ಮೈಸೂರು,ಆ.2(ವೈಡಿಎಸ್)- ಅದೊಂದು ಸುಂದರ ಸಂಜೆ. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ವೇದಿಕೆ ಯಲ್ಲಿ ಪರಿಸರ, ಜೀವ ಜಲದ ಮಹತ್ವ ಸಾರುವ ಕನ್ನಡ ಮತ್ತು ಹಿಂದಿ ಗೀತೆಗಳ ಗಾಯನ ಕಲಾರಸಿಕರ ಮನಗೆದ್ದವು. ಮುಂಗಾರು ಮಳೆ ವಿಫಲವಾದ ಹಿನ್ನೆಲೆ ಯಲ್ಲಿ ಮೈಸೂರಿನ ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ `ಬಾ ಮಳೆಯೇ ಬಾ’ ಶೀರ್ಷಿಕೆಯಡಿ ಆರಭಿ ಸಾಂಸ್ಕøತಿಕ ಟ್ರಸ್ಟ್ ಶುಕ್ರವಾರ ಆಯೋ ಜಿಸಿದ್ದ `ಕೆರೋಕೆ ಗೀತ ಗಾಯನ’ ಕಾರ್ಯ ಕ್ರಮದಲ್ಲಿ ಗಾಯಕರಾದ ಡಾ.ಎನ್.ಕುಲ್ ದೀಪ್, ಮಹೇಶ್‍ಕುಮಾರ್, ಡಾ.ಎಂ. ಎನ್.ರಘುವೀರ್, ಡಾ.ಜಿ.ವಿ.ಭಾರತಿ, ಹೇಮ…
ರಸ್ತೆ ಗುಂಡಿಯಿಂದ ಗಾಯವಾದರೆ ಸಂತ್ರಸ್ತರಿಗೆ ಪಾಲಿಕೆಯೇ ಪರಿಹಾರ ಕೊಡಬೇಕು: ಹೈಕೋರ್ಟ್
August 2, 2019ಬೆಂಗಳೂರು, ಆ.1-ಕೆಟ್ಟ ರಸ್ತೆ ಹಾಗೂ ಗುಂಡಿಗಳಿಂದಾಗಿ ಸಂಭವಿಸಿದ ಅಪಘಾತದಲ್ಲಿ ಮಗುವನ್ನು ಕಳೆದುಕೊಂಡ ಪೋಷಕರು ಅನುಭವಿಸುವ ಕೋಪ ಮತ್ತು ದುಃಖವನ್ನು ಯಾವುದೇ ರೀತಿಯಲ್ಲೂ ಶಾಂತಗೊಳಿಸಲು ಸಾಧ್ಯವಿಲ್ಲ. ಹಾಗಾಗಿ, ಇನ್ನು ಮುಂದೆ ಕೆಟ್ಟ ರಸ್ತೆಗಳು ಅಥವಾ ಗುಂಡಿ ಗಳಿಂದ ಜೀವ ಅಥವಾ ಅಂಗಗಳನ್ನು ಕಳೆದುಕೊಂಡವರಿಗೆ ಸ್ಥಳೀಯ ಆಡಳಿತವೇ (ಕಾರ್ಪೊರೇಷನ್) ಪರಿಹಾರ ನೀಡ ಬೇಕು ಎಂದು ಹೈಕೋರ್ಟ್ ಬುಧವಾರ ಮಧ್ಯಂ ತರ ಆದೇಶ ಹೊರಡಿಸಿದೆ. ಕೆಟ್ಟ ರಸ್ತೆಗಳಿಂದಾಗಿ ಹಾನಿ ಮತ್ತು ಪ್ರಾಣ ಹಾನಿ ಸಂಭವಿಸಿದರೆ ಪರಿಹಾರ ಕೋರಿ ನಾಗರಿಕರು ಹೈಕೋರ್ಟ್‍ಗೆ ಬರಬಹುದು…
ಪರಮಾತ್ಮನ ಅನುಗ್ರಹಕ್ಕೆ ಸೇವೆ ಸಾಧನ
August 2, 2019ಮೈಸೂರು, ಆ.1(ಎಂಕೆ)- ಪ್ರತಿಯೊಬ್ಬರೂ ಪರಮಾತ್ಮ ನಲ್ಲಿ ನಂಬಿಕೆಯಿಟ್ಟು ತಮ್ಮ ತಮ್ಮ ಕರ್ತವ್ಯ ಮಾಡಬೇಕು. ಪೂಜೆ, ಧ್ಯಾನ, ಸೇವೆ ಭಗವಂತನನ್ನು ಕಾಣುವ ಮಾರ್ಗಗಳು ಎಂದು ಉಡುಪಿಯ ಪೇಜಾವರ ಮಠದ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು. ಮೈಸೂರಿನ ಸರಸ್ವತಿಪುರಂನಲ್ಲಿರುವ ಕೃಷ್ಣಧಾಮದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ದೇವರಲ್ಲಿ ಭಕ್ತಿ ಮತ್ತು ಮಾಡುವ ಕಾಯಕದಲ್ಲಿ ನಿಷ್ಠೆ ಅತೀ ಮುಖ್ಯವಾದುದು. ಇವತ್ತು ಜಪ-ತಪ ಮಾಡದೇ ಊಟಮಾಡಿ, ಹರಟೆ ಹೊಡೆಯುವವರೇ ಹೆಚ್ಚು ಎಂದು ಹೇಳಿದರು. ಪರಮಾತ್ಮನಲ್ಲಿ ಅನುಗ್ರಹವನ್ನು ಪಡೆಯಬೇಕಾದರೆ…
ಮೈಸೂರಿನ ಯುವ ಪ್ರತಿಭೆ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ
August 2, 2019ಮೈಸೂರು,ಆ.1(ವೈಡಿಎಸ್)- ಚಿಕ್ಕವಯಸ್ಸಿನಲ್ಲೇ ರಾಷ್ಟ್ರೀಯಮಟ್ಟದ ಪಂದ್ಯಾವಳಿಯಲ್ಲಿ ಸಾಧನೆಗೈ ಯ್ಯುತ್ತಿರುವ ಮೈಸೂರಿನ ಯುವ ಪ್ರತಿಭೆ, 2019ರ ನವೆಂಬರ್‍ನಲ್ಲಿ ಚಿಕ್ಕಮಗಳೂರಿನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿ ನಂತೆ, ನಾವು ಚಿಕ್ಕಂದಿನಿಂದಲೇ ಮಕ್ಕಳನ್ನು ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ಅವರ ಭವಿಷ್ಯದ ಬದುಕು ನಿಂತಿರುತ್ತದೆ. ಹಾಗೆಯೇ ಬಡತನದಲ್ಲಿ ಬೆಳೆದ ಮಕ್ಕಳಿಗೆ ಏನಾದರೂ ಸಾಧನೆಗೈಯ್ಯಬೇಕೆಂಬ ಹಂಬಲ ವಿರುತ್ತದೆ. ಇದಕ್ಕೆ ಇಂಬು ನೀಡುವಂತೆ 12 ವರ್ಷದ ಬಾಲಕಿ ಮಂಚಮ್ಮ, ಮನೆಯಲ್ಲಿ ಬಡತನವಿದ್ದರೂ ಕ್ರೀಡೆಯಲ್ಲಿ ತನ್ನನ್ನು…
ಬಡತನ ನಿರ್ಮೂಲನೆ ಅಭಿವೃದ್ಧಿಗೆ ನಾಂದಿ
August 2, 2019ಮೈಸೂರು,ಆ.1(ಆರ್‍ಕೆಬಿ)- ಮಾನವ, ಭೂಮಿ, ಜಲ, ಪಶು ಹೀಗೆ ಸ್ಥಳೀಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಾಗ ಮಾತ್ರ ಬಡತನ ನಿರ್ಮೂಲನೆಯಾಗಿ ಅಭಿವೃದ್ಧಿ ಸಾಧ್ಯ ವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರು ಜಿಲ್ಲೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಿಗೆ ಮೈಸೂ ರಿನ ಜೆ.ಪಿ.ನಗರದ ರಾಹುಲ್ ಕನ್ವೆನ್ಷನ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ `ಪ್ರಗತಿ ಚಿಂತನಾ’ ಸಭೆಗೆ ಚಾಲನೆ ನೀಡಿ ಅವರು ಮಾತ ನಾಡಿದರು. ಮನುಷ್ಯನ ಯೋಚನೆಗಳು ಯೋಜನೆಗಳಾಗಿ ಕಾರ್ಯರೂಪಕ್ಕೆ ಬಂದಾಗ…
ಇಂಗ್ಲಿಷ್ ಮಾಧ್ಯಮ ಮಕ್ಕಳ ಸೃಜನಾತ್ಮಕತೆಯನ್ನು ಕೊಲ್ಲುತ್ತದೆ
August 2, 2019ಮೈಸೂರು,ಆ.1(ಎಂಟಿವೈ)-ಮಕ್ಕಳಲ್ಲಿ ರುವ ಸೃಜನಾತ್ಮಕತೆಯನ್ನು ಕೊಂದು ಹಾಕುವ ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ತ್ಯಜಿಸಿ, ಸುಲಭವಾಗಿ ಅರ್ಥವಾಗುವ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿದಾಗ ಮಾತ್ರ ಪ್ರಗತಿ ಸಾಧಿಸಬಹುದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆದ ಹಿರಿಯ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಸಭಾಂ ಗಣದಲ್ಲಿ ನಡೆದ ಸಂಸ್ಥೆಯ 57ನೇ ಸಂಸ್ಥಾ ಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದ ಅವರು, ಪ್ರಸ್ತುತ ಚಾಲ್ತಿ ಯಲ್ಲಿರುವ ಆಂಗ್ಲ ಮಾಧ್ಯಮದ ಶಿಕ್ಷಣ…
ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ರೂಪದರ್ಶಿಗಳ ಆಯ್ಕೆ
August 2, 2019ಮೈಸೂರು, ಆ.1(ಎಂಟಿವೈ)- ಮೈಸೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ರೂಪದರ್ಶಿ ಸ್ಪರ್ಧೆ ಯಲ್ಲಿ 114 ಮಂದಿ ಪಾಲ್ಗೊಂ ಡಿದ್ದು, ಅವರಲ್ಲಿ 4 ವಿಭಾಗ ಗಳಲ್ಲಿ ತಲಾ ಇಬ್ಬರನ್ನು ಆಯ್ಕೆ ಮಾಡಲಾಗಿದೆ ಎಂದು ತಿಬ್ಬಾಸ್ ಗ್ರೂಪ್ ಮುಖ್ಯಸ್ಥ ಡಿ.ಸಿ. ನಾಗೇಶ್ ತಿಳಿಸಿದ್ದಾರೆ. ಕಿಂಗ್ಸ್ ಎಲ್ ಡೆನ್ ರೆಸಾರ್ಟ್ ನಲ್ಲಿ ಮಿಸ್ಟರ್, ಮಿಸ್, ಮಿಸ್ಟ್ರಸ್, ಟೀನ್ ಮತ್ತು ಲಿಟಲ್ ಪ್ರಿನ್ಸ್, ಪ್ರಿನ್ಸಸ್ ರೂಪದರ್ಶಿ ಸ್ಪರ್ಧೆ ನಡೆಸಲಾಗಿತ್ತು. ಒಟ್ಟು 4 ವಿಭಾಗಗಳಿಂದ 114 ಜನರು ಸ್ಪರ್ಧಿಗಳು ಭಾಗವಹಿಸಿ ದ್ದರು. ಮೈಸೂರಿನ ಜ್ಯೋತಿ…
ಮೈಸೂರಲ್ಲಿ 3 ದಿನಗಳ ಮಹಿಳಾ ಉದ್ಯಮ ಉತ್ಪನ್ನಗಳ ಪ್ರದರ್ಶನ ಆರಂಭ
August 2, 2019ಮೈಸೂರು, ಆ.1(ಆರ್‍ಕೆ)- ಮಹಿಳಾ ಉದ್ಯಮಿಗಳು ಕೈಯಿಂದ ತಯಾರಿಸಿದ ಉತ್ಪನ್ನಗಳ 3 ದಿನಗಳ ಪ್ರದರ್ಶನ ಇಂದಿನಿಂದ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಎದುರಿನ ಮೈಸೂರು ಗಂಗುರಾಸ್ ಹೋಟೆ ಲಿನಲ್ಲಿ ಆರಂಭವಾಯಿತು. ವುಮೆನ್ ಇನ್ ಸ್ಮಾಲ್ ಎಂಟರ್‍ಪ್ರೈಸ್(WISE) ಮಹಿಳಾ ಘಟಕ ಹಾಗೂ ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ(MCCI) ಸಂಯುಕ್ತಾಶ್ರಯದಲ್ಲಿ ಏರ್ಪಡಿ ಸಿರುವ ವಸ್ತುಪ್ರದರ್ಶನ ಮತ್ತು ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು ಎಫ್‍ಕೆಸಿಸಿಐ ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಉದ್ಘಾಟಿಸಿದರು. ನಂತರ ಮಹಿಳಾ ಉದ್ಯಮಿಗಳನ್ನುದ್ದೇಶಿಸಿ ಮಾತ ನಾಡಿದ ಅವರು, ಕೇಂದ್ರ ಹಾಗೂ…
ಮುಂಗಾರು ಫಸಲಿಗೆ ನಾಲೆಗಳಿಗೆ ನೀರು ಹರಿಸಿ, ಕೆರೆ ಕಟ್ಟೆಗಳನ್ನು ತುಂಬಿಸಲು ಆಗ್ರಹ
August 2, 2019ಮೈಸೂರು, ಆ.1 (ಆರ್‍ಕೆಬಿ)- ಮುಂಗಾರು ಫಸಲು ಬೆಳೆಯಲು ಮೈಸೂರು ಜಿಲ್ಲೆಯ ಎಲ್ಲಾ ನಾಲೆಗಳಿಂದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಗುರುವಾರ ಮೈಸೂರಿನ ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಬಿನಿ ಎಡದಂಡೆ ಮತ್ತು ಬಲದಂಡೆ ನಾಲೆ, ಹುಲ್ಲಹಳ್ಳಿ-ರಾಮಾಪುರ ನಾಲೆ, ವರುಣಾ, ತಾರಕ ಮತ್ತು ಹಾರಂಗಿ ನಾಲೆಗಳಿಗೆ ನೀರು ಬಿಡಲು ಕೂಡಲೇ ತೀರ್ಮಾನ ಕೈಗೊಳ್ಳಬೇಕು. ಈ…
ಟಿಪ್ಪು ಜಯಂತಿ ಸರ್ಕಾರವೇ ಆಚರಿಸಬೇಕಿಲ್ಲ, ನಾವೇ ಸಮರ್ಥರಿದ್ದೇವೆ: ತನ್ವೀರ್‍ಸೇಠ್
August 2, 2019ಮೈಸೂರು, ಆ.1(ಆರ್‍ಕೆಬಿ)- ಟಿಪ್ಪು ಜಯಂತಿಯನ್ನು ಸರ್ಕಾರವೇ ಆಚರಿಸ ಬೇಕಾಗಿಲ್ಲ, ನಾವೇ ಅದ್ಧೂರಿಯಾಗಿ ಮಾಡಲು ಸಮರ್ಥರಾಗಿದ್ದೇವೆ ಎಂದು ನರಸಿಂಹರಾಜ ಕ್ಷೇತ್ರ ಶಾಸಕ ತನ್ವೀರ್‍ಸೇಠ್ ಇಂದಿಲ್ಲಿ ತಿಳಿಸಿದರು. ಮೈಸೂರಿನಲ್ಲಿ ಗುರುವಾರ ನಡೆದ ಟಿಪ್ಪು ಸುಲ್ತಾನ್ ಉರುಸ್ ಇ-ಷರೀಫ್‍ನಲ್ಲಿ ಭಾಗವಹಿಸಿದ್ದ ಅವರು, ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಿರುವ ರಾಜ್ಯ ಬಿಜೆಪಿ ಸರ್ಕಾರದ ಆದೇಶದ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದರು. ನಾವು ಟಿಪ್ಪು ಜಯಂತಿ ರದ್ದಾಗಿರುವ ಬಗ್ಗೆ ಚಿಂತಿಸುತ್ತಿಲ್ಲ. ಬಿಜೆಪಿ ಸರ್ಕಾರದಿಂದ ಇಂತಹ ಕ್ರಮವನ್ನು ನಾವು ನಿರೀಕ್ಷಿಸಿದ್ದೆವು. ಆದರೆ ಟಿಪ್ಪು ಸುಲ್ತಾನ್ ಅವರನ್ನು ರಾಜಕೀಯಗೊಳಿಸುತ್ತಿರುವುದು…










