ಮೈವಿವಿ ಸಂಜೆ ಕಾಲೇಜು ವಿದ್ಯಾರ್ಥಿಗಳಿಗೂ ಹಾಸ್ಟೆಲ್ ವ್ಯವಸ್ಥೆ
ಮೈಸೂರು

ಮೈವಿವಿ ಸಂಜೆ ಕಾಲೇಜು ವಿದ್ಯಾರ್ಥಿಗಳಿಗೂ ಹಾಸ್ಟೆಲ್ ವ್ಯವಸ್ಥೆ

August 10, 2018

ಮೈಸೂರು: ಮೈವಿವಿ ಸಂಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವುದಾಗಿ ಮೈವಿವಿ ಕುಲಪತಿ ಡಾ.ಟಿ.ಕೆ.ಉಮೇಶ್ ಭರವಸೆ ನೀಡಿದರು.

ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಮೈಸೂರು ವಿವಿ ಸಂಜೆ ಕಾಲೇಜು ಗುರುವಾರ ಆಯೋಜಿಸಿದ್ದ `2018-19ನೇ ಸಾಲಿನ ಪಠ್ಯೇತರ ಮತ್ತು ಸಾಂಸ್ಕøತಿಕ ಚಟು ವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತ ನಾಡಿದರು.

ಕೆಲವು ವಿದ್ಯಾರ್ಥಿಗಳು ಬೆಳಗಿನ ವೇಳೆ ಕೆಲಸಕ್ಕೆ ಹೋಗಿ ಸಂಜೆ ಕಾಲೇಜಿಗೆ ಬರುತ್ತಾರೆ ಎಂಬ ಆರೋಪವಿದೆ. ಜತೆಗೆ ಸಂಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನೀಡ ಬಾರದೆಂಬ ನಿಯಮ ಇದೆಯಂತೆ. ಇದು ನನಗೆ ಗೊತ್ತಿಲ್ಲ. ಸಾಧ್ಯವಾದಷ್ಟು ಸಂಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಪ್ರಯ ತ್ನಿಸುವುದಾಗಿ ಅವರು ಭರವಸೆ ನೀಡಿದರು.

ಸಂಜೆ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಸಂತೋಷದ ವಿಷಯ. ಆದರೆ, ಪಠ್ಯ ಚಟುವಟಿಕೆ ಗಳು ಸಂಜೆ ವೇಳೆಯೇ ನಡೆಯುವುದರಿಂದ ವಿದ್ಯಾರ್ಥಿಗಳು ಹೇಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿ ಕೊಳ್ಳುತ್ತಾರೆಂಬುದೇ ತಿಳಿಯುತ್ತಿಲ್ಲ ಎಂದರು.

ಕಾರ್ಯಕ್ರಮಕ್ಕೂ ಮುನ್ನ ನಿಂಗರಾಜು ತಂಡ ಕಂಸಾಳೆ ಪ್ರದರ್ಶಿಸಿದರು. ಗಾಯಕ ಶ್ರೀಹರ್ಷ, ಸಂಜೆ ಕಾಲೇಜು ಪ್ರಾಂಶುಪಾಲ ಆಂಜನೇಯ, ಪ್ರಾಧ್ಯಾಪಕ ದಿನೇಶ್ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »