ನಾಳೆಯಿಂದ ಚಾ.ನಗರ, ಕೊಳ್ಳೇಗಾಲ ನಗರಸಭೆಗೆ ನಾಮಪತ್ರ ಸಲ್ಲಿಕೆ ಆರಂಭ
ಚಾಮರಾಜನಗರ

ನಾಳೆಯಿಂದ ಚಾ.ನಗರ, ಕೊಳ್ಳೇಗಾಲ ನಗರಸಭೆಗೆ ನಾಮಪತ್ರ ಸಲ್ಲಿಕೆ ಆರಂಭ

August 9, 2018

ಚಾಮರಾಜನಗರ:  ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ ಚುನಾವಣೆಗೆ ದಿನಾಂಕ ನಿಗದಿ ಆಗುತ್ತಿದ್ದಂತೆಯೇ ಸ್ಥಳೀಯ ರಾಜಕೀಯ ಚುರುಕುಗೊಂಡಿದೆ. ನಾಮಪತ್ರ ಸಲ್ಲಿಕೆ ಆ.10ರಿಂ ಆರಂಭವಾಗಲಿದ್ದು, ನಂತರ ಸ್ಥಳೀಯ ರಾಜಕೀಯ ಮತ್ತಷ್ಟು ಚುರುಕುಗೊಳ್ಳಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು, ಗುತ್ತಿಗೆ ದಾರರು ಹಾಗೂ ಲೇವಾದೇವಿದಾರರು ಅಭ್ಯರ್ಥಿಗಳಾಗಲು ಉತ್ಸಾಹ ತೋರಿದ್ದಾರೆ.

ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಮುಗಿಬಿದ್ದಿದ್ದಾರೆ. ಒಂದೊಂದು ವಾರ್ಡ್‍ಗೆ ಮೂರು-ನಾಲ್ಕು ಮಂದಿ ಆಕಾಂಕ್ಷಿಗಳು ಇರುವುದು ಆ ಪಕ್ಷದ ವರಿಷ್ಠರಿಗೆ ತಲೆ ಬಿಸಿ ತರಿಸಿದೆ. ಕೊಳ್ಳೇಗಾಲದಲ್ಲಿ ಬಿಎಸ್‍ಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಎನ್. ಮಹೇಶ್ ಸಚಿವರಾಗಿದ್ದಾರೆ. ಹೀಗಾಗಿ ಕೊಳ್ಳೇಗಾಲ ನಗರಸಭೆಗೆ ಬಿಎಸ್‍ಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಒಲವು ತೋರುತ್ತಿರುವುದು ಕಂಡು ಬಂದಿದೆ.

ಇನ್ನು ರಾಜ್ಯದಲ್ಲಿ ಜಾ.ದಳದ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವ ಕಾರಣ ಆ ಪಕ್ಷದಿಂದಲೂ ಸ್ಪರ್ಧಿಸಲು ಆಕಾಂಕ್ಷಿಗಳು ಇಚ್ಛಿಸುತ್ತಿದ್ದಾರೆ. ಚಾಮರಾಜನಗರ ನಗರಸಭೆ ಕೆಲವು ವಾರ್ಡ್ಗಳಲ್ಲಿ ಎಸ್‍ಡಿಪಿಐ ಪ್ರಬಲವಾಗಿದ್ದು, ಈ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಮುಂದೆ ಬಂದಿದ್ದಾರೆ. ಇತರ ಕೆಲವು ಪಕ್ಷಗಳು ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿವೆ. ಆದರೆ ಆ ಪಕ್ಷದ ಮುಖಂಡರು ನಿರೀ ಕ್ಷಿಸಿದ ಪ್ರಮಾಣದಲ್ಲಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸದೇ ಇರುವುದು ಕಂಡು ಬಂದಿದೆ.

ಇದುವರೆಗಿನ ಹಾಲಿ ನಗರಸಭಾ ಸದಸ್ಯರು, ಅವರ ಪತ್ನಿ ಹಾಗೂ ಕುಟುಂಬದ ಸದಸ್ಯರು, ಆ ವಾರ್ಡಿನ ಮುಖಂಡರು ಹಾಗೂ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಮುದಾಯದ ಮುಖಂಡರು ಮಾತ್ರ ಚುನಾವಣೆಗೆ ಸ್ಪರ್ಧಿಸುವುದು ಕಂಡು ಬಂದಿತ್ತು. ಆದರೆ ಚಾಮರಾಜನಗರ ನಗರಸಭೆಗೆ ಸ್ಪರ್ಧಿಸಲು ಈ ಬಾರಿ ರಿಯಲ್ ಎಸ್ಟೇಟ್ ಉದ್ಯಮಿಗಳು, ಲೇವಾದೇವಿದಾರರು ಹಾಗೂ ಗುತ್ತಿಗೆದಾರರು ಬಿಜೆಪಿ ಮತ್ತು ಕಾಂಗ್ರೆಸ್‍ನಿಂದ ಸ್ಪರ್ಧಿಸಲು ಉತ್ಸಾಹ ತೋರಿರುವುದು ಕಂಡು ಬಂದಿದೆ. ಈಗಾಗಲೇ ಟಿಕೆಟ್ ಕೋರಿ ಪಕ್ಷಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಕೆಲ ವರ್ಷಗಳಿಂದ ನಗರ ಹಾಗೂ ಪಟ್ಟಣಗಳ ಅಭಿವೃದ್ಧಿಗಾಗಿ ಸರ್ಕಾರಗಳು ನಾನಾ ವಿಶೇಷ ಯೋಜನೆಗಳನ್ನು ರೂಪಿಸಿ ನೂರಾರು ಕೋಟಿ ರೂ.ಗಳ ಅನು ದಾನವನ್ನು ಬಿಡುಗಡೆ ಮಾಡುತ್ತಿವೆ. ಇದರಿಂದ ‘ಆಕರ್ಷಿತ’ರಾದ ಉದ್ಯಮಿಗಳು ನಗರಸಭಾ ಸದಸ್ಯರಾಗಲು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿದೆ. ಅದೇನೇ ಇರಲಿ ಕೆಲವೇ ಮಂದಿಗೆ ಸೀಮಿತವಾಗಿದ್ದ ನಗರ ಸಭಾ ಸದಸ್ಯ ಸ್ಥಾನಕ್ಕೆ ಎಲ್ಲಾ ಕ್ಷೇತ್ರದ ಜನರು ಸ್ಪರ್ಧಿಸಲು ಮುಗಿಬೀಳುತ್ತಿರುವುದು ಸುಳ್ಳಲ್ಲ.

ನಿಯೋಜಿತ ಸೆಕ್ಟರ್ ಅಧಿಕಾರಿಗಳ ವಿವರ

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಅನುಷ್ಠಾನ ಹಾಗೂ ನ್ಯಾಯ ಸಮ್ಮತ, ಪಾರದರ್ಶಕ ಮತ್ತು ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಸೆಕ್ಟರ್ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ನೇಮಕ ಮಾಡಿದ್ದಾರೆ.

ಚಾಮರಾಜನಗರ ನಗರಸಭೆಯ ವಾರ್ಡ್ 1 ರಿಂದ 10ರವರೆಗಿನ ವಾರ್ಡ್‍ಗಳಿಗೆ ಜಗದೀಶ್, ಹಿರಿಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ, ಚಾಮರಾಜ ನಗರ (ಮೊ. 9972584272)ಇವರು ಕರ್ತವ್ಯ ನಿರ್ವಹಿಸಲಿ ದ್ದಾರೆ. 11 ರಿಂದ 20ರವರೆಗಿನ ವಾರ್ಡ್‍ಗಳಿಗೆ ಮಹೇಶ್, ಸಹಾಯಕ ಅಭಿಯಂತರರು, ನಂ.2, ಸಿಆರ್‍ಆರ್ ಉಪವಿಭಾಗ, ಕಾವೇರಿ ನೀರಾವರಿ ನಿಗಮ, ಅಟ್ಟುಗೂಳಿಪುರ (ಮೊ. 9731634760), ವಾರ್ಡ್ 21 ರಿಂದ 31ರವರೆಗಿನ ವಾರ್ಡ್‍ಗಳಿಗೆ ಎಂ. ರಾಜಶೇಖರಮೂರ್ತಿ, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಚಾಮ ರಾಜನಗರ (ಮೊ. 9663303962) ಸೆಕ್ಟರ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಕೊಳ್ಳೇಗಾಲ ನಗರಸಭೆಯ ವಾರ್ಡ್ 1ರಿಂದ 10ರವರೆಗಿನ ವಾರ್ಡ್‍ಗಳಿಗೆ ಗಂಗಾಧರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಕೊಳ್ಳೇಗಾಲ (ಮೊ. 9481532318), 11 ರಿಂದ 20ರವರೆಗಿನ ವಾರ್ಡ್‍ಗಳಿಗೆ ನಿಂಗರಾಜು, ಸಹಾಯಕ ನಿರ್ದೇಶಕರು, ತಾಲೂಕು ಪಂಚಾಯಿತಿ, ಕೊಳ್ಳೇಗಾಲ (ಮೊ. 9448602109), 21 ರಿಂದ 31ರವರೆಗಿನ ವಾರ್ಡ್‍ಗಳಿಗೆ ರಾಚಪ್ಪ, ರೇಷ್ಮೆ ಸಹಾಯಕ ನಿರ್ದೇ ಶಕರು (ರೀಲಿಂಗ್), ಕೊಳ್ಳೇಗಾಲ (ಮೊ. 9880440073) ಇವರು ಸೆಕ್ಟರ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಆ.11ರ ಎರಡನೇ ಶನಿವಾರದಂದೂ ನಾಮಪತ್ರ ಸ್ವೀಕಾರ

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ವೇಳಾಪಟ್ಟಿ ಅನುಸಾರ ಆಗಸ್ಟ್ 10 ರಿಂದ 17ರವರೆಗೆ ನಾಮಪತ್ರ ಸ್ವೀಕರಿಸಬೇಕಿದೆ. ಆಗಸ್ಟ್ 12ರ ಭಾನುವಾರ ಹಾಗೂ ಸ್ವಾತಂತ್ರ್ಯ ದಿನ ಆಚರಣೆಯ ಆಗಸ್ಟ್ 15ರಂದು ಸಾರ್ವತ್ರಿಕ ರಜೆ ಇರುವ ಕಾರಣ ಈ ಎರಡೂ ದಿನಗಳಂದು ನಾಮಪತ್ರ ಸ್ವೀಕರಿಸಲಾಗುವುದಿಲ್ಲ. ಉಳಿದಂತೆ ಎಲ್ಲ ದಿನಗಳಂದು ನಾಮಪತ್ರ ಸ್ವೀಕರಿಸಲಾಗುತ್ತದೆ. ಆ.11ರಂದು 2ನೇ ಶನಿವಾರವಾಗಿದ್ದು ನೆಗೋಷಿಯಬಲ್ ಇನ್ ಸ್ಟ್ರುಮೆಂಟ್ಸ್ ಆಕ್ಟ್ 1881ರ ಪ್ರಕಾರ ಸಾರ್ವತ್ರಿಕ ರಜಾ ಅಲ್ಲದ ಕಾರಣ ಅಂದು ಸಹ ಚುನಾವಣಾ ಅಧಿಕಾರಿಗಳು ಕಚೇರಿಯಲ್ಲಿ ಹಾಜರಿದ್ದು, ನಾಮಪತ್ರವನ್ನು ಸ್ವೀಕರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ತಿಳಿಸಿದ್ದಾರ.

ನಾಮಪತ್ರ ಸ್ವೀಕರಿಸುವ ಸ್ಥಳದ ವಿವರ

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್‍ವಾರು ನಾಮಪತ್ರ ಸಲ್ಲಿಸಲು ಸ್ಥಳಗಳನ್ನು ನಿಗದಿ ಮಾಡಲಾಗಿದೆ. ಆಗಸ್ಟ್ 10 ರಿಂದ 17ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯೊಳಗೆ ಈ ಕೆಳಕಂಡ ಸ್ಥಳಗಳಲ್ಲಿ ವಾರ್ಡ್‍ವಾರು ನಾಮಪತ್ರವನ್ನು ಸಲ್ಲಿಸಬಹುದಾಗಿದೆ.

ಚಾಮರಾಜನಗರ ನಗರಸಭೆ ವಾರ್ಡ್ 1 ರಿಂದ 8ರವರೆಗೆ- ಸಾಮಥ್ರ್ಯ ಸೌಧ ಕಟ್ಟಡ, ಪಶ್ಚಿಮ ಭಾಗದ ಕೊಠಡಿ, ತಾಲೂಕು ಪಂಚಾಯಿತಿ ಆವರಣ, ಸತ್ಯಮಂಗಲ ರಸ್ತೆ, ಚಾಮರಾಜನಗರ.ವಾರ್ಡ್ 9 ರಿಂದ 16ರವರೆಗೆ – ಸಾಮಥ್ರ್ಯ ಸೌಧ ಕಟ್ಟಡ, ಪೂರ್ವ ಭಾಗದ ಕೊಠಡಿ, ತಾಲೂಕು ಪಂಚಾಯಿತಿ ಆವರಣ, ಸತ್ಯ ಮಂಗಲ ರಸ್ತೆ, ಚಾಮರಾಜನಗರ.ವಾರ್ಡ್ 17 ರಿಂದ 24ರವರೆಗೆ-ಸಿಡಿಎಸ್ ಸಮುದಾಯ ಭವನ, ಪೂರ್ವಭಾಗದ ಕೊಠಡಿ, ಪ್ರಗತಿ ನಗರ, ಸಂತಪೌಲ್ ಚರ್ಚ್ ಹಿಂಭಾಗ, ಬಿ.ಆರ್. ಹಿಲ್ಸ್ ರಸ್ತೆ, ಚಾಮರಾಜನಗರ.ವಾರ್ಡ್ 25 ರಿಂದ 31ರವರೆಗೆ- ಸಿಡಿಎಸ್ ಸಮುದಾಯ ಭವನ, ಪಶ್ಚಿಮ ಭಾಗದ ಕೊಠಡಿ, ಪ್ರಗತಿ ನಗರ, ಸಂತ ಪೌಲ್ ಚರ್ಚ್ ಹಿಂಭಾಗ, ಬಿ.ಆರ್. ಹಿಲ್ಸ್ ರಸ್ತೆ, ಚಾಮರಾಜನಗರ.

ಕೊಳ್ಳೇಗಾಲ ನಗರಸಭೆ ವಾರ್ಡ್ 1ರಿಂದ 8ರವರೆಗೆ- ತಾಲೂಕು ಕಚೇರಿ ಕಟ್ಟಡ, ಕೆಎಸ್‍ಡಬ್ಲೂಎಎನ್ ಕೊಠಡಿ, ಕೊಳ್ಳೇಗಾಲ.

ವಾರ್ಡ್ 9 ರಿಂದ 16ರವರೆಗೆ- ತಾಪಂ ಸಭಾಂಗಣ, ತಾಲೂಕು ಪಂಚಾಯಿತಿ ಕಚೇರಿ, ಕೊಳ್ಳೇಗಾಲ, ವಾರ್ಡ್ 17 ರಿಂದ 24ರವರೆಗೆ – ಸಿಡಿಎಸ್ ಭವನ, ಜನನಿ ಆಸ್ಪತ್ರೆ ಹತ್ತಿರ, ಕೊಳ್ಳೇಗಾಲ, ವಾರ್ಡ್ 25 ರಿಂದ 31ರವರೆಗೆ – ಕೊಠಡಿ ಸಂಖ್ಯೆ 04, ಎಪಿಎಂಸಿ ಕಚೇರಿ, ಕೊಳ್ಳೇಗಾಲ.

ಮೇಲ್ಕಂಡ ಸ್ಥಳಗಳಲ್ಲಿ ವಾರ್ಡ್‍ವಾರು ನಾಮಪತ್ರವನ್ನು ಸಲ್ಲಿಸಬಹು ದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಧಿಕಾರಿ ಬಿ.ಬಿ. ಕಾವೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »