ಜಿಟಿಡಿ ಮಹತ್ವಾಕಾಂಕ್ಷಿ ಹಳೆ ಉಂಡವಾಡಿ ಕುಡಿಯುವ ನೀರು ಯೋಜನೆಗೆ ಬಜೆಟ್‍ನಲ್ಲಿ ಮೊದಲ ಹಂತವಾಗಿ 50 ಕೋಟಿ
ಮೈಸೂರು

ಜಿಟಿಡಿ ಮಹತ್ವಾಕಾಂಕ್ಷಿ ಹಳೆ ಉಂಡವಾಡಿ ಕುಡಿಯುವ ನೀರು ಯೋಜನೆಗೆ ಬಜೆಟ್‍ನಲ್ಲಿ ಮೊದಲ ಹಂತವಾಗಿ 50 ಕೋಟಿ

July 6, 2018

ಮೈಸೂರು: ಮೈಸೂರು ನಗರ ಮತ್ತು ತಾಲೂಕಿನ 92 ಹಳ್ಳಿಗಳಿಗೆ ನದಿ ಮೂಲದಿಂದ ಶಾಶ್ವತ ಕುಡಿಯುವ ನೀರು ಒದಗಿಸುವ ಹಳೇ ಉಂಡವಾಡಿ ಬಳಿ ಕಾವೇರಿ ನದಿ ಯಿಂದ ಹೆಚ್ಚುವರಿ ಯಾಗಿ 300 ಎಂ.ಎಲ್.ಡಿ. ನೀರನ್ನು ಸರಬರಾಜು ಮಾಡುವ ಯೋಜನೆಗೆ ಪ್ರಾರಂಭಿಕವಾಗಿ ಬಜೆಟ್‍ನಲ್ಲಿ 50 ಕೋಟಿ ಹಣ ವನ್ನು ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇ ಗೌಡರು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರನ್ನು ಅಭಿನಂದಿಸಿದ್ದಾರೆ.

2006 ರಲ್ಲಿ ಜಿಟಿಡಿ ಅವರ ಕೋರಿಕೆಯಂತೆ ಅಂದೂ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು 27 ಕೋಟಿ ವೆಚ್ಚದಲ್ಲಿ ಕಾವೇರಿ ನದಿಯಿಂದ ಮೈಸೂರು ತಾಲೂಕು ಇಲ ವಾಲ ಮತ್ತು ಬಿಳಿಕೆರೆ ಹೋಬಳಿಯ 53 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಜಾರಿಗೊಳಿಸಿದ್ದರು. ಕಳೆದ 5 ವರ್ಷಗಳಿಂದ ಮೈಸೂರು ತಾಲೂಕಿನಲ್ಲಿ ಹಲವಾರು ಹಳ್ಳಿಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸುತ್ತಿದ್ದನ್ನು ಮನಗಂಡು, ಕರ್ನಾಟಕ ನೀರು ಸರಬ ರಾಜು ಮಂಡಳಿಯೊಂದಿಗೆ ಸಭೆ ನಡೆಸಿ, ಹಳೆ ಉಂಡವಾಡಿ ಯೋಜನೆಯನ್ನು ಜಾರಿ ಗೊಳಿಸಿದರೆ ಮೈಸೂರು ನಗರ ಮತ್ತು ತಾಲೂ ಕಿಗೆ ಶಾಶ್ವತವಾಗಿ ಕುಡಿಯುವ ನೀರನ್ನು ಒದ ಗಿಸಲು ಸಾಧ್ಯವೆಂದು ಜಿ.ಟಿ.ದೇವೇಗೌಡ ನಿರ್ಧರಿಸಿದ್ದರು. ಇದರ ಬಗ್ಗೆ ಸರ್ಕಾರದ ಗಮನ ಕೂಡ ಸೆಳೆದು ಯೋಜನೆ ಜಾರಿಗೆ ಅವಿರತ ಶ್ರಮಿಸಿದ್ದರು. ಅಂತಿಮವಾಗಿ 550 ಕೋಟಿ ವೆಚ್ಚದ ಈ ಯೋಜನೆಯನ್ನು ರೂಪಿಸಲಾಗಿತ್ತು. ಸದರಿ ಯೋಜನೆಯನ್ನು ಹಂತಹಂತವಾಗಿ ಕೈಗೆತ್ತಿಕೊಳ್ಳಲು ಮುಖ್ಯ ಮಂತ್ರಿ ನಿರ್ಧರಿಸಿ, ಪ್ರಾರಂಭಿಕ ಹಂತವಾಗಿ 50 ಕೋಟಿ ಹಣವನ್ನು ಪ್ರಕಟಿಸಿದ್ದಾರೆ.

ಇದರ ಜೊತೆಗೆ ಮೈಸೂರು ನಗರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರೇಷ್ಮೆಗೂಡು ಮಾರುಕಟ್ಟೆ ಹಾಗೂ ಐ.ಸಿ.ಚಿಪ್ ತಯಾ ರಿಕಾ ಘಟಕ ಘೋಷಿಸಿದ್ದಾರೆ.

Translate »