ರೈಲು ಇಲ್ಲದ ಜಿಲ್ಲೆಯಲ್ಲೊಂದು ರೈಲ್ವೆ ಸ್ಟೇಷನ್:  ಪ್ರಕೃತಿ ಮುನಿಸಿಗೆ ಹಳಿ ಇಳಿದು ಯಾರ್ಡ್ ಸೇರಿದ ಟೂರಿಸ್ಟ್ ಎಕ್ಸ್‍ಪ್ರೆಸ್
ಕೊಡಗು

ರೈಲು ಇಲ್ಲದ ಜಿಲ್ಲೆಯಲ್ಲೊಂದು ರೈಲ್ವೆ ಸ್ಟೇಷನ್: ಪ್ರಕೃತಿ ಮುನಿಸಿಗೆ ಹಳಿ ಇಳಿದು ಯಾರ್ಡ್ ಸೇರಿದ ಟೂರಿಸ್ಟ್ ಎಕ್ಸ್‍ಪ್ರೆಸ್

October 24, 2018

ಮಡಿಕೇರಿ: ಈ ರೈಲ್ವೇ ಸ್ಟೇಷ ನ್‍ನಲ್ಲಿರೋದು ಕೇವಲ ಒಬ್ಬ ಟಿಕೇಟ್ ಕಲೆಕ್ಟರ್.. ಸ್ಷೇಷನ್‍ನಲ್ಲಿ ರೈಲಿಗಾಗಿ ಕಾದು ಕುಳಿತಿರೋ ಬೆರಳೆಣಿಕೆಯ ಜನ.. ರೈಲಿನ ವೇಳಾಪಟ್ಟಿ ತಿಳಿದು ಹತಾಶೆಯಿಂದ ನಿರ್ಗಮಿಸುತ್ತಿರುವ ಹೊರ ಊರ ಅತಿ ಥಿಗಳು.. ಪ್ರಕೃತಿ ವಿಕೋಪದ ಬಳಿಕ ಹಳಿಯಿಂದ ಇಳಿದು ‘ಯಾರ್ಡ್’ ಸೇರಿದ ‘ಟೂರಿಸ್ಟ್ ಎಕ್ಸ್‍ಪ್ರೆಸ್’..

ಇದು ಮಡಿಕೇರಿಯಲ್ಲಿ ಕಂಡು ಬರುವ ದೃಶ್ಯ. ರೈಲ್ವೇ ಹಳಿ ಇಲ್ಲದ ದೇಶದ ಏಕೈಕ ಜಿಲ್ಲೆ ಎಂಬ ಹೆಸರು ಪಡೆದಿರುವ ಕೊಡಗು, ಅದರಲ್ಲೂ ಜಿಲ್ಲಾ ಕೇಂದ್ರ ಮಡಿಕೇರಿಗೆ ರೈಲು ಬಂದದ್ದಾದರೂ ಯಾವಾಗ ಅಂತ ಪ್ರಶ್ನಿಸಬೇಡಿ. ಯಾಕೆಂದ್ರೆ ಇದು ಅಂತಿಲ್ಲ ರೈಲಲ್ಲ.. ಮಕ್ಕಳು ಮಾತ್ರವಲ್ಲದೆ ವಯೋ ವೃದ್ಧರು ಕೂಡ ಈ ರೈಲಿನಲ್ಲಿ ಪ್ರಯಾಣ ಮಾಡಲು ಬಯಸುತ್ತಾರೆ. ಆ ರೈಲಿಗೆ ‘ಕಾವೇರಿ ಎಕ್ಸ್‍ಪ್ರೆಸ್’ ಎಂಬ ಹೆಸರೂ ಇದೆ.

ಪ್ರವಾಸಿ ತಾಣಗಳ ಪೈಕಿ ಮಡಿಕೇರಿಯ ರಾಜಾಸೀಟ್ ಉದ್ಯಾನವನ ನೈಸರ್ಗಿಕ ದೃಶ್ಯ ಸೊಬಗಿನಿಂದ ಪ್ರವಾಸಿಗರನ್ನು ಕೈಚಾಚಿ ಕರೆಯುತ್ತದೆ. ತಂಪಾದ ಹವಾಮಾನ, ಪ್ರಶಾಂತ ವಾತಾವರಣ ದೊಂದಿಗೆ ಏಕಾಂತವನ್ನು ಬಯಸುವವರ ಪಾಲಿಗೂ ರಾಜಾಸೀಟು ಹೇಳಿ ಮಾಡಿ ಸಿದಂತಿದೆ. ರಾಜಾಸೀಟಿಗೆ ಆಗಮಿಸುವ ಪ್ರವಾಸಿಗರಿಗೆ ಕಾವೇರಿ ಎಕ್ಸ್‍ಪ್ರೆಸ್ ಎಂಬ ಪುಟಾಣಿ ರೈಲು ಅದೆಷ್ಟೋ ವರ್ಷ ಗಳಿಂದ ಜಾಲಿರೈಡ್ ಹೆಸರಲ್ಲಿ ಮುದ ನೀಡುತ್ತಿತ್ತು. ಮಕ್ಕಳು, ವಯೋವೃದ್ಧರು, ನವ ವಿವಾಹಿತರು, ಯುವ ಪ್ರೇಮಿಗಳು ಎನ್ನುವ ಯಾವ ಬೇಧವಿಲ್ಲದೆ ಎಲ್ಲರೂ ಈ ಕಾವೇರಿ ಎಕ್ಸ್‍ಪ್ರೆಸ್‍ನಲ್ಲಿ ಪ್ರಯಾಣಿಸಿ ರಾಜಾಸೀಟು ಪ್ರವಾಸಿ ತಾಣದ ಮನರಂಜನೆ ಪಡೆಯುತ್ತಿದ್ದರು. ರೈಲಿನಲ್ಲಿಯೇ ಸೆಲ್ಫಿ ತೆಗೆದು ತಮ್ಮ ಪ್ರವಾಸದ ಸವಿಗಳಿ ಗೆಯನ್ನು ಮೊಬೈಲ್‍ನಲ್ಲಿ ಸಂಗ್ರಹಿಸುತ್ತಿದ್ದರು.

ಆದರೆ ಕಳೆದ 3 ತಿಂಗಳ ಹಿಂದೆ ಮಡಿ ಕೇರಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಘಟಿಸಿದ ಪ್ರಕೃತಿ ವಿಕೋಪದ ಎಫೆಕ್ಟ್ ಕಾವೇರಿ ಎಕ್ಸ್‍ಪ್ರೆಸ್‍ಗೂ ತಟ್ಟಿದೆ. ಅತೀವ ಮಳೆಯಿಂದಾಗಿ ಕಾವೇರಿ ಎಕ್ಸ್‍ಪ್ರೆಸ್ ಸಂಚ ರಿಸುವ ಹಳಿಗಳು ತುಕ್ಕು ಹಿಡಿದಿದ್ದು, ಹಳಿಗಳಿಗೆ ಅಳವಡಿಸಿದ್ದ ಮರದ ದಿಮ್ಮಿಗಳು ಗೆದ್ದಲು ಹಿಡಿದಿದೆ. ಪ್ರಕೃತಿ ವಿಕೋಪ ಸಂಭವಿಸಿದ ಬಳಿಕ ಜಿಲ್ಲೆಯ ಕಡೆ ಪ್ರವಾಸಿ ಗರು ಆಗಮಿಸಲು ಹಿಂದೇಟು ಹಾಕಿದ್ದ ರಿಂದ ಪ್ರವಾಸಿಗರಿಗಾಗಿ ಕಾಯುತ್ತಿದ್ದ ಕಾವೇರಿ ಎಕ್ಸ್‍ಪ್ರೆಸ್ ತನ್ನ ಸಂಚಾರದ ವೇಳಾಪಟ್ಟಿ ಯನ್ನು ರದ್ದುಗೊಳಿಸಿ ಗೂಡು ಸೇರಿದೆ. ಈ ಬಾರಿಯ ದಸರಾ ಉತ್ಸವದಲ್ಲಾದರೂ ಪುಟಾಣಿ ರೈಲು ಫ್ಲಾಟ್‍ಫಾರಂಗೆ ಬರಬ ಹುದೆಂಬ ನಿರೀಕ್ಷೆ ಪ್ರವಾಸಿಗರಿಗೆ ಇತ್ತಾದರೂ, ಆ ನಿರೀಕ್ಷೆಯೂ ಹುಸಿಯಾಗಿದೆ. ಮಡಿ ಕೇರಿ ನಗರ ಸಭೆಯ ಸುಪರ್ದಿನಲ್ಲಿರುವ ಪುಟಾಣಿ ರೈಲು ಕಳೆದ ಬಾರಿ 25 ಲಕ್ಷ ರೂಪಾಯಿ ಬಿಡ್ಡಿಂಗ್ ಮೂಲಕ ಖಾಸಗೀ ವ್ಯಕ್ತಿಗಳು ಪಡೆದುಕೊಂಡಿದ್ದರು.

ಕೆಲ ತಿಂಗಳ ಹಿಂದೆ ಗುತ್ತಿಗೆ ಅವಧಿ ಮುಕ್ತಾಯ ವಾಗಿದ್ದು, ತದನಂತರ ನಗರ ಸಭೆಯಿಂದ ಯಾವುದೇ ರೀತಿಯ ಹರಾಜು ಪ್ರಕ್ರಿಯೆ ಇಂದಿನವರೆಗೂ ನಡೆದಿಲ್ಲ. ಹೀಗಾಗಿ ನಗರ ಸಭೆ ನಿರ್ಲಕ್ಷ್ಯ ಮತ್ತು ಪ್ರವಾಸೋದ್ಯಮ ಇಲಾಖೆಯ ದೂರದೃಷ್ಟಿಯ ಕೊರತೆಯಿಂದಾಗಿ ಪುಟಾಣಿ ರೈಲು ಗೂಡಿನೊಳಗೆ ದಿನದೂಡುತ್ತಿದೆ.

ಪರಿಣಾಮವೆಂಬತೆ ರಾಜಾಸೀಟ್ ಎಂಬ ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರು ನಿರಾಶೆಯಿಂದ ಮರಳು ವಂತಾಗಿದೆ.
ಪುಟಾಣಿ ರೈಲನ್ನು ಹರಾಜು ಮೂಲಕ ಗುತ್ತಿಗೆ ನೀಡಿ ಹಣ ಸಂಗ್ರ ಹಿಸುವ ಮಡಿಕೇರಿ ನಗರಸಭೆಗೆ ರೈಲ್ವೇ ಹಳಿಗಳ ನಿರ್ವಹಣೆ, ರೈಲು ಸಂಚ ರಿಸುವ ಮಾರ್ಗದಲ್ಲಿ ಕಾಡು ಕಡಿಸಿ ಸ್ವಚ್ಛತೆ ಕಾಪಾಡುವ ಕಾರ್ಯ ಮರೆತು ಹೋಯಿತೆ ಅಥವಾ ನಿರ್ಲಕ್ಷ್ಯ ಭಾವನೆ ಮೂಡಿದೆಯೇ ಎಂಬ ಬಗ್ಗೆ ಪುಟಾಣಿ ರೈಲು ಸಂಚರಿಸುವ ಪ್ರದೇಶವನ್ನು ನೋಡಿ ದರೆ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆಗೆ ನಗರ ಸಭೆಯೇ ಉತ್ತರಿಸಬೇಕಿದೆ.

Translate »