ಮೈಸೂರು: ಮೈಸೂರು ನಗರ ಮತ್ತು ತಾಲೂಕಿನ 92 ಹಳ್ಳಿಗಳಿಗೆ ನದಿ ಮೂಲದಿಂದ ಶಾಶ್ವತ ಕುಡಿಯುವ ನೀರು ಒದಗಿಸುವ ಹಳೇ ಉಂಡವಾಡಿ ಬಳಿ ಕಾವೇರಿ ನದಿ ಯಿಂದ ಹೆಚ್ಚುವರಿ ಯಾಗಿ 300 ಎಂ.ಎಲ್.ಡಿ. ನೀರನ್ನು ಸರಬರಾಜು ಮಾಡುವ ಯೋಜನೆಗೆ ಪ್ರಾರಂಭಿಕವಾಗಿ ಬಜೆಟ್‍ನಲ್ಲಿ 50 ಕೋಟಿ ಹಣ ವನ್ನು ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇ ಗೌಡರು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರನ್ನು ಅಭಿನಂದಿಸಿದ್ದಾರೆ. 2006 ರಲ್ಲಿ ಜಿಟಿಡಿ ಅವರ ಕೋರಿಕೆಯಂತೆ ಅಂದೂ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು…
ರೈತನಿಗೆ ಕೊಟ್ಟ ಹಣವನ್ನು ರೈತನಿಂದಲೇ ವಾಪಸ್ ಪಡೆಯುವ ಪ್ರಯತ್ನ
July 6, 2018ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿಗೆ ಮಾರಕವಾದ ಬಜೆಟ್ ಮಂಡಿಸಿದ್ದಾರೆ. ಇದು ಅರ್ಥ ವ್ಯವಸ್ಥೆಯ ಹೊರತಾದ ರಾಜಕೀಯ ವ್ಯವಸ್ಥೆಯ ಬಜೆಟ್ ಎಂದು ಶಾಸಕ ಎಸ್.ಎ.ರಾಮದಾಸ್ ಪ್ರತಿಕ್ರಿಯೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಬಹಳ ಸದ್ದು ಮಾಡಿದ್ದ ಈ ಬಜೆಟ್ ರೈತರ ನಿರೀಕ್ಷೆಯನ್ನು ಹುಸಿ ಮಾಡಿದೆ. ರೈತರ ಪೂರ್ಣ ಸಾಲ ಮನ್ನಾ ಆಗಿಲ್ಲ. 34,000 ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡಿದ್ದರು. ಈ ಹಣದ ಸಂಗ್ರಹ ಯಾವ ಮೂಲದಿಂದ ಬರುತ್ತದೆ ಎಂದು ಹೇಳಲಾಗಿಲ್ಲ. ಹಿಂದಿನ ಸಿದ್ದರಾಮಯ್ಯರ ಬಜೆಟ್‍ಗಿಂತ 9000 ಕೋಟಿ…
ಹೆಚ್‍ಡಿಕೆ ಬಜೆಟ್‍ಗೆ ಮಂಡ್ಯ ಜಿಲ್ಲೆಯಲ್ಲಿ ಅಸಮಾಧಾನ
July 6, 2018ರೈತರ ತುಟಿಗೆ ತುಪ್ಪ ಸವರುವ ಬಜೆಟ್: ರೈತರ ಆಕ್ರೋಶ ಮಂಡ್ಯ: ಇಡೀ ರಾಜ್ಯದಲ್ಲೇ ಜೆಡಿಎಸ್‍ಗೆ ಅತ್ಯಧಿಕ ನೆಲೆಕೊಟ್ಟ ಜಿಲ್ಲೆ ಮಂಡ್ಯ. ಅಂತೆಯೇ ಹೆಚ್.ಡಿ.ಕುಮಾರ ಸ್ವಾಮಿ ಸಿಎಂ ಆಗುತ್ತಿದ್ದಂತೆ ಜಿಲ್ಲೆಯ ಜನ ಕುಣಿದು ಕುಪ್ಪಳಿಸಿದ್ದರು. ಜೊತೆಗೆ ಬಜೆಟ್ ಮೇಲೆ ಜಿಲ್ಲೆಯ ಜನಕ್ಕೆ ಭಾರಿ ನಿರೀಕ್ಷೆ ಇತ್ತು. ಅಂತೆಯೇ ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿದರೂ, ಹಾಸನಕ್ಕೆ ನೀಡಿದ ಅರ್ಧ ಭಾಗದ ಅನುದಾನವನ್ನೂ ಮಂಡ್ಯಕ್ಕೆ ನೀಡಿಲ್ಲ ಎಂಬ ಅಸಮಾಧಾನ ಜಿಲ್ಲೆಯಲ್ಲಿ ಅಲ್ಲಲ್ಲಿ ಹೊಗೆಯಾಡುತ್ತಿದೆ. ಸಾಲಮನ್ನಾ ಘೋಷಣೆಯಾಗಿದ್ದರೂ ಬಹುತೇಕ ರೈತರು ಇದು ರೈತ…
ಬಜೆಟ್‍ನಲ್ಲಿ ಕೊಡಗಿಗೆ ಶೂನ್ಯ ಕೊಡುಗೆ
July 6, 2018ಮಡಿಕೇರಿ: ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಯಾಗಿದೆ. ಈ ಬಾರಿಯ ಬಜೆಟ್‍ನಲ್ಲಿ ಕಾಫಿ, ಕರಿಮೆಣಸು ಸೇರಿದಂತೆ ಆರ್ಥಿಕ ಬೆಳೆಗಳನ್ನು ನಂಬಿಕೊಂಡಿರುವ ಜಿಲ್ಲೆಯ ಕೃಷಿಕರು, ಸಾಲಮನ್ನಾ, ಕೃಷಿಭಾಗ್ಯ, ಕಾಡಾನೆ ಹಾವಳಿ ಸಮಸ್ಯೆ ಪರಿಹಾರ, ಬೆಳೆಹಾನಿ ಪರಿಹಾರ ಹೆಚ್ಚಳ ಸೇರಿದಂತೆ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡುವ ಕುರಿತು ಆಶಾಭಾವನೆ ಹೊಂದಿದ್ದರು. ವಿಶೇಷವಾಗಿ ಈ ಹಿಂದಿನ ಸರ್ಕಾರ ದಂತೆ ಜಿಲ್ಲೆಯ ರಸ್ತೆಗಳ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ…
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಬಜೆಟ್: ಜಿಲ್ಲೆಗೆ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ಸ್ಥಾಪನೆಗೆ 50 ಕೋಟಿ ಅನುದಾನ
July 6, 2018ಚಾಮರಾಜನಗರ: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಮಂಡಿಸಿದ 2018-19ನೇ ಸಾಲಿನ ಬಜೆಟ್‍ನಲ್ಲಿ ಜಿಲ್ಲೆಗೆ ಎರಡು ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ಚಾಮರಾಜನಗರ, ಗದಗ, ಕೊಪ್ಪಳ ಮತ್ತು ಹಾಸನ ನಗರಗಳ ವೈದ್ಯಕೀಯ ಕಾಲೇ ಜುಗಳಲ್ಲಿ 450 ಹಾಸಿಗೆ ಸಾಮಥ್ರ್ಯದ ಹೊಸ ಆಸ್ಪತ್ರೆ ಸ್ಥಾಪಿಸಿಲಾಗುವುದು. ಇದ ಕ್ಕಾಗಿ 200 ಕೋಟಿ ರೂ. ಅನುದಾನ ನೀಡು ವುದಾಗಿ ಪ್ರಕಟಿಸಲಾಗಿದೆ. ನಾಲ್ಕು ಜಿಲ್ಲೆಗ ಳಿಂದ ಒಟ್ಟು 200 ಕೋಟಿ ರೂ. ಅನುದಾನ ನೀಡಿರುವುದರಿಂದ ಒಂದೊಂದು ಜಿಲ್ಲೆಗೆ 50 ಕೋಟಿ ರೂ. ಅನುದಾನ ಲಭ್ಯವಾಗಿದೆ. ಚಾಮರಾಜನಗರ…
ಬಜೆಟ್‍ನಲ್ಲಿ ಸಾಲಮನ್ನಾ ಘೋಷಿಸಿದ ಸಿಎಂ ಕುಮಾರಸ್ವಾಮಿ ಬನ್ನೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಂಭ್ರಮ
July 6, 2018ಬನ್ನೂರು: ಸಿಎಂ ಕುಮಾರಸ್ವಾಮಿ ಯವರು ರೈತರ ಸಾಲವನ್ನು ಮನ್ನಾ ಮಾಡಿದ್ದ ರಿಂದ ಜೆಡಿಎಸ್ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಸಂಜಯ್, ಇಂದು ರಾಜ್ಯದ ರೈತಾಪಿ ಕುಟುಂಬದವರು ಆರ್ಥಿಕ ವಾಗಿ ಜರ್ಜರಿತವಾಗಿದ್ದು, ಅವರು ಬದುಕು ನಡೆಸುವುದು ಕಷ್ಟವಾಗಿದೆ. ರಾಜ್ಯದ ರೈತರ ನೋವನ್ನು ಕಣ್ಣಾರೆ ಕಂಡಿರುವ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಚುನಾವಣೆಗೂ ಮೊದಲೇ ನೀಡಿದ್ದ ಆಶ್ವಾಸನೆ ಯಂತೆ ರೈತರ ಸಾಲವನ್ನು ಮನ್ನಾ ಮಾಡುವ ದೃಢ ನಿರ್ಧಾರವನ್ನು ಕೈಗೊಂಡು ನುಡಿ ದಂತೆ…