ಸರಗಳ್ಳರಿಗಾಗಿ ಪೊಲೀಸರ ಮುಂದುವರೆದ ಕಾರ್ಯಾಚರಣೆ
ಮೈಸೂರು

ಸರಗಳ್ಳರಿಗಾಗಿ ಪೊಲೀಸರ ಮುಂದುವರೆದ ಕಾರ್ಯಾಚರಣೆ

May 6, 2019

ಮೈಸೂರು: ಸರಣಿ ಸರಗಳವು ಪ್ರಕರಣದಿಂದ ಕಂಗೆ ಟ್ಟಿರುವ ಪೊಲೀಸರು ಭಾನುವಾರವೂ ಮೈಸೂರಿನ ವಿವಿಧೆಡೆ ಮಫ್ತಿಯಲ್ಲಿ ಗಸ್ತು ನಡೆಸುವುದರೊಂದಿಗೆ ಸರಗಳ್ಳರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದರು.

ಮೈಸೂರಿನಲ್ಲಿ ಮಂಗಳವಾರ ಹಾಡ ಹಗಲೇ ಇರಾನಿ ತಂಡದ ಕಳ್ಳರು ಎಂದು ಶಂಕಿಸಲಾದ ಇಬ್ಬರು ವಿವಿಧೆಡೆ ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ಕೊಂಡು 7 ಸ್ಥಳಗಳಲ್ಲಿ ಸರ ಅಪಹರಣ ಮಾಡಿ ಪರಾರಿಯಾಗಿದ್ದರು. ಇದರಿಂದ ಮೈಸೂರು ನಗರದ ವಿವಿಧೆಡೆ 87 ಚೆಕ್ ಪಾಯಿಂಟ್‍ಗಳನ್ನು ಸ್ಥಾಪಿಸಿ ವಾಹನ ತಪಾಸಣೆ ಬಿಗಿಗೊಳಿಸಿದ್ದರು. ಬುಧ ವಾರದಿಂದಲೇ `ಆಪರೇಷನ್ ಫಾಸ್ಟ್ ಟ್ರ್ಯಾಕ್’ ಆರಂಭಿಸಿ, ಮೈಸೂರಿನಲ್ಲಿ ಗಸ್ತು ಬಿಗಿಗೊಳಿಸಿರುವ ಪೊಲೀಸರು ಭಾನು ವಾರವೂ ಜನ ನಿಬಿಡ ಪ್ರದೇಶ, ವಿವಿಧ ಬಡಾವಣೆಗಳು, ಮುಖ್ಯ ರಸ್ತೆಗಳಲ್ಲಿ ಮಫ್ತಿಯಲ್ಲಿ ಕಾರ್ಯ ನಿರ್ವಹಿಸಿದರು. ಇಂದು ರಜಾ ದಿನವಾಗಿರುವ ಹಿನ್ನೆಲೆ ಯಲ್ಲಿ ಮುಂಜಾನೆಯೇ ಸರಗಳ್ಳರು ಕೈಚ ಳಕ ತೋರಬಹುದೆಂಬ ಅನುಮಾನ ಪೊಲೀಸರಲ್ಲಿತ್ತು. ಇದಕ್ಕಾಗಿ ಕೈಚಳಕ ತೋರಲು ಬರುವ ಕಳ್ಳರಿಗೆ ತಕ್ಕ ಪಾಠ ಕಲಿಸಬೇಕೆಂದು ನಿರ್ಧರಿಸಿದಂತಿರುವ ಪೊಲೀಸರು ಮುಂಜಾನೆಯಿಂದಲೇ ರಸ್ತೆಗಿಳಿದಿದ್ದರು.
ಇದುವರೆಗೂ ಪೊಲೀಸರು 8 ಚೆಕ್ ಪೋಸ್ಟ್, 87 ಚೆಕ್ ಪಾಯಿಂಟ್‍ಗಳಲ್ಲಿ ತಪಾಸಣೆ ನಡೆಸಿದ್ದು, ದಾಖಲೆ ಇಲ್ಲದ 311 ಬೈಕ್‍ಗಳನ್ನು ವಶಪಡಿಸಿಕೊಂಡಿ ದ್ದಾರೆ. ಮೈಸೂರು ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿರುವ 40ಕ್ಕೂ ಹೆಚ್ಚು ಗರುಡಾ ಮತ್ತು ಪಿಸಿಆರ್ ವಾಹನ, 30ಕ್ಕೂ ಹೆಚ್ಚು ಚೀತಾ ಬೈಕ್‍ಗಳನ್ನು ಗಸ್ತು ನಡೆಸಲು ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಸೂಚಿಸಿದ್ದಾರೆ. ಇದರೊಂದಿಗೆ ಆಯಕಟ್ಟಿನ ಪ್ರದೇಶ ಹಾಗೂ ಕಳ್ಳರು ಕೃತ್ಯ ನಡೆಸುವ ಸೂಕ್ಷ್ಮ ಪ್ರದೇಶಗಳಲ್ಲಿ 200ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳನ್ನು ಮಫ್ತಿಯಲ್ಲಿ ಕಾರ್ಯ ನಿರ್ವಹಿಸಲು ನಿಯೋಜಿಸಲಾಗಿದೆ.

Translate »