ಮೈಸೂರು,ಆ.3(ಆರ್‍ಕೆ)-ರಾತ್ರಿ ವಾಹನ ಚಾಲನೆ ವೇಳೆ ಚಾಲಕರು ನಿದ್ರೆಗೆ ಜಾರದಂತೆ ಎಚ್ಚರಿಸಲು, ಆ ಮೂಲಕ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಬಸ್ಸುಗಳಿಗೆ ವಿದೇಶಿ ತಂತ್ರಜ್ಞಾನದ ಅತ್ಯಾಧುನಿಕ ಉಪಕರಣ ಅಳವಡಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ) ಚಿಂತನೆ ನಡೆಸಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಅಳವಡಿಸುವ ಮೂಲಕ ರಾಜ್ಯಾದ್ಯಂತ ರಾತ್ರಿ ವೇಳೆ ಅತ್ಯಂತ ದೂರದ ಸ್ಥಳಗಳಿಗೆ ಸಂಚರಿಸುವ ಬಸ್‍ಗಳ ಚಾಲಕರು ನಿದ್ರೆಗೆ ಜಾರದಂತೆ ಎಚ್ಚರಿಸಿ ಸಂಭವಿಸ ಬಹುದಾದ ಅಪಘಾತಗಳನ್ನು ತಪ್ಪಿಸಲು ಸಾರಿಗೆ ಸಂಸ್ಥೆಯು ಮುಂದಾಗಿದೆ. ಈ ಕುರಿತು ‘ಮೈಸೂರು…
ಜೆಎಸ್‍ಎಸ್ ಮೆಡಿಕಲ್ ಕಾಲೇಜಲ್ಲಿ ರಾಷ್ಟ್ರಮಟ್ಟದ ಸಮ್ಮೇಳನ
August 4, 2019ಮೈಸೂರು,ಆ.3(ಎಂಟಿವೈ)- ಮೈಸೂ ರಿನ ಬನ್ನಿಮಂಟಪದಲ್ಲಿರುವ ಜೆಎಸ್‍ಎಸ್ ವೈದ್ಯಕೀಯ ವಿದ್ಯಾಲಯದ ರಾಜೇಂದ್ರ ಸಭಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ 12ನೇ ಇಂಡಿಯನ್ ಸೊಸೈಟಿ ಆಫ್ ಪ್ರಾಸ್‍ತೋಡಾಂಟಿಕ್ಸ್ ರೆಸ್ಟೋ ರೇಟಿವ್ ಅಂಡ್ ಪೆರಿಯೋಡಾಂಟಿಕ್ಸ್ ಸಮ್ಮೇಳನದಲ್ಲಿ 450ಕ್ಕೂ ಹೆಚ್ಚು ಮಂದಿ ವೈದ್ಯರು ಪಾಲ್ಗೊಂಡಿದ್ದಾರೆ. ಸಮ್ಮೇಳನವನ್ನು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಉಪಾಧ್ಯಕ್ಷ ಹಾಗೂ ಶಾಸಕ ಡಾ.ವೈ.ಭರತ್ ಶೆಟ್ಟಿ ಉದ್ಘಾಟಿಸಿ ದರು. ಬಳಿಕ ಮಾತನಾಡಿದ ಅವರು, ಕಳೆದ 12 ವರ್ಷದಿಂದ ಇಂಡಿಯನ್ ಸೊಸೈಟಿ ಆಫ್ ಪ್ರಾಸ್‍ತೋಡಾಂಟಿಕ್ಸ್ ರೆಸ್ಟೋರೇಟಿವ್ ಅಂಡ್ ಪೆರಿಯೋಡಾ ಂಟಿಕ್ಸ್ ಸಂಸ್ಥೆ ಉತ್ಸಾಹದಿಂದ…
ಕೆಲಸ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ
August 4, 2019ಮೈಸೂರು,ಆ.3(ಆರ್‍ಕೆ)- ಮನೆ ಯಲ್ಲೇ ಕುಳಿತು ಆನ್‍ಲೈನ್ ಮೂಲಕ ಮಾಡುವ ಉದ್ಯೋಗ ಕೊಡುವುದಾಗಿ ನಂಬಿಸಿ ಸಾವಿರ ಮಂದಿಯಿಂದ ಲಕ್ಷಾಂ ತರ ರೂ. ಹಣ ವಸೂಲಿ ಮಾಡಿ ವಂಚಿ ಸಿರುವ ವ್ಯಕ್ತಿಯನ್ನು ವಿಜಯನಗರ ಠಾಣೆ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ತಮಿಳುನಾಡು ಮೂಲದವನಾದ ಮೈಸೂರಿನ ವಿಜಯನಗರ 3ನೇ ಹಂತದ ನಿವಾಸಿ ಲೇಟ್ ಕಣ್ಣಪ್ಪನ್ ಅವರ ಮಗ ಕಾರ್ತಿಕ್ ಅಲಿಯಾಸ್ ಶರವಣ (29) ಬಂಧಿತ ನಯವಂಚಕ. ಮನೆ ಯಲ್ಲೇ ಕುಳಿತು ಲ್ಯಾಪ್‍ಟಾಪ್ ಮೂಲಕ ಆನ್‍ಲೈನ್‍ನಲ್ಲಿ ಕೆಲಸ ಮಾಡಿ ತಿಂಗಳಿಗೆ 15,000 ರೂ….
ಹಲಸಿನ ಖಾದ್ಯ ಸವಿಯಲು ಮುಗಿಬಿದ್ದ ಮೈಸೂರಿಗರು
August 4, 2019ಮೈಸೂರು,ಆ.3(ಎಂಟಿವೈ)- ಮೈಸೂ ರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ `ಹಲಸಿನ ಹಬ್ಬ’ದಲ್ಲಿ ಹಲಸಿನ ಸುವಾಸನೆ ಪಸರಿಸುತ್ತಿದ್ದು, ವಿವಿಧ ತಳಿಯ ಹಣ್ಣು ಗಳು ಮಾತ್ರವಲ್ಲದೆ, ಹಲಸಿನ ಹಣ್ಣಿನಿಂದ ತಯಾರಿಸಿರುವ ಪಾಯಸ, ಹೋಳಿಗೆ, ಕಬಾಬ್, ಬೋಂಡ, ವಡೆ, ಹಲ್ವ, ಐಸ್‍ಕ್ರೀಂ, ಚಿಪ್ಸ್, ಚಾಕೋಲೆಟ್ ಹಾಗೂ ಇನ್ನಿತರ ತಿನಿಸುಗಳು ಒಂದೇ ಸೂರಿನಡಿ ಲಭ್ಯವಾಗಿ ನಾಲಿಗೆಗೆ ರುಚಿ ನೀಡುತ್ತಿವೆ. ಸಹಜ ಸಮೃದ್ಧ ಸಂಸ್ಥೆ ಹಾಗೂ ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮ ವತಿ ಯಿಂದ ಆಯೋಜಿಸಿರುವ ‘ಹಲಸಿನ ಹಬ್ಬ’ದಲ್ಲಿ…
ಆಸ್ತಿ ತೆರಿಗೆ ಪಾವತಿಗೂ ಆನ್‍ಲೈನ್ ವ್ಯವಸ್ಥೆ: ಪಾಲಿಕೆ ಚಿಂತನೆ
August 4, 2019ಮೈಸೂರು,ಆ.3(ಆರ್‍ಕೆ)- ಕುಡಿ ಯುವ ನೀರಿನ ಬಿಲ್ ಪಾವತಿಗೆ ಪರಿಚ ಯಿಸಿರುವ ಆನ್‍ಲೈನ್ ಪದ್ಧತಿಗೆ ಬಳಕೆ ದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗು ತ್ತಿರುವ ಹಿನ್ನೆಲೆಯಲ್ಲಿ, ಆಸ್ತಿ ತೆರಿಗೆ ಪಾವತಿಗೂ ಆನ್‍ಲೈನ್ ಪಾವತಿ ಸೇವೆ ವಿಸ್ತರಿಸಲು ಮೈಸೂರು ಮಹಾನಗರಪಾಲಿಕೆ ಚಿಂತನೆ ನಡೆಸಿದೆ. ನೀರಿನ ಬಿಲ್ ಪಾವತಿಗೆ ವಾಣಿವಿಲಾಸ ವಾಟರ್ ವಕ್ರ್ಸ್, ನಗರ ಪಾಲಿಕೆ, ವಲಯ ಕಚೇರಿಗೆ ಸಾರ್ವಜನಿಕರು ಅಲೆ ದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಕಲ್ಪಿಸಲಾಗಿರುವ ಆನ್‍ಲೈನ್ ವ್ಯವಸ್ಥೆಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದೆ. ಬಳಕೆದಾರರು ತಾವಿರುವಲ್ಲೇ ಮೊಬೈಲ್, ಕಂಪ್ಯೂಟರ್…
ದೇವರಾಜ ಮಾರುಕಟ್ಟೆ ಭವಿಷ್ಯ ನಿರ್ಧರಿಸಲುಪಾರಂಪರಿಕ ತಜ್ಞರ ಉಪ ಸಮಿತಿ ರಚನೆ
August 4, 2019ಮೈಸೂರು,ಆ.3(ಆರ್‍ಕೆ)-ಮೈಸೂರಿನ ಅತೀ ಹಳೆಯದಾದ ದೇವರಾಜ ಮಾರು ಕಟ್ಟೆ ಪಾರಂಪರಿಕ ಕಟ್ಟಡವನ್ನು ಕೆಡವಿ ಹೊಸದಾಗಿ ನಿರ್ಮಿಸುವುದೋ ಇಲ್ಲವೇ ದುರಸ್ತಿ ಮೂಲಕ ಸಂರಕ್ಷಣೆ ಮಾಡು ವುದೋ ಎಂಬುದರ ಬಗ್ಗೆ ಅಧ್ಯಯನ ನಡೆಸಿ, ವರದಿ ನೀಡಲು ಜಿಲ್ಲಾಡಳಿತವು ಪಾರಂಪರಿಕ ತಜ್ಞರ ಉಪಸಮಿತಿಯನ್ನು ರಚಿಸಿದೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಪಾರಂಪರಿಕ ಸಮಿತಿ ವಿಶೇಷ ಸಭೆಯಲ್ಲಿ ಈ ಸಂಬಂಧ ಪ್ರತ್ಯೇಕ ಉಪ ಸಮಿತಿ ರಚಿಸಲಾಗಿದ್ದು, ತಜ್ಞರು ಸ್ಥಳ ಪರಿಶೀಲಿಸಿ 15 ದಿನದೊಳಗಾಗಿ ತಮ್ಮ ಸ್ಪಷ್ಟ ಅಭಿ ಪ್ರಾಯದೊಂದಿಗೆ ವರದಿ…
ಅಭಿವೃದ್ಧಿ ಕೈಗೊಂಡ ಕಾಂಗ್ರೆಸ್‍ಗೆ ಸೋಲು: ಆರ್.ಧ್ರುವನಾರಾಯಣ್ ತೀವ್ರ ವಿಷಾದ
August 4, 2019ಮೈಸೂರು,ಆ.3(ಪಿಎಂ)- ಚಾಮರಾಜನಗರ ಮಾತ್ರವಲ್ಲ, ಇಡೀ ದೇಶದಲ್ಲಿ ಬಿಜೆಪಿ ಜಾತಿ-ಧರ್ಮದ ಆಧಾರದಲ್ಲಿ ಪ್ರಚೋದನೆ ಮೂಲಕ ಕಳೆದ ಲೋಕಸಭಾ ಚುನಾವಣೆ ಎದುರಿಸಿ ಯಶಸ್ಸು ಗಳಿಸಿತು. ಅಭಿವೃದ್ಧಿ ಮಾನದಂಡದಲ್ಲಿ ಚುನಾವಣೆ ಎದುರಿಸಿದ ಕಾಂಗ್ರೆಸ್ ಪಕ್ಷಕ್ಕೆ ಮುಂದೆ ಜನತೆ ಮನ್ನಣೆ ನೀಡಲಿದ್ದಾರೆ ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರಿನ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ವರುಣಾ ಮತ್ತು ತಗಡೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಸಭಾ ಚುನಾ ವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸಿದ ವರುಣಾ ವಿಧಾನಸಭಾ ಕ್ಷೇತ್ರದ…
ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ
August 4, 2019ಮೈಸೂರು, ಆ.3(ಪಿಎಂ)- ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಹಾಗೂ ಕೋಮು ದ್ವೇಷ ವ್ಯಾಪಕವಾಗುತ್ತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಮೈಸೂರು ಜಿಲ್ಲಾ ಶಾಖೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಪುರಭವನದ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಆರ್‍ಎಸ್‍ಎಸ್ ಬೆಂಬಲಿತ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಕೋಮುದ್ವೇಷ ವ್ಯಾಪಕವಾಗಿದ್ದು, ದಲಿತರ ಮೇಲಿನ ದೌರ್ಜನ್ಯ ಎಗ್ಗಿಲ್ಲದೆ ಸಾಗಿದೆ ಎಂದು ಆರೋಪಿಸಿದರು. ಉತ್ತರ ಪ್ರದೇಶದ ಬಿಜೆಪಿ…
ಟಿಪ್ಪು ಜಯಂತಿ ರದ್ದು ಆದೇಶ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ
August 4, 2019ಮೈಸೂರು, ಆ.3(ಪಿಎಂ)- ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ರದ್ದುಗೊಳಿ ಸಿದ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಟಿಪ್ಪು ಜಯಂತಿ ಆಚರಣಾ ವೇದಿಕೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಟಿಪ್ಪು ಸುಲ್ತಾನ್ ಒಬ್ಬ ಜನಪರ, ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ರಾಜ. ಆತನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವವರೇ ಸಣ್ಣವರಾಗುತ್ತಾರೆಯೇ ಹೊರತು ಟಿಪ್ಪು ಸಣ್ಣವನಾಗಲ್ಲ. ಅವನಿಗೆ ರೈತರ ಬಗ್ಗೆ ಅಪಾರವಾದ ಕಾಳಜಿ ಇತ್ತು. ಹಿಪ್ಪುನೇರಳೆ ಬೆಳೆಯನ್ನು ತಂದು ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದ…
ನಾಳೆಯಿಂದ ಕಲಾಮಂದಿರದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮ
August 4, 2019ಮೈಸೂರು,ಆ.3(ಎಂಟಿವೈ)-ಸಮಾಜದಲ್ಲಿ ಸಾಮ ರಸ್ಯ ಮೂಡಿಸುವ ನಿಟ್ಟಿನಲ್ಲಿ ಸಹಮತ ವೇದಿಕೆ ವತಿ ಯಿಂದ ಕಲಾಮಂದಿರದಲ್ಲಿ ಆ.5, 6ರಂದು `ಮತ್ತೆ ಕಲ್ಯಾಣ’ ಕಾರ್ಯಕ್ರಮ ಜರುಗಲಿದೆ ಎಂದು ಕಾರ್ಯಾಗಾರ ಸಮಿತಿ ಸದಸ್ಯ ಹೆಚ್.ಜನಾರ್ದನ್(ಜನ್ನಿ) ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಇರುವ ಜಾತಿ ಪದ್ಧತಿ ಯಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗಿ ಶೋಷಣೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಹಮತ ವೇದಿಕೆ 12ನೇ ಶತಮಾನದಲ್ಲಿ ಕ್ರಾಂತಿಕಾರಿ ಬಸವಣ್ಣನವರು ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ದೌರ್ಜನ್ಯಕ್ಕೆ ತಿಲಾಂಜಲಿ ಹಾಡಿ ಒಂದೇ ಧರ್ಮದ ಅಡಿಯಲ್ಲಿ…










