1.30 ಲಕ್ಷ ಮೌಲ್ಯದ ಶ್ರೀಗಂಧದ ತುಂಡು ವಶ; ಮೂವರ ಬಂಧನ
ಕೊಡಗು

1.30 ಲಕ್ಷ ಮೌಲ್ಯದ ಶ್ರೀಗಂಧದ ತುಂಡು ವಶ; ಮೂವರ ಬಂಧನ

August 9, 2018

ಕುಶಾಲನಗರ: ಸೋ.ಪೇಟೆ ತಾಲೂ ಕಿನ ಯಲಕನೂರು ಹೊಸಹಳ್ಳಿ ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ಗಂಧದ ಮರಗಳನ್ನು ಕಡಿದು ನಾಟಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬುಧವಾರ ಬಂಧಿಸುವಲ್ಲಿ ಅರಣ್ಯ ಸಿಬ್ಬಂ ದಿಗಳು ಯಶಸ್ವಿಯಾಗಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್.ಪುರದ ದಿ.ಸುಬ್ರಮಣಿ ಎಂಬುವವರ ಮಗ ಎಸ್. ಸಂಪತ್ (30 ವರ್ಷ) ಸೋಮವಾರ ಪೇಟೆ ಆಡಿನಾಡೂರು ಗ್ರಾಮದ ಬೋಜ ಎಂಬುವವರ ಮಗ ಸುರೇಶ್ (35 ವರ್ಷ), ಆನಂದ್ ಎಂಬುವವರ ಮಗ ರಾಮ(45 ವರ್ಷ) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿದಂದ ಸುಮಾರು 1.30 ಲಕ್ಷ ಬೆಲೆಬಾಳುವ ಶ್ರೀಗಂಧ ನಾಟಗಳು ಸೇರಿ ದಂತೆ ವಾಹವವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಶಾಂತಿ ನಗರದ ಸೈಯದ್ ನೂರುಲ್ಲಾ, ಆಡಿನಾಡೂರಿನ ಚಂದ್ರ, ಲೋಕಿಬಸರಾಜು, ಚಿನ್ನೇನಹಳ್ಳಿ ಗ್ರಾಮದ ಮಂಜು ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಬಾಣಾವಾರ ಉಪ ವಲಯ ವ್ಯಾಪ್ತಿಯ ಅಡಿನಾಡೂರು ಹಾಗೂ ಸೋಮವಾರಪೇಟೆ ಮತ್ತು ಕುಶಾಲನಗರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಗಂಧಧ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದ ಮಾಹಿತಿ ಆಧಾರಿಸಿ ಸೋಮ ವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮಿಕಾಂತ್ ಹಾಗೂ ಉಪ ವಲಯ ಅರಣ್ಯಾ ಧಿಕಾರಿ ಮಹಾದೇವ ನಾಯಕ್ ನೇತೃತ್ವದಲ್ಲಿ ಸಿಬ್ಬಂದಿಗಳು ಇಂದು ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಯಲಕನೂರು ಹೊಸಹಳ್ಳಿ ಮರಗಳ್ಳರ ತಂಡದ ಜಾಡನ್ನು ಭೇದಿಸಿ ತಂಡದ ಮೂವರ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಅರಣ್ಯ ಮೊಕದ್ದಮೆ ಕಾಯ್ದೆ 24/18-19 ಕಲಂ 24, 62,71ಎ, ಜಿ.80, 81, 84, 85, 86, 144, 145, ಹಾಗೂ 165 ಉಲ್ಲಂಘನೆ ಪ್ರಕರಣ ದಾಖಲಿಸಿ ನ್ಯಾಯಾ ಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆ ಯಲ್ಲಿ ಕಣಿವೆ ಉಪ ವಲಯ ಅರಣ್ಯಾ ಧಿಕಾರಿ ಚಂದ್ರೇಶ್, ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್, ಅರಣ್ಯ ರಕ್ಷಕರಾದ ರಾಜಣ್ಣ, ಪ್ರಮೋದ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Translate »