ಜಾನಪದ ಕಲಾ ಶಿಬಿರದಲ್ಲಿ ದೇಶಿ ಸಂಸ್ಕøತಿ ಅನಾವರಣ
ಮೈಸೂರು

ಜಾನಪದ ಕಲಾ ಶಿಬಿರದಲ್ಲಿ ದೇಶಿ ಸಂಸ್ಕøತಿ ಅನಾವರಣ

May 6, 2019

ಮೈಸೂರು: ಎಲ್ಲೆಲ್ಲೂ ತಳಿರು-ತೋರಣ. ನೆಲ ಸಾರಿಸಿ, ರಂಗೋಲಿ ಬಿಡಿಸಿ, ಮುಂಭಾಗಿಲ ಹೊಸ್ತಿ ಲಲ್ಲಿ ಬಾಳೆಕಂಬವನ್ನಿಟ್ಟು ಹಬ್ಬದ ವಾತಾ ವರಣ ನಿರ್ಮಿಸಿದ್ದ ಶಿಬಿರಾರ್ಥಿಗಳು (ಚಿಣ್ಣರು), ಕಂಸಾಳೆ ನೃತ್ಯ, ಜಾನಪದ ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಇಂತಹ ಹಬ್ಬದ ವಾತಾವರಣ ಕಂಡು ಬಂದಿದ್ದು ಹೂಟಗಳ್ಳಿಯ ಒಡನಾಡಿಯ ಮಡಿಲು ಆವರಣದಲ್ಲಿ.

ವಿ-ಕೇರ್ ಸಂಸ್ಥೆಯು ಒಡನಾಡಿ ಮಡಿಲು ಆವರಣದಲ್ಲಿ 10 ದಿನಗಳ ಕಾಲ ಆಯೋಜಿಸಿದ್ದ `ಜಾನಪದ ಕಲಾ ಶಿಬಿರ-2019ರ ಕೊನೆಯ ದಿನವಾದ ಭಾನು ವಾರ ಶಿಬಿರಾರ್ಥಿಗಳು, ತಾವೇ ತಳಿರು-ತೋರಣಗಳನ್ನು ಕಟ್ಟಿ. ನೆಲ ಸಾರಿಸಿ, ರಂಗೋಲಿ ಬಿಡಿಸಿ, ಮುಂಬಾಗಿಲ ಹೊಸ್ತಿ ಲಲ್ಲಿ ಬಾಳೆಕಂಬವನ್ನಿಟ್ಟು ಅಲಂಕರಿಸುವ ಮೂಲಕ ದೇಶಿ ಸಂಸ್ಕøತಿಯನ್ನು ಪ್ರತಿ ಬಿಂಬಿಸಿದ್ದ ವೇದಿಕೆಯಲ್ಲಿ ನಾಟಕ, ಕೋಲಾಟ, ಕಂಸಾಳೆ, ಜಾನಪದ, ರಂಗ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಎಂಜಾಯ್ ಮಾಡಿದರು.

ಮೊದಲಿಗೆ 8 ಮಂದಿ ಶಿಬಿರಾರ್ಥಿಗಳು `ತಂದನಾ ತಂದನಾ ತಂದನಾ ತನಾ, ಬನ್ನಿ ಮುರಿಯೋಣ ಬಾರಾ ಕೋಲು ಕೋಲಾ, ಚಿನ್ನ ತರುವೋಣ ಬಾರಾ ಕೋಲು ಕೋಲಾ’ ಹಾಡಿಗೆ ಕೋಲಾಟ ಆಡುವ ಮೂಲಕ ಕಾರ್ಯಕ್ರಮಕ್ಕೆ ಅಡಿ ಇಟ್ಟರು. ನಂತರ ಶರಣು ಹೇಳಿರಿ ಸ್ವಾಮಿ ನಾವು ನಮಗ, ಸ್ವಾಮಿ ನಾವು ನಿಮಗ. ಸದ್ದು ಗದ್ದಾಲ ಮಾಡಬ್ಯಾಡ್ರಿ ಆಟ ದೊಳಗ’ ರಂಗಗೀತೆಯನ್ನು ಸುಶ್ರಾವ್ಯ ವಾಗಿ ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ನಂತರ 10 ಮಂದಿ ಚಿಣ್ಣರು `ಮುಂಗುಂಡಾದ ಮಹದೇಶ್ವರ್‍ಗೆ ಶರಣು ಶರಣಯ್ಯ, ಮಯಾಗಾರ ಮಹದೇಶ್ವರ್‍ಗೆ ಶರಣು ಶರಣಯ್ಯ’ ಎಂಬ ಹಾಡಿಗೆ ಕಂಸಾಳೆ ನೃತ್ಯ ಪ್ರದರ್ಶಿಸಿದರೆ, 15ಮಂದಿ ಚಿಣ್ಣರು `ದಿಮ್ ದಿಮಿತ ತೈತ, ದಿಮ್ ದಿಮಿತ ತೈತ’ ಹಾಡಿಗೆ ವಿವಿಧ ಭಂಗಿಗಳಲ್ಲಿ ನಿಧಾನವಾಗಿ ಹಾಗೂ ಬಿರುಸಾಗಿ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿದರು.

ಒಡನಾಡಿಯ ನೇತ್ರಾವತಿ ಮತ್ತು ಭಾಗ್ಯ ಅವರು `ಒಳ್ಳೆಯವರ ಗೆಳೆತಾನ ಕಲ್ಲು ಸಕ್ಕರೆ ಹಾಂಗ’, “ಕೊಡಗಾನ ಕೋಳಿ ನುಂಗಿತಾ, ಕೇಳವ್ವ ತಂಗಿ’ ಜನಪದ ಗೀತೆ ಹಾಗೂ ಪಂಚತಂತ್ರದ `ಉಪಾಯ ಬಲ್ಲ ವನಿಗೆ, ಅಪಾಯವಿಲ್ಲ’ ಎಂಬ ಸಂದೇಶ ಸಾರಿದ ಜಿಂಕೆ, ಆಮೆ, ಗಿಳಿ ಹಾಗೂ ಬೇಟೆಗಾರರನ್ನು ಒಳಗೊಂಡ ನಾಟಕ ಸಾಮಾಜಿಕ ಸಂದೇಶ ಸಾರುವಲ್ಲಿ ಯಶಸ್ವಿ ಯಾದವು. ಆ ಮೂಲಕ ಹತ್ತು ದಿನಗಳ ಮಕ್ಕಳ ಸಂಭ್ರಮದ ಶಿಬಿರಕ್ಕೆ ತೆರೆ ಕಂಡಿತು.

ಇದಕ್ಕೂ ಮುನ್ನ ಚಿಂತಕ ಪ್ರೊ.ಕಾಳೇ ಗೌಡ ನಾಗವಾರ ಅವರು ನಗಾರಿ ಭಾರಿ ಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ, ಅಭದ್ರತೆ ನಡುವೆಯೇ ಸೃಜನಶೀಲತೆ ಇರುತ್ತದೆ ಎಂಬುದನ್ನು ಈ ಶಿಬಿರದಲ್ಲಿ ಮಕ್ಕಳ ಪ್ರತಿಭೆ ನೋಡಿ ದರೆ ತಿಳಿಯುತ್ತದೆ. ಈ ಶಿಬಿರದಲ್ಲಿ ಅವ ಕಾಶ ವಂಚಿತ ಮಕ್ಕಳಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಉತ್ತಮ ಸಮಾಜ ಕಟ್ಟುವಲ್ಲಿ ನಮ್ಮ ಕಾರ್ಯವೇನು ಎಂಬುದನ್ನು ತೋರಿಸಿಕೊಡುತ್ತಿದ್ದಾರೆ ಎಂದರು.

ವಿ-ಕೇರ್ ಸಂಸ್ಥಾಪಕಿ ಕುಮುದಿನಿ ಅಚ್ಚಿ ಮಾತನಾಡಿ, 1998ರಲ್ಲಿ ಒಡನಾಡಿ ಮಕ್ಕಳಿಗೆ ಭರತನಾಟ್ಯ ಕಲಿಸಲು ಪ್ರಾರಂ ಭಿಸಿದೆ. 2009ರಲ್ಲಿ ವಿ-ಕೇರ್ ಸಂಸ್ಥೆ ನೊಂದಾಯಿಸಿಕೊಂಡೆ. ಅನಕ್ಷರತೆ, ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ ಸೇರಿದಂತೆ ಸಾಕಷ್ಟು ಪ್ರಕರಣ ಕುರಿತು ಪೋಷಕರಲ್ಲಿನ ಸಾಮಾಜಿಕ ಜವಾಬ್ದಾರಿ ಏನೆಂಬುದು ನಾನು ಇದರಲ್ಲಿ ತೊಡಗಿಸಿಕೊಂಡ ನಂತರ ಅರಿವಿಗೆ ಬಂದಿತು ಎಂದರು.

ಕೆಲವು ದಿನಗಳ ಹಿಂದೆ ಶ್ರೀಲಂಕಾ ತಂಡವೊಂದು ವಿ-ಕೇರ್‍ನ ಚಟುವಟಿಕೆ ಗಳ ಕುರಿತು ತಿಳಿಯಲು ಬಂದಿತ್ತು. ನಮ್ಮನ್ನು ಶ್ರೀಲಂಕಕ್ಕೂ ಆಹ್ವಾನಿಸಿದ್ದು, ಇನ್ನು 2 ತಿಂಗಳಲ್ಲಿ ಶಿಬಿರದಲ್ಲಿ ಭಾಗವಹಿ ಸಿರುವ ಪೌರಕಾರ್ಮಿಕ ಮಕ್ಕಳು ಸೇರಿ ದಂತೆ 25 ಮಂದಿಯನ್ನು ಶ್ರೀಲಂಕಾಕ್ಕೆ ಕರೆದೊಯ್ದು ಕಲೆಯನ್ನು ಪ್ರದರ್ಶಿಸಲಾಗು ವುದು. ಇದರ ಸಂಪೂರ್ಣ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದರು.

`ಆಂದೋಲನ’ ದಿನಪತ್ರಿಕೆ ಉಪ ಸಂಪಾದಕಿ ರಶ್ಮಿಕೌಜಲಗಿ, ಒಡನಾಡಿಯ ಪರಶು, ಶಿಬಿರದ ನಿರ್ದೇಶಕರಾದ ಯೋಗಾನಂದ್, ಕಂಸಾಳೆ ಕಲಾವಿದ ಕ್ಯಾತನಹಳ್ಳಿ ರಾಮಣ್ಣ, ಶಿಬಿರದ ಸಹಾಯಕರಾದ ಪಲ್ಲವಿ, ನೇತ್ರಾ, ಸರಸ್ವತಿ, ಭಾಗ್ಯ ಮತ್ತಿತರರು ಉಪಸ್ಥಿತರಿದ್ದರು.

Translate »