ಜನಾಭಿಪ್ರಾಯದಂತೆ ಸ್ಪರ್ಧಿಸಿದ್ದೇನೆ ನನ್ನ ಗೆಲ್ಲಿಸಿ: ಸುಮಲತಾ
ಮಂಡ್ಯ

ಜನಾಭಿಪ್ರಾಯದಂತೆ ಸ್ಪರ್ಧಿಸಿದ್ದೇನೆ ನನ್ನ ಗೆಲ್ಲಿಸಿ: ಸುಮಲತಾ

March 23, 2019

ಕೆ.ಆರ್.ನಗರ: ಜನಾಭಿಪ್ರಾಯವನ್ನು ಕಲೆ ಹಾಕಿ ಅವರ ಒತ್ತಾಸೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ನಿಮ್ಮ ಅಶೀರ್ವಾದ ನನ್ನ ಮೇಲಿರಲಿ ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕೋರಿದರು.

ಶುಕ್ರವಾರ ಕೆ.ಆರ್.ನಗರ ಪಟ್ಟಣದ ಆಂಜನೇಯ ಬಡಾವಣೆಯ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಅಭಿಮಾನಿಗಳು ಸಲಹೆ ನೀಡಿದ್ದರಿಂದ ಸ್ವತಂತ್ರವಾಗಿ ನಿಂತಿದ್ದೇನೆ. ನಾಮಪತ್ರ ಸಲ್ಲಿಸಿದ ನಂತರ ಮೊಟ್ಟ ಮೊದಲ ಬಾರಿಗೆ ಕೆ.ಆರ್.ನಗರ ಶುಭವೆಂದು ಪ್ರಚಾರಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.

ಜನತೆಯ ಪರವಾಗಿ ಹೋರಾಟ ಮಾಡಲು ಬಂದಿ ದ್ದೇನೆ. ಆದುದರಿಂದ ನನಗೆ ಸಂಪೂರ್ಣ ಸಹಕಾರ ನೀಡಿ, ನನ್ನ ಗೆಲ್ಲಿಸಿ ನಿಮ್ಮಗಳ ಸೇವೆಗೆ ಅವಕಾಶ ಮಾಡಿ ಕೊಡುತ್ತೇವೆ ಎಂದು ಭರವಸೆ ಕೊಡಿ ಎಂದು ಕೈಚಾಚಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಮಾತನಾಡಿ ಮಂಡ್ಯದ ಗೌಡ್ತಿ ಸುಮಲತಾ ಅವರನ್ನು ಪಕ್ಷಾತೀತವಾಗಿ, ಧರ್ಮತೀತವಾಗಿ ಬೆಂಬಲಿಸಿ ಅಧಿಕ ಅಂತರದಿಂದ, ಆಯ್ಕೆ ಮಾಡಬೇಕೆಂದು ಕೋರಿದರು.

ಇದೇ ಸಂದರ್ಭದಲ್ಲಿ ಅಭಿಷೇಕ್ ಸಹ ತಮ್ಮ ತಾಯಿಯ ಗೆಲುವಿಗೆ ಸಹಕರಿಸಲು ಮನವಿ ಮಾಡಿದರು. ನಗರದ ಬಸವೇಶ್ವರ ದೇವಸ್ಥಾನ, ಮುಸ್ಲಿಂ ಬಡಾವಣೆಯ ಜಾಮಿಯಾ ಮಸೀದಿ, ರಾಜಾಸ್ಥಾನ ಸಂಘಗಳಿಗೆ ಸುಮ ಲತಾರವರು ಭೇಟಿ ನೀಡಿ ಸಹಕಾರ ಕೋರಿದರು.

ಇದೇ ಸಂದರ್ಭದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರ್ನಹಳ್ಳಿ ಶಿವಣ್ಣ, ಕಾಂಗ್ರೆಸ್ ವಕ್ತಾರ ಸಯ್ಯದ್ ಜಾಬೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್‍ಶಂಕರ್, ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಯುವ ಕಾಂಗ್ರೇಸ್ ಅಧ್ಯಕ್ಷ ಭೋಜರಾಜ್, ಪುರಸಭಾ ಮಾಜಿ ಅಧ್ಯಕ್ಷ ತಮ್ಮನಾಯಕ, ಸದಸ್ಯರಾದ ಓಮ ಸುಬ್ರಮಣ್ಯ, ಕೆ.ಎಲ್.ಕುಮಾರ್ ವಿನಯ್, ಮುಖಂಡರಾದ ಹಾಡ್ಯಮಹದೇವಸ್ವಾಮಿ, ದಿಡ್ಡಹಳ್ಳಿ ಬಸವರಾಜ್, ಮಧುವನಹಳ್ಳಿ ನಟರಾಜ್, ಪಟೇಲ್‍ರಾಜು, ಕೋಳಿಪ್ರಕಾಶ್, ಯೋಗೀಶ್, ಲಾಳನಹಳ್ಳಿರವಿಕುಮಾರ್, ಯೋಗಾನಂದ, ಕ್ಯಾರೆ ನಾಗರಾಜು, ಚೇತನ್, ಶಾಂತಿರಾಜ್, ಗಂದನಹಳ್ಳಿ ಹೇಮಂತ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Translate »