10 ದಿನದಲ್ಲಿ 209 ದಾಳಿ; 1.61 ಕೋಟಿ ರೂ. ಅಕ್ರಮ ಮದ್ಯ ವಶ
ಹಾಸನ

10 ದಿನದಲ್ಲಿ 209 ದಾಳಿ; 1.61 ಕೋಟಿ ರೂ. ಅಕ್ರಮ ಮದ್ಯ ವಶ

March 21, 2019

ಜಿಲ್ಲೆಯಲ್ಲಿ ಚುನಾವಣೆ ವೇಳೆ ಮದ್ಯದ ಹೊಳೆ: ಜಿಲ್ಲಾಡಳಿತ ಕಳವಳ
ಹಾಸನ: ಲೋಕಸಭಾ ಚುನಾ ವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಅಬಕಾರಿ ಇಲಾಖೆ ಕಟ್ಟುನಿಟ್ಟಿನಿಂದ ತಪಾ ಸಣೆ ನಡೆಸುತ್ತಿದ್ದು, ಕಳೆದ 10 ದಿನಗಳಲ್ಲಿ 209 ಕಡೆ ದಾಳಿ ನಡೆಸಿ ಒಟ್ಟು 1.61 ಕೋಟಿ ರೂ ಮೌಲ್ಯದ ಮದ್ಯ ವಶಪಡಿಸಿ ಕೊಂಡಿದೆ. ಒಂದು ಪ್ರಕರಣದಲ್ಲಿ ಮದ್ಯ ಮಾರಾಟ ಪರವಾನಗಿ ಅಮಾನತು ಪಡಿಸಿ, 70 ಮಂದಿ ವಿರುದ್ಧ ಅಪರಾಧ ಪ್ರಕರಣಗಳನ್ನೂ ದಾಖಲಿಸಿದೆ.

ಮಾ.10ರಿಂದ ಈವರೆಗೆ 209 ಕಡೆ ದಾಳಿ ನಡೆಸಲಾಗಿದೆ. ಈವರೆಗೆ 70 ಮಂದಿ ವಿರುದ್ಧ ಅಬಕಾರಿ ಹೀನ ಅಪರಾಧ ಕೃತ್ಯಗಳ ಪ್ರಕರಣ ದಾಖಲಿಸಲಾಗಿದೆ. 26,159 ಲೀ. ಅಕ್ರಮ ಮದ್ಯ, 873 ಲೀ. ಬಿಯರ್, 84 ಲೀ. ಕಳ್ಳಬಟ್ಟಿ ಸೇರಿದಂತೆ ಒಟ್ಟು 1,61,01,894 ರೂ. ಬೆಲೆಯ ಅಕ್ರಮ ಪಾನೀಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆದ ಡಿಸಿ ಅಕ್ರಂ ಪಾಷ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಹಾಯಕ ಚುನಾವಣಾಧಿಕಾರಿ ಗಳು ಮತ್ತು ನೋಡಲ್ ಅಧಿಕಾರಿಗಳ ಸಭೆ ಯಲ್ಲಿ ಅಬಕಾರಿ ಇಲಾಖೆಯ ಕಾರ್ಯಾ ಚರಣೆ ಬಗ್ಗೆ ವಿವರ ನೀಡಿದ ಗೋಪಾಲ ಕೃಷ್ಣ ಅವರು ವಿವರ ನೀಡಿದರು.

ಇಂದು ನಾಮಪತ್ರ ಇಲ್ಲ: ಏ.18ರಂದು ನಡೆಯಲಿರುವ ಲೋಕಸಭಾ ಚುನಾ ವಣೆಗೆ ಹಾಸನ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ 2ನೇ ದಿನವಾದ ಬುಧವಾರ ಯಾವುದೇ ನಾಮಪತ್ರ ಸಲ್ಲಿಕೆಯಾಗಲಿಲ್ಲ.

ವಾಹನ ವಶ: ಅಷ್ಟೇ ಅಲ್ಲದೇ, ಕಳೆದ 10 ದಿನಗಳ ದಾಳಿ ವೇಳೆ 1 ಪ್ರಕರಣದಲ್ಲಿ ಮದ್ಯ ಮಾರಾಟ ಲೈಸೆನ್ಸ್ ಅಮಾನತು ಪಡಿಸ ಲಾಗಿದೆ. 1 ನಾಲ್ಕು ಚಕ್ರದ ವಾಹನ, 3 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾ ಗಿದೆ ಎಂದು ಅಬಕಾರಿ ಉಪ ಆಯುಕ್ತ ಗೋಪಾಲಕೃಷ್ಣ ಗೌಡ ಹೇಳಿದರು.

ಮತಗಟ್ಟೆ ದುರಸ್ತಿ: ಮತಗಟ್ಟೆಗಳಾಗಿ ಗುರುತಿಸಿರುವ ಶಾಲೆಗಳಲ್ಲಿನ ಕೊಠಡಿ ಗಳಲ್ಲಿನ ಅಗತ್ಯ ದುರಸ್ತಿಗೆ ಈಗಾಗಲೇ ಹಣ ಬಿಡುಗಡೆಯಾಗಿದೆ. ಕೂಡಲೇ ಜಿಪಂ ಇಂಜಿನಿಯರಿಂಗ್ ವಿಭಾಗಕ್ಕೆ ಆ ಹಣ ವನ್ನು ವರ್ಗಾಯಿಸಿ ದುರಸ್ತಿ ಕಾರ್ಯ ಬೇಗ ಪೂರ್ಣಗೊಳ್ಳಲು ಗಮನ ಹರಿಸಿ ಎಂದು ಜಿಲ್ಲಾಧಿಕಾರಿಗಳು, ಡಿಡಿಪಿಐ ಅವ ರಿಗೆ ಸೂಚನೆ ನೀಡಿದರು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಮತಗಟ್ಟೆ ಗಳಲ್ಲಿನ ದುರಸ್ತಿ ಕಾರ್ಯಕ್ಕೆ ಸ್ಥಳೀಯ ಸಂಸ್ಥೆಗಳ ಅನುದಾನ ಬಳಸಿಕೊಳ್ಳಲು ಅನುಮೋ ದನೆ ನೀಡಲಾಗಿದೆ ಎಂದರು.

ಲೋಕಸಭೆ ಚುನಾವಣೆಗಾಗಿ ಜಿಲ್ಲೆಯಲ್ಲಿ ಗುರುತಿಸಲಾಗಿರುವ ಎಲ್ಲಾ ಮತಗಟ್ಟೆಗಳನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿ ಗಾಳಿ, ಬೆಳಕು, ನೀರಿನ ವ್ಯವಸ್ಥೆ ಸರಿ ಇದೆಯೇ? ಗಾಲಿ ಕುರ್ಚಿಯಲ್ಲಿ ಬರುವ ವಿಶೇಷಚೇತನರು, ವೃದ್ಧರಿಗಾಗಿ ರ್ಯಾಂಪ್ ಸೌಲಭ್ಯವಿದೆಯೇ? ತುರ್ತು ಸಂದರ್ಭ ನಿರ್ವಹಣೆಗಾಗಿ ದೂರ ವಾಣಿ ಸಂಪರ್ಕ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಇವೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ ಎಂದು ಜಿಲ್ಲಾ ಚುನಾ ವಣಾಧಿಕಾರಿ ಅಕ್ರಂ ಪಾಷ ಚುನಾವಣಾ ಅಧಿಕಾರಿಗಳು ಮತ್ತು ನಿಯೋಜಿತ ಸಿಬ್ಬಂದಿಗೆ ಬುಧವಾರ ಸೂಚಿಸಿದರು.

ಮುಕ್ತ-ನ್ಯಾಯ ಸಮ್ಮತ ಚುನಾವಣೆ ನಡೆ ಸುವುದಕ್ಕೆ ಅಗತ್ಯವಾದ ಸಲಹೆ ಸೂಚನೆ ಗಳನ್ನು ನೀಡಿದರು. ಬಾಕಿಯಾಗಿರುವ ನಮೂನೆ 6, 7, 8, 8ಂ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಿ ವರದಿ ಸಲ್ಲಿಸಿ. ಇದರಲ್ಲಿ ಸಹಾಯಕ ಚುನಾವಣಾಧಿಕಾರಿಗಳದ್ದೇ ಮುಖ್ಯ ಜವಾಬ್ದಾರಿ ಇದೆ ಎಂದರು.

ಹೊಸ ಅನುಭವ: ಪ್ರತಿ ಚುನಾವಣೆಯೂ ನಿರ್ವಹಣಾ ಸಿಬ್ಬಂದಿಗೆ ಹೊಸತನ್ನು ಕಲಿ ಸುತ್ತದೆ. ಹಾಗಾಗಿ, ಪ್ರತಿ ಸಿಬ್ಬಂದಿಯೂ ಜಾಗೃತರಾಗಿ, ವಿವೇಕಯುತವಾಗಿ ಕಾರ್ಯ ನಿರ್ವಹಿಸಬೇಕು. ವೀಕ್ಷಕರೊಂದಿಗೆ ಸಮ ನ್ವಯ ಸಾಧಿಸಿ ಸೂಕ್ತ ಮಾಹಿತಿ ನೀಡುತ್ತಾ ಚುನಾವಣಾ ಕೆಲಸಗಳು ಸಮರ್ಪಕವಾಗಿ ಸಾಗುವಂತೆ ನಿಗಾ ಇಡಬೇಕು ಎಂದು ಸಹಾಯಕ ಚುನಾವಣಾಧಿಕಾರಿಗೆ ನಿರ್ದೇಶನ ನೀಡಿದರು.

ವಿಶೇಷಚೇತನರ ಮತದಾನಕ್ಕೆ ಸೌಲಭ್ಯ: ಈ ಬಾರಿಯ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ವಿಕಲ ಚೇತನರಿಗಾಗಿ ವಿಶೇಷ ಸೌಲಭ್ಯಗಳನ್ನು ನೀಡುವುದರ ಮೂಲಕ ಅವರಲ್ಲಿ ಮತದಾನದ ಜಾಗೃತಿ ಮೂಡಿಸ ಲಾಗುವುದು ಎಂದು ಜಿಪಂ ಉಪ ಕಾರ್ಯ ದರ್ಶಿ ಹೆಚ್.ಸಿ.ಪುಟ್ಟಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ಸ್ವೀಪ್ ಸಮಿತಿ, ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶೇಷ ಚೇತನರು ಯಾವುದೇ ಕಾರಣಕ್ಕೂ ಮತದಾನ ದಿಂದ ದೂರ ಉಳಿಯದಂತೆ ಅರಿವು ಮೂಡಿಸ ಲಾಗುತ್ತಿದೆ. ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಲು ವೀಲ್‍ಚೇರ್, ವಿಶೇಷ ಬೈಕ್ ವ್ಯವಸ್ಥೆ ಮಾಡಲಾಗಿದೆ ಎಂದರು.

ವಿಶೇಷಚೇತನರ ಕಲ್ಯಾಣಾಧಿಕಾರಿ ಮಲ್ಲೇಶ್, ತಾಪಂ ಇಒ ದೇವರಾಜೇ ಗೌಡ ಹಾಜರಿದ್ದರು.

ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಜಿಪಂ ಮುಖ್ಯ ಯೋಜನಾಧಿಕಾರಿ ಪರಪ್ಪ ಸ್ವಾಮಿ, ಅಂಚೆ ಮತಪತ್ರಗಳು ಮತ್ತು ಚುನಾ ವಣಾ ಕರ್ತವ್ಯ ಪತ್ರಗಳ ವಿತರಣೆ ಬಗ್ಗೆ ವಿವರಿಸಿದರು. ಪ್ರತಿ ಮಸ್ಟರಿಂಗ್ ಕೇಂದ್ರದ ಮುಂದೆ ಹೆಲ್ಪ್ ಡೆಸ್ಕ್ ಸ್ಥಾಪಿಸಿ, ಇಡಿಸಿ ಮತ್ತು ಅಂಚೆ ಮತಪತ್ರಗಳ ವಿಂಗಡಣೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಉಪ ವಿಭಾಗಾಧಿ ಕಾರಿ ಹೆಚ್.ಎಲ್.ನಾಗರಾಜ್ ವಿವರಿಸಿದರು.

ಪಾರದರ್ಶಕ ಚುನಾವಣೆ: ಲೆಕ್ಕ ವೀಕ್ಷಕರ ವಿವರಣೆ
ಹಾಸನ,: ಲೋಕಸಭಾ ಚುನಾವಣೆಯ ಸಲು ವಾಗಿ ಹಾಸನ ಕ್ಷೇತ್ರಕ್ಕೆ ನಿಯೋಜನೆಗೊಂಡಿರುವ ಲೆಕ್ಕ ವೀಕ್ಷಕರು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದರು.

ಶ್ರವಣಬೆಳಗೊಳ, ಹೊಳೆನರಸೀಪುರ, ಅರಕಲಗೂಡು, ಸಕ ಲೇಶಪುರ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಅಭ್ಯರ್ಥಿ-ಪಕ್ಷಗಳ ವೆಚ್ಚ ವೀಕ್ಷಕರಾದ ವಿವೇಕ್ ಗುಪ್ತ, ಕಡೂರು, ಅರಸೀ ಕೆರೆ, ಬೇಲೂರು, ಹಾಸನ ವಿಧಾನಸಭಾ ಕ್ಷೇತ್ರಗಳ ವೆಚ್ಚ ವೀಕ್ಷಕ ರಾಜೀವ್ ಮಾಗೊ ಲೋಕಸಭಾ ಚುನಾವಣೆಯ ಲೆಕ್ಕ ದಾಖಲೆ ಗಳಿಗೆ ಈವರೆಗೆ ಮಾಡಿಕೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.

ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಮಾತನಾಡಿ, ಚುನಾ ವಣೆಗೆ ನಿಯೋಜನೆಗೊಂಡಿರುವ ಪ್ರತಿ ಅಧಿಕಾರಿ, ಸಿಬ್ಬಂದಿಯೂ ಅತ್ಯಂತ ಜಾಗ್ರತೆ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸ ಬೇಕು. ಲೋಪಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸಹಾಯಕ ಚುನಾವಣಾಧಿಕಾರಿಗಳು ಮತ್ತು ಲೆಕ್ಕಪತ್ರ ಮೇಲ್ವಿ ಚಾರಕರು ನಿರಂತರವಾಗಿ ವೀಕ್ಷಕರೊಂದಿಗೆ ಸಂಪರ್ಕ ಇಟ್ಟು ಕೊಂಡು ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಚುನಾವಣಾ ವೀಕ್ಷಕ ವಿವೇಕ್ ಗುಪ್ತ ಮಾತನಾಡಿ, ಚುನಾ ವಣಾ ಆಯೋಗದ ಸೂಚನೆಯನ್ನು ಪ್ರತಿಯೊಬ್ಬರೂ ಕಟ್ಟು ನಿಟ್ಟಾಗಿ ಪಾಲಿಸಬೇಕು. ವೆಚ್ಚದ ವಿವರಗಳನ್ನು ನಿಯಮಾ ನುಸಾರವೇ ದಾಖಲಿಸಬೇಕು. ಕ್ಷೇತ್ರ ಮಟ್ಟದ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿಭಾಯಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ಪ್ರಿಯಾಂಕ, ಉಪ ವಿಭಾಗಾಧಿಕಾರಿ ಹೆಚ್.ಎಲ್. ನಾಗರಾಜ್, ಕವಿತಾ ರಾಜಾರಾಮ್, ಜಿಲ್ಲೆಯ ವಿವಿಧ ವಿಧಾನ ಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳಾದ ಮಂಗಲ್ ದಾಸ್, ವಿ.ಶ್ರೀನಿವಾಸ್‍ಗೌಡ, ಡಿ.ಮಂಜುನಾಥ್, ಜಿ.ಆರ್. ವಿಜಯಕುಮಾರ್, ಗಿರೀಶ್ ನಂದನ್, ಎಸ್.ಹರ್ಷ ಹಾಗೂ ಎಆರ್‍ಓಗಳು, ಲೆಕ್ಕಪತ್ರ ತಂಡದ ಮುಖ್ಯಸ್ಥರು ಹಾಜರಿದ್ದರು.

Translate »