇಶ ಮಹೋತ್ಸವದ ಅಂಗವಾಗಿ ಪ್ರತಿದಿನ ಸಂಜೆ 7 ಗಂಟೆಗೆ ಸಾಂಸ್ಕøತಿಕ…
ಗುಂಡ್ಲುಪೇಟೆಯಲ್ಲಿ ಗಣಪಣ್ಣನ ಭರಾಟೆ
September 13, 2018ಗುಂಡ್ಲುಪೇಟೆ: ಹಿಂದೂಗಳ ಪವಿತ್ರ ಹಬ್ಬ ಗಣೇಶ ಚತು ರ್ಥಿಗೆ ಇನ್ನು ಕೇವಲ ಒಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಪಟ್ಟಣದ ತುಂಬೆಲ್ಲಾ ಈಗ ಗಣಪಣ್ಣನ ಮೂರ್ತಿಗಳು ರಾರಾ ಜಿಸ ತೊಡಗಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ಇಲ್ಲಿ ಹೆಚ್ಚಾಗಿ ಕಾಣಸಿಗದಿದ್ದರೂ ಸಹ ರಾಸಾಯನಿಕವಲ್ಲದ ವಾಟರ್‍ಕಲರ್ ನಿಂದ ಮಾಡಿದ ಜೇಡಿಮಣ್ಣಿನ ಬಣ್ಣ ಬಣ್ಣದ, ವಿವಿಧ ರೂಪಗಳ ಮೂರ್ತಿಗಳು ಮಾರಾಟಕ್ಕೆ ಸಿದ್ಧವಾಗಿದೆ. ಈಗಾಗಲೇ ಪಟ್ಟಣ ಕುಂಬಾರ ಬೀದಿ ಯಲ್ಲಿ ಕಳೆದ ಆರು ತಿಂಗಳಿನಿಂದ ಕಲಾವಿ ದರ ಕೈ ಚಳಕದಿಂದ ಅರಳುತ್ತಿರುವ…
ಗೌರಿ-ಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ
September 13, 2018ಮಂಡ್ಯ: ಗೌರಿ ಗಣೇಶ ಹಬ್ಬದ ಸಂಭ್ರಮವನ್ನಾಚರಿಸಲು ನಾಡಿನ ಜನತೆ ಸಜ್ಜಾಗಿದ್ದಾರೆ. ಆದರೆ, ಈ ಸಂಭ್ರಮಕ್ಕೆ ಬೆಲೆಯೇರಿಕೆಯ ಬಿಸಿ ತಟ್ಟಿದೆ. ಗಣೇಶನ ಹಬ್ಬದ ಮುನ್ನಾ ದಿನವಾದ ಬುಧವಾರ ಜನ-ಹೂ ಹಣ್ಣುಗಳ ಖರೀದಿಗೆ ಮುಗಿ ಬಿದ್ದಿದ್ದರು. ಮಾರುಕಟ್ಟೆಯ ತುಂಬೆಲ್ಲ ಜನತೆ ಗಿಜಿಗಿಡುತ್ತಿದ್ದ ದೃಶ್ಯಕಂಡು ಬಂತು. ಹಬ್ಬಕ್ಕೆ ಬೇಕಾದ ಹೂವು ಹಣ್ಣುಗಳು, ಬಾಳೆಕಂಬ, ತಾವರೆ, ಡೇರೆ ಹೂವುಗಳ ಮಾರಾಟ ಭರ್ಜರಿಯಾಗಿಯೇ ನಡೆಯು ತ್ತಿತ್ತು. ಈ ಹಿಂದಿಗಿಂತ ಇಂದು ದುಪ್ಪಟ್ಟು ಬೆಲೆ ನೀಡಿ ಖರೀದಿಸಬೇಕಾದ ಸ್ಥಿತಿ ಗ್ರಾಹಕ ರದ್ದಾಗಿತ್ತು. ಪಚ್ಚ ಬಾಳೆಗಿಂತ ಏಲಕ್ಕಿ…
ಪಿಒಪಿ ಗಣಪನ ನಿಷೇಧಿಸಿದ ಸರ್ಕಾರ
September 7, 2018ಬೆಂಗಳೂರು: ಪ್ಲಾಸ್ಟರ್ ಆಫ್ ಪ್ಯಾರಿಸ್-(ಪಿಒಪಿ) ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯನ್ನು ಸರ್ಕಾರ ನಿಷೇಧಿಸಿದೆ. ಪರಿಸರಕ್ಕೆ ಹಾನಿ ಮಾಡುವ ಮತ್ತು ನದಿ, ಕೆರೆ ನೀರನ್ನು ಕಲ್ಮಶಗೊಳಿಸುವ ಇಂತಹ ಗಣೇಶ ಮೂರ್ತಿಗಳನ್ನು ತಯಾರಿಸುವುದನ್ನೇ ನಿಷೇಧಿಸಲಾಗಿದೆ. ಇದರ ನಡುವೆಯೂ ಎಲ್ಲಿಯಾದರೂ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪಿಸಿ, ವಿಸರ್ಜನೆಗೆ ಮುಂದಾದರೆ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಮತ್ತು ಪರಿಸರ ಸಚಿವ ಆರ್.ಶಂಕರ್ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣ್ಣಿನ ಗಣೇಶ…