ಮೈಸೂರು, ಮಾ.13 (ಎಂಟಿವೈ)- ಕೊರೊನಾ ಹರಡದಂತೆ ಮುಂಜಾಗರೂಕತಾ ಕ್ರಮವಾಗಿ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಒಂದು ವಾರ ಮಾಲ್, ಪಬ್ ಸೇರಿದಂತೆ ಜನನಿಬಿಢ ಕೇಂದ್ರಗಳ ಬಂದ್‍ಗೆ ಸೂಚನೆ ನೀಡಿದ್ದು, ಅದಕ್ಕೆ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಸಹಕಾರ ನೀಡಲಿದೆ ಎಂದು ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಲಾಡ್ಜ್ ಸೌಲಭ್ಯವಿರುವ ಹೋಟೆಲ್ 400, ಸಸ್ಯಹಾರಿ ಹೋಟೆಲ್ 200, ಬಾರ್ ಅಂಡ್ ರೆಸ್ಟೋರೆಂಟ್ 75, ಸ್ಟಾರ್ ಹೋಟೆಲ್‍ಗಳು 24, ಬೇಕರಿಗಳು 300 ಇವೆ. ವಿವಿಧ ಬಗೆ ಲಾಡ್ಜ್‍ಗಳಿಂದ ಒಟ್ಟು 9500 ರೂಮುಗಳು ಲಭ್ಯವಿವೆ. ಇವೆಲ್ಲವೂ ಎಂದಿನಂತೆಯೇ ಗ್ರಾಹಕರಿಗೆ ಸೇವೆ ಒದಗಿ ಸಲಿವೆ. ಲಾಡ್ಜ್‍ಗಳಲ್ಲಿ ವಾಸ್ತವ್ಯ ಹೂಡುವ ಪ್ರವಾಸಿ ಗರ ಆರೋಗ್ಯದ ಬಗ್ಗೆ ಅನು ಮಾನ ಬಂದರೆ ತಕ್ಷಣವೇ ಸರ್ಕಾರಿ ವೈದ್ಯರಿಗೆ ಮಾಹಿತಿ ನೀಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವುದೂ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಹೋಟೆಲ್‍ಗಳು, ಲಾಡ್ಜ್, ರೆಸ್ಟೋ ರೆಂಟ್, ಬೇಕರಿ ಹಾಗೂ ಸಿಹಿ ತಿನಿಸು ಮಳಿಗೆ ಗಳಿಗೂ ಸೂಚನೆ ನೀಡಲಾಗಿದೆ. ಮಾಂಸಾ ಹಾರಿ 130 ಹೋಟೆಲ್‍ಗಳಿದ್ದು, ಸರ್ಕಾರದ ಆದೇಶದ ಮೇರೆಗೆ ನಾಳೆಯಿಂದ ಒಂದು ವಾರ ಬಂದ್ ಆಗಲಿವೆ. ಫುಟ್‍ಪಾತ್‍ಗಳಲ್ಲಿ ರುವ ಫಾಸ್ಟ್‍ಫುಡ್‍ಗಳು ಮುಚ್ಚಲ್ಪಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರೆ ಮಾಂಸಹಾರಿ ಹೋಟೆಲ್‍ಗಳನ್ನು ಬಂದ್ ಮಾಡುವಂತೆ ನಾವು ಯಾವುದೇ ಸೂಚನೆ ನೀಡಿಲ್ಲವೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಹಾಗೂ ನಗರ ಪಾಲಿಕೆ ಆರೋ ಗ್ಯಾಧಿಕಾರಿ ಡಾ.ಜಯಂತ್ ಸ್ಪಷ್ಟಪಡಿಸಿದ್ದಾರೆ