ಅಕ್ರಮ ನಾಟ ಸಾಗಾಟ: ಲಾರಿ ವಶ, ಅರೋಪಿಗಳ ಬಂಧನ
ಕೊಡಗು

ಅಕ್ರಮ ನಾಟ ಸಾಗಾಟ: ಲಾರಿ ವಶ, ಅರೋಪಿಗಳ ಬಂಧನ

October 24, 2018

ಸಿದ್ದಾಪುರ: ಅಕ್ರಮವಾಗಿ ಮರದ ನಾಟಗಳನ್ನ ಸಾಗಿಸುತ್ತಿದ್ದ ಲಾರಿ ಯೊಂದಿಗೆ ಇಬ್ಬರು ಅರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ವಿರಾಜಪೇಟೆ ತಾಲೂಕು ಆಮ್ಮತ್ತಿ ಸಮೀಪದ ಚಂಬೆಬೆಳ್ಳೂರು ಗ್ರಾಮದ ಮಾರ್ಗವಾಗಿ ಲಾರಿಯೊಂದರಲ್ಲಿ ಅಕ್ರಮ ವಾಗಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿ ಅಂದಾಜು 2 ಲಕ್ಷ ಮೌಲ್ಯದ ಮರದೊಂದಿಗೆ ಆರೋಪಿಗಳಾದ ಎಡಪಾಲ ಗ್ರಾಮದ ಹಸ್ಸನ್, ಹೆಗ್ಗಳ ಗ್ರಾಮದ ರಂಜಿತ್ ಎಂಬುವರನ್ನು ಬಂಧಿಸಿ ವಾಹನ ವಶಪಡಿಸಿಕೊಂಡಿದ್ದಾರೆ.

ಲಾರಿಯಲ್ಲಿ ನೇರಳೆ, ಮಾವು, ಕರಲ್ಲಚ್ಚಿ, ಹಾಗೂ ಗರಗತ್ತಿ ಮರದ ನಾಟಾಗಳು ಕಂಡು ಬಂದಿದ್ದು, ವಿರಾಜಪೇಟೆ ವಿಭಾ ಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರೀಯ ಕ್ರಿಸ್ತರಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೊಶಿಣಿಯವರ ಮಾರ್ಗ ದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಕೆ.ಪಿ.ಗೋಪಾಲ್, ಉಪ ವಲಯ ಅರಣ್ಯಾ ಧಿಕಾರಿ ಕೆ.ಎಂ.ದೇವಯ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದರು.

ಈ ಸಂದರ್ಭ ಅರಣ್ಯ ರಕ್ಷಕ ಅರುಣ, ಆರ್‍ಆರ್‍ಟಿ ತಂಡದ ಹರೀಶ್, ಆದರ್ಶ, ಮಂಜು, ಸಲೀಂ, ವಿನೋದ್, ಮುರು ಗನ್ ಹಾಗೂ ವಾಹನ ಚಾಲಕ ಶರತ್ ಭಾಗವಹಿಸಿದ್ದರು.

Translate »