ಚುನಾವಣಾ ವೆಚ್ಚದ ಬಗ್ಗೆ ಹದ್ದಿನ ಕಣ್ಣಿಡಲು ಸೂಚನೆ
ಕೊಡಗು

ಚುನಾವಣಾ ವೆಚ್ಚದ ಬಗ್ಗೆ ಹದ್ದಿನ ಕಣ್ಣಿಡಲು ಸೂಚನೆ

March 23, 2019

ಮಡಿಕೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವಂತಾಗ ಬೇಕು. ಆ ನಿಟ್ಟಿನಲ್ಲಿ ಚುನಾವಣಾ ವೆಚ್ಚದ ಬಗ್ಗೆ ಹದ್ದಿನ ಕಣ್ಣಿಡಬೇಕು ಎಂದು ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಚುನಾ ವಣಾ ವೆಚ್ಚ ವೀಕ್ಷಕ (ಮಡಿಕೇರಿ, ವಿರಾಜ ಪೇಟೆ, ಪಿರಿಯಾಪಟ್ಟಣ ಮತ್ತು ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ) ಸಂದೀಪ್ ಕುಮಾರ್ ಮಿಶ್ರ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಲೋಕಸಭಾ ಚುನಾವಣಾ ನೋಡಲ್ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಚುನಾವಣೆಯನ್ನು ಯಶಸ್ವಿ ಯಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಚುನಾ ವಣಾ ಆಯೋಗದ ನಿರ್ದೇಶನವನ್ನು ಚಾಚು ತಪ್ಪದೇ ಪಾಲಿಸಬೇಕು. ಚೆಕ್‍ಪೋಸ್ಟ್‍ಗ ಳಲ್ಲಿ ಸರಿಯಾಗಿ ತಪಾಸಣೆ ಮಾಡಬೇಕು ಎಂದು ಅವರು ನಿರ್ದೇಶನ ನೀಡಿದರು. ಫ್ಲೈಯಿಂಗ್ ಸ್ಕ್ವಾಡ್, ಸ್ಟಾಟಿಕ್ ಸರ್ವಿ ಲೆನ್ಸ್ ತಂಡ ಸೇರಿದಂತೆ ಎಲ್ಲಾ ತಂಡಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗ ದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಬ್ಯಾಂಕ್‍ಗಳು ಆರ್‍ಬಿಐ ನಿಯಮ ಗಳನ್ನು ಪಾಲಿಸುವುದರ ಜೊತೆಗೆ ಚುನಾವಣಾ ಆಯೋಗದ ನಿರ್ದೇಶನ ಅನುಸರಿಸಬೇಕು. ಎರಡು ಮೂರು ತಿಂಗ ಳಲ್ಲಿ ಖಾತೆಗಳಲ್ಲಿ ಹಣ ವರ್ಗಾವಣೆ ಸಂಬಂ ಧಿಸಿದಂತೆ ಹೆಚ್ಚಿನ ನಿಗಾ ವಹಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ಅಗತ್ಯ ದಾಖಲೆ ಇಲ್ಲದೆ ಸರಕು ಸಾಗಾಣೆ ಮಾಡುವ ವಾಹನಗಳ ತಪಾಸಣೆ ನಡೆಸಿ ಅನುಮಾನ ಕಂಡುಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ತೆರಿಗೆ ಇಲಾ ಖೆಯ ಅಧಿಕಾರಿಗಳಿಗೆ ಸೂಚಿಸಿದರು.

ವ್ಯಾಪಾರಿಗಳಿಗೆ ಯಾವುದೇ ತೊಂದರೆ ಯಾಗದಂತೆ ಚುನಾವಣೆ ನೀತಿ ಸಂಹಿತೆ ಸಂಬಂಧಿಸಿದ ಅಗತ್ಯ ಮಾಹಿತಿ ನೀಡು ವಂತೆ ಅವರು ತಿಳಿಸಿದರು. ಪಾನ್ ಕಾರ್ಡ್ ಜೋಡಣೆಯಾಗದೆ ಇರುವ ಖಾತೆಗಳ ವಹಿವಾಟಿನ ಮೇಲೆ ಬ್ಯಾಂಕ್ ಅಧಿಕಾರಿ ಗಳು ಹೆಚ್ಚಿನ ಗಮನಹರಿಸಿ ಕಳೆದ ಎರಡು ತಿಂಗಳಿಂದ ಇಂತಹ ಖಾತೆಗಳಲ್ಲಿ ನಡೆದ ಹಣದ ವಹಿವಾಟಿನ ಕುರಿತು ಅನುಮಾನ ಕಂಡುಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳು ವಂತೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.

ಪ್ರಸ್ತುತ ಜಿಲ್ಲೆಯಲ್ಲಿ ಕಾಫಿ ಬೀಜ ಮಾರಾಟ ನಡೆಯುತ್ತಿದ್ದು, ಕಾಫಿ ತೋಟದ ಮಾಲೀಕರು ಹಣದ ವ್ಯವಹಾರವನ್ನು ನಗದು ರೂಪ ದಲ್ಲಿ ಮಾಡದೆ ಬ್ಯಾಂಕ್ ಚೆಕ್‍ಗಳ ಮುಖಾಂ ತರ ತಮ್ಮ ವಹಿವಾಟು ನಿರ್ವಹಣೆ ಮಾಡ ಬೇಕು. ಹಾಗೂ ಕಾಫಿ ತೋಟದಲ್ಲಿ ಕಾರ್ಯ ನಿರ್ವಹಿಸುವ ಕೂಲಿಗಾರರಿಗೆ ವೇತನ ವನ್ನು ನಗದು ರೂಪದಲ್ಲಿ ನೀಡಲು ಯಾವುದೇ ಅಭ್ಯಂತರವಿರುವುದಿಲ್ಲ. ಬದ ಲಿಗೆ ಕಾಫಿ ಖರೀದಿ ಮತ್ತು ಮಾರಾಟದ ಹೆಚ್ಚು ಮೊತ್ತದ ವಹಿವಾಟನ್ನು ಚೆಕ್ ಮುಖಾಂತರ ನಿರ್ವಹಣೆ ಮಾಡಲು ಕಾಫಿ ಬೆಳೆಗಾರರಿಗೆ ಮಾಹಿತಿ ನೀಡು ವಂತೆ ಕಾಫಿ ಮಂಡಳಿ ಅಧಿಕಾರಿಗಳಿಗೆ ವೆಚ್ಚ ವೀಕ್ಷಕರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಜಿಲ್ಲಾಡಳಿತ ಇದುವ ರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವಿವಿಧ ತಂಡಗಳ ನೇಮಕ, ನೋಡಲ್ ಅಧಿಕಾರಿಗಳ ನಿಯೋ ಜನೆ, ಚೆಕ್‍ಪೋಸ್ಟ್‍ಗಳ ಸ್ಥಾಪನೆ ಮತ್ತಿತರ ಸಂಬಂಧ ಹಲವು ಮಾಹಿತಿ ನೀಡಿದರು.

ಅಬಕಾರಿ ಇಲಾಖೆಯ ಉಪ ಆಯುಕ್ತ ವೀರಣ್ಣ ಬಾಗೇವಾಡಿ ಮಾತನಾಡಿ, ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಜಿಲ್ಲೆಯಲ್ಲಿ ಸುಮಾರು 257 ಕಡೆ ದಾಳಿ ನಡೆಸಿ 162 ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ 17 ಗಂಭೀರ ಪ್ರಕರಣಗಳೆಂದು ಪರಿ ಗಣಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದುವರೆಗೆ ಸುಮಾರು 2,769 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ 20 ಲಕ್ಷ ರೂ. ಆಗಿದೆ ಎಂದು ಅವರು ತಿಳಿಸಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗುಪ್ತಾಜಿ ಅವರು ಬ್ಯಾಂಕ್‍ಗಳಲ್ಲಿ ಹಣ ಚಲಾವಣೆ ಸಂಬಂಧಿಸಿದಂತೆ ಹೆಚ್ಚಿನ ನಿಗಾ ವಹಿಸ ಲಾಗಿದೆ. ಈ ಸಂಬಂಧ ವಿವಿಧ ಬ್ಯಾಂಕು ಗಳ ವ್ಯವಸ್ಥಾಪಕರಿಗೆ ಮಾಹಿತಿ ನೀಡ ಲಾಗಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮಿ ಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ್, ಸಹಾಯಕ ಚುನಾವಣಾ ಧಿಕಾರಿಗಳಾದ ಟಿ.ಜವರೇಗೌಡ, ಶ್ರೀನಿ ವಾಸ್, ನೋಡಲ್ ಅಧಿಕಾರಿಗಳಾದ ರಾಜು ಇತರರು ಇದ್ದರು.

Translate »