ಮಹಾರಾಣಿ ಕೆಂಪನಂಜಮ್ಮಣ್ಣಿ ಜನ್ಮ ದಿನಾಚರಣೆಯಲ್ಲಿ ಸಾಧಕಿಯರಿಗೆ ಸನ್ಮಾನ
ಮೈಸೂರು

ಮಹಾರಾಣಿ ಕೆಂಪನಂಜಮ್ಮಣ್ಣಿ ಜನ್ಮ ದಿನಾಚರಣೆಯಲ್ಲಿ ಸಾಧಕಿಯರಿಗೆ ಸನ್ಮಾನ

March 14, 2020

ಮೈಸೂರು,ಮಾ.12(ಆರ್‍ಕೆಬಿ)- ಅಂತಾ ರಾಷ್ಟ್ರೀಯ ಮಹಿಳಾ ದಿನ ಹಾಗೂ ಮಹಾ ರಾಣಿ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಅಮ್ಮ ಜನ್ಮದಿನ ಆಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕಿಯರನ್ನು ಸನ್ಮಾ ನಿಸಿ, ಮಹಾರಾಣಿ ಮಹಿಳಾ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕರ್ನಾಟಕ ಸೇನಾಪಡೆ ಮೈಸೂರು ಜಿಲ್ಲಾ ಘಟಕದ ವತಿಯಿಂದ ಮೈಸೂರಿನ ಜೆಎಲ್‍ಬಿ ರಸ್ತೆ ರೋಟರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ `ಸುಧರ್ಮಾ’ ಸಂಸ್ಕøತ ಪತ್ರಿಕೆಯ ಕೆ.ಎಸ್.ಜಯಲಕ್ಷ್ಮಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕøತ ಹೆಚ್.ಪಿ. ರಾಣಿಪ್ರಭಾ, ಸುಧಾ ಫಣೀಶ್, ಡಿ.ದೇವ ರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಹೆಚ್.ಎ.ಶೋಭಾ, ಕಮಲಾ ಮೂರ್ತಿ, ಚಾಮರಾಜನಗರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಲಕ್ಷ್ಮಮ್ಮ, ಮಹಾರಾಣಿ ಕಲಾ ಕಾಲೇಜಿನ ಮನೋ ವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ. ಎಂ.ಎಸ್.ಮನೋನ್ಮಣಿ, ಎಂ.ಎಸ್. ಆಶಾಕುಮಾರಿ ಅವರಿಗೆ ಮಹಾರಾಣಿ ಕೆಂಪನಂಜಮ್ಮಣಿ ಮಹಿಳಾರತ್ನ ಪ್ರಶಸ್ತಿ ನೀಡಿ ಗೌರವಿ ಸಲಾಯಿತು. ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಾಧಕರನ್ನು ಸನ್ಮಾನಿಸಿ ಮಾತ ನಾಡಿದ ಮೇಯರ್ ತಸ್ನೀಂ, ನಾಲ್ವಡಿ ಕೃಷ್ಣರಾಜ ಒಡೆಯರ್ ಬಾಲಕರಾಗಿದ್ದಾಗ ಮಹಾ ರಾಣಿ ಕೆಂಪನಂಜಮ್ಮಣ್ಣಿ ಅವರೇ ಎಂಟು ವರ್ಷ ರಾಜ್ಯಭಾರ ನಡೆಸಿ ಅನೇಕ ಸಾಮಾಜಿಕ ಕೊಡುಗೆಗಳನ್ನು ನೀಡಿದ್ದಾರೆ. ಅವರನ್ನು ಸ್ಮರಿಸುವ ಇಂದಿನ ಕಾರ್ಯ ಕ್ರಮ ನಿಜಕ್ಕೂ ಸ್ತುತ್ಯಾರ್ಹ ಎಂದರು.

ಜೆಡಿಯು ಮಹಿಳಾ ಘಟಕದ ರಾಜ್ಯಾ ಧ್ಯಕ್ಷೆ ಮಂಜುಳಾ ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕøತಿ ಚಿಂತಕ ರಘುರಾಂ ಕೆ.ವಾಜಪೇಯಿ, ಸಮಾಜ ಸೇವಕಿ ಪುಷ್ಪಾ ಎ.ಅಯ್ಯಂಗಾರ್, ಕರ್ನಾಟಕ ಸೇನಾಪಡೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮತ್ತು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪದಾಧಿಕಾರಿಗಳಾದ ಆರ್.ಶಾಂತ ಮೂರ್ತಿ, ಶಾಂತರಾಜೇ ಅರಸ್, ಪಿ. ಪ್ರಭುಶಂಕರ್, ಮೊಗಣ್ಣಾಚಾರ್, ಬಂಗಾ ರಪ್ಪ ಇನ್ನಿತರರು ಉಪಸ್ಥಿತರಿದ್ದರು.

Translate »