ಮೈಸೂರು: ಮೈಸೂರಿನ ಕುರುಬಾರ ಹಳ್ಳಿ ಸರ್ವೆ ನಂ.4, ಆಲನಹಳ್ಳಿ ಸರ್ವೆ ನಂ.41ರ ವ್ಯಾಪ್ತಿಯಲ್ಲಿ ಬರುವ ಮುಡಾ ನಿರ್ಮಾಣದ ವಿವಿಧ ಬಡಾವಣೆಗಳ `ಬಿ’ ಖರಾಬು ವಿವಾದಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ. ಸಿದ್ದಾರ್ಥ ಬಡಾವಣೆ, ಕೆ.ಸಿ.ಬಡಾವಣೆ, ಜೆ.ಸಿ.ಬಡಾವಣೆ, ಕುರುಬಾರ ಹಳ್ಳಿ ಗ್ರಾಮ ಮತ್ತು ಆದಾಯ ತೆರಿಗೆ ಬಡಾವಣೆಗಳನ್ನು ಬಿ-ಖರಾಬಿನಿಂದ ಕೈಬಿಡುವ ಸಂಬಂಧ ಫೆ. 25ರೊಳಗೆ ಸರ್ಕಾರಿ ಆದೇಶ ಹೊರ ಬೀಳಲಿದೆ. ಇದು ಸಂತೋಷದ ವಿಚಾರ ಎಂದು ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ…
ಬಡಾವಣೆಗಳ ನಿವಾಸಿಗಳಿಂದ ಫೆ.11ಕ್ಕೆ ‘ಬೆಂಗಳೂರು ಚಲೋ’
February 5, 2019ಮೈಸೂರು: ಐಟಿಬಿ ಮತ್ತು ಮುಡಾದಿಂದ ಅಭಿವೃದ್ಧಿಪಡಿಸಿರುವ ಕುರುಬಾರಹಳ್ಳಿ ಸರ್ವೆ ನಂಬರ್ 4 ಮತ್ತು ಆಲನಹಳ್ಳಿ ಸರ್ವೆ ನಂಬರ್ 41ರ ಬಡಾವಣೆಗಳನ್ನು ‘ಬಿ’ ಖರಾಬು ವರ್ಗದಿಂದ ಕೈಬಿಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ನಿವಾಸಿಗಳು ಫೆಬ್ರವರಿ 11ರಂದು ‘ಬೆಂಗಳೂರು ಚಲೋ’ ಚಳವಳಿ ನಡೆಸಲು ನಿರ್ಧರಿಸಿದ್ದಾರೆ. ಅಂದು ಬಸ್ಸುಗಳಲ್ಲಿ ಬೆಂಗಳೂರಿಗೆ ತೆರಳಲಿರುವ ಸುಮಾರು ಒಂದು ಸಾವಿರ ಮಂದಿ ನಿವಾಸಿಗಳು ಅಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ತ.ಮ.ವಿಜಯಭಾಸ್ಕರ್, ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಕಂದಾಯ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ…
ಕುರುಬಾರಹಳ್ಳಿ ಸರ್ವೇ ನಂ. 4 ಮತ್ತು ಆಲನಹಳ್ಳಿ ಸರ್ವೇ ನಂ. 41ರ ವಿವಾದ: ಇಲ್ಲಿರುವ ಮುಡಾ ಬಡಾವಣೆ ನಿವಾಸಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಯ
August 12, 2018ಮೈಸೂರು: ಕುರುಬಾರಹಳ್ಳಿ ಸರ್ವೇ ನಂ. 4 ಮತ್ತು ಆಲನಹಳ್ಳಿ ಸರ್ವೇ ನಂ. 41ರ ಭೂಮಿಯ ವ್ಯಾಪ್ತಿಯಲ್ಲಿ ಈ ಹಿಂದೆ ನಗರ ವಿಶ್ವಸ್ಥ ಮಂಡಳಿ (ಸಿಐಟಿಬಿ), ನಂತರ ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರ (ಮುಡಾ) ಅಭಿವೃದ್ಧಿಪಡಿಸಿರುವ ಬಡಾವಣೆಗಳಾದ ಸಿದ್ದಾರ್ಥ ನಗರ, ಕೆ.ಸಿ. ನಗರ, ಜೆ.ಸಿ. ನಗರ ಮತ್ತು ಆಲನಹಳ್ಳಿಯ ಸಾವಿರಾರು ನಿವಾಸಿಗಳ ಕಳೆದ 5 ವರ್ಷಗಳ ನಿರಂತರ ಹೋರಾಟಕ್ಕೆ ಇದೀಗ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದರೊಂದಿಗೆ ಕಡೆಗೂ ಫಲ ಸಿಗುವ ನಿರೀಕ್ಷೆ ಇದೆ. ಕುರುಬಾರ ಹಳ್ಳಿ ಸರ್ವೇ…
ಕುರುಬಾರಹಳ್ಳಿ ಸರ್ವೆ ನಂ.4, ಆಲನಹಳ್ಳಿ ಸಅರ್ವೆ ನಂ.41ರ ನಿವಾಸಿಗಳಿಂದ ಇಂದು ಮುಖ್ಯಮಂತ್ರಿ ಭೇಟಿ
August 11, 2018ಮೈಸೂರು: ಕಳೆದ ಆರು ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಮೈಸೂರಿನ ಕುರುಬಾರಹಳ್ಳಿ ಸರ್ವೆ ನಂ.4 ಹಾಗೂ ಆಲನಹಳ್ಳಿ ಸರ್ವೆ ನಂ.41ರಲ್ಲಿ ವಾಸವಿರುವ ಸಾವಿರಾರು ನಿವಾಸಿಗಳು ನಾಳೆ (ಆ.11) ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ತಮ್ಮ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಲಿದ್ದಾರೆ. ಮೈಸೂರಿನ ಇನ್ಫೋಸಿಸ್ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿಗಳು ನಾಳೆ ಬೆಳಿಗ್ಗೆ ಚಾಮುಂಡಿಬೆಟ್ಟದ ತಪ್ಪಲಿನ ಪಿಂಜರಾಪೋಲ್‍ಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದ್ದು, ಆ ಸಂದರ್ಭದಲ್ಲಿ ಕುರುಬಾರಹಳ್ಳಿ ಸರ್ವೆ ನಂ.4ರ ನಿವಾಸಿಗಳ ಹಿತ…