ಪ್ರಜ್ವಲ್ ರೇವಣ್ಣ ಆಸ್ತಿ ವಿವಾದ: ಆಕ್ಷೇಪಣೆಗೆ 2 ವಾರ ಕಾಲಾವಕಾಶ ನೀಡಿದ ಕೋರ್ಟ್
ಮೈಸೂರು

ಪ್ರಜ್ವಲ್ ರೇವಣ್ಣ ಆಸ್ತಿ ವಿವಾದ: ಆಕ್ಷೇಪಣೆಗೆ 2 ವಾರ ಕಾಲಾವಕಾಶ ನೀಡಿದ ಕೋರ್ಟ್

October 1, 2019

ಬೆಂಗಳೂರು,ಸೆ.30- ಚುನಾವನಾ ಆಯೋಗಕ್ಕೆ ತಪ್ಪು ಆಸ್ತಿ ಪ್ರಮಾಣಪತ್ರ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ 2 ವಾರಗಳ ಗಡುವು ನೀಡಿದೆ. ಮಾಜಿ ಸಚಿವ ಎ.ಮಂಜು ಮತ್ತು ವಕೀಲರಾದ ಜಿ.ದೇವ ರಾಜೇಗೌಡ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ವಿಚಾ ರಣೆಯನ್ನು ಮುಂದೂಡಿದರು. ಕಳೆದ ಲೋಕಸಭೆ ಚುನಾ ವಣೆಯ ವೇಳೆ ಹಾಸದ ಮೈತ್ರಿ ಅಭ್ಯರ್ಥಿಯಾಗಿದ್ದ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ತಮ್ಮ ನಾಮಪತ್ರದ ಜತೆ ಸಲ್ಲಿಸಿದ್ದ ದಾಖಲೆಗಳ ಕುರಿತಂತೆ ಅವರ ಎದುರಾಳಿ ಬಿಜೆಪಿಯ ಎ. ಮಂಜು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

Translate »