ಕೆ.ಆರ್.ಪೇಟೆ ಬಳಿ ವಿವಿಧೆಡೆ ಅಕ್ರಮ ಕಲ್ಲು ಗಣಿಗಾರಿಕೆ ಜಿಪಂ ಸದಸ್ಯನಿಗೆ 11.05 ಕೋಟಿ ದಂಡ ವಿಧಿಸಿ ನೋಟಿಸ್ ಜಾರಿ
ಮೈಸೂರು

ಕೆ.ಆರ್.ಪೇಟೆ ಬಳಿ ವಿವಿಧೆಡೆ ಅಕ್ರಮ ಕಲ್ಲು ಗಣಿಗಾರಿಕೆ ಜಿಪಂ ಸದಸ್ಯನಿಗೆ 11.05 ಕೋಟಿ ದಂಡ ವಿಧಿಸಿ ನೋಟಿಸ್ ಜಾರಿ

March 14, 2020

ಮಂಡ್ಯ, ಮಾ.13(ನಾಗಯ್ಯ)-ಕೆ.ಆರ್. ಪೇಟೆ ತಾಲೂಕಿನ ವಿವಿಧೆಡೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿರುವುದು ದೃಢ ಪಟ್ಟ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ, ಜಿಪಂ ಸದಸ್ಯ ಹೆಚ್.ಟಿ.ಮಂಜು ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 11,05, 46,205 ರೂ. ದಂಡ ವಿಧಿಸಿ ರುವುದಲ್ಲದೆ, ಅವರಿಗೆ ನೀಡಿರುವ ಕಲ್ಲು ಗಣಿಗಾರಿಕೆ ಪರವಾನಗಿಯನ್ನು ಯಾಕೆ ರದ್ದುಪಡಿಸಬಾರದು ಎಂದು ಕೇಳಿ ನೋಟಿಸ್ ಜಾರಿ ಮಾಡಿದೆ.

ಅಕ್ರಮ ಗಣಿಗಾರಿಕೆ ಬಗ್ಗೆ ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ ಮತ್ತು ಕೆಲ ಸಾರ್ವಜನಿಕರು ನೀಡಿದ್ದ ದೂರಿನ ಹಿನ್ನೆಲೆ ಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರಿಶೀಲನೆ ನಡೆಸಿದಾಗ ಹೆಚ್.ಟಿ.ಮಂಜು ಅವರು ಅಕ್ರಮವಾಗಿ ಗಣಿಗಾರಿಕೆ ನಡೆಸಿ ರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಅವರಿಗೆ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಪಾವತಿಸಲು ಕಾಲಾ ವಕಾಶವನ್ನು ನೀಡಿದೆ. ಅಲ್ಲದೇ ಅಕ್ರಮ ವಾಗಿ ಗಣಿಗಾರಿಕೆ ನಡೆಸಿರುವ ಬಗ್ಗೆ ಲಿಖಿತ ದಾಖಲಾತಿಗಳೊಂದಿಗೆ ಸಮಜಾಯಿಷಿ ನೀಡುವಂತೆಯೂ ಇಲ್ಲದಿದ್ದರೆ ನಿಯಮಾ ನುಸಾರ ಕಲ್ಲು ಗಣಿ ಗುತ್ತಿಗೆಯನ್ನು ರದ್ದು ಪಡಿಸುವುದಾಗಿಯೂ ನೋಟಿಸ್‍ನಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ಸಂಬಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ಪುಷ್ಪಲತಾ ಅವರು ಪಾಂಡವಪುರ ಉಪ ವಿಭಾಗಾಧಿಕಾರಿಗಳಿಗೆ ವಿವರ ವಾದ ವರದಿಯನ್ನು ಫೆ.28ರಂದು ಸಲ್ಲಿಸಿದ್ದಾರೆ.

ಜೆಡಿಎಸ್ ಮುಖಂಡ, ಜಿಪಂ ಸದಸ್ಯ ಹೆಚ್.ಟಿ.ಮಂಜು ಅವರು ಟಿ.ಜೆ. ಸ್ಟೋನ್ ಕ್ರಶರ್ ಹೆಸರಿನಲ್ಲಿ ವಿವಿಧೆಡೆ ಕಲ್ಲು ಗಣಿ ಗುತ್ತಿಗೆಯನ್ನು ಪಡೆದಿದ್ದು, ತಮಗೆ ಗುತ್ತಿಗೆ ನೀಡಿರುವ ಸ್ಥಳದ ಹೊರ ಭಾಗದಲ್ಲಿ ಅಕ್ರಮ ವಾಗಿ ಗಣಿಗಾರಿಕೆ ನಡೆಸಿ ಕಲ್ಲನ್ನು ತೆಗೆದಿ ದ್ದಾರೆ. ಅಲ್ಲದೆ ಗುತ್ತಿಗೆ ಪಡೆದಿರುವ ಸ್ಥಳ ದಲ್ಲಿ ತೆಗೆದಿರುವ ಕಲ್ಲುಗಳಿಗೆ ರಾಜಧನ ವನ್ನೂ ಸರಿಯಾಗಿ ಪಾವತಿಸಲಿಲ್ಲ ಎಂದು ಆರೋಪಿಸಲಾಗಿದೆ.

ಕೆ.ಆರ್.ಪೇಟೆ ತಾಲೂಕು ಶಿವಪುರ ಗ್ರಾಮದ ಸರ್ವೆ ನಂ.10ರಲ್ಲಿ 0.20 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅವರು ಮಂಜೂರಾತಿ ಪಡೆದಿದ್ದರು. ಆದರೆ ಗುತ್ತಿಗೆ ಪ್ರದೇಶದ ಪಶ್ಚಿಮ ದಿಕ್ಕಿ ನಲ್ಲಿರುವ ಹೇಮಾವತಿ ನಾಲೆ ಅಂಚಿನಲ್ಲಿ ಸ್ಫೋಟಕಗಳನ್ನು ಬಳಸಿ ಗಣಿಗಾರಿಕೆ ನಡೆಸುವ ಮೂಲಕ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ ಯನ್ನು ಉಲ್ಲಂಘಿಸಿದ್ದಾರೆ.

ಬೊಮ್ಮನಹಳ್ಳಿ ಗ್ರಾಮದ ಸರ್ವೆ ನಂ.46 ರಲ್ಲಿ 2007ರ ಮಾರ್ಚ್ 22ರಂದು 2 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು 20 ವರ್ಷಗಳ ಅವಧಿಗೆ ಅವರು ಗುತ್ತಿಗೆ ಪಡೆದಿದ್ದರು. ಇದಕ್ಕೆ ಸಂಬಂಧಿಸಿದಂತೆ ಡ್ರೋನ್ ಸರ್ವೆ ಕಾರ್ಯ ಕೈಗೊಂಡಾಗ ಗುತ್ತಿಗೆ ಪ್ರದೇಶದಲ್ಲಿ 1,44,311.81 ಮೆಟ್ರಿಕ್ ಟನ್ ಮತ್ತು ಗುತ್ತಿಗೆ ಪ್ರದೇಶದ ಹೊರ ಭಾಗದಲ್ಲಿ 2,15,402 ಮೆಟ್ರಿಕ್ ಟನ್ ಗಣಿಗಾರಿಕೆ ನಡೆಸಿರುವುದು ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಪ್ರದೇ ಶದ ವ್ಯತ್ಯಾಸದ 1,04,756 ಮೆಟ್ರಿಕ್ ಟನ್‍ಗೆ 3,14,26,800 ರೂ. ಮತ್ತು ಗುತ್ತಿಗೆ ಹೊರ ಭಾಗದಲ್ಲಿ ಅಕ್ರಮವಾಗಿ ತೆಗೆ ದಿರುವ 2,15,402 ಮೆಟ್ರಿಕ್ ಟನ್ ಕಲ್ಲುಗಳಿಗೆ 6,46,20,600 ರೂ. ದಂಡ ಪಾವತಿಸಬೇಕೆಂದು ಹೆಚ್.ಟಿ.ಮಂಜು ಅವರಿಗೆ ಸೂಚಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿಗಳಿಗೆ ನೀಡಿರುವ ವರದಿ ಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ತಿಳಿಸಿದ್ದಾರೆ.

ಕೆ.ಆರ್.ಪೇಟೆ ತಾಲೂಕು ಶಿವಪುರ ಗ್ರಾಮದ ಸರ್ವೆ ನಂ.10/ಪಿ3ರಲ್ಲಿ 4 ಎಕರೆ ಪ್ರದೇಶವನ್ನು ಮಂಜು ಅವರಿಗೆ ಗಣಿ ಗಾರಿಕೆ ನಡೆಸಲು ಗುತ್ತಿಗೆ ನೀಡಲಾಗಿದೆ. ಈ ಪ್ರದೇಶ ವನ್ನು ಜಿಪಿಎಸ್ ಉಪಕರಣ ಬಳಸಿ ಅಳತೆ ಮಾಡಲಾಗಿ ಹೇಮಾವತಿ ನಾಲೆಯ ಅಂಚಿ ನಲ್ಲಿ ಗುತ್ತಿಗೆ ಪ್ರದೇಶ ಇರುವುದು ಕಂಡು ಬಂದಿದೆ. ಈ ಪ್ರದೇಶದಲ್ಲಿ 7.5 ಮೀಟರ್ ಬಫರ್ ಜೋನ್ ಕಾಯ್ದುಕೊಂಡು ಗಣಿ ಗಾರಿಕೆ ನಡೆಸಿರುವುದಿಲ್ಲ ಮತ್ತು ಗಣಿಗಾರಿಕೆ ಪ್ರದೇಶದಲ್ಲಿ ಸುರಕ್ಷತಾ ಕ್ರಮವಾಗಿ ತಂತಿ ಬೇಲಿ ನಿರ್ಮಿಸಿಲ್ಲ ಹಾಗೂ ಭಾರೀ ಸ್ಫೋಟಕ ಗಳನ್ನು ಬಳಸಿ ಗಣಿಗಾರಿಕೆ ನಡೆಸಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ತಿಳಿಸ ಲಾಗಿದೆ. ಅದು ಮಾತ್ರವಲ್ಲದೆ ಬೊಮ್ಮ ನಾಯಕನ ಹಳ್ಳಿ ಸರ್ವೆ ನಂ.46ರ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಸಿರುವುದಕ್ಕೆ 10,07,050 ರೂ. ಹಾಗೂ ಹರಳಹಳ್ಳಿ ಗ್ರಾಮದ ಸರ್ವೆ ನಂ.22ರಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಸಿರುವು ದಕ್ಕೆ 49,88,400 ರೂ. ದಂಡ ವಿಧಿಸ ಲಾಗಿದೆ. ಶಿವಪುರ ಗ್ರಾಮದ ಗೋಮಾಳ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿ 6,497 ಮೆಟ್ರಿಕ್ ಟನ್ ಕಲ್ಲು ತೆಗೆದಿರುವು ದಕ್ಕೆ 19,49,100 ರೂ. ಹಾಗೂ ಅದೇ ಪ್ರದೇಶದಲ್ಲಿ ಮತ್ತೊಂದೆಡೆ ಅಕ್ರಮವಾಗಿ 18,334 ಮೆಟ್ರಿಕ್ ಟನ್ ಕಲ್ಲು ತೆಗೆದಿರುವು ದಕ್ಕೆ 55,00,200 ರೂ. ದಂಡ ವಿಧಿಸಲಾಗಿದೆ. ಒಟ್ಟಾರೆ ಕೆ.ಆರ್.ಪೇಟೆ ತಾಲೂಕಿನ ವಿವಿಧೆಡೆ ಮಂಜು ನಡೆಸಿರುವ ಅಕ್ರಮ ಗಣಿಗಾರಿ ಕೆಗೆ ಒಟ್ಟು 11,05,46,205 ರೂ. ದಂಡ ವಿಧಿಸಿ ನೋಟಿಸ್ ಜಾರಿ ಮಾಡಲಾಗಿದೆ.

Translate »