ಹಾಸನ: ಯಾವುದೇ ದುರಾ ಲೋಚನೆ ಹಾಗೂ ಪ್ರಭಾವಗಳಿಗೆ ಒಳಗಾ ಗದೇ ಧೈರ್ಯ ಮತ್ತು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವುದು ಸಮಾಜಕ್ಕೆ ನೀವು ಕೊಡುವ ಒಂದು ಕೊಡುಗೆಯಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕರು ಹಾಗೂ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ರಾದ ಕಿಶೋರ್ ಚಂದ್ರ ಹೇಳಿದರು. ತಾಲೂಕಿನ ಶಾಂತಿಗ್ರಾಮ ಪೊಲೀಸ್ ತರಬೇತಿ ಶಾಲೆ ಕವಾಯತು ಮೈದಾನ ಆವರಣದಲ್ಲಿ ನಡೆದ 3ನೇ ತಂಡದ ನಾಗ ರಿಕ ಪೊಲೀಸ್ ಕಾನ್ಸ್‍ಟೇಬಲ್‍ಗಳ ನಿರ್ಗ ಮನ…
ಬೆಟ್ಟಕ್ಕೆ ಪೈಪ್ ಹೊತ್ತು ಶ್ರಮದಾನ ಮಾಡಿದ ವಿದ್ಯಾರ್ಥಿಗಳು
May 7, 2019ಅರಸೀಕೆರೆ: ದಶಮಾನಗಳಿಂದ ಕುಡಿಯುವ ನೀರು ಸಮಸ್ಯೆ ಎದುರಿಸುತ್ತಿದ್ದ ಮಾಲೇಕಲ್ಲು ತಿರುಪತಿ ಲಕ್ಷ್ಮೀವೆಂಕಟರಮಣ ಸ್ವಾಮಿಯ ಬೆಟ್ಟದ ಮೇಲ್ಭಾಗಕ್ಕೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ನಡೆಯುತ್ತಿರುವ ಕಾಮ ಗಾರಿಯಲ್ಲಿ ಚಂದ್ರಶೇಖರ ಭಾರತಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನ ಮಾಡುವುದರ ಮೂಲಕ ಪೈಪ್‍ಗಳನ್ನು ಬೆಟ್ಟದ ಮೇಲ್ಭಾಗಕ್ಕೆ ಕೊಂಡೊಯ್ಯುವ ಮೂಲಕ ಭಕ್ತಾದಿಗಳ ಶ್ಲಾಘನೆಗೊಳಗಾದರು. ರಾಜ್ಯದ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಅರಸೀಕೆರೆ ಮಾಲೇಕಲ್ಲು ತಿರುಪತಿ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದ ಬೆಟ್ಟವು 1,250 ಮೆಟ್ಟಿಲುಗಳನ್ನು ಹೊಂದುವ ಮೂಲಕ ಕಡಿದಾಗಿದ್ದು, ಬೆಟ್ಟದ ಮೇಲಿರುವ ದೇವರ ಪೂಜೆ…
ಹಾಸನ ಜಿಲ್ಲೆಯಾದ್ಯಂತ ಗಾಳಿ ಸಹಿತ ಮಳೆ
May 7, 2019ರಸ್ತೆಗೆ ಬಿದ್ದ ಮರ, ಆಲೂರು-ಕಣತ್ತೂರು ರಸ್ತೆ ಬಂದ್ ಹಾಸನ/ಬೇಲೂರು(ಸೋಮೇಶ್, ಹರೀಶ್): ಬಿಸಿಲ ಬೇಗೆಗೆ ತತ್ತ ರಿಸಿ ಹೋಗಿದ್ದ ಜಿಲ್ಲೆಯ ಜನರು ವರುಣನ ಆಗಮನದಿಂದ ಹರ್ಷಗೊಂಡರು. ಸೋಮವಾರ ಸಂಜೆ ಆರಂಭವಾದ ಗುಡುಗು ಸಹಿತ ಮಳೆ ಗಂಟೆಗೂ ಹೆಚ್ಚು ಕಾಲ ಸುರಿದು ತಂಪೆರೆಯಿತು. ಬೆಳಿಗ್ಗೆಯಿಂದಲೇ ವಿಪರೀತ ಬಿಸಿಲು ವಾತಾವರಣ ಕೂಡಿತ್ತು. ಸಂಜೆಯಾಗು ತ್ತಿದ್ದಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಳೆಯ ಸಿಂಚನ ಪ್ರಾರಂಭವಾಯಿತು. ಮಳೆಯಿಂದ ಜಿಲ್ಲೆಯ ಜನತೆ ಹಾಗೂ ರೈತರು ಸಂತಸಗೊಂ ಡರು. ನಗರದ ಬಸ್ ನಿಲ್ದಾಣ ರಸ್ತೆ, ಬಿ.ಎಂ…
ಬರ ಪರಿಸ್ಥಿತಿ ಸಮರ್ಪಕ ನಿರ್ವಹಣೆಗೆ ಸೂಚನೆ
May 7, 2019ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಿ, ಅಗತ್ಯವಿರುವೆಡೆ ಗೋ ಶಾಲೆ, ಮೇವಿನ ಬ್ಯಾಂಕ್ ಪ್ರಾರಂಭಿಸಿ: ನವೀನ್‍ರಾಜ್ ಸಿಂಗ್ ಹಾಸನ: ಜಿಲ್ಲೆಯಲ್ಲಿ ಬರ ಪರಿ ಸ್ಥಿತಿಯನ್ನು ಇನ್ನಷ್ಟು ಸಮರ್ಪಕವಾಗಿ ಎದು ರಿಸಲು ಎಲ್ಲಾ ಇಲಾಖಾಧಿಕಾರಿ, ಸಿಬ್ಬಂದಿ ಗಳು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಕೆಶಿಪ್‍ನ ಮುಖ್ಯ ಯೋಜನಾಧಿ ಕಾರಿ ನವೀನ್ ರಾಜ್‍ಸಿಂಗ್ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಬರ ನಿರ್ವಹಣೆ ಕುರಿತಂತೆ ಪರಿಶೀಲನಾ ಸಭೆ ನಡೆಸಿದ ಅವರು, ಈಗಾಗಲೇ ಜಿಲ್ಲೆಯ…
ತಾನಾಗಿಯೇ ಮೈತ್ರಿ ಸರ್ಕಾರ ಪತನ
May 7, 2019ಅರಸೀಕೆರೆ: ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ನಂತರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ತಾನಾಗಿಯೇ ಪತನಗೊಳ್ಳಲಿದೆ ಎಂದು ಶಾಸಕ ಡಾ.ಅಶ್ವತ್ಥನಾರಾಯಣ ಭವಿಷ್ಯ ನುಡಿದರು. ನಗರದ ರೈಲು ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಮರುಕ್ಷಣದಲ್ಲಿ ಮೈತ್ರಿ ಸರ್ಕಾರ ಪತನಗೊಳ್ಳಲಿದೆ. ಇದಕ್ಕೆ ಪೂರಕ ಎನ್ನುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಹೂರ್ತ ನಿಗದಿಪಡಿಸಿದ್ದಾರೆ. ಸರ್ಕಾರ ಪತನಕ್ಕೆ ಕಾಂಗ್ರೆಸ್-ಜೆಡಿಎಸ್‍ನಲ್ಲಿ ನಡೆಯುತ್ತಿರುವ ಚಟುವಟಿಕೆಗಳೇ ಸಾಕ್ಷಿಯಾಗಿದ್ದು, ಆಪರೇಷನ್ ನಡೆಸುವ ಅಗತ್ಯವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ…
ಸರಗಳ್ಳರಿಗಾಗಿ ಪೊಲೀಸರ ಮುಂದುವರೆದ ಕಾರ್ಯಾಚರಣೆ
May 6, 2019ಮೈಸೂರು: ಸರಣಿ ಸರಗಳವು ಪ್ರಕರಣದಿಂದ ಕಂಗೆ ಟ್ಟಿರುವ ಪೊಲೀಸರು ಭಾನುವಾರವೂ ಮೈಸೂರಿನ ವಿವಿಧೆಡೆ ಮಫ್ತಿಯಲ್ಲಿ ಗಸ್ತು ನಡೆಸುವುದರೊಂದಿಗೆ ಸರಗಳ್ಳರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದರು. ಮೈಸೂರಿನಲ್ಲಿ ಮಂಗಳವಾರ ಹಾಡ ಹಗಲೇ ಇರಾನಿ ತಂಡದ ಕಳ್ಳರು ಎಂದು ಶಂಕಿಸಲಾದ ಇಬ್ಬರು ವಿವಿಧೆಡೆ ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ಕೊಂಡು 7 ಸ್ಥಳಗಳಲ್ಲಿ ಸರ ಅಪಹರಣ ಮಾಡಿ ಪರಾರಿಯಾಗಿದ್ದರು. ಇದರಿಂದ ಮೈಸೂರು ನಗರದ ವಿವಿಧೆಡೆ 87 ಚೆಕ್ ಪಾಯಿಂಟ್‍ಗಳನ್ನು ಸ್ಥಾಪಿಸಿ ವಾಹನ ತಪಾಸಣೆ ಬಿಗಿಗೊಳಿಸಿದ್ದರು. ಬುಧ ವಾರದಿಂದಲೇ `ಆಪರೇಷನ್ ಫಾಸ್ಟ್ ಟ್ರ್ಯಾಕ್’…
ರಸ್ತೆ ಸುರಕ್ಷತಾ ಕ್ರಮ ಪಾಲನೆಗೆ ಜಿಲ್ಲಾಧಿಕಾರಿ ಸೂಚನೆಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ
May 6, 2019ಹಾಸನ: ರಸ್ತೆ ಸುರಕ್ಷತಾ ಕ್ರಮಗಳ ಜಾರಿಗೆ ಸುಪ್ರೀಂ ಕೋರ್ಟ್ ಹಲವು ನಿರ್ದೇಶನ ನೀಡಿದ್ದು ಅವುಗಳ ಪಾಲನೆಗೆ ಸಂಬಂಧಪಟ್ಟ ಎಲ್ಲಾ ಇಲಾಖೆ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಾ ದ್ಯಂತ ರಸ್ತೆ ಸುರಕ್ಷತಾ ಕ್ರಮಗಳು ಹಾಗೂ ಸಾರ್ವಜನಿಕ ಮಾಹಿತಿ, ಜಾಗೃತಿ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯಬೇಕಿದೆ ಎಂದರು. ಎಲ್ಲಾ ಪ್ರಮುಖ ರಸ್ತೆಗಳಲ್ಲಿ…
ಮಾಧ್ಯಮಗಳ ವಿರುದ್ಧ ಸಿಎಂ ಕುಮಾರಸ್ವಾಮಿ ಮುನಿಸು
May 6, 2019ಹಾಸನ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಮುನಿಸು ಮುಂದುವರಿಸಿದ್ದಾರೆ. ಚಿಕ್ಕಮಗಳೂರಿನ ಉಮಾ ಮಹೇಶ್ವರಿ ದೇವಾಲಯದಲ್ಲಿ ಕುಟುಂಬ ಸಮೇತರಾಗಿ ಅಮಾವಾಸ್ಯೆ ಪೂಜೆ ಸಲ್ಲಿಸಿದ ಬಳಿಕ ಬೆಂಗ ಳೂರಿಗೆ ತೆರಳುವ ಮಾರ್ಗ ಮಧ್ಯೆ ಶನಿವಾರ ಸಂಜೆ ಹಾಸನ ಹೊರವಲಯದಲ್ಲಿರುವ ಹೊಯ್ಸಳ ರೆಸಾರ್ಟ್‍ಗೆ ಭೇಟಿ ನೀಡಿದ್ದರು. ತಂದೆ, ಸಂಸದ ಎಚ್.ಡಿ.ದೇವೇಗೌಡರು, ತಾಯಿ ಚೆನ್ನಮ್ಮ, ಸೋದರ ಸಚಿವ ರೇವಣ್ಣ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಜೊತೆಗಿದ್ದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಹೋಟೆಲ್‍ನಲ್ಲಿ ಇದ್ದು ಚಹಾ ಕುಡಿದು ಲಘು ವಿಶ್ರಾಂತಿ ಪಡೆದ…
ವೈಭವದ ಶ್ರೀ ಕರಿಯಮ್ಮ, ಶ್ರೀ ಮಲ್ಲಿಗೆಮ್ಮ ಅಂಬಾರಿ ಉತ್ಸವ
May 6, 2019ಅರಸೀಕೆರೆ: ನಗರದ ಗ್ರಾಮ ದೇವತೆಗಳಾದ ಶ್ರೀಕರಿಯಮ್ಮ ಮತ್ತು ಶ್ರೀಮಲ್ಲಿಗೆಮ್ಮನವರ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಆನೆ ಅಂಬಾರಿ ಉತ್ಸವ ಮೈಸೂರು ದಸರಾ ವೈಭವ ನೆನಪಿಸುವಂತೆ ಜರುಗಿತು. 50ನೇ ವರ್ಷದ ಸುವರ್ಣ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಆನೆ ಅಂಬಾರಿ ಉತ್ಸವಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ದರು. ನಂತರ ಆನೆ ಅಂಬಾರಿ ಉತ್ಸವ ನಗರದ ಕರಿಯಮ್ಮ ದೇವಸ್ಥಾನದಿಂದ ಮೆರ ವಣಿಗೆಯಲ್ಲಿ ಹೊರಟು ಪೇಟೆ ಬೀದಿ, ಹಾಸನ ರಸ್ತೆಯ ಅಯ್ಯಪ್ಪಸ್ವಾಮಿ ದೇವ ಸ್ಥಾನಕ್ಕೆ ತೆರಳಿ ಪೂಜೆ…
ಹಿಂದುಳಿದ ವರ್ಗದ ದಾರಿದೀಪ ಅಂಬೇಡ್ಕರ್
May 6, 2019ಬೇಲೂರು: ಹಿಂದುಳಿದ ಹಾಗೂ ತಳ ಸಮು ದಾಯಗಳ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ದುಡಿದ ಮಹಾನ್ ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್. ಹಿಂದುಳಿದ ವರ್ಗಗಳ ದಾರಿದೀಪವಾಗಿದ್ದಾರೆ ಎಂದು ಕರ್ನಾ ಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ರಾಜ್ಯ ಸಂಘಟನಾ ಸಂಚಾಲಕ ಮಲ್ಲೇಶ್ ಅಂಬುಗ ಹೇಳಿದರು. ತಾಲೂಕಿನ ಗೆಂಡೇಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನ ಸೇವಾ ಸಮಿತಿಯಿಂದ ಏರ್ಪಡಿಸಿದ್ದ ಡಾ.ಬಿ. ಆರ್.ಅಂಬೇಡ್ಕರ್ ಅವರ 128ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಮಹಾನ್ ಸಾಧಕರು ಅಂಬೇಡ್ಕರರು. ತಾವು…