Tag: kushalnagar

ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಜ್ವಲ್ ರೇವಣ್ಣ ಬಿರುಸಿನ ಪ್ರಚಾರ
ಕೊಡಗು

ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಜ್ವಲ್ ರೇವಣ್ಣ ಬಿರುಸಿನ ಪ್ರಚಾರ

October 24, 2018

ಕುಶಾಲನಗರ: ಇಲ್ಲಿನ ಪಟ್ಟಣ ಪಂಚಾಯಿತಿಗೆ ಅ.28 ರಂದು ಚುನಾ ವಣೆ ನಡೆಯುವ ಹಿನ್ನೆಲೆಯಲ್ಲಿ ಮಂಗಳ ವಾರ ಜಾತ್ಯಾತೀತ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಪಕ್ಷದ ಅಭ್ಯರ್ಥಿಗಳ ಪರ ವಿವಿಧ ವಾರ್ಡ್ ಗಳಲ್ಲಿ ಮತಯಾಚನೆ ಮಾಡಿದರು. ಪಕ್ಷದ ಮುಖಂಡರೊಂದಿಗೆ 15ನೇ ವಾರ್ಡ್‍ನ ಅಭ್ಯರ್ಥಿ ಎನ್.ಸಿ. ಗಣೇಶ್, 10ನೇ ವಾರ್ಡಿನ ವಿ.ಎನ್.ಆನಂದ್ ಕುಮಾರ ಸೇರಿದಂತೆ ಇತರೆ ಅಭ್ಯರ್ಥಿಗಳ ಪರ ವಾರ್ಡ್‍ಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಟ್ಟಣ ಪಂಚಾ ಯಿತಿಯಲ್ಲಿ…

ಕೊಡಗಿನ ಪ್ರಕೃತಿ ವಿಕೋಪದಿಂದ ವಲಸೆ ಕಾರ್ಮಿಕರು, ಬುಡಕಟ್ಟು ಜನರ ಬದುಕು ಅಯೋಮಯ
ಕೊಡಗು

ಕೊಡಗಿನ ಪ್ರಕೃತಿ ವಿಕೋಪದಿಂದ ವಲಸೆ ಕಾರ್ಮಿಕರು, ಬುಡಕಟ್ಟು ಜನರ ಬದುಕು ಅಯೋಮಯ

September 24, 2018

ಮಡಿಕೇರಿ/ಕುಶಾಲನಗರ: ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ಹಾನಿಯಿಂದ ಬೀದಿಗೆ ಬಿದ್ದ ಸಾವಿರಾರು ವಲಸೆ ಕಾರ್ಮಿಕರು ಹಾಗೂ ಮೂಲ ನಿವಾಸಿಗಳಿಗೆ ಈಗ ಜೀವನ ನಡೆಸುವುದೇ ದುಸ್ತರವಾಗಿದೆ. ಒಂದೆಡೆ ಭೂಕುಸಿತ ಹಾಗೂ ಪ್ರವಾಹದಿಂದ ಎಸ್ಟೇಟ್ ಮಾಲೀಕರು ಕಂಗಾಲಾಗಿದ್ದರೆ ಮತ್ತೊಂದೆಡೆ ದೂರದ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಿಂದ ವಲಸೆ ಬಂದ ಕಾರ್ಮಿಕರು ನಿತ್ಯದ ಕೂಳಿಗೂ ಪರಿತಪಿಸುವಂತಾಗಿದೆ. ಜಮೀನು ಕಳೆದುಕೊಂಡ ಮಾಲೀಕರು ತಮ್ಮ ಜಮೀನಿನ ಅಸ್ತಿತ್ವವನ್ನು ಹುಡುಕುತ್ತಿದ್ದರೆ ಮತ್ತೊಂದೆಡೆ ಇಲ್ಲಿನ ಬುಡಕಟ್ಟು ಜನ, ಹಾಗೂ ವಲಸೆ ಕಾರ್ಮಿಕರು ಮುಂದೆ ಏನು ಎಂದು ದಿಕ್ಕು…

ಲಕ್ಷಾಂತರ ಮೌಲ್ಯದ ಬೀಟೆ ನಾಟ ಸಹಿತ ವಾಹನ ವಶ, ಆರೋಪಿಗಳು ಪರಾರಿ
ಕೊಡಗು

ಲಕ್ಷಾಂತರ ಮೌಲ್ಯದ ಬೀಟೆ ನಾಟ ಸಹಿತ ವಾಹನ ವಶ, ಆರೋಪಿಗಳು ಪರಾರಿ

August 10, 2018

ಕುಶಾಲನಗರ:  ಸಮೀಪದ ಗುಡ್ಡೆ ಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಬೀಟೆ ನಾಟಗಳನ್ನು ಸಾಗಿ ಸುತ್ತಿದ್ದ ವೇಳೆ ಆನೆಕಾಡು ಅರಣ್ಯ ಸಿಬ್ಬಂದಿ ದಾಳಿ ಮಾಡಿ, ಲಕ್ಷಾಂತರ ಮೌಲ್ಯದ ಬೀಟೆ ನಾಟ ಸೇರಿದಂತೆ ವಾಹನವನ್ನು ವಶ ಪಡಿಸಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಮಡಿಕೇರಿ-ಮೈಸೂರು ರಾಜ್ಯ ಹೆದ್ದಾ ರಿಯ ಆನೆಕಾಡು ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ಹಾಗೂ ಆನೆಕಾಡು ಉಪ ವಲಯ ಅರಣ್ಯಾಧಿಕಾರಿ ರಂಜನ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಾಲು ಸಮೇತ ವಾಹನ ವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ…

1.30 ಲಕ್ಷ ಮೌಲ್ಯದ ಶ್ರೀಗಂಧದ ತುಂಡು ವಶ; ಮೂವರ ಬಂಧನ
ಕೊಡಗು

1.30 ಲಕ್ಷ ಮೌಲ್ಯದ ಶ್ರೀಗಂಧದ ತುಂಡು ವಶ; ಮೂವರ ಬಂಧನ

August 9, 2018

ಕುಶಾಲನಗರ: ಸೋ.ಪೇಟೆ ತಾಲೂ ಕಿನ ಯಲಕನೂರು ಹೊಸಹಳ್ಳಿ ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ಗಂಧದ ಮರಗಳನ್ನು ಕಡಿದು ನಾಟಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬುಧವಾರ ಬಂಧಿಸುವಲ್ಲಿ ಅರಣ್ಯ ಸಿಬ್ಬಂ ದಿಗಳು ಯಶಸ್ವಿಯಾಗಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ಪುರದ ದಿ.ಸುಬ್ರಮಣಿ ಎಂಬುವವರ ಮಗ ಎಸ್. ಸಂಪತ್ (30 ವರ್ಷ) ಸೋಮವಾರ ಪೇಟೆ ಆಡಿನಾಡೂರು ಗ್ರಾಮದ ಬೋಜ ಎಂಬುವವರ ಮಗ ಸುರೇಶ್ (35 ವರ್ಷ), ಆನಂದ್ ಎಂಬುವವರ ಮಗ ರಾಮ(45 ವರ್ಷ) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿದಂದ ಸುಮಾರು 1.30…

ವಕೀಲರ ಸಂಘದ ಅಧ್ಯಕ್ಷರ ಮೇಲೆ ಹಲ್ಲೆ ಇಬ್ಬರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲು
ಕೊಡಗು

ವಕೀಲರ ಸಂಘದ ಅಧ್ಯಕ್ಷರ ಮೇಲೆ ಹಲ್ಲೆ ಇಬ್ಬರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲು

August 7, 2018

ಕುಶಾಲನಗರ: ಸೋಮವಾರಪೇಟೆ ತಾಲೂಕು ಪಂಚಾಯತಿ ಉಪಾಧ್ಯಕ್ಷರೂ ಆದ ವಕೀಲ ಸಂಘದ ಅಧ್ಯಕ್ಷ ಅಭಿಮನ್ಯುಕುಮಾರ್ ಮೇಲೆ ಭಾನುವಾರ ರಾತ್ರಿ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಪಟ್ಟಣದ ತಾಜ್ ಹೊಟೇಲ್ ಬಳಿ ಈ ಘಟನೆ ನಡೆದಿದೆ. ಹೋಟೆಲ್ ಬಳಿ ನಿಲ್ಲಿಸಿದ್ದ ಕಾರನ್ನು ತೆಗೆಯುವ ಸಂದರ್ಭ ಹಿಂಬದಿಯಲ್ಲಿ ಬೈಕ್ ಡಿಕ್ಕಿಯಾಗಿದೆ. ಇದರಿಂದ ಆಕ್ರೋಶಗೊಂಡ ಬೈಕ್ ಮಾಲೀಕ ಕಾರು ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಅಲ್ಲಿಯೇ ಇದ್ದ ಅಭಿಮನ್ಯುಕುಮಾರ್ ಜಗಳ ಬಿಡಿಸಿ ಸಮಾಧಾನ ಪಡಿಸಲು ಮುಂದಾದಾಗ ತಾಜುದ್ದೀನ್ ಮತ್ತು ಮಹಮ್ಮದ್…

ವಿಷಮಿಶ್ರಿತ ಹಲಸಿನಹಣ್ಣು ತಿಂದು ಹಸುಗಳು ಸಾವು
ಕೊಡಗು

ವಿಷಮಿಶ್ರಿತ ಹಲಸಿನಹಣ್ಣು ತಿಂದು ಹಸುಗಳು ಸಾವು

July 18, 2018

ಕುಶಾಲನಗರ: ಸಮೀಪದ ಹುದುಗೂರು ಜೇನುಕಲ್ಲು ಬೆಟ್ಟ ಮೀಸಲು ಅರಣ್ಯದಂಚಿನಲ್ಲಿ ಕಿಡಿಗೇಡಿಗಳು ಕಾಡಾನೆಗಳಿಗೆ ಇಟ್ಟಿದ್ದ ವಿಷಮಿಶ್ರಿತ ಹಲಸಿನಹಣ್ಣು ತಿಂದು ನಾಲ್ಕು ಹಸುಗಳು ಮೃತಪಟ್ಟಿರುವ ಘಟನೆ ಸೀಗೆ ಹೊಸೂರು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಕೂಡಿಗೆ ಗ್ರಾಪಂ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ರೈತ ರವಿ ಎಂಬುವವರಿಗೆ ಸೇರಿದ ಒಂದು ಎತ್ತು ಹಾಗೂ ಮೂರು ಹಸುಗಳು ಮೃತಪಟ್ಟಿವೆ. ಕಾಡಾಂಚಿನ ಗ್ರಾಮ ದಲ್ಲಿ ಕಾಡಾನೆಗಳು ದಾಳಿ ಮಾಡಿ ಕೃಷಿ ಫಸಲನ್ನು ನಾಶ ಮಾಡುತ್ತಿರುವ ಹಿನ್ನೆಲೆ ಯಲ್ಲಿ ಕೆಲವು ಕಿಡಿಗೇಡಿಗಳು ಕಾಡಾನೆಗಳು ಬರುವ ದಾರಿಯಲ್ಲಿ…

1 2
Translate »