ಮೈಸೂರು,ಆ.3(ಆರ್‍ಕೆ)-ರಾತ್ರಿ ವಾಹನ ಚಾಲನೆ ವೇಳೆ ಚಾಲಕರು ನಿದ್ರೆಗೆ ಜಾರದಂತೆ ಎಚ್ಚರಿಸಲು, ಆ ಮೂಲಕ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಬಸ್ಸುಗಳಿಗೆ ವಿದೇಶಿ ತಂತ್ರಜ್ಞಾನದ ಅತ್ಯಾಧುನಿಕ ಉಪಕರಣ ಅಳವಡಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ) ಚಿಂತನೆ ನಡೆಸಿದೆ.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಅಳವಡಿಸುವ ಮೂಲಕ ರಾಜ್ಯಾದ್ಯಂತ ರಾತ್ರಿ ವೇಳೆ ಅತ್ಯಂತ ದೂರದ ಸ್ಥಳಗಳಿಗೆ ಸಂಚರಿಸುವ ಬಸ್‍ಗಳ ಚಾಲಕರು ನಿದ್ರೆಗೆ ಜಾರದಂತೆ ಎಚ್ಚರಿಸಿ ಸಂಭವಿಸ ಬಹುದಾದ ಅಪಘಾತಗಳನ್ನು ತಪ್ಪಿಸಲು ಸಾರಿಗೆ ಸಂಸ್ಥೆಯು ಮುಂದಾಗಿದೆ.
ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ದೂರವಾಣಿಯಲ್ಲಿ ಮಾತ ನಾಡಿದ ಕೆಎಸ್‍ಆರ್‍ಟಿಸಿ ಕೇಂದ್ರ ಕಚೇರಿಯ (ಬೆಂಗಳೂರು) ಅಸಿಸ್ಟೆಂಟ್ ಟ್ರಾಫಿಕ್ ಮ್ಯಾನೇಜರ್ ರೆಡ್ಡಿ, ಈ ವಿಷಯ ಇನ್ನೂ ಚರ್ಚೆ ಹಂತದಲ್ಲಿದೆ. ‘ಮೊಬೈಲ್ ಐ’ ಮತ್ತು ‘6ಣh ಸೆನ್ಸರ್’ ಎಂಬ ಖಾಸಗಿ ಕಂಪನಿಗಳು ನಮ್ಮಲ್ಲಿಗೆ ಬಂದು ಂI ಉಪಕರಣದ ಕಾರ್ಯನಿರ್ವಹಣೆ, ಅನುಕೂಲಗಳ ಬಗ್ಗೆ ಪವರ್ ಪಾಯಿಂಟ್ ಪ್ರಸೆಂಟೇ ಷನ್ ನೀಡಿದ್ದಾರೆ. ಅದು ವಿದೇಶಿ ತಂತ್ರಜ್ಞಾನ ಆಧರಿ ಸಿದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಉಪಕರಣ ವಾಗಿದ್ದು, ಬಸ್ಸಿನ ಮುಂಭಾಗದ ಬಂಪರ್ ಬಳಿ ಅಳವಡಿಸಿದಲ್ಲಿ ಮುಂದೆ ಬರುವ ವಾಹನ ಅಥವಾ ಯಾವುದೇ ತಡೆ 50 ಮೀಟರ್ ಅಂತರದಲ್ಲಿರುವಾಗಲೇ ಅಲಾರಂ ಮೊಳಗಿಸಿ ಚಾಲಕನನ್ನು ಎಚ್ಚರಿಸಲಿದೆ.
ಒಂದು ವೇಳೆ ಬಸ್ ಚಾಲಕ ನಿದ್ರೆಗೆ ಜಾರಿದರೆ, ಮೈಮುರಿದು ಆಕಳಿಸಿದರೂ ಸಹ ಈ ಅತ್ಯಾಧುನಿಕ ಸಾಧನ ಶಬ್ದ ಮಾಡಲಾರಂಭಿಸುತ್ತದೆ. ಕೂಡಲೇ ಚಾಲಕ ಎಚ್ಚೆತ್ತು ಸಂಭವಿಸಬಹುದಾದ ಅಪಘಾತ-ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದು ಕಂಪನಿಗಳ ಪ್ರತಿನಿಧಿಗಳು ತಿಳಿಸಿದ್ದಾರೆ ಎಂದು ವಿವರಿಸಿದರು. ಮುಂಬೈ ಮೂಲದ ‘ಮೊಬೈಲ್ ಐ’ ಮತ್ತು ‘6ಣh ಸೆನ್ಸರ್’ ಟೆಕ್ನಾಲಜೀಸ್ ಸಂಸ್ಥೆಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಿಸ್ಟಂ ಅನ್ನು ಅಳವಡಿಸುತ್ತೇವೆ ಎಂದು ಮುಂದೆ ಬಂದಿರು ವುದರಿಂದ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಪ್ರಾಯೋಗಿಕವಾಗಿ ಕೆಲ ಬಸ್ಸುಗಳಿಗೆ ಈ ಉಪಕರಣಗಳನ್ನು ಅಳವಡಿಸಿ ಅವು ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ಪರಿಶೀಲಿಸಿದ ನಂತರ ಅನುಕೂಲಕರ ಎಂಬುದು ಖಚಿತವಾದರೆ ಮಾತ್ರ ಸಂಸ್ಥೆಯು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು. ವಿದೇಶದಿಂದ ಂI ತಂತ್ರಜ್ಞಾನವನ್ನು ಆಮದು ಮಾಡಿಕೊಂಡು ಈ ಉಪಕರಣವನ್ನು ಸಿದ್ಧಪಡಿಸಲಾಗಿದ್ದು, ಬಸ್ಸಿನ ಮುಂಭಾಗದ ಹೆಡ್‍ಲೈಟ್ ಬಂಪರ್‍ನಲ್ಲಿ ಹಾಗೂ ಡ್ರೈವರ್ ಸೀಟ್ ಬಳಿ ಅಳವಡಿಸಬಹುದು.
ಬೆಂಗಳೂರಿನಿಂದ ಮಂಗಳೂರು, ಹುಬ್ಬಳ್ಳಿ, ಬೀದರ್, ಕಲಬುರಗಿ, ರಾಯಚೂರು ಮುಂತಾದ ದೂರದ ನಗರಗಳು ಹಾಗೂ ಬೇರೆ ರಾಜ್ಯಗಳಿಗೆ ರಾತ್ರಿ ವೇಳೆ ಸಂಚರಿಸುವ ಬಸ್ಸುಗಳಿಗೆ ಈ ತಂತ್ರಜ್ಞಾನ ಅಳವಡಿಸಬಹುದಾಗಿದೆ.
ದೇಶದಲ್ಲಿ ಉತ್ತರ ಪ್ರದೇಶ ಸಾರಿಗೆ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಮಾತ್ರ ಈ ಹೊಸ ತಂತ್ರಜ್ಞಾನದ ಂI ಪದ್ಧತಿಯನ್ನು ತಮ್ಮ ರಾತ್ರಿ ಸೇವೆ ನಿರತ ಬಸ್ಸುಗಳಿಗೆ ಅಳವಡಿಸಲು ಚಿಂತನೆ ನಡೆಸಿವೆ ಎಂದು ಸಾರಿಗೆ ಸಂಸ್ಥೆ ಮೂಲಗಳು ತಿಳಿಸಿವೆ.