ಬಿ.ಜಿ.ಜಸ್ಮಿತಾಗೆ ಎಂ.ಎಸ್ಸಿಯಲ್ಲಿ ಚಿನ್ನದ ಪದಕ
ಕೊಡಗು

ಬಿ.ಜಿ.ಜಸ್ಮಿತಾಗೆ ಎಂ.ಎಸ್ಸಿಯಲ್ಲಿ ಚಿನ್ನದ ಪದಕ

March 22, 2019

ಮೈಸೂರು: ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ಘಟಿಕೋತ್ಸವ ದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆಯ ತಳ್ತರೆಶೆಟ್ಟಳ್ಳಿಯ ಬಗ್ಗನ ಮುತ್ತಣ್ಣ ಹಾಗೂ ಗಂಗಮ್ಮ ಅವರ ಮೊಮ್ಮಗಳು ಕಾಂತಿ ಗಿರೀಶ್ ಅವರ ಮಗಳು ಜಶ್ಮಿತಾ ಹಣ್ಣು ಹಂಪಲು ವಿಭಾಗದ ಎಂ.ಎಸ್ಸಿಯಲ್ಲಿ ಒಟ್ಟು 4 ಚಿನ್ನದ ಪದಕ ಪಡೆದಿರುತ್ತಾರೆ. ಹಾಲಿ ಇವರು ಬಾಗಲ ಕೋಟೆಯಲ್ಲಿ ಪಿಹೆಚ್‍ಡಿ ಮಾಡುತ್ತಿದ್ದಾರೆ. ಇವರಿಗೆ ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಪತಿ ಗಳಾದ ಡಾ. ಎಂ.ಕೆ.ಇಂದ್ರೇಶ್, ಕುಲಾಧಿಪತಿಗಳಾದ ರಾಜ್ಯ ತೋಟಗಾರಿಕೆ ಸಚಿವರಾದ ಎಂ.ಸಿ. ಮನಗೊಳಿ ಹಾಗೂ ಮುಖ್ಯ ಅತಿಥಿಗಳಾದ ಡಾ. ಕೆ.ವಿ. ಪ್ರಭು, ಭಾರತೀಯ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಇವರಿಂದ ಚಿನ್ನದ ಪದಕ ಪಡೆದುಕೊಂಡರು.

Translate »