ಮೈಸೂರು,ಮಾ.14(ಎಂಕೆ)- ಮೈಸೂರು ತಾಲೂಕಿನ ರಮ್ಮನಹಳ್ಳಿಯಲ್ಲಿ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವ, ಮಾರಮ್ಮನ ಹಬ್ಬದ ಆಚರಣೆ ಸಂಭ್ರಮದಿಂದ ನೆರವೇರಿತು. ಪ್ರತಿ 3 ವರ್ಷಗಳಿಗೊಮ್ಮೆ 15 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಹಂಚ್ಯಾ, ಸಾತಗಳ್ಳಿ ಗ್ರಾಮಗಳಲ್ಲಿ ಜಾತ್ರೆ ಶುಕ್ರವಾರ ನಡೆದ ಬಳಿಕ ಶನಿವಾರ ರಮ್ಮನಹಳ್ಳಿ ಗ್ರಾಮದಲ್ಲಿ ಲಕ್ಷ್ಮಿ ದೇವಿ ಜಾತ್ರೆ ನಡೆಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಸಾವಿ ರಾರು ಭಕ್ತರು ಭಾಗವಹಿಸಿದ್ದರು. ಬಳಿಕ ಮಾರಮ್ಮ ದೇವಸ್ಥಾನದ ಸುತ್ತ ಕಟ್ಟಲಾ ಗಿದ್ದ ರಂಗದಲ್ಲಿ ನೂರಾರು ಪುರುಷರು ದೊಣ್ಣೆ ಕುಣಿತ…
ಕೊರೊನಾ ಭೀತಿ’: ಹಾಸ್ಟೆಲ್ ತೊರೆಯಲು ವಿದ್ಯಾರ್ಥಿಗಳಿಗೆ ಸೂಚನೆ
March 15, 2020ಬೆಂಗಳೂರು: ಕೋವಿಡ್-19 ವೈರಸ್ ನಿಯಂತ್ರಿಸುವ ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ವಿಶ್ವವಿದ್ಯಾಲಯಗಳ ವಸತಿ ನಿಲಯಗಳಿಗೆ ಸೋಮವಾರ ದಿಂದ ಮಾಸಾಂತ್ಯದವರೆಗೆ ರಜೆ ಘೋಷಿಸಲಾಗಿದೆ. ಹೀಗಾಗಿ ಭಾನುವಾರ ಸಂಜೆಯೊಳಗಾಗಿ ವಸತಿ ನಿಲಯ ಗಳನ್ನು ತೊರೆಯಬೇಕು. ಮತ್ತೆ ಏಪ್ರಿಲ್ 1 ರಿಂದ ವಸತಿ ನಿಲಯಕ್ಕೆ ವಾಪಸ್ ಅಗುವಾಗ ತಮಗೆ ಕೋವಿಡ್ -19 ಸೋಂಕು ವ್ಯಾಪಿಸಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ ವಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ವೈರಸ್ ನಿಯಂತ್ರಿಸುವ ದೃಷ್ಟಿಯಿಂದ ಶನಿವಾರದಿಂದ ಜಾರಿಗೆ ಬರುವಂತೆ ಉನ್ನತ…
ಕೊರೊನಾ ಭೀತಿ ಬಂದ್‍ಗೆ ಹೋಟೆಲ್ ಮಾಲೀಕರ ಬೆಂಬಲ
March 14, 2020ಮೈಸೂರು, ಮಾ.13 (ಎಂಟಿವೈ)- ಕೊರೊನಾ ಹರಡದಂತೆ ಮುಂಜಾಗರೂಕತಾ ಕ್ರಮವಾಗಿ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಒಂದು ವಾರ ಮಾಲ್, ಪಬ್ ಸೇರಿದಂತೆ ಜನನಿಬಿಢ ಕೇಂದ್ರಗಳ ಬಂದ್‍ಗೆ ಸೂಚನೆ ನೀಡಿದ್ದು, ಅದಕ್ಕೆ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಸಹಕಾರ ನೀಡಲಿದೆ ಎಂದು ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಲಾಡ್ಜ್ ಸೌಲಭ್ಯವಿರುವ ಹೋಟೆಲ್ 400, ಸಸ್ಯಹಾರಿ ಹೋಟೆಲ್ 200, ಬಾರ್ ಅಂಡ್ ರೆಸ್ಟೋರೆಂಟ್ 75, ಸ್ಟಾರ್ ಹೋಟೆಲ್‍ಗಳು 24, ಬೇಕರಿಗಳು 300 ಇವೆ. ವಿವಿಧ ಬಗೆ ಲಾಡ್ಜ್‍ಗಳಿಂದ…
ಕೆ.ಆರ್.ಪೇಟೆ ಬಳಿ ವಿವಿಧೆಡೆ ಅಕ್ರಮ ಕಲ್ಲು ಗಣಿಗಾರಿಕೆ ಜಿಪಂ ಸದಸ್ಯನಿಗೆ 11.05 ಕೋಟಿ ದಂಡ ವಿಧಿಸಿ ನೋಟಿಸ್ ಜಾರಿ
March 14, 2020ಮಂಡ್ಯ, ಮಾ.13(ನಾಗಯ್ಯ)-ಕೆ.ಆರ್. ಪೇಟೆ ತಾಲೂಕಿನ ವಿವಿಧೆಡೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿರುವುದು ದೃಢ ಪಟ್ಟ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ, ಜಿಪಂ ಸದಸ್ಯ ಹೆಚ್.ಟಿ.ಮಂಜು ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 11,05, 46,205 ರೂ. ದಂಡ ವಿಧಿಸಿ ರುವುದಲ್ಲದೆ, ಅವರಿಗೆ ನೀಡಿರುವ ಕಲ್ಲು ಗಣಿಗಾರಿಕೆ ಪರವಾನಗಿಯನ್ನು ಯಾಕೆ ರದ್ದುಪಡಿಸಬಾರದು ಎಂದು ಕೇಳಿ ನೋಟಿಸ್ ಜಾರಿ ಮಾಡಿದೆ. ಅಕ್ರಮ ಗಣಿಗಾರಿಕೆ ಬಗ್ಗೆ ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ ಮತ್ತು ಕೆಲ ಸಾರ್ವಜನಿಕರು ನೀಡಿದ್ದ ದೂರಿನ ಹಿನ್ನೆಲೆ ಯಲ್ಲಿ ಗಣಿ…
`ಕಾವಾ’ದಲ್ಲಿ 2 ದಿನ ವಾರ್ಷಿಕ ಚಿತ್ರಕಲಾ ಪ್ರದರ್ಶನ
March 14, 2020ಮೈಸೂರು,ಮಾ.13(ಎಂಟಿವೈ)- ಮೈಸೂರಿನ ಸಿದ್ದಾರ್ಥನಗರದಲ್ಲಿರುವ `ಕಾವಾ’ ಕಾಲೇಜಿ ನಲ್ಲಿ ಶುಕ್ರವಾರ ಆರಂಭವಾದ 2 ದಿನಗಳ ವಾರ್ಷಿಕ ಚಿತ್ರಕಲಾ ಪ್ರದರ್ಶನದಲ್ಲಿ 400ಕ್ಕೂ ಹೆಚ್ಚು ಬಗೆಯ ಕಲಾಕೃತಿಗಳ ಅನಾವರಣವಾಯಿತು. ಈ ಬಾರಿ ಕಾಲೇಜಿನ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಪ್ರದರ್ಶಿಸದೇ ಒಟ್ಟಾಗಿ ಒಂದು ವರ್ಷದಿಂದ ರಚಿಸಿದ ಚಿತ್ರ ಗಳು, ಕೆತ್ತನೆಗಳು, ಛಾಯಾಚಿತ್ರಗಳು, ಗ್ರಾಫಿಕ್ಸ್ ಕಲೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಕಾವಾ ಪ್ರಭಾರ ಡೀನ್ ಆದ ಅಪರ ಜಿಲ್ಲಾಧಿ ಕಾರಿ ಪೂರ್ಣಿಮಾ ಅವರು, ಕಪ್ಪು ಹಲಗೆಯ ಮೇಲೆ `ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ’…
ಮಹಾರಾಣಿ ಕೆಂಪನಂಜಮ್ಮಣ್ಣಿ ಜನ್ಮ ದಿನಾಚರಣೆಯಲ್ಲಿ ಸಾಧಕಿಯರಿಗೆ ಸನ್ಮಾನ
March 14, 2020ಮೈಸೂರು,ಮಾ.12(ಆರ್‍ಕೆಬಿ)- ಅಂತಾ ರಾಷ್ಟ್ರೀಯ ಮಹಿಳಾ ದಿನ ಹಾಗೂ ಮಹಾ ರಾಣಿ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಅಮ್ಮ ಜನ್ಮದಿನ ಆಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕಿಯರನ್ನು ಸನ್ಮಾ ನಿಸಿ, ಮಹಾರಾಣಿ ಮಹಿಳಾ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕರ್ನಾಟಕ ಸೇನಾಪಡೆ ಮೈಸೂರು ಜಿಲ್ಲಾ ಘಟಕದ ವತಿಯಿಂದ ಮೈಸೂರಿನ ಜೆಎಲ್‍ಬಿ ರಸ್ತೆ ರೋಟರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ `ಸುಧರ್ಮಾ’ ಸಂಸ್ಕøತ ಪತ್ರಿಕೆಯ ಕೆ.ಎಸ್.ಜಯಲಕ್ಷ್ಮಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕøತ ಹೆಚ್.ಪಿ. ರಾಣಿಪ್ರಭಾ,…
ಒಡನಾಡಿಯಿಂದ ನಾಳೆ `ಯೋಗ ಸ್ಟಾಪ್ ಟ್ರಾಫಿಕಿಂಗ್’
March 14, 2020ಮೈಸೂರು, ಮಾ.13 (ಆರ್‍ಕೆಬಿ)- ಮಾನವ ಅಕ್ರಮ ಸಾಗಣೆ ತಡೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಾ.15ರಂದು ಮೈಸೂರಿನ ಅರಮನೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಬಳಿ `ಯೋಗ ಸ್ಟಾಪ್ ಟ್ರಾಫಿಕಿಂಗ್’ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕರಾದ ಸ್ಟ್ಯಾನ್ಲಿ-ಪರಶು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಯೋಗವನ್ನೇ ಸಾಧನವನ್ನಾಗಿಸಿಕೊಂಡು ಮಾನವ ಅಕ್ರಮ ಸಾಗಣೆ ಹಾಗೂ ಲೈಂಗಿಕ ಶೋಷಣೆ ವಿರುದ್ಧ ಎಲ್ಲಾ ದೇಶಗಳ ಸಂಸ್ಕøತಿ ಹಾಗೂ ಗಡಿಗಳನ್ನು ದಾಟಿ ಒಂದು ಅಭಿಯಾನವಾಗಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂಗ್ಲೆಂಡ್, ಅಮೆರಿಕ,…
ಕೊರೊನಾ: ಭಯ ಅನಗತ್ಯ, ಮುನ್ನೆಚ್ಚರಿಕೆ ಅತ್ಯಗತ್ಯ
March 14, 2020ಮೈಸೂರು, ಮಾ.13(ಆರ್‍ಕೆಬಿ)- ವಿಶ್ವಾ ದ್ಯಂತ ಜನರನ್ನು ತಲ್ಲಣಗೊಳಿಸಿರುವ ಕೋವಿದ್-19 (ಕೊರೊನಾ ವೈರಸ್) ಬಗ್ಗೆ ಭಯ ಪಡಬೇಕಾಗಿಲ್ಲ. ಆದರೆ ಮುನ್ನೆಚ್ಚ ರಿಕೆ ಅಗತ್ಯ ಎಂದು ಮೈಸೂರು ಮೆಡಿಕಲ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ (ಮಾ) ಮತ್ತು ಮೈಸೂರು ಆಸ್ಪತ್ರೆಗಳು, ನರ್ಸಿಂಗ್ ಹೋಂ, ಡಯಾಗ್ನಸ್ಟಿಕ್ ಮತ್ತು ಕ್ಲಿನಿಕ್‍ಗಳ ಸಂಘ (ಮಹಾನ್) ತಿಳಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವೈದ್ಯರು ಕೊರೊನಾ ವೈರಸ್ ಕುರಿತು ಮಾಹಿತಿ ನೀಡಿದರು. ಮಹಾನ್ ಅಧ್ಯಕ್ಷ ಡಾ.ಕೆ. ಜಾವಿದ್ ನಯೀಮ್ ಮಾತನಾಡಿ,…
ಚಾಮರಾಜನಗರ ಜಿಲ್ಲೆಯಲ್ಲಿ ಹದಗೆಟ್ಟಿರುವ ನೀರು ಶುದ್ಧೀಕರಣ ಘಟಕಗಳ ಶೀಘ್ರ ದುರಸ್ತಿ ಸಂದೇಶರಿಗೆ ಸಚಿವ ಈಶ್ವರಪ್ಪ ಭರವಸೆ
March 14, 2020ಚಾಮರಾಜನಗರ, ಮಾ.13-ಚಾಮರಾಜನಗರ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶ ಗಳಲ್ಲಿ ಅಳವಡಿಸಿರುವ 24 ನೀರು ಶುದ್ಧೀಕರಣ ಘಟಕಗಳು ತಾತ್ಕಾಲಿಕ ದುರಸ್ತಿಯಲ್ಲಿದ್ದು, ಎನ್. ಆರ್.ಡಬ್ಲ್ಯು.ಎಸ್. ಟಾಸ್ಕ್‍ಫೋರ್ಸ್ ಹಾಗೂ ಇತರೆ ಏಜೆನ್ಸಿಗಳ ಮೂಲಕ ಅವುಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದು ವಿಧಾನ ಪರಿಷತ್ತಿಗೆ ತಿಳಿಸಿದರು. ಬೇಸಿಗೆ ಕಾಲಿಟ್ಟಿದ್ದು, ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಿರುವುದರಿಂದ ಗ್ರಾಮಗಳಲ್ಲಿ ಕೆಟ್ಟು ನಿಂತಿರುವ ನೀರು ಶುದ್ಧಿಕರಣ ಘಟಕಗಳನ್ನು ಕೂಡಲೇ ದುರಸ್ತಿಗೊಳಿಸುವ…
ಮತ್ತೆ ನವಿ ಬೆಂಗಳೂರು ನಿರ್ಮಾಣ ಪ್ರಸ್ತಾಪ
March 14, 2020ವಿಧಾನಸಭೆಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಇಂಗಿತ ಕೈಗಾರಿಕಾಭಿವೃದ್ಧಿಯ ದೃಷ್ಟಿಯಿಂದ ಅನಿವಾರ್ಯತೆ ಮನವರಿಕೆ ಬೆಂಗಳೂರು, ಮಾ.13(ಕೆಎಂಶಿ)-ನವಿ ಮುಂಬಯಿ ಮಾದರಿಯಲ್ಲಿ ನವ ಬೆಂಗಳೂರು ನಿರ್ಮಾಣ ಪ್ರಸ್ತಾಪ ಮತ್ತೆ ಮುನ್ನ ಲೆಗೆ ಬಂದಿದ್ದು, ಆ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಕೈಗಾರಿಕೆ ಸಚಿವ ಜಗ ದೀಶ್ ಶೆಟ್ಟರ್ ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆ ಯಲ್ಲಿ ಕಾಂಗ್ರೆಸ್‍ನ ಎನ್.ಎಸ್. ಹ್ಯಾರೀಸ್ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಬೆಂಗಳೂರಿಗೆ 50 ಕಿ.ಮೀ. ದೂರದಲ್ಲಿ ನವ ಬೆಂಗಳೂರು ನಿರ್ಮಾಣದ ಬಗ್ಗೆ ಚರ್ಚೆಗಳು…