ಗಣಪತಿ ವಿಗ್ರಹಗಳ ವಿಸರ್ಜನೆಗೆ ಮೈಸೂರಲ್ಲಿ ಸಂಚಾರಿ ವಾಹನ
ಮೈಸೂರು

ಗಣಪತಿ ವಿಗ್ರಹಗಳ ವಿಸರ್ಜನೆಗೆ ಮೈಸೂರಲ್ಲಿ ಸಂಚಾರಿ ವಾಹನ

September 13, 2018

ಮೈಸೂರು:  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಸೆ.13ರಂದು ಗಣೇಶ ವಿಗ್ರಹಗಳ ವಿಸರ್ಜನೆಗಾಗಿ ಪರಿಸರ ಸ್ನೇಹಿ ಸಂಚಾರಿ ವಿಸರ್ಜನಾ ವ್ಯವಸ್ಥೆಯನ್ನು ಮೂರು ವಾಹನಗಳ ಮೂಲಕ ಮಾಡಲಾಗಿದೆ.

ಮೊದಲನೇ ವಾಹನ: ಸಂಜೆ 4ರಿಂದ 5.15 ರವರೆಗೆ ಮೇಟಗಳ್ಳಿ, ಆರಕ್ಷಕ ಠಾಣೆ ಹತ್ತಿರ, ಸಂಜೆ 5.30 ರಿಂದ 6.45 ವಿಜಯನಗರ 2ನೇ ಹಂತದ ಕೆ.ಡಿ. ಸರ್ಕಲ್ ಹತ್ತಿರ, ಸಂಜೆ 7ರಿಂದ 8.15 ಒಂಟಿಕೊಪ್ಪಲ್ ಚಂದ್ರಮೌಳೇಶ್ವರ ದೇವಸ್ಥಾನ/ ಮಾತೃಮಂಡಳಿ ಹತ್ತಿರ ರಾತ್ರಿ 8.30 ರಿಂದ 10.30 ಕುಕ್ಕರಹಳ್ಳಿಕೆರೆ ಮುಖ್ಯದ್ವಾರ ದಲ್ಲಿ ನಿಲುಗಡೆಯಾಗಲಿದೆ. ಈ ವಾಹನಕ್ಕೆ ಸಂಬಂಧಿಸಿದಂತೆ ಎಂ.ಸಿದ್ದಯ್ಯ-9880164745 ಅವರನ್ನು ಸಂಪರ್ಕಿಸಬಹುದು.

ಎರಡನೇ ವಾಹನ: ಸಂಜೆ 4ರಿಂದ 5.15ರವರೆಗೆ ಯಾದವಗಿರಿ, ವಿಕ್ರಮ್ ಆಸ್ಪತ್ರೆ ಹತ್ತಿರ, ಸಂಜೆ 5.30 ರಿಂದ 6.45 ಶಾಂತಲಾ ಚಿತ್ರಮಂದಿರ ಹತ್ತಿರ, ರಾತ್ರಿ 7ರಿಂದ 8.15 ಚಾಮುಂಡಿಪುರಂ ಸರ್ಕಲ್, ಸಂಜೆ 8.30 ರಿಂದ 10.30 ಕಾರಂಜಿ ಕೆರೆ ಮುಖ್ಯದ್ವಾರದಲ್ಲಿ ನಿಲುಗಡೆ ಯಾಗಲಿದೆ. ಈ ವಾಹನಕ್ಕೆ ಸಂಬಂ ಧಿಸಿದಂತೆ ಶಿವಣ್ಣ-9900479002 ಅವರನ್ನು ಸಂಪರ್ಕಿಸಬಹುದು.
ಮೂರನೇ ವಾಹನ: ಸಂಜೆ 4ರಿಂದ 5.15ರವರೆಗೆ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪ, ಸಂಜೆ 5.30ರಿಂದ 6.45 ಜಯನಗರ ರೈಲ್ವೇ ಗೇಟ್ ಹತ್ತಿರ, ರಾತ್ರಿ 7ರಿಂದ 8.15 ಜೆ.ಪಿ ನಗರ ಗೊಬ್ಬಳಿ ಮರದ ಬಸ್ ನಿಲ್ದಾಣ, ರಾತ್ರಿ 8.30 ರಿಂದ 10.30 ಶ್ರೀರಾಂಪುರ ಮಾರ್ಗವಾಗಿ ಲಿಂಗಾಂಬುಧಿ ಕೆರೆ ಮುಖ್ಯದ್ವಾರದಲ್ಲಿ ನಿಲುಗಡೆಯಾಗಲಿದೆ. ಈ ವಾಹನಕ್ಕೆ ಸಂಬಂಧಿಸಿದಂತೆ ಹೆಚ್.ಸಿ. ಲಕ್ಷ್ಮಣ್-9845307419 ಅವರನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಕೆ.ಎಲ್. ಮಂಜುನಾಥ್- 984497 2002, ಅಶ್ವಿನಿ ಬಿ.ಕೆ.-9742345840 ಮತ್ತು ಸಬಿಕೆ ನೂಬಿಯಾ-9538912357, ಉಮ್ಮೇ ಹಮೀದ-9972999511 ಅವರನ್ನು ಸಂಪರ್ಕಿಸಬಹುದು.

ಸಾರ್ವಜನಿಕರು ಈ ಅವಕಾಶವನ್ನು ಉಪಯೋಗಿಸಿಕೊಳ್ಳುವಂತೆ ಹಾಗೂ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಪರಿಸರಕ್ಕೆ ಹಾನಿಯಾಗದಂತೆ ಸ್ನೇಹಮಯಿಯಾಗಿ ಆಚರಿಸುವಂತೆ ಮೈಸೂರು ನಗರದ ಪರಿಸರ ಅಧಿಕಾರಿ ವಿನಂತಿಸಿದ್ದಾರೆ.

Translate »