ಮಂಡ್ಯದಿಂದಲೇ ಬಿಜೆಪಿ ಮುಕ್ತ ಭಾರತ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ವ್ಯಂಗ್ಯ
ಮಂಡ್ಯ

ಮಂಡ್ಯದಿಂದಲೇ ಬಿಜೆಪಿ ಮುಕ್ತ ಭಾರತ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ವ್ಯಂಗ್ಯ

March 23, 2019

ಭಾರತೀನಗರ: ಮಂಡ್ಯದಿಂದಲೇ ಬಿಜೆಪಿ ಮುಕ್ತ ಭಾರತ ವಾಗುತ್ತಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ. ಭಾರತೀನಗರದ ತಮ್ಮ ನಿವಾಸದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇ ಶಿಸಿ ಅವರು ಮಾತನಾಡಿದರು. ಬಿಜೆಪಿ ನಾಯಕರ ಕುತಂತ್ರದಿಂದ ಇಂದು ಬಿಜೆಪಿ ಪಕ್ಷ ನಾಶವಾಗುತ್ತಿದೆ. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸ್ಪರ್ಧೆಗಳಿಸದಂತಹ ದುರ್ದೈವ ಬಂದೊದಗಿದೆ. ಒಂದು ರಾಷ್ಟ್ರೀಯ ಪಕ್ಷ ಈ ಮಟ್ಟಕ್ಕೆ ಹೋಗುತ್ತಿದೆ ಎಂದರೆ ಅವರ ಕುತಂತ್ರಗಳೇ ಕಾರಣ ಎಂದು ಹೇಳಿದರು.

ಮೈತ್ರಿ ಸರ್ಕಾರ ಇಂದು ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಆದ್ದರಿಂದ ಸ್ಥಳೀಯ ಕಾಂಗ್ರೆಸ್ ನಾಯಕರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ಬದಿ ಗೊತ್ತಿ ಅವರ ವಿಶ್ವಾಸಗಳಿಸಿ ಮಂಡ್ಯದಿಂದ ಕಣಕ್ಕಿಳಿಸಿರುವ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗೆ ಶ್ರಮಿಸಬೇಕೆಂದು ಕೋರಿದರು.

ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಗಿಳಿಯಬೇಕೆಂದು ಮಂಡ್ಯಕ್ಕೆ ಬಂದವರಲ್ಲ. ಜಿಲ್ಲೆಯ ಅಭಿವೃದ್ದಿಗೋಸ್ಕರ ಜಿಲ್ಲೆಯ ಶಾಸಕ ರೆಲ್ಲರೂ ಅವರನ್ನು ಕಣಕ್ಕಿಳಿಸಬೇಕೆಂದು ಒತ್ತಾಯ ತಂದೆವು. ಈಗಾಗಲೇ ಮಂಡ್ಯ ಜಿಲ್ಲೆ ಅಭಿವೃದ್ದಿಗೆ ಮುಖ್ಯಮಂತ್ರಿಗಳು 8700 ಕೋಟಿ ರೂ. ಹಣ ಬಿಡುಗಡೆಗೊಳಿಸಿದ್ದಾರೆ. ಇನ್ನೂ ಹತ್ತಾರು ಕೋಟಿ ಬಿಡುಗಡೆಗೊಳ್ಳ ಲಿದೆ. ಯಾವ ಕಾಲದಲ್ಲಾದರೂ ಇಂತಹ ದೊಡ್ಡಮೊತ್ತದ ಅನುದಾನ ಬಿಡುಗಡೆ ಯಾಗಿತ್ತಾ? ಎಂಬುವುದನ್ನು ಮತದಾರ ರಿಗೆ ಕಾರ್ಯಕರ್ತರು ತಿಳುವಳಿಕೆ ನೀಡ ಬೇಕೆಂದು ಹೇಳಿದರು.

ಜೆಡಿಎಸ್ ಮುಖಂಡ ಸಂತೋಷ್ ತಮ್ಮಣ್ಣ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾ.25 ರಂದು ನಾಮ ಪತ್ರ ಸಲ್ಲಿಸಲ್ಲಿದ್ದಾರೆ. ದೊಡ್ಡಮಟ್ಟದಲ್ಲಿ ಭಾಗ ವಹಿಸಿ ಅವರ ಗೆಲುವಿಗೆ ನಿಲ್ಲಬೇಕೆಂದರು.

ನಮ್ಮ ತಂದೆಯವರ ಗೆಲುವಿಗೆ ಹಾಗೂ ಈ ಹಿಂದೆ ಲೋಕಸಭಾ ಅಭ್ಯರ್ಥಿಗಳಾಗಿದ್ದ ಸಿ.ಎಸ್.ಪುಟ್ಟರಾಜು, ಎಲ್.ಆರ್. ಶಿವರಾಮೇ ಗೌಡರವರ ಗೆಲುವಿಗೆ ಶ್ರಮಿಸಿದ ರೀತಿಯಲ್ಲೇ ನಿಖಿಲ್ ಅವರ ಗೆಲುವಿಗೆ ಶ್ರಮಿಸಬೇಕೆಂದು ಕೋರಿದರು. ಇದೇ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ಕೆಸ್ತೂರು ದಾಸೇಗೌಡ, ಸ್ವಾಮೀಗೌಡ, ಮಾದನಾಹಕನಹಳ್ಳಿ ರಾಜಣ್ಣ, ಕರಡಕೆರೆ ಹನುಮಂತೇಗೌಡ, ಎ.ಟಿ.ಬಲ್ಲೇ ಗೌಡ, ಕೆ.ಪಿ.ದೊಡ್ಡಿ ಶಿವರಾಮು, ಎಚ್.ಎಂ. ಮರಿಮಾದೇಗೌಡ, ನೀಲಕಂಠನಹಳ್ಳಿ ಬಸವರಾಜು, ಎ.ಎಸ್. ಬೋರೇಗೌಡ, ವೆಂಕಟೇಶ್ ಸೇರಿದಂತೆ ಇತರರಿದ್ದರು.

Translate »