ಭಾವಸಾರ್ ವಿಜನ್ ಇಂಡಿಯಾದಿಂದ ಕಾರ್ಮಿಕರಿಗೆ ಸನ್ಮಾನ
ಮೈಸೂರು

ಭಾವಸಾರ್ ವಿಜನ್ ಇಂಡಿಯಾದಿಂದ ಕಾರ್ಮಿಕರಿಗೆ ಸನ್ಮಾನ

May 6, 2019

ಮೈಸೂರು: ಟೈಲರ್ ವೃತ್ತಿ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಟೈಲರ್‍ಗಳೂ ಕಾರ್ಮಿಕರೇ ಆಗಿದ್ದು, ಅಂಥವರನ್ನು ಸನ್ಮಾನಿಸುವ ಮೂಲಕ ಭಾವಸಾರ್ ವಿಜನ್ ಇಂಡಿಯಾ ಕಾರ್ಮಿ ಕರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದೆ ಎಂದು ಚಾಮರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ ತಿಳಿಸಿದರು.

ಮೈಸೂರಿನ ಕಬೀರ್ ರಸ್ತೆ ಶ್ರೀ ಪಾಂಡು ರಂಗಸ್ವಾಮಿ ದೇವಸ್ಥಾನದಲ್ಲಿ ಭಾವಸಾರ್ ವಿಜûನ್ ಇಂಡಿಯಾ ಮೈಸೂರು ವಲಯ 108ರ ಘಟಕವು ಭಾನುವಾರ ಆಯೋ ಜಿಸಿದ್ದ ಕಾರ್ಮಿಕ ದಿನಾಚರಣೆ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ಟೈಲರ್ ವೃತ್ತಿ ಮೂಲಕ ಜೀವನ ಕಂಡು ಕೊಂಡಿ ರುವ ಈ ಸಮಾಜ ಎಲ್ಲಾ ಜಾತಿ, ಧರ್ಮ ದವರ ವಿಶ್ವಾಸ ಹೊಂದಿದ್ದಾರೆ. ಸಮಾ ಜದ ಅಭಿವೃದ್ಧಿಗೆ ತಮ್ಮ ಶಾಸಕರ ನಿಧಿಯಿಂದ 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.

ಮೈಸೂರಿನ ಜಲದರ್ಶಿನಿ, ಒಂಟಿ ಕೊಪ್ಪಲ್, ಕುವೆಂಪುನಗರ ಸೇರಿದಂತೆ ಮೂರು ಕಡೆ ತಮ್ಮ ಶಾಸಕರ ಕಚೇರಿ ಯಿದ್ದು, ಅಲ್ಲಿ ಸಮಾಜದವರಿಗೆ ದೊರೆ ಯುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಅದನ್ನು ಸದುಪ ಯೋಗಪಡಿಸಿ ಕೊಳ್ಳುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಮಾಜದ ಹಲವು ಶ್ರಮಜೀವಿ ಕಾರ್ಮಿಕರನ್ನು ಭಾವ ಸಾರ್ ವಿಜûನ್ ಇಂಡಿಯಾ (ಬಿವಿಐ) ವಲಯ 108ರ ಗವರ್ನರ್ ಯೋಗೇಶ್ ಸಾಕ್ರೆ, ಬಿವಿಐ ಸ್ಮಾರ್ಟ್ ಕ್ಲಬ್ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ, ರಾಷ್ಟ್ರೀಯ ಟ್ರೈನರ್ ಡಾ.ಸಾತ್ವಿಕ್ ರಂದೋಳ್ ಇನ್ನಿತರರು ಶಾಲು ಹೊದಿಸಿ ಸನ್ಮಾನಿಸಿದರು. ಡಿಆರ್‍ಎಂ ಆಸ್ಪತ್ರೆ ವತಿಯಿಂದ ನೂರಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.

ಭಾವಸಾರ ಕ್ಷತ್ರಿಯ ಮಂಡಳಿ ಅಧ್ಯಕ್ಷ ಶಿವಾಜಿರಾವ್ ರಂಪೂರೆ ಅಧ್ಯಕ್ಷತೆ ವಹಿಸಿ ದ್ದರು. ಮಾಜಿ ಅಧ್ಯಕ್ಷ ಜಯರಾಮರಾವ್ ಲಾಳಿಗೆ, ಎಐಬಿಕೆ ಮಹಾಸಭಾ ಯುವ ಪರಿಷತ್ ರಾಜ್ಯಾಧ್ಯಕ್ಷ ಎನ್.ಗಣೇಶ್ ಲಾಳಿಗೆ, ಪಾಲಿಕೆ ಮಾಜಿ ಸದಸ್ಯ ಸುನೀಲ್, ಸಮಾಜದ ಹಿರಿಯ ಮುಖಡರಾದ ಶ್ರೀನಿ ವಾಸರಾವ್ ಸುತ್ರಾವೆ, ರಾಕೇಶ್ ನಾಯಕ್, ಸುಭಾಷ್ ಪತಂಗೆ, ನಾಗರಾಜ್ ಪತಂಗೆ, ಬಿವಿಐ ಮೈಸೂರು ಅಧ್ಯಕ್ಷ ಜಗದೀಶ್ ಕುತ್ನೀಕರ್, ಗೌರವ ಕಾರ್ಯದರ್ಶಿ ಮಂಜುನಾಥ್ ಲಾಳಿಗೆ, ಎಐಬಿಕೆ ಯುವ ಪರಿಷತ್ ಜಿಲ್ಲಾಧ್ಯಕ್ಷ ಸಂತೋಷ್ ಪತಂಗೆ ಇನ್ನಿತರರು ಉಪಸ್ಥಿತರಿದ್ದರು.

Translate »