ಹಾಸನ ಜಿಲ್ಲೆಯಾದ್ಯಂತ ಗಾಳಿ ಸಹಿತ ಮಳೆ
ಹಾಸನ

ಹಾಸನ ಜಿಲ್ಲೆಯಾದ್ಯಂತ ಗಾಳಿ ಸಹಿತ ಮಳೆ

May 7, 2019

ರಸ್ತೆಗೆ ಬಿದ್ದ ಮರ, ಆಲೂರು-ಕಣತ್ತೂರು ರಸ್ತೆ ಬಂದ್

ಹಾಸನ/ಬೇಲೂರು(ಸೋಮೇಶ್, ಹರೀಶ್): ಬಿಸಿಲ ಬೇಗೆಗೆ ತತ್ತ ರಿಸಿ ಹೋಗಿದ್ದ ಜಿಲ್ಲೆಯ ಜನರು ವರುಣನ ಆಗಮನದಿಂದ ಹರ್ಷಗೊಂಡರು. ಸೋಮವಾರ ಸಂಜೆ ಆರಂಭವಾದ ಗುಡುಗು ಸಹಿತ ಮಳೆ ಗಂಟೆಗೂ ಹೆಚ್ಚು ಕಾಲ ಸುರಿದು ತಂಪೆರೆಯಿತು.

ಬೆಳಿಗ್ಗೆಯಿಂದಲೇ ವಿಪರೀತ ಬಿಸಿಲು ವಾತಾವರಣ ಕೂಡಿತ್ತು. ಸಂಜೆಯಾಗು ತ್ತಿದ್ದಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಳೆಯ ಸಿಂಚನ ಪ್ರಾರಂಭವಾಯಿತು. ಮಳೆಯಿಂದ ಜಿಲ್ಲೆಯ ಜನತೆ ಹಾಗೂ ರೈತರು ಸಂತಸಗೊಂ ಡರು.

ನಗರದ ಬಸ್ ನಿಲ್ದಾಣ ರಸ್ತೆ, ಬಿ.ಎಂ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಿದರು.
ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶ ಗಳಾದ ಶಾಂತಿಗ್ರಾಮ, ಸೀಗೆ, ವೀರಾಪುರ, ಮೊಸಳೆಹೊಸಹಳ್ಳಿ, ಪುರದಮ್ಮ ಹಾಗೂ ಸಕಲೇಶಪುರ ವ್ಯಾಪ್ತಿಯಲ್ಲಿ ಭಾರಿ ಗಾಳಿ ಯಿಂದ ಕೂಡಿದ ಮಳೆಯಾಯಿತು. ದ್ವಿಚಕ್ರ ವಾಹನ ಸವಾರರು, ಸಾರ್ವಜನಿಕರು ಮಳೆ ಯಿಂದ ರಕ್ಷಣೆ ಪಡೆಯಲು ಕಟ್ಟಡ, ಮರ ಗಳ ಕೆಳಗೆ ಆಶ್ರಯ ಪಡೆದರು.

ರಸ್ತೆ ಬಂದ್: ಜಿಲ್ಲೆಯ ಆಲೂರು ತಾಲೂಕಿನ ಕಣತೂರು ಗ್ರಾಮದ ಸಮೀಪ ಬುಡಸಮೇತ ಮರವೊಂದು ರಸ್ತೆ ಮೇಲೆ ಬಿದ್ದ ಪರಿಣಾಮ ಆಲೂರು-ಕಣತ್ತೂರು ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಬೇಲೂರಿನಲ್ಲಿ ವರುಣನ ಸಿಂಚನ: ಪಟ್ಟ ಣದ ಸುತ್ತಮುತ್ತ ಸೋಮವಾರ ಸಂಜೆ ಮಳೆ ಸುರಿದು ವಾತಾವರಣ ತಂಪಾಯಿತು. ಗಾಳಿ, ಮಿಂಚು, ಗುಡುಗು ಸಹಿತ ಮಳೆ ಬಂದಿತು.

ಪಟ್ಟಣದ ಇಂದಿರಾ ಕ್ಯಾಂಟೀನ್ ಬಳಿ ಮರದ ಕೊಂಬೆ ಮುರಿದು ಬಿದ್ದಿದೆ. ಕಳೆದ ಎರಡು ಮೂರು ದಿನಗಳಿಂದ ಮಧ್ಯಾಹ್ನದ ವೇಳೆ ಬಿಸಿಗಾಳಿ ಬೀಸುತ್ತಿತ್ತು. ಜನತೆ ಬಿಸಿಲಿನ ಝಳಕ್ಕೆ ತತ್ತರಿಸಿದ್ದರು. ಇಂದು ವಾತಾ ವರಣ ತಂಪಾಗಿ ಮಳೆ ಸುವಾಸನೆ ಜನತೆಗೆ ಹಿತಾನುಭವ ನೀಡಿತು. ಕೈತೋಟ ಗಿಡ ಮರಗಳಿಗೆ ಮಳೆ ನೀರು ಹರಿದು ನವ ಚೈತನ್ಯ ತುಂಬಿದವು. ಭತ್ತ ಹಾಗೂ ತೋಟದ ಬೆಳೆಗಳಿಗೆ ಮಳೆ ಸ್ವಲ್ಪ ಆಸರೆ ಆಗುತ್ತದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು.

Translate »