ಕನ್ನಡ ಸಾಹಿತ್ಯ ಪರಿಷತ್ತು ವಿಶ್ವ ವಿದ್ಯಾನಿಲಯವಿದ್ದಂತೆ
ಮೈಸೂರು

ಕನ್ನಡ ಸಾಹಿತ್ಯ ಪರಿಷತ್ತು ವಿಶ್ವ ವಿದ್ಯಾನಿಲಯವಿದ್ದಂತೆ

May 6, 2019

ಮೈಸೂರು: ರಾಜ್ಯ ಮತ್ತು ಹೊರರಾಜ್ಯಗಳಲ್ಲೂ ತನ್ನ ಹೆಜ್ಜೆ ಗಳನ್ನು ಮೂಡಿಸುವ ಪ್ರಯತ್ನ ನಡೆಸಿ ರುವ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದ ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಇದರ ಅಧ್ಯಕ್ಷರೇ ಕುಲಪತಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರ ವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ತು ವಿಜಯನಗರ ಒಂದನೇ ಹಂತದಲ್ಲಿ ರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಭಾನು ವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿ ಷತ್ತಿನ 105ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕವಿಗೋಷ್ಠಿ- ಗೀತ ಗಾಯನ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇದುವರೆಗೆ ಅನೇಕರು ಕುಲಪತಿ(ಅಧ್ಯಕ್ಷರು)ಗಳಾಗಿರುವ ದೊಡ್ಡ ಪಟ್ಟಿಯೇ ಇದೆ ಎಂದು ಹೇಳಿದರು.

ಸ್ಪರ್ಧೆ ಇಲ್ಲದೆ ಬೆಳವಣಿಗೆ ಇಲ್ಲ. ಇಲ್ಲ ದಿದ್ದರೆ ಸಾಮ್ರಾಜ್ಯಶಾಹಿ ಮನೋಭಾವ ನೆಗೆ ಅವಕಾಶವಾಗುತ್ತದೆ. ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಂಸ್ಥೆ ಗಳನ್ನು ವಿಸ್ತರಿಸಿಕೊಂಡಿರುವುದು ಒಂದು ಅದ್ಭುತವೇ ಸರಿ. ತಂತ್ರಜ್ಞಾನದಲ್ಲಿಯೂ ಕನ್ನಡ ಭಾಷೆ ಬೆಳೆದಿರುವುದು ನೋಡಿ ದರೆ, ಆಂಗ್ಲ ಭಾಷೆಯ ಜೊತೆಗೆ ನಿಲ್ಲ ಬಲ್ಲಷ್ಟು ಬೆಳವಣಿಗೆಯಾಗಿದೆ ಎಂದು ಅವರು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿ ಗಳ ಸ್ಥಾನಕ್ಕೆ ನಡೆಯುವ ಚುನಾವಣೆಗಳು ಗೊಂದಲಕ್ಕೆ ಆಸ್ಪದ ನೀಡಬಾರದು. ನೈತಿಕ ಚುನಾವಣೆಯ ಪರಿಭಾಷೆಯಲ್ಲಿ ಚುನಾ ವಣೆ ನಡೆಯಬೇಕು ಎಂದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಾ ರಾಣಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಿ.ವಿ.ವಸಂತಕುಮಾರ್ `ಕನ್ನಡ ಸಾಹಿತ್ಯ ಪರಿಷತ್ತು -ಒಲವು ನಿಲುವುಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಿರಿಯ ಕವಿ ಜಯಪ್ಪ ಹೊನ್ನಾಳಿ ಅವರ ಸಾರಥ್ಯದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಹಲವು ಕವಿಗಳು ಕವನ ವಾಚಿಸಿದರು. ನಂತರ ಆರ್.ಸಿ.ರಾಜಲಕ್ಷ್ಮಿ, ಸುಗಂದಮ್ಮ ತಂಡದಿಂದ ಗೀತ ಗಾಯನ ನಡೆಯಿತು. ಸಂಸ್ಕøತಿ ಚಿಂತಕ ಡಾ.ಕೆ.ರಘುರಾಂ ವಾಜ ಪೇಯಿ, ಕಸಾಪ ಜಿಲ್ಲಾ ಗೌರವ ಕಾರ್ಯ ದರ್ಶಿ ಕೆ.ಎಸ್.ನಾಗರಾಜು, ಪ್ರಧಾನ ಸಂಚಾಲಕ ಮೂಗೂರು ನಂಜುಂಡ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Translate »