ಗುಂಡ್ಲುಪೇಟೆಯಲ್ಲಿ ಗಣಪಣ್ಣನ ಭರಾಟೆ
ಚಾಮರಾಜನಗರ

ಗುಂಡ್ಲುಪೇಟೆಯಲ್ಲಿ ಗಣಪಣ್ಣನ ಭರಾಟೆ

September 13, 2018

ಗುಂಡ್ಲುಪೇಟೆ:  ಹಿಂದೂಗಳ ಪವಿತ್ರ ಹಬ್ಬ ಗಣೇಶ ಚತು ರ್ಥಿಗೆ ಇನ್ನು ಕೇವಲ ಒಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಪಟ್ಟಣದ ತುಂಬೆಲ್ಲಾ ಈಗ ಗಣಪಣ್ಣನ ಮೂರ್ತಿಗಳು ರಾರಾ ಜಿಸ ತೊಡಗಿದೆ.

ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ಇಲ್ಲಿ ಹೆಚ್ಚಾಗಿ ಕಾಣಸಿಗದಿದ್ದರೂ ಸಹ ರಾಸಾಯನಿಕವಲ್ಲದ ವಾಟರ್‍ಕಲರ್ ನಿಂದ ಮಾಡಿದ ಜೇಡಿಮಣ್ಣಿನ ಬಣ್ಣ ಬಣ್ಣದ, ವಿವಿಧ ರೂಪಗಳ ಮೂರ್ತಿಗಳು ಮಾರಾಟಕ್ಕೆ ಸಿದ್ಧವಾಗಿದೆ.

ಈಗಾಗಲೇ ಪಟ್ಟಣ ಕುಂಬಾರ ಬೀದಿ ಯಲ್ಲಿ ಕಳೆದ ಆರು ತಿಂಗಳಿನಿಂದ ಕಲಾವಿ ದರ ಕೈ ಚಳಕದಿಂದ ಅರಳುತ್ತಿರುವ ಗಣಪನ ಮೂರ್ತಿಗಳು ತಾಲೂಕಿನಾ ದ್ಯಂತ ಮಾರಾಟವಾಗಲು ರೆಡಿಯಾಗಿದೆ.

ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತಮ್ಮನ್ನು ಮತ್ತು ತಮ್ಮ ಕುಟುಂಬದ ಸದಸ್ಯರನ್ನು ತೊಡಗಿಸಿಕೊಂಡಿರುವ ಕುಂಬಾರ ಬೀದಿಯ ವಾಸಿ ಹಾಗೂ ಕಲಾವಿದ ಶ್ರೀನಿವಾಸ್‍ರವ ರನ್ನು ಭೇಟಿ ಮಾಡಿದಾಗ ಅವರು ಜೇಡಿ ಮಣ್ಣಿನಿಂದ ತಯಾರಿಸಿದ್ದ ಗಣಪತಿ ಮೂರ್ತಿಗೆ ಬಣ್ಣ ಹಚ್ಚುವ ಕಾಯಕದಲ್ಲಿ ನಿರತರಾಗಿದ್ದರು.

ಈ ಬಗ್ಗೆ ವಿವರಣೆ ನೀಡಿದ ಅವರು, ಗಣೇಶ ಮೂರ್ತಿ ತಯಾರಿಕೆಯ ಕಾಯ ಕವನ್ನು ಅವರ ತಂದೆಯವರ ಕಾಲದಿಂದಲೂ ಅಂದರೆ ಸುಮಾರು 40 ವರ್ಷಕ್ಕೂ ಹೆಚ್ಚು ಕಾಲದಿಂದಲೂ ಕುಲಕಸುಬನ್ನಾಗಿ ಮಾಡಿ ಕೊಂಡಿರುವುದಾಗಿ ತಿಳಿಸಿದರು.

ತಾಲೂಕಿನ ಎಲ್ಲಾ ಹಳ್ಳಿ-ಹಳ್ಳಿಗೂ ಗೌರಿ ಮತ್ತು ಗಣೇಶನ ಮೂರ್ತಿಯನ್ನು ನೀಡುತ್ತಾ ಬಂದಿರುವ ಶ್ರೀನಿವಾಸ್, ಒಂದು ಅಡಿ ಮೂರ್ತಿಯಿಂದ ಐದು ಅಡಿ ಮೂರ್ತಿ ಯವರೆಗೆ ತಮ್ಮ ಮನೆಯಲ್ಲೇ ತಯಾರು ಮಾಡುತ್ತಾರೆ. ಗಣೇಶನ ಹಬ್ಬಕ್ಕಾಗಿಯೇ ಆರು ತಿಂಗಳು ಕಾಲ ಮೂರ್ತಿ ತಯಾರಿಕೆ ಯಲ್ಲಿ ತಲ್ಲೀನರಾಗುವ ಇವರು ಗಣೇಶ ಹಾಗೂ ಗೌರಿ ವಿಗ್ರಹಗಳ ತಯಾರಿಕೆ ಯಲ್ಲಿ ಎತ್ತಿದ ಕೈ. ವಿವಿಧ ಆಕಾರಗಳ ಮುದ್ದು- ಮುದ್ದು ಗಣಪಗಳು ಇವರ ಕೈಯಲ್ಲಿ ಆಕಾರಗೊಂಡು ಮಿರಿಮಿರಿ ಮಿಂಚುತ್ತಿವೆ.

ಇತ್ತೀಚಿಗೆ ಸರ್ಕಾರ ಪರಿಸರ ಸ್ನೇಹಿ ಗಣಪನನ್ನು ತಯಾರಿಸಲು ಹಾಗೂ ಹಾನಿ ಕಾರಕ ಬಣ್ಣಗಳನ್ನು ಬಳಸದಂತೆ ಸೂಚನೆ ನೀಡಿದೆ. ಅದರಂತೆ ಪರಿಸರಕ್ಕೆ ಹಾನಿಕಾರಕ ವಲ್ಲದ ಬಣ್ಣಗಳನ್ನು ಬಳಸಿ ವಿವಿಧ ನಮೂನೆ ಗಳ ಗಣಪತಿಯನ್ನು ತಯಾರಿಸಲಾಗಿದೆ.

ಮಕ್ಕಳ ಉತ್ಸಾಹ: ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಪಟ್ಟಣದ ಗಲ್ಲಿ ಗಲ್ಲಿಗಳಲ್ಲೂ ಗಣೇಶನನ್ನು ಕೂರಿಸಲು ಕಂಬ ನೆಟ್ಟು ಗಣೇಶನ ಫೋಟೋ ಹಾಕಿ ಜಾಗ ಗುರುತಿಟ್ಟುಕೊಳ್ಳುತ್ತಿರುವ ಹಾಗೂ ಮನೆ ಮನೆಗೆ ತೆರಳಿ ಗೋಲಕ ಹಿಡಿದು ‘ಗಣ ಪತಿ ವಸೂಲಿ’ ಎಂದು ಕೂಗುತ್ತಾ ಚಿಲ್ಲರೆ ಕಾಸು ಸಂಗ್ರಹಿಸುತ್ತಿರುವ ಮಕ್ಕಳ ಉತ್ಸಾಹ ಹಬ್ಬಕ್ಕೆ ಮತ್ತಷ್ಟು ಕಳೆ ಕಟ್ಟುತ್ತಿರುವುದರಲ್ಲಿ ಎರಡು ಮಾತಿಲ್ಲ.

ಏನೇ ಆಗಲಿ ಮುದುಕರಿಂದ ಮಕ್ಕಳ ವರೆಗೂ ಇಷ್ಟವಾಗುವ ಪ್ರಿಯ ದೈವ ಗಣೇಶನನ್ನು ಬರಮಾಡಿಕೊಳ್ಳಲು ಜನರು ಕಾತುರರಾಗಿದ್ದಾರೆ.

Translate »