ಕುಶಾಲನಗರ: ಇಲ್ಲಿನ ಪಟ್ಟಣ ಪಂಚಾಯಿತಿಗೆ ಅ.28 ರಂದು ಚುನಾ ವಣೆ ನಡೆಯುವ ಹಿನ್ನೆಲೆಯಲ್ಲಿ ಮಂಗಳ ವಾರ ಜಾತ್ಯಾತೀತ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಪಕ್ಷದ ಅಭ್ಯರ್ಥಿಗಳ ಪರ ವಿವಿಧ ವಾರ್ಡ್ ಗಳಲ್ಲಿ ಮತಯಾಚನೆ ಮಾಡಿದರು.
ಪಕ್ಷದ ಮುಖಂಡರೊಂದಿಗೆ 15ನೇ ವಾರ್ಡ್‍ನ ಅಭ್ಯರ್ಥಿ ಎನ್.ಸಿ. ಗಣೇಶ್, 10ನೇ ವಾರ್ಡಿನ ವಿ.ಎನ್.ಆನಂದ್ ಕುಮಾರ ಸೇರಿದಂತೆ ಇತರೆ ಅಭ್ಯರ್ಥಿಗಳ ಪರ ವಾರ್ಡ್‍ಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಟ್ಟಣ ಪಂಚಾ ಯಿತಿಯಲ್ಲಿ 10 ವರ್ಷಗಳಿಂದ ಆಡಳಿತ ನಡೆಸಿದ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಪಟ್ಟಣದ ಅಭಿವೃದ್ಧಿ ಯನ್ನು ಸಂಪೂರ್ಣ ಕಡೆಗಣಿಸಿವೆ. ಇಲ್ಲಿನ ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೆ ಬರೀ ಕಾಲಹರಣ ಮಾಡಿದ್ದು ದುರದೃ ಷ್ಟಕರ. ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಕೊಡಗಿನ ರಸ್ತೆಗಳೆಲ್ಲ ಹಾಳು ಬಿದ್ದ ಸಂದರ್ಭದಲ್ಲಿ ಕಂದಾಯ ಮಂತ್ರಿ ಎಚ್ ಡಿ ರೇವಣ್ಣ ಅವರ ಪರಿಶ್ರಮದಿಂದಾಗಿ ಹಲವಾರು ಕೋಟಿ ರೂಪಾಯಿಗಳ ಅನು ದಾನ ಜಿಲ್ಲೆಗೆ ಬಂದಿದೆ ಎಂದರು.
ಜನರ ಬಹುದಿನಗಳ ಬೇಡಿಕೆಯಾದ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಜಾತ್ಯಾತೀತ ಜನತಾದಳಕ್ಕೆ ಐದು ವರ್ಷಗಳ ಅಧಿಕಾರವನ್ನು ಮತದಾರರು ನೀಡಿದ್ದೇ ಆದಲ್ಲಿ ಕುಶಾಲನಗರದ ಪಟ್ಟಣದ ಸರ್ವ ತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು. ಈ ಸಂದರ್ಭ ಜಾತ್ಯಾತೀತ ಜನತಾದಳದ ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ, ಮುಖಂಡರಾದ ಬಿ.ಎಸ್. ಚಂದ್ರಶೇಖರ್, ವಿಶ್ವ ಗಿರಿ, ಶಿವಪ್ಪ, ಪ್ರಕಾಶ್, ಅಣ್ಣಯ್ಯ, ರಘು, ಪ್ರಸನ್ನ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.