3ನೇ ತಂಡದ ನಾಗರಿಕ ಪೆÇಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿ: ಕಿಶೋರ್ ಚಂದ್ರ
ಹಾಸನ

3ನೇ ತಂಡದ ನಾಗರಿಕ ಪೆÇಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿ: ಕಿಶೋರ್ ಚಂದ್ರ

May 7, 2019

ಹಾಸನ: ಯಾವುದೇ ದುರಾ ಲೋಚನೆ ಹಾಗೂ ಪ್ರಭಾವಗಳಿಗೆ ಒಳಗಾ ಗದೇ ಧೈರ್ಯ ಮತ್ತು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವುದು ಸಮಾಜಕ್ಕೆ ನೀವು ಕೊಡುವ ಒಂದು ಕೊಡುಗೆಯಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕರು ಹಾಗೂ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ರಾದ ಕಿಶೋರ್ ಚಂದ್ರ ಹೇಳಿದರು.

ತಾಲೂಕಿನ ಶಾಂತಿಗ್ರಾಮ ಪೊಲೀಸ್ ತರಬೇತಿ ಶಾಲೆ ಕವಾಯತು ಮೈದಾನ ಆವರಣದಲ್ಲಿ ನಡೆದ 3ನೇ ತಂಡದ ನಾಗ ರಿಕ ಪೊಲೀಸ್ ಕಾನ್ಸ್‍ಟೇಬಲ್‍ಗಳ ನಿರ್ಗ ಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಯಲ್ಲಿ ಕರ್ತವ್ಯ ನಿರ್ವಹಿಸುವಂತಹ ಎಲ್ಲಾ ಅಧಿಕಾರಿಗಳು ಸರ್ಕಾರದ ಸೇವೆಗೆ ಸದಾ ಸನ್ನದ್ಧರಾಗಿರಬೇಕು ಎಂದರು.

ಆರ್ಥಿಕವಾಗಿ, ಸಾಮಾಜಿಕವಾಗಿ ಬಡ ತನದಲ್ಲಿರುವವರಿಗೆ ಕಾನೂನಾತ್ಮಕವಾಗಿ ಸಹಾಯ ನೀಡಿದಲ್ಲಿ ಮಾತ್ರವೇ ಈ ದಿನ ಪಥಸಂಚಲನಕ್ಕೊಂದು ಅರ್ಥ ಬರುವುದು. ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸು ವವರು ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಮಾಜಕ್ಕೆ ನಮ್ಮ ಪೊಲೀಸ್ ಇಲಾಖೆಯಿಂದ ಸಾಕಷ್ಟು ಅಧಿಕಾರಿಗಳು ಕರ್ತವ್ಯ ನಿಷ್ಠೆ ಸೇವೆ ಸಲ್ಲಿಸಿ ದ್ದಾರೆ. ಅಂತಹ ಅಧಿಕಾರಿಗಳನ್ನು ಆದರ್ಶ ದಾಯಕವಾಗಿಟ್ಟುಕೊಂಡು ಕೆಲಸ ನಿರ್ವಹಿಸಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಪೊಲೀಸ್ ತರಬೇತಿ ಶಾಲೆಯ ಪ್ರಭಾರ ಪ್ರಾಂಶುಪಾಲರಾದ ನಂದಿನಿ ಮಾತನಾಡಿ, ಇಂದು 3ನೇ ತಂಡದ 392 ಸಂಖ್ಯೆ ನಾಗರಿಕ ಪೊಲೀಸ್ ಪ್ರಶಿಕ್ಷಾಣಾ ರ್ಥಿಗಳಿಗೆ 8 ತಿಂಗಳ ಕಾಲ ಯಶಸ್ವಿಯಾಗಿ ಒಳಾಂಗಣ ಮತ್ತು ಹೊರಾಂಗಣ ವಿಷಯ ದಲ್ಲಿ ಪಿಟಿ, ಕರಾಟೆ, ಅಬ್ಸ್‍ಟ್ಯಾಕಲ್‍ಕೋರ್ಸ್, ಲಾಠಿ ಡ್ರಿಲ್, ಗುಂಪು ಘರ್ಷಣೆ ನಿಯಂ ತ್ರಣ ಸೇರಿದಂತೆ ಇತರೆ ಕಾನೂನಾತ್ಮಕ ತರ ಬೇತಿ ಹಾಗೂ ಉನ್ನತ ಮಟ್ಟದ ತರಬೇತಿ ನೀಡಲಾಗಿರುತ್ತದೆ ಎಂದು ತಿಳಿಸಿದರು.

ತರಬೇತಿ ಶಾಲೆಯು ಶಾಂತಿಗ್ರಾಮ ಸರ್ಕಾರಿ ಸರ್ವೆ ನಂ. 510ರಲ್ಲಿ ಒಟ್ಟು 50 ಎಕರೆ ಜಮೀನಿನಲ್ಲಿ ಇದ್ದು ಸುಮಾರು 20 ಕೋಟಿ ರೂ. ವೆಚ್ಚ ಅನುದಾನದಲ್ಲಿ ಆಡಳಿತ ಕಚೇರಿ, ಉಪನ್ಯಾಸ ಕೊಠಡಿ, ಪ್ರಶಿಕ್ಷಣಾರ್ಥಿಗಳಿಗೆ ವಸತಿ ನಿಲಯ, ಊಟದ ವ್ಯವಸ್ಥೆಗಾಗಿ ಅಡುಗೆ ಉಪ ಕರಣಗಳನ್ನು ಒಳಗೊಂಡಂತೆ ಭೋಜನಾ ಲಯ, ಸುಸಜ್ಜಿತ ಕವಾಯತು ಮೈದಾನ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಕರ್ತವ್ಯ ವನ್ನು ಸಮರ್ಪಕವಾಗಿ ನಿರ್ವಹಿಸಿ ಇಲಾ ಖೆಯ ಘನತೆ, ಗೌರವವನ್ನು ಹೆಚ್ಚಿಸು ತ್ತಾರೆಂಬ ದೃಢ ನಂಬಿಕೆಯ ಭರವಸೆ ಯನ್ನು ನೀಡುತ್ತಾ ತರಬೇತಿ ಶಾಲೆಯಿಂದ ನಿರ್ಗಮಿಸುತ್ತಿರುವ ಎಲ್ಲಾ ಪ್ರಶಿಕ್ಷಣಾರ್ಥಿ ಗಳಿಗೆ ಶುಭ ಹಾರೈಸಿದರು.

ಪ್ರತಿಜ್ಞಾವಿಧಿ ಸ್ವೀಕಾರ: ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಪೊಲೀಸ್ ತರಬೇತಿ ಶಾಲೆಯ ಪ್ರಭಾರ ಪ್ರಾಂಶುಪಾಲರಾದ ನಂದಿನಿ ಪ್ರಶಿಕ್ಷಣಾರ್ಥಿ ಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಬಹುಮಾನ ವಿತರಣೆ: ಮಸೂದ್ ವಲೀಸಾಬ್, ಗಂಗಾಧರ ಹಿರೇಮಠ, ಸೋಮಶೇಖರ್ ಹೆಚ್.ಎಂ.ಒಳಾಂಗಣ ವಿಭಾಗದಲ್ಲಿ ಪ್ರಶಸ್ತಿ ಪಡೆದರೆ, ಹೆಚ್.ಕೆ. ಲೋಹಿತ್, ಹೆಚ್.ಎಂ.ಕೃಷ್ಣಮೂರ್ತಿ, ಶ್ರೀಧರ ಗುಗ್ಗರಿ ಅವರುಗಳಿಗೆ ಹೊರಾಂಗಣ ವಿಭಾಗದಲ್ಲಿ ಪ್ರಶಸ್ತಿ ದೊರೆಯಿತು.

ಲೋಹಿತ್ ಹೆಚ್.ಕೆ, ಗಣೇಶ್‍ಬಾಗ್ಲು ಪಟಗಾರ, ಸಂತೋಷ್ ಮ ಜಕ್ಕನ್ನವರ ಅವರುಗಳಿಗೆ ಫೈರಿಂಗ್ ವಿಭಾಗದಲ್ಲಿ ಪ್ರಶಸ್ತಿ ದೊರೆತರೆ ಆಲ್‍ರೌಂಡ್ ಬೆಸ್ಟ್ ಪ್ರಶಸ್ತಿಯನ್ನು ಹೆಚ್.ಎಂ.ಕೃಷ್ಣಮೂರ್ತಿ ಪಡೆದರು.

ಕಾರ್ಯಕ್ರಮದಲ್ಲಿ ಪೊಲೀಸ್ ಮಹಾ ನೀರೀಕ್ಷಕರಾದ ಎಸ್.ರವಿ ಐಪಿಎಸ್, ಪೊಲೀಸ್ ಅಧೀಕ್ಷಕ ಚೇತನ್ ಸಿಂಗ್ ರಾಥೋಡ್, 11ನೇ ಪಡೆ ಕೆಎಸ್‍ಆರ್‍ಪಿ ಕಮಾಂಡೆಂಟ್ ಕೃಷ್ಣಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

Translate »