Tag: Kerala

ಕೊಡಗು ಮಾರ್ಗ ತಲಚೇರಿ-ಮೈಸೂರು ರೈಲ್ವೆ ಮಾರ್ಗ ವಿರೋಧ ಲೆಕ್ಕಿಸದೆ ಯೋಜನೆ ಅನುಷ್ಠಾನಕ್ಕೆ ಮುಂದಾದ ಕೇರಳ
ಮೈಸೂರು

ಕೊಡಗು ಮಾರ್ಗ ತಲಚೇರಿ-ಮೈಸೂರು ರೈಲ್ವೆ ಮಾರ್ಗ ವಿರೋಧ ಲೆಕ್ಕಿಸದೆ ಯೋಜನೆ ಅನುಷ್ಠಾನಕ್ಕೆ ಮುಂದಾದ ಕೇರಳ

June 30, 2018

ನಾಳೆ ತಿರುವನಂತಪುರಂನಲ್ಲಿ ಟೆಕ್ನಿಕಲ್ ಬಿಡ್ ಓಪನ್ ಡಿಪಿಆರ್ ತಯಾರಿಸಲು ವಿದೇಶಿ ಕಂಪನಿಗಳ ಆಸಕ್ತಿ ಮೈಸೂರು: ಕೊಡಗು ಮತ್ತು ಮೈಸೂರು ಜನತೆ, ಜನಪ್ರತಿನಿಧಿಗಳು, ಪರಿಸರವಾದಿಗಳ ತೀವ್ರ ವಿರೋಧದ ನಡುವೆಯೂ ಕೇರಳ ಸರ್ಕಾರವು ದಕ್ಷಿಣ ಕೊಡಗಿನ ವನಸಿರಿ ನಾಶಪಡಿಸಿ ಮೈಸೂರು-ತಲಚೇರಿ ರೈಲು ಮಾರ್ಗ ಯೋಜನೆಗೆ ಡಿಪಿಆರ್ ತಯಾರಿಸಲು ಮುಂದಾಗಿದೆ. ಕೇವಲ ಕೇರಳ ರಾಜ್ಯಕ್ಕೆ ಮಾತ್ರ ಅನುಕೂಲವಾಗುವ ಈ ಯೋಜನೆಗೆ ಸಮಗ್ರ ಯೋಜನಾ ವರದಿ (DPR) ತಯಾರಿಸಲು ಹಲವು ವಿದೇಶಿ ಕಂಪನಿಗಳು ಆಸಕ್ತಿ ತೋರಿಸಿವೆ. ತಿರುವನಂತಪುರಂನಲ್ಲಿ ನಾಳೆ (ಜೂ.29) ತಾಂತ್ರಿಕ ಬಿಡ್…

ಕೇರಳದಲ್ಲಿ ನಿಫಾ ವೈರಸ್‍ಗೆ ಮತ್ತೊಂದು ಬಲಿ: ಮೃತರ ಸಂಖ್ಯೆ 16ಕ್ಕೆ ಏರಿಕೆ
ದೇಶ-ವಿದೇಶ

ಕೇರಳದಲ್ಲಿ ನಿಫಾ ವೈರಸ್‍ಗೆ ಮತ್ತೊಂದು ಬಲಿ: ಮೃತರ ಸಂಖ್ಯೆ 16ಕ್ಕೆ ಏರಿಕೆ

June 1, 2018

ಕೋಯಿಕ್ಕೋಡ್: ಮಾರಣಾಂತಿಕ ನಿಫಾ ವೈರಸ್ ಕೇರಳದಲ್ಲಿ ತನ್ನ ಮರಣ ಮೃದಂಗ ಮುಂದುವರೆಸಿದ್ದು, ಸೋಂಕು ಪೀಡಿತರೊಬ್ಬರು ಸಾವನ್ನಪ್ಪುವ ಮೂಲಕ ಮೃತಪಟ್ಟವರ ಸಂಖ್ಯೆ ಇದೀಗ 16ಕ್ಕೆ ಏರಿಕೆಯಾಗಿದೆ. ನಿಫಾ ವೈರಸ್‍ನಿಂದ ಹರಡುವ ಸೋಂಕಿಗೆ ಕೇರಳದಲ್ಲಿ ಗುರುವಾರ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾದಂತಾಗಿದೆ. ಕೇರಳದ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಸೋಂಕು ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ ನದುವನ್ನೂರು ನಿವಾಸಿ ರಶೀನ್(25 ವರ್ಷ) ಎನ್ನುವವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ನಿನ್ನೆಯಷ್ಟೇ ಇದೇ ಮಾರಣಾಂತಿಕ ವೈರಾಣು ಸೋಂಕಿಗೆ ಟಿ.ಪಿ. ಮಧುಸೂದನ್…

ನಿಫಾ ವೈರಸ್‍ಗೆ ಕೇರಳದಲ್ಲಿ ಮತ್ತೊಂದು ಬಲಿ, ಸಾವಿನ ಸಂಖ್ಯೆ 13ಕ್ಕೆ ಏರಿಕೆ!
ದೇಶ-ವಿದೇಶ

ನಿಫಾ ವೈರಸ್‍ಗೆ ಕೇರಳದಲ್ಲಿ ಮತ್ತೊಂದು ಬಲಿ, ಸಾವಿನ ಸಂಖ್ಯೆ 13ಕ್ಕೆ ಏರಿಕೆ!

May 28, 2018

ಕೊಯಿಕ್ಕೋಡ್: ದೇವರನಾಡು ಕೇರಳ ದಲ್ಲಿ ಮಾರಣಾಂತಿಕ ನಿಫಾ ವೈರಾಣು ಸೋಂಕಿನ ಮರಣ ಮೃದಂಗ ಮುಂದುವರೆದಿದ್ದು, ಭಾನುವಾರ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಕೇರಳದ ಕೊಯಿಕ್ಕೋಡ್‍ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನಿಫಾ ವೈರಾಣು ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ 26 ವರ್ಷದ ಅಬಿನ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಆ ಮೂಲಕ ನಿಫಾ ವೈರಾಣು ಸೋಂಕಿಗೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾದಂತಾಗಿದೆ. ಇನ್ನು ಮೃತ ಅಬಿನ್, ಕೇರಳದ ಪಾಲಾಳಿ ಜಿಲ್ಲೆಯ ನಿವಾಸಿಯಾಗಿದ್ದು, ಖಾಸಗಿ ವೈದ್ಯಕೀಯ…

ನಿಫಾ ಭೀತಿ: ಉತ್ತರ ಕೇರಳದತ್ತ ಸುಳಿಯದಂತೆ ರಾಜ್ಯ ಪ್ರವಾಸಿಗರಿಗೆ ಎಚ್ಚರಿಕೆ
ಮೈಸೂರು

ನಿಫಾ ಭೀತಿ: ಉತ್ತರ ಕೇರಳದತ್ತ ಸುಳಿಯದಂತೆ ರಾಜ್ಯ ಪ್ರವಾಸಿಗರಿಗೆ ಎಚ್ಚರಿಕೆ

May 25, 2018

ಬೆಂಗಳೂರು: ಉತ್ತರ ಕೇರಳದಲ್ಲಿ ನಿಫಾ ಭೀತಿ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಆ ಭಾಗಕ್ಕೆ ಪ್ರವಾಸಿಗರು ತೆರಳದಂತೆ ಸರ್ಕಾರ ಎಚ್ಚರಿಸಿದೆ. ಕೇರಳದ ಕಣ್ಣೂರು, ವಯನಾಡು, ಕೋಳಿಕ್ಕೋಡ್, ಮಲಪ್ಪುರಂನಲ್ಲಿ ನಿಫಾ ವೈರಸ್ ಹರಡಿರುವ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂತಹ ಸೂಚನೆ ನೀಡಿದೆ. ನಿಫಾ ವೈರಸ್‍ಗೆ ಸಂಬಂಧಿಸಿದಂತೆ ಇಂದು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಸರ್ಕಾರ ಇಂತಹ ತೀರ್ಮಾನ ಕೈಗೊಂಡಿದೆ. ನಿಫಾ ಪತ್ತೆಗಾಗಿ ರಾಜ್ಯ ಆರೋಗ್ಯ ಇಲಾಖೆ ರಚಿಸಿದ್ದ ಕ್ಷಿಪ್ರ ಪರಿಶೀಲನಾ…

1 2
Translate »