ತಾತನ ತಾತನ-ಸಿದ್ಧಾಂತ-ಒಪ್ಪಿ-ರಾಜಕಸಿದ್ಧಾಂತ ಒಪ್ಪಿ ರಾಜಕೀಯ ಪ್ರವೇಶ: ಪ್ರಜ್ವಲ್
ಹಾಸನ

ತಾತನ ತಾತನ-ಸಿದ್ಧಾಂತ-ಒಪ್ಪಿ-ರಾಜಕಸಿದ್ಧಾಂತ ಒಪ್ಪಿ ರಾಜಕೀಯ ಪ್ರವೇಶ: ಪ್ರಜ್ವಲ್

March 21, 2019

ಅರಸೀಕೆರೆಯಲ್ಲಿ ತಂದೆ ರೇವಣ್ಣ ಜತೆಗೂಡಿ ಪ್ರಚಾರ
ಅರಸೀಕೆರೆ: ನನ್ನ ತಾತ ದೇವೇಗೌಡರ ಸಿದ್ಧಾಂತವನ್ನು ಒಪ್ಪಿ ರಾಜ ಕೀಯ ಕ್ಷೇತ್ರಕ್ಕೆ ಬಂದಿರುವೆ. ದೇವೇಗೌಡ ರಂತೆಯೇ ಜಿಲ್ಲೆಯ ಜನರ ವಿಶ್ವಾಸ ಉಳಿಸಿ ಕೊಂಡು ಸೇವೆಗೆ ಬದ್ಧನಾಗಿರುವೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದರು.

ಪಟ್ಟಣದ ಸಿಂಧೂ ಭವನದಲ್ಲಿ ಜೆಡಿ ಎಸ್ ತಾಲೂಕು ಘಟಕ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ನಮ್ಮ ಕುಟುಂಬ ರಾಜಕೀಯವಾಗಿ ಬೆಳೆಯುವಲ್ಲಿ ಜಿಲ್ಲೆಯ ಜನರ ಆಶೀರ್ವಾದ, ಕೊಡುಗೆಯನ್ನು ಸದಾ ಸ್ಮರಿಸುತ್ತೇವೆ. ಇದನ್ನು ಮುಂದು ವರಿಸಿಕೊಂಡು ಹೋಗುವ ಸಂಕಲ್ಪದೊಂ ದಿಗೆ ರಾಜಕೀಯ ಕ್ಷೇತ್ರಕ್ಕೆ ನಾನು ಪಾದಾ ರ್ಪಣೆ ಮಾಡಿದ್ದೇನೆಯೇ ವಿನಃ, ಇದರಲ್ಲಿ ಸ್ವಾರ್ಥ ಇಲ್ಲ ಎಂದರು.

ದೇವೇಗೌಡರ ಆಶೀರ್ವಾದ, ಜೊತೆಗೆ ಜಿಲ್ಲೆಯಲ್ಲಿನ ಪಕ್ಷದ ಎಲ್ಲಾ ಶಾಸಕರು ತಂದೆ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿದ್ದಾರೆ. ಪ್ರಚಾರಕ್ಕೆ ಹೋದೆಡೆಯ ಲ್ಲೆಲ್ಲಾ ಕಾರ್ಯಕರ್ತರ ಹುಮ್ಮಸ್ಸು ನೋಡಿ ದರೆ 2ರಿಂದ 3 ಲಕ್ಷ ಮತಗಳ ಅಂತರ ದಲ್ಲಿ ಗೆಲ್ಲುವ ವಿಶ್ವಾಸ ಉಂಟಾಗುತ್ತಿದೆ ಎಂದು ಹೇಳಿದರು.

ನಾಮಪತ್ರ ಸಲ್ಲಿಕೆ: ಮಾ.22ರಂದು ನಾಮಪತ್ರ ಸಲ್ಲಿಸುತ್ತಿದ್ದು, ಅರಸೀಕೆರೆ ಕ್ಷೇತ್ರ ವ್ಯಾಪ್ತಿಯ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಶೀ ರ್ವದಿಸಬೇಕು ಎಂದರು. ಇದೇ ಸಂದರ್ಭ ದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯ ಕರ್ತರ ಸಹಕಾರವನ್ನೂ ಕೋರಿದರು.

ರಾಜ್ಯ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತ ನಾಡಿ, ಮೋದಿ ಹಾಗೂ ದೇವೇಗೌಡರ ಕುಟುಂಬ, ಈ ಎರಡು ವಿಷಯಗಳ ಮೇಲೆ ಹಾಸನ ಲೋಕಸಭೆ ಕ್ಷೇತ್ರದ ಚುನಾ ವಣೆ ನಡೆಯುತ್ತಿದೆ. ಸುದೀರ್ಘ 6 ದಶಕ ಗಳ ಕಾಲ ಕಳಂಕ ರಹಿತ ರಾಜಕಾರಣ ಮಾಡಿರುವ ದೇವೇಗೌಡರು ರಾಜ್ಯ ಹಾಗೂ ದೇಶದ ರೈತರ ಧ್ವನಿಯಾಗಿ ಸೇವೆ ಸಲ್ಲಿಸಿರುವುದನ್ನು ಯಾರಾದರೂ ಪ್ರಶ್ನಿ ಸಲು ಸಾಧ್ಯವೆ? ಸುದೀರ್ಘ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕಿ ಇಲ್ಲದಂತಿರುವ ದೇವೇಗೌಡ ಅವರ ಕುಟುಂಬದವರು ಏಕೆ ರಾಜಕಾರಣಕ್ಕೆ ಬರಬಾರದು? ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರು ಕುಟುಂಬ ರಾಜಕಾ ರಣ ಮಾಡುತ್ತಿಲ್ಲವೇ? ಎಂದು ಪ್ರಶ್ನಿಸಿದರು.

ನಾನು ಹಾಗೂ ತಾಲೂಕಿನ ಎಲ್ಲಾ ಮುಖಂಡರು, ಕಾರ್ಯಕರ್ತರು ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ದ್ದೇವೆ. ಅರಸೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮುನ್ನಡೆ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗಲಾಗಲಿ ಅಥವಾ 5 ವರ್ಷಗಳ ಕೇಂದ್ರ ಸರಕಾ ರದ ಆಡಳಿತದಲ್ಲಿಯಾಗಲೀ ಜಿಲ್ಲೆಯ ಜನತೆಗೆ ಬಿಜೆಪಿಯವರ ಕೊಡುಗೆ ಏನು? ಇದನ್ನು ಜಿಲ್ಲೆಯ ಜನತೆ ಅರ್ಥ ಮಾಡಿ ಕೊಂಡಿದ್ದಾರೆ. ಸುಳ್ಳು ಆಶ್ವಾಸನೆ, ಭರವಸೆ ಗಳನ್ನು ನೀಡಿ ಜನರನ್ನು ಯಾಮಾರಿ ಸಿದ್ದೇ ಬಿಜೆಪಿ ಸರಕಾರದ ಸಾಧನೆ ಎಂದು ಲೇವಡಿ ಮಾಡಿದÀರು. ಈ ಬಾರಿ ಬಿಜೆಪಿ ನಾಯಕರು ರಾಜ್ಯದ ಜನತೆಗೆ ಟೋಪಿ ಹಾಕಲು ಸಾಧ್ಯವಿಲ್ಲ ಎಂದು ಛೇಡಿಸಿದರು.

ಪಕ್ಷ ಸೇರ್ಪಡೆ
ಕಳೆದ ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಕ್ಷೇತರರಾದ ಮೇಲುಗಿರಿ ಗೌಡ, ಪುಟ್ಟರಾಜು, ಮಂದಾರ ಅವರು ಸಚಿವ ಹೆಚ್.ಡಿ.ರೇವಣ್ಣ ಸಮ್ಮುಖ ಜೆಡಿಎಸ್‍ಗೆ ಸೇರ್ಪಡೆಗೊಂಡರು. ತಾಲೂಕು ಜೆಡಿಎಸ್ ಅಧ್ಯಕ್ಷ ಬಿಳಿ ಚೌಡಯ್ಯ, ಕಾರ್ಯಾಧ್ಯಕ್ಷ ಅಡವಿಸ್ವಾಮಿ, ಎಂ.ಸಮೀವುಲ್ಲಾ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಬಿ.ಎಸ್. ಅರುಣ್‍ಕುಮಾರ್, ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಗೊಲ್ಲರಹಳ್ಳಿ ಹನು ಮಪ್ಪ ಮಾತಮಾಡಿದರು. ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ವತ್ಸಲ, ಜಿಪಂ ಸದಸ್ಯೆ ಲೀಲಾ, ತಾಪಂ ಅಧ್ಯಕ್ಷೆ ರೂಪಾ, ಉಪಾಧ್ಯಕ್ಷೆ ಪ್ರೇಮಾ, ಎಪಿ ಎಂಸಿ ಅಧ್ಯಕ್ಷ ಕುಮಾರ್, ನಗರದ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಣ್ಣ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಜೆಡಿಎಸ್ ಜನಪ್ರತಿನಿಧಿಗಳು ಹಾಗೂ ಮುಖಂಡರು ವೇದಿಕೆಯಲ್ಲಿದ್ದರು.

Translate »