ಲಕ್ಷಾಂತರ ಮೌಲ್ಯದ ಬೀಟೆ ನಾಟ ಸಹಿತ ವಾಹನ ವಶ, ಆರೋಪಿಗಳು ಪರಾರಿ
ಕೊಡಗು

ಲಕ್ಷಾಂತರ ಮೌಲ್ಯದ ಬೀಟೆ ನಾಟ ಸಹಿತ ವಾಹನ ವಶ, ಆರೋಪಿಗಳು ಪರಾರಿ

August 10, 2018

ಕುಶಾಲನಗರ:  ಸಮೀಪದ ಗುಡ್ಡೆ ಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಬೀಟೆ ನಾಟಗಳನ್ನು ಸಾಗಿ ಸುತ್ತಿದ್ದ ವೇಳೆ ಆನೆಕಾಡು ಅರಣ್ಯ ಸಿಬ್ಬಂದಿ ದಾಳಿ ಮಾಡಿ, ಲಕ್ಷಾಂತರ ಮೌಲ್ಯದ ಬೀಟೆ ನಾಟ ಸೇರಿದಂತೆ ವಾಹನವನ್ನು ವಶ ಪಡಿಸಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ಮಡಿಕೇರಿ-ಮೈಸೂರು ರಾಜ್ಯ ಹೆದ್ದಾ ರಿಯ ಆನೆಕಾಡು ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ಹಾಗೂ ಆನೆಕಾಡು ಉಪ ವಲಯ ಅರಣ್ಯಾಧಿಕಾರಿ ರಂಜನ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಾಲು ಸಮೇತ ವಾಹನ ವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿದ್ದಾರೆ. ಇಬ್ಬರು ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ.

ಆನೆಕಾಡು ಬಳಿ ಅರಣ್ಯ ಸಿಬ್ಬಂದಿಗಳು ಗಸ್ತು ನಡೆಸುತ್ತಿದ್ದ ವೇಳೆಯಲ್ಲಿ ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ಮೈಸೂರಿಗೆ ಪಿಕ್ಅಪ್ ಜೀಪಿನಲ್ಲಿ ಬೀಟೆ ನಾಟಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಸಂದರ್ಭ ಗಸ್ತುವಿನಲ್ಲಿದ್ದ ಸಿಬ್ಬಂದಿಗಳು ಅನುಮಾನಗೊಂಡು ತಪಾಸಣೆಗೆ ಮುಂದಾದಾಗ ವಾಹನ ವನ್ನು ನಿಲ್ಲಿಸದೇ ವೇಗವಾಗಿ ಚಾಲನೆ ಮಾಡುವ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದರು. ಆದರೆ ಅರಣ್ಯ ಸಿಬ್ಬಂದಿಗಳ ಶರವೇಗದಲ್ಲಿ ಹಿಂಭಾಲಿಸಿ ವಾಹನವನ್ನು ಅಡ್ಡಗಟ್ಟಿದರು. ಆದರೆ ಜೀಪು ಚಾಲಕ ಹಾಗೂ ಮತ್ತೊಬ್ಬ ವಾಹನವನ್ನು ಅಲ್ಲಿಯೇ ಬಿಟ್ಡು ಪರಾರಿಯಾದರು.

ನೊಂದಣಿ ಸಂಖ್ಯೆ ಕೆ.ಎ.21-5269 ಪಿಕ್‍ಅಪ್ ವಾಹನವನ್ನು ಪರಿಶೀಲಿಸಿದಾಗ ಬೀಟೆ ನಾಟ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಅರಣ್ಯ ಕಾಯ್ದೆ ಕಾನೂ ನಿನ ಉಲ್ಲಂಘನೆ ಅನ್ವಯ ಅರಣ್ಯ ಮೊಕ ದ್ದಮ್ಮೆ ದಾಖಲಿಸಿದ್ದು ವಾಹನ ಮತ್ತು ಸ್ವತ್ತಿನ ಅಂದಾಜು ಮೌಲ್ಯ 7 ಲಕ್ಷ ರೂಪಾಯಿ ಗಳೆಂದು ಅಂದಾಜಿಸಲಾಗಿದೆ. ಪರಾರಿ ಯಾಗಿರುವ ಆರೋಪಿಗಳ ಪತ್ತೆಗೆ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಕಾರ್ಯಚಾರಣೆಯಲ್ಲಿ ಅರಣ್ಯ ವಿಕ್ಷಕ ರಾದ ಸಂತೋಷ್, ದಿನೇಶ್, ಚಾಲಕ ಸತೀಶ್, ಆರ್‍ಆರ್‍ಟಿ ಸಿಬ್ಬಂದಿಗಳಾದ ಪೆÇನ್ನಪ್ಪ, ಶಾಂತ, ಪ್ರದೀಪ್ ಪಾಲ್ಗೊಂಡಿದ್ದರು.

Translate »