ಮಡಿಕೇರಿ: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕ ಸಂದೀಪ್ ಕುಮಾರ್ ಮಿಶ್ರ ಅವರು ಶುಕ್ರವಾರ ನಗರದ ಜಿಲ್ಲಾಧಿಕಾ ರಿಯವರ ಕಚೇರಿಯಲ್ಲಿ ತೆರೆಯಲಾಗಿರುವ ಮಾಧ್ಯಮ ಜಾಹೀರಾತು ದೃಢೀಕರಣ ಮತ್ತು ಮೇಲ್ವಿಚಾರಣಾ ಸಮಿತಿಗೆ(ಎಂಸಿಎಂಸಿ) ಭೇಟಿ ನೀಡಿ ಪರಿಶೀಲಿಸಿದರು. ಮಾಧ್ಯಮ ದೃಢೀಕರಣ ಮತ್ತು ಮೇಲ್ವಿಚಾರಣಾ ಸಮಿತಿ ಕಾರ್ಯ ಚಟುವಟಿಕೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಚುನಾವಣಾ ವೆಚ್ಚ ವೀಕ್ಷಕರು ಸ್ಥಳೀಯ ವಾಹಿನಿಗಳು ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳ ವೆಚ್ಚ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರವಾಗುವ ಮಾಹಿತಿ ಹಾಗೂ ಮಾದರಿ ನೀತಿ…
ಚುನಾವಣಾ ವೆಚ್ಚದ ಬಗ್ಗೆ ಹದ್ದಿನ ಕಣ್ಣಿಡಲು ಸೂಚನೆ
March 23, 2019ಮಡಿಕೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವಂತಾಗ ಬೇಕು. ಆ ನಿಟ್ಟಿನಲ್ಲಿ ಚುನಾವಣಾ ವೆಚ್ಚದ ಬಗ್ಗೆ ಹದ್ದಿನ ಕಣ್ಣಿಡಬೇಕು ಎಂದು ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಚುನಾ ವಣಾ ವೆಚ್ಚ ವೀಕ್ಷಕ (ಮಡಿಕೇರಿ, ವಿರಾಜ ಪೇಟೆ, ಪಿರಿಯಾಪಟ್ಟಣ ಮತ್ತು ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ) ಸಂದೀಪ್ ಕುಮಾರ್ ಮಿಶ್ರ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಲೋಕಸಭಾ ಚುನಾವಣಾ ನೋಡಲ್ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು….
ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನಲೆ, ಮದ್ಯ ಬಳಕೆಗೆ ಕಟ್ಟುನಿಟ್ಟಿನ ನಿಯಮ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಮದ್ಯ ಬಳಕೆಗೆ ನಿಯಮ ಸಡಿಲಿಕೆಗೆ ಮನವಿ
March 23, 2019ಮಡಿಕೇರಿ: ಲೋಕಸಭಾ ಚುನಾವಣೆ ಹಿನ್ನೆಲೆ ವಿವಾಹ ಸೇರಿದಂತೆ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಮದ್ಯ ಬಳಕೆಗೆ ನಿಯಮಗಳನ್ನು ಕಡ್ಡಾಯಗೊ ಳಿಸಿ ಅನುಮತಿಗಾಗಿ ಅಧಿಕ ಶುಲ್ಕವನ್ನು ವಿಧಿಸಲಾಗುತ್ತಿದೆ. ವಿಭಿನ್ನ ಸಂಸ್ಕøತಿಯ ಕೊಡಗು ಜಿಲ್ಲೆಯ ಮಟ್ಟಿಗೆ ಈ ನಿಯ ಮಗಳನ್ನು ಸಡಿಲಿಸಬೇಕೆಂದು ಒತ್ತಾಯಿಸಿ ಕೊಡಗು ಕೊಡವ ಸಮಾಜಗಳ ಒಕ್ಕೂಟ ಹಾಗೂ ಕೊಡಗು ಗೌಡ ಸಮಾಜಗಳ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಕೊಡಗು ಜಿಲ್ಲೆ ತನ್ನದೇ ಆದ ಆಚಾರ ವಿಚಾರಗಳನ್ನು ಹೊಂದಿದ್ದು, ಇತರೆ ಜಿಲ್ಲೆಗ ಳಿಂತ ಭಿನ್ನವಾದ ಸಂಸ್ಕøತಿ ಇಲ್ಲಿದೆ. ಕೊಡ ಗಿನ ಜನರು…
ಕುಶಾಲನಗರ: ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ ನಗದು, ವಾಹನ ವಶ, ಜೂಜುಗಾರರ ಮೇಲೆ ಕೇಸು ದಾಖಲು
March 23, 2019ಕುಶಾಲನಗರ: ಕುಶಾಲನಗರ ಸೇರಿದಂತೆ ಕೂಡಿಗೆ, ಗುಡ್ಡೆ ಹೊಸೂರು ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಸ್ಥಳಗಳಿಗೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಇದಕ್ಕೆ ಸಂಬಂಧಿಸಿದಂತೆ ಹಲವು ವಾಹನಗಳನ್ನು ಹಾಗೂ ಜೂಜಿಗೆ ಸಂಬಂಧಿಸಿದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡ ಘಟನೆ ನಡೆದಿದೆ. ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ದಿನಕರ್ ಶೆಟ್ಟಿ ನೇತೃತ್ವದಲ್ಲಿ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಮತ್ತು ಕಾರ್ಯಾ ಚರಣೆ ತಂಡ ಕೂಡಿಗೆ ಮತ್ತು ಗುಡ್ಡೆಹೊಸೂರು ಬಳಿ ಅಕ್ರಮ ಜೂಜಾಟ ನಡೆಸುತ್ತಿದ್ದ ಅಡ್ಡೆಗೆ…
ಕುಡಿಯುವ ನೀರು ಪೂರೈಕೆಯತ್ತ ಗಮನಹರಿಸಲು ಸೂಚನೆ
March 23, 2019ಮಡಿಕೇರಿ: ಜಿಲ್ಲೆಯ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಕುಡಿ ಯುವ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ಅನ್ಬುಕುಮಾರ್ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಪ್ರಕೃತಿ ವಿಕೋಪ ಪುನರ್ ವಸತಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು. ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗ ಬಾರದು. ಸಾರ್ವಜನಿಕರಿಂದ ದೂರುಗಳು ಕೇಳಿ ಬರಬಾರದು ಎಂದು ತಿಳಿಸಿದರು. ಪ್ರಕೃತಿ…
ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಹತ್ಯೆ?
March 22, 2019ಮಡಿಕೇರಿ: ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಪಾ ಜೆಯ ಬಾಲಚಂದ್ರ ಕಳಗಿ ಅವರ ಸಾವು ಹಲವು ಸಂಶಯಗಳನ್ನು ಹುಟ್ಟು ಹಾಕಿದ್ದು, ಇದು ಒಂದು ವ್ಯವಸ್ಥಿತ ಕೊಲೆ ಎಂದು ಶಂಕೆ ವ್ಯಕ್ತಪಡಿಸಿರುವ ಜಿಲ್ಲಾ ಬಿಜೆಪಿ, ಪೊಲೀಸರು ಸೂಕ್ತ ತನಿಖೆ ನಡೆಸ ಬೇಕೆಂದು ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್, ಬಾಲ ಚಂದ್ರ ಕಳಗಿ ಅವರು ತೆರಳುತ್ತಿದ್ದ ಮಾರುತಿ ಓಮಿನಿಗೆ ಲಾರಿ ಡಿಕ್ಕಿಯಾಗಿ ಅವರು ಕೊನೆ ಯುಸಿರೆಳೆದಿದ್ದರು. ಈ ಘಟನೆಯ ಬಗ್ಗೆ ಅವರ ಕುಟುಂಬಸ್ಥರು ಮತ್ತು…
ಅಕ್ರಮ ಕಳ್ಳಭಟ್ಟಿ ತಯಾರಿಕೆ: ಮೂವರ ಬಂಧನ
March 22, 2019ಸೋಮವಾರಪೇಟೆ: ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಡಿ.ಕೆ. ಲಿಂಗರಾಜು ಎಂಬಾತನ ಮನೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಅದೇ ಗ್ರಾಮದ ಹೆಚ್.ಡಿ. ಲಿಂಗರಾಜು, ಡಿ.ಎಸ್.ಕೀರ್ತಿ ಅವರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ಸಂದರ್ಭ 14 ಲೀಟರ್ ಕಳ್ಳಭಟ್ಟಿ, 3 ಬಾಟಲ್ ರಮ್, 24 ಲೀಟರ್ ಪುಳಿಗಂಜಿ ಸೇರಿದಂತೆ ಕಳ್ಳಭಟ್ಟಿ ತಯಾರಿಸಲು ಬಳಸಲ್ಪಡುತ್ತಿದ್ದ ಪಾತ್ರೆ, ಬಿಂದಿಗೆಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ…
ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣ ಉಚಿತ
March 22, 2019ಮಡಿಕೇರಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಯುವ ದಿನಾಂಕಗಳಂದು ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ರಾಜ್ಯ ಸಾರಿಗೆ ನಿಗಮದ ವತಿಯಿಂದ ವಿತರಿಸಿರುವ ರಿಯಾಯಿತಿ ಬಸ್ ಪಾಸು ಮತ್ತು ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ತಮ್ಮ ವಾಸ ಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಮತ್ತು ವಾಸ ಸ್ಥಳಕ್ಕೆ ಹಿಂದಿರುಗುವಾಗ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗ ದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ ಎಂದು ಕರ್ನಾ ಟಕ ರಾಜ್ಯ…
ಸೋಮವಾರಪೇಟೆ ಬಳಿ ಕುರುಚಲು ಕಾಡಿಗೆ ಬೆಂಕಿ
March 22, 2019ಸೋಮವಾರಪೇಟೆ: ಇಲ್ಲಿನ ಮಹಾತ್ಮಗಾಂಧಿ ರಸ್ತೆಯ ಸಯ್ಯದ್ ಇರ್ಫಾನ್ ಮನೆಯ ಹಿಂಭಾಗದ ಕುರುಚಲು ಕಾಡಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿ ಯಾಗಿತ್ತು. ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂ ದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.ಬೆಂಕಿ ನಂದಿಸುವ ಸಂದರ್ಭ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಲವ, ಪ್ರಮು ಖರಾದ ಕೌಶಿಕ್ ಎಂ.ಜೆ, ಲಕ್ಷ್ಮೀಕುಮಾರ್, ಚೇತನ್, ಪ್ರಕಾಶ್ ಮತ್ತಿತರರು ಇದ್ದರು.
ಬಿ.ಜಿ.ಜಸ್ಮಿತಾಗೆ ಎಂ.ಎಸ್ಸಿಯಲ್ಲಿ ಚಿನ್ನದ ಪದಕ
March 22, 2019ಮೈಸೂರು: ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ಘಟಿಕೋತ್ಸವ ದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆಯ ತಳ್ತರೆಶೆಟ್ಟಳ್ಳಿಯ ಬಗ್ಗನ ಮುತ್ತಣ್ಣ ಹಾಗೂ ಗಂಗಮ್ಮ ಅವರ ಮೊಮ್ಮಗಳು ಕಾಂತಿ ಗಿರೀಶ್ ಅವರ ಮಗಳು ಜಶ್ಮಿತಾ ಹಣ್ಣು ಹಂಪಲು ವಿಭಾಗದ ಎಂ.ಎಸ್ಸಿಯಲ್ಲಿ ಒಟ್ಟು 4 ಚಿನ್ನದ ಪದಕ ಪಡೆದಿರುತ್ತಾರೆ. ಹಾಲಿ ಇವರು ಬಾಗಲ ಕೋಟೆಯಲ್ಲಿ ಪಿಹೆಚ್‍ಡಿ ಮಾಡುತ್ತಿದ್ದಾರೆ. ಇವರಿಗೆ ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಪತಿ ಗಳಾದ ಡಾ. ಎಂ.ಕೆ.ಇಂದ್ರೇಶ್, ಕುಲಾಧಿಪತಿಗಳಾದ ರಾಜ್ಯ ತೋಟಗಾರಿಕೆ ಸಚಿವರಾದ ಎಂ.ಸಿ. ಮನಗೊಳಿ ಹಾಗೂ ಮುಖ್ಯ ಅತಿಥಿಗಳಾದ ಡಾ. ಕೆ.ವಿ. ಪ್ರಭು,…