ಬೆಂಗಳೂರು, ಆ.1-ಕೆಟ್ಟ ರಸ್ತೆ ಹಾಗೂ ಗುಂಡಿಗಳಿಂದಾಗಿ ಸಂಭವಿಸಿದ ಅಪಘಾತದಲ್ಲಿ ಮಗುವನ್ನು ಕಳೆದುಕೊಂಡ ಪೋಷಕರು ಅನುಭವಿಸುವ ಕೋಪ ಮತ್ತು ದುಃಖವನ್ನು ಯಾವುದೇ ರೀತಿಯಲ್ಲೂ ಶಾಂತಗೊಳಿಸಲು ಸಾಧ್ಯವಿಲ್ಲ. ಹಾಗಾಗಿ, ಇನ್ನು ಮುಂದೆ ಕೆಟ್ಟ ರಸ್ತೆಗಳು ಅಥವಾ ಗುಂಡಿ ಗಳಿಂದ ಜೀವ ಅಥವಾ ಅಂಗಗಳನ್ನು ಕಳೆದುಕೊಂಡವರಿಗೆ ಸ್ಥಳೀಯ ಆಡಳಿತವೇ (ಕಾರ್ಪೊರೇಷನ್) ಪರಿಹಾರ ನೀಡ ಬೇಕು ಎಂದು ಹೈಕೋರ್ಟ್ ಬುಧವಾರ ಮಧ್ಯಂ ತರ ಆದೇಶ ಹೊರಡಿಸಿದೆ. ಕೆಟ್ಟ ರಸ್ತೆಗಳಿಂದಾಗಿ ಹಾನಿ ಮತ್ತು ಪ್ರಾಣ ಹಾನಿ ಸಂಭವಿಸಿದರೆ ಪರಿಹಾರ ಕೋರಿ ನಾಗರಿಕರು ಹೈಕೋರ್ಟ್‍ಗೆ ಬರಬಹುದು ಎಂದು ನ್ಯಾಯಪೀಠ ಮಹತ್ವದ ತೀರ್ಪು ನೀಡಿದೆ.
ಸಂವಿಧಾನದ 21ನೇ ವಿಧಿಯನ್ವಯ ವ್ಯಕ್ತಿಯು ಘನತೆಯಿಂದ ಬದುಕು ಸಾಗಿಸುವುದು ಮೂಲ ಭೂತ ಹಕ್ಕಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಕೂಡ ಮಾನ್ಯ ಮಾಡಿದ್ದು, ಉತ್ತಮ ರಸ್ತೆಯನ್ನು ಹೊಂದುವುದು ನಾಗರಿಕರ ಹಕ್ಕು ಎಂದು ಸ್ಪಷ್ಟ ಪಡಿಸಿದೆ. ಹೀಗಾಗಿ ವಾಹನ ಚಾಲನೆಗೆ ಯೋಗ್ಯ ವಾದ ರಸ್ತೆಗಳನ್ನು ನಿರ್ಮಿಸಿ ಸುಸ್ಥಿತಿಯಲ್ಲಿಡ ಬೇಕಾಗಿದ್ದು ಸ್ಥಳೀಯ ಆಡಳಿತದ ಜವಾಬ್ದಾರಿ ಎಂದು ಆದೇಶಿಸಲಾಗಿದೆ.
ಕೆಟ್ಟ ಫುಟ್‍ಪಾತ್‍ಗಳು ಮತ್ತು ರಸ್ತೆಗಳಿಂದ ಉಂಟಾಗುವ ನಷ್ಟ ಅಥವಾ ಹಾನಿಗೆ ಸ್ಥಳೀಯ ಆಡಳಿತ ಪ್ರಾಧಿಕಾರದಿಂದ ಪರಿಹಾರವನ್ನು ಪಡೆ ಯಲು ಹೈಕೋರ್ಟ್‍ನ ಬಾಗಿಲು ಬಡಿಯ ಬಹುದು ಎಂದು ನ್ಯಾಯಾಲಯ ಹೇಳಿದೆ.
ಸಾರ್ವಜನಿಕ ರಸ್ತೆಯಲ್ಲಿ ಗುಂಡಿಗಳಿದ್ದರೆ ಅವು ಜನರ ಜೀವಕ್ಕೆ ಅಪಾಯಕಾರಿ. ವಾಹನ ಸವಾ ರರು ಗಾಯಗೊಳ್ಳುವುದಲ್ಲದೆ ಜೀವ ಹಾನಿಯೂ ಸಂಭವಿಸುವ ಸಾಧ್ಯತೆ ಇರುತ್ತದೆ. ರಸ್ತೆ ಗುಂಡಿ ಗಳಿಂದ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೆ ಒಳಗಾಗುತ್ತಾರೆ. ಈ ಸಂಗತಿಗಳನ್ನು ಗಮನ ದಲ್ಲಿರಿಸಿ ನಗರಪಾಲಿಕೆಯು ರಸ್ತೆಗಳನ್ನು ಸುಸ್ಥಿತಿ ಯಲ್ಲಿಡುವುದರ ಜತೆಗೆ ರಸ್ತೆ, ಪಾದಚಾರಿ ಮಾರ್ಗವನ್ನು ನಾಗರಿಕ ಸ್ನೇಹಿಯಾಗಿಸಬೇಕಿದೆ ಎಂದು ಹೇಳಿದೆ. ನಗರದ ರಸ್ತೆಗಳ ದುರವಸ್ಥೆ ಕುರಿತು ಕೋರಮಂಗಲದ ನಿವಾಸಿಯೊಬ್ಬರು ದಾಖಲಿ ಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯ ಮೂರ್ತಿ ಮೊಹಮ್ಮದ್ ನವಾಜ್ ಅವರನ್ನೊಳ ಗೊಂಡ ವಿಭಾಗೀಯ ಪೀಠವು, ಮಧ್ಯಂತರ ಆದೇಶ ಜಾರಿಗೊಳಿಸಿದೆ.
`ನಾಗರಿಕರು ಕೇವಲ ತೆರಿಗೆ ಪಾವತಿಸಲಷ್ಟೇ ಸೀಮಿತರಲ್ಲ, ಅವರ ಜೀವ ಅಗ್ಗವೆಂದು ಭಾವಿಸ ಲಾಗದು. ಜನರಿಗೆ ಗುಣಮಟ್ಟದ ಹಾಗೂ ಸುಸ್ಥಿತಿಯ ರಸ್ತೆ ಕಡ್ಡಾಯವಾಗಿ ಬೇಕಿದೆ. ಇದನ್ನು ಪಾಲಿಕೆ ಆಡಳಿತಾಧಿಕಾರಿಗಳು ಅರಿತು ಸೌಲಭ್ಯ ವನ್ನು ಒದಗಿಸಬೇಕು. ಅಧಿಕಾರಿಗಳು ಕೂಡ ಉತ್ತಮ ರಸ್ತೆಗಳು ನಿರ್ಮಾಣಗೊಳ್ಳುವಂತೆ ನಿಗಾ ವಹಿಸಬೇಕು. ಇದಕ್ಕೆ ಚ್ಯುತಿಯಾದಲ್ಲಿ ಅಧಿಕಾರಿ ಗಳೇ ಹೊಣೆಗಾರರಾಗುತ್ತಾರೆ. ರಸ್ತೆ ಗುಂಡಿ ಗಳಿಂದ ಅಪಘಾತವಾದಲ್ಲಿ ನಾಗರಿಕರು ಪರಿ ಹಾರ ಕೋರಿ ಪಾಲಿಕೆ ವಿರುದ್ಧ ನ್ಯಾಯಾಲಯ ದಲ್ಲಿ ದಾವೆ ಹೂಡಲು ಅವಕಾಶವಿರುತ್ತದೆ’ ಎಂದು ಆದೇಶದಲ್ಲಿ ನೀಡಿದೆ.
ರಸ್ತೆ ಅಗೆತಕ್ಕೆ ನಿರ್ವಹಣೆ ನೀತಿ ರೂಪಿಸಿ
ನಗರದಲ್ಲಿ ಪಾಲಿಕೆಯಲ್ಲದೆ ಜಲಮಂಡಳಿ, ಕೆಪಿಟಿಸಿಎಲ್ ಸಹಿತ ಇತರ ಸಂಸ್ಥೆಗಳು ರಸ್ತೆ ಅಗೆದು ಹಾಳು ಮಾಡದಂತೆ ಸ್ಪಷ್ಟವಾದ ನೀತಿ ರೂಪಿಸುವಂತೆ ಹೈಕೋರ್ಟ್ ಆದೇಶಿಸಿದೆ. ಕಾಮ ಗಾರಿ ಕೈಗೊಂಡ ಬಳಿಕ ಗುಂಡಿಗಳನ್ನು ಮುಚ್ಚಲು ಮುಂಗಡವಾಗಿ ಹಣವನ್ನು ಪಾವತಿಸಿಕೊಂಡು ಅದರಿಂದ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಅನು ಮತಿ ಇಲ್ಲದ ಅಗೆತಕ್ಕೆ ರಸ್ತೆ ದುರಸ್ತಿಯ ಪೂರ್ಣ ಹಣವನ್ನು ಆಯಾ ಸಂಸ್ಥೆಯಿಂದ ಪಡೆದುಕೊಳ್ಳ ಬಹುದು. ಇದಕ್ಕಾಗಿ ಸ್ಪಷ್ಟ ನೀತಿ ರೂಪಿಸಿ ಸೆಪ್ಟೆಂಬರ್ 10ರೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ನ್ಯಾಯಪೀಠ ಗಡುವು ನೀಡಿದೆ.