ಬೇಲೂರು: ಪುರಸಭಾ ಸದಸ್ಯ ಶ್ರೀನಿಧಿ ಕನ್ನಡ ಬಾವುಟ ಕುರಿತು ನೀಡಿದ ಹೇಳಿಕೆ ಖಂಡಿಸಿ ತಕ್ಷಣವೇ ಕ್ಷಮೆಯಾಚಿಸ ಬೇಕೆಂದು ವಿವಿಧ ಕನ್ನಡಪರ ಸಂಘ ಟನೆಗಳ ಮುಖಂಡರು ಆಗ್ರಹಿಸಿದ ಘಟನೆ ಇಂದು ನಡೆಯಿತು.ನ.1ರ ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ತಹಶೀಲ್ದಾರ್ ಶಾರದಾಂಬ ಅಧ್ಯಕ್ಷತೆಯಲ್ಲಿ ತಮ್ಮ ಕಚೇರಿಯಲ್ಲಿ ಕರೆ ದಿದ್ದ ಪೂರ್ವಭಾವಿ ಸಭೆ ಶ್ರೀನಿಧಿ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ನಿನ್ನೆ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಸದಸ್ಯ ಶ್ರೀನಿಧಿ ಅವರು ಕನ್ನಡ ಬಾವುಟಕ್ಕೆ ಇನ್ನೂ ಯಾವುದೇ ಮಾನ್ಯತೆ ದೊರೆತಿಲ್ಲ ಎಂದಿರುವುದು ಕನ್ನಡಿಗರಿಗೆ ಮಾಡಿದ ಅವಮಾನವಾಗಿದ್ದು, ಅವರು ತಕ್ಷಣವೇ ಕ್ಷಮೆ ಕೇಳಬೇಕು ಎಂದು ಒತ್ತಾ ಯಿಸಿದರು. ಈ ಸಂದರ್ಭ ಪುರಸಭಾಧ್ಯಕ್ಷೆ ಭಾರತೀ ಅರುಣ್‍ಕುಮಾರ್ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ತಹಶೀ ಲ್ದಾರ್ ಶಾರಾದಾಂಬ ಮಧ್ಯ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.
ಕಸಾಪ ಅಧ್ಯಕ್ಷ ದಯಾನಂದ್ ಮಾತ ನಾಡಿ, ಕನ್ನಡ ಬಾವುಟವನ್ನು ಕರ್ನಾಟಕದ ಆರೂವರೇ ಕೋಟಿ ಜನರು ಒಪ್ಪಿಕೊಂಡಿ ರುವಾಗ ಸದಸ್ಯ ಶ್ರೀನಿಧಿ ಅವರು ಕನ್ನಡ ಬಾವುಟ ಇನ್ನೂ ಯಾವುದೇ ಮಾನ್ಯತೆ ಪಡೆದಿಲ್ಲ ಎಂದು ಪೊಲೀಸರು ಹೇಳಿ ದ್ದಾರೆ ಎಂಬ ಹೇಳಿಕೆ ನೀಡಿದ್ದು, ತಾಕತ್ತಿ ದ್ದರೆ ಪೊಲೀಸರನ್ನು ಕರೆಸಿ ಹೇಳಿಕೆ ಕೊಡಿ ಸಲಿ. ಇಲ್ಲದಿದ್ದಲ್ಲಿ ತಕ್ಷಣ ಕನ್ನಡಿಗರ ಕ್ಷಮೆ ಕೇಳಲಿ ಎಂದು ಕಿಡಿಕಾರಿದರು.
ಕರವೇ ಅಧ್ಯಕ್ಷ ಚಂದ್ರು ಮಾತನಾಡಿ, ಕನ್ನಡ ಬಾವುಟವನ್ನು ಪುರಸಭೆ ಆವರಣ ದಲ್ಲಿ ಪೊರಕೆಗೆ ಸುತ್ತಿ ಅವಮಾನಿಸಿರುವು ದಲ್ಲದೆ, ಸದಸ್ಯ ಶ್ರೀನಿಧಿ ಕನ್ನಡ ಬಾವುಟ ಅಧಿಕೃತವಲ್ಲ ಎನ್ನುವ ಮೂಲಕ ಕನ್ನಡಿಗರನ್ನು ಕೆರಳಿಸಿದ್ದಾರೆ. ಅವರು ತಕ್ಷಣ ಕ್ಷಮೆ ಕೇಳ ಬೇಕು. ಇಲ್ಲದಿದ್ದಲ್ಲಿ ಪುರಸಭೆಯಲ್ಲಿ ಕನ್ನಡ ರಾಜ್ಯೋತ್ಸವದಂದು ಧ್ವಜಾರೋಹಣಕ್ಕೆ ಅವಕಾಶ ಕೊಡದೆ ಕಪ್ಪು ಬಾವುಟ ಪ್ರದ ರ್ಶಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಹಶೀಲ್ದಾರ್ ಶಾರದಾಂಬ ಮಾತ ನಾಡಿ, ಕನ್ನಡ ನಾಡಿನಾದ್ಯಂತ ಬಳಸುವ ಬಾವುಟಕ್ಕೆ ಅಪಮಾನ ಮಾಡುವುದು ಅಪರಾಧವಾಗಿದ್ದು, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಮ್ಮ ಕಚೇರಿಯಿಂದ ದೂರು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಲತಾ ಮಂಜೇಶ್ವರಿ, ತಾಪಂ ಸದಸ್ಯೆ ಸಂಗೀತಾ, ಪುರಸಭೆ ಸದಸ್ಯರಾದ ಶಾಂತಕುಮಾರ್, ಜುಬೇರ್, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಅರುಣ್‍ಕುಮಾರ್, ರಾಜ್ ಕುಮಾರ್ ಸಂಘದ ತೀರ್ಥಂಕರ್, ಮುಖಂಡರಾದ ಶಿವಮೂರ್ತಿ, ಖಾದರ್, ವಿವಿದ ಇಲಾಖೆಗಳ ಅಧಿಕಾರಿಗಳಿದ್ದರು.