ಮೈಸೂರು,ಆ.4(ಆರ್‍ಕೆಬಿ)-ಲಂಡನ್‍ನಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಫೆಲೊಷಿಪ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಟಿ.ಪಿ.ಕೈಲಾಸಂ ಅವರದ್ದು ಎಂದು ರಂಗ ಚಿಂತಕ, ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಹೆಚ್.ಎ. ಪಾಶ್ರ್ವ ನಾಥ್ ನೆನಪಿಸಿಕೊಂಡರು. ವಿಜಯನಗರದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಹೇಮಗಂಗಾ ಕಾವ್ಯ ಬಳಗದ ಆಶ್ರಯ ದಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡದ ಪ್ರಹಸನ ಪಿತಾಮಹ `ಟಿ.ಪಿ.ಕೈಲಾಸಂ ಬದುಕು-ಬರಹ’ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಟಿ.ಪಿ.ಕೈಲಾಸಂ ಮೂಲ ತಮಿಳುನಾಡು. ಶೇಷಾದ್ರಿ ಅಯ್ಯರ್ ಕಾಲದಲ್ಲಿ ಕೈಲಾಸಂ…
ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಉದ್ಯಾನವನ ಸ್ವಚ್ಛತೆ
August 5, 2019ಮೈಸೂರು,ಆ.4(ಎಂಕೆ)-ಮೈಸೂರಿನ ಗನ್‍ಹೌಸ್ ವೃತ್ತದ ಸಮೀಪದಲ್ಲಿರುವ ಕುವೆಂಪು ಉದ್ಯಾನವನವನ್ನು ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಸ್ವಚ್ಛಗೊಳಿಸಲಾಯಿತು. ನಮ್ಮ ಮೈಸೂರು ಫೌಂಡೇಷನ್ ಹಾಗು ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವತಿಯಿಂದ ಆಯೋಜಿಸಿದ್ದ ಸ್ವಚ್ಛತಾ ಆಂದೋಲನದಲ್ಲಿ ಉದ್ಯಾನವನ ಹಾಗೂ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ವಿವಿಧ ಬಗೆಯ ಗಿಡಗಳನ್ನು ನೆಡಲಾಯಿತು. ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ನಮ್ಮ ಮೈಸೂರು ಫೌಂಡೇಶನ್‍ನ ದಶರಥ್, ಮಲ್ಲೇಶ್, ಕಲ್ಯಾಣ್, ಪ್ರೊ.ರಂಗರಾಜು, ರಮೇಶ್, ಶ್ರೀರಾಜ್, ಅನುರಾಧ, ನಿಹಾರಿಕ, ರಾಮದಾಸ್ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು. ನಂತರ ಶಾಸಕ ಎಸ್.ಎ.ರಾಮದಾಸ್…
ಡಾಕ್ಟರ್ಸ್ ಪೆಯಿಂಟ್ ಬ್ರಷ್: ಮೈಸೂರಲ್ಲಿ ಶಿಶು ವೈದ್ಯೆಯ ಬಿಡುವಿನ ವೇಳೆಯ ಕಲಾ ಪ್ರೌಢಿಮೆಯ ಪ್ರದರ್ಶನ
August 5, 2019ಮೈಸೂರು,ಆ.4(ಆರ್‍ಕೆಬಿ)-ಶಿಶು ವೈದ್ಯೆ ಡಾ.ಶೈಲಜಾ ಪ್ರಶಾಂತ್ ವಿವಿಧ ಕಲಾ ಪ್ರಕಾರಗಳಲ್ಲಿ ರಚಿಸಿರುವ ಚಿತ್ರಕಲೆ ಗಳ `ಡಾಕ್ಟರ್ಸ್ ಪೆಯಿಂಟ್ ಬ್ರಷ್’ ಪ್ರದ ರ್ಶನ ಭಾನುವಾರ ಮೈಸೂರಿನ ಕಲಾ ಮಂದಿರ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ನೋಡುಗರ ಕಣ್ಮನ ಸೆಳೆಯಿತು. ಅವರ ಮೊದಲ ಚಿತ್ರಕಲಾ ಪ್ರದರ್ಶನಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಚಿತ್ರಕಲಾ ಪ್ರದರ್ಶನದಲ್ಲಿ ಮೈಸೂರು ಮತ್ತು ಕೇರಳದ ಸಾಂಪ್ರದಾಯಿಕ ಶೈಲಿಯ ದೇವತೆಗಳು ಮತ್ತು ಪುರಾಣ ಹೇಳುವ ಚಿತ್ರಗಳು ಕೇಂದ್ರ ಬಿಂದುವಾಗಿತ್ತು. ಗಣ ಪತಿ, ಸುಬ್ರಹ್ಮಣ್ಯ, ಶಿವ, ಪಾರ್ವತಿ, ಸರಸ್ವತಿ, ಲಕ್ಷ್ಮೀ, ಸತ್ಯನಾರಾಯಣ,…
ಮೈಸೂರಲ್ಲಿ ‘ಹಲಸಿನ ಹಬ್ಬ’ಕ್ಕೆ ತೆರೆ
August 5, 2019ಮೈಸೂರು,ಆ.4(ಎಂಕೆ)- ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಸಂಸ್ಥೆ ಹಾಗೂ ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮ ವತಿಯಿಂದ ನಡೆದ ಎರಡು ದಿನದ ‘ಹಲಸಿನ ಹಬ್ಬ’ಕ್ಕೆ ಭಾನುವಾರ ತೆರೆ ಬಿದ್ದಿತು. ‘ಬಡವರ ಹಣ್ಣು’ ಎಂದೇ ಕರೆಯಲ್ಪ ಡುವ ಹಲಸಿನ ಹಣ್ಣಿನ ಮೇಳಕ್ಕೆ ಮುಗಿ ಬಿದ್ದ ಜನರು, ವಿವಿಧ ತಳಿಯ ಹಲಸಿನ ಹಣ್ಣುಗಳನ್ನು ಸವಿಯುವುದರ ಜತೆಗೆ ಹಲಸಿನ ಹಣ್ಣಿನಿಂದ ಮಾಡಿದ ಕಬಾಬ್, ಬೋಂಡಾ, ಹಲ್ವ, ಐಸ್‍ಕ್ರಿಂ, ಚಿಪ್ಸ್, ಚಾಕೋಲೆಟ್‍ಗಳನ್ನು ಚಪ್ಪರಿಸಿದರು. 13ಕ್ಕೂ ಹೆಚ್ಚು ಮಳಿಗೆಗಳಲ್ಲಿ ಬಗೆ ಬಗೆಯ…
ಅಂಚೆ ಇಲಾಖೆ ಸರ್ಕಾರಿ ಸ್ವಾಮ್ಯದಲ್ಲಿ ಉಳಿಯುವುದು ಅನುಮಾನ
August 5, 2019ಮೈಸೂರು,ಆ.4(ಪಿಎಂ)-ಕಾರ್ಮಿಕ ವರ್ಗದ ಬೆನ್ನು ಮೂಳೆ ಮುರಿದು ಬಂಡ ವಾಳಶಾಹಿಗಳಿಗೆ ಅನುಕೂಲ ಮಾಡಿ ಕೊಡುವಂತಹ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದ್ದು, ಅಂಚೆ ಇಲಾಖೆ ಸರ್ಕಾರಿ ಸ್ವಾಮ್ಯದಲ್ಲಿ ಉಳಿಯು ವುದು ಅನುಮಾನ ಎಂದು ಎಐಪಿಯು ಪೋಸ್ಟ್‍ಮನ್ ಮತ್ತು ಎಂಟಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಸೀತಾಲಕ್ಷ್ಮಿ ಹೇಳಿದರು. ಮೈಸೂರಿನ ಸರಸ್ವತಿಪುರಂನ ಪ್ರಾದೇ ಶಿಕ ದೂರಸಂಪರ್ಕ ತರಬೇತಿ ಕೇಂದ್ರದ (ಆರ್‍ಟಿಟಿಸಿ) ಸಭಾಂಗಣದಲ್ಲಿ ಭಾನು ವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಅಂಚೆ ನೌಕರರ ಗ್ರೂಪ್ ಸಿ, ಪೋಸ್ಟ್ ಮನ್ ಮತ್ತು ಎಂಟಿಎಸ್ ಹಾಗೂ ಗ್ರಾಮೀಣ…
ಮಾತಾ-ಪಿತರ ಸೇವೆಯೇ ಮಾನವನ ಬಾಳಿನ ಸುಯೋಗ: ಪೇಜಾವರ ಶ್ರೀಗಳ ಅಭಿಮತ
August 5, 2019ಮೈಸೂರು,ಆ.4(ಎಸ್‍ಪಿಎನ್)-ಗುರು -ಹಿರಿಯರು, ವೃದ್ಧ ತಂದೆ-ತಾಯಿ, ಪವಿತ್ರ ಗೋವು ಹಾಗೂ ಪ್ರಕೃತಿಯ ಮೇಲೆ ಯುವ ಪೀಳಿಗೆ ಗೌರವ ಭಾವನೆ ಉಳಿಸಿಕೊಳ್ಳಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಮೈಸೂರು ಟಿ.ಕೆ.ಬಡಾವಣೆಯ ಶ್ರೀ ಕೃಷ್ಣಧಾಮದಲ್ಲಿ 32ನೇ ಚಾತುರ್ಮಾಸ್ಯ 10ನೇ ದಿನ ಕಾರ್ಯಕ್ರಮದಲ್ಲಿ ಭಾಗ ವಹಿಸಿ, ಮಾತನಾಡಿದ ಶ್ರೀಗಳು, ಗುರು-ಹಿರಿಯರು, ವೃದ್ಧ ತಂದೆ-ತಾಯಿ, ಪವಿತ್ರ ಗೋವು ಹಾಗೂ ಪರಿಸರ ಕಾಳಜಿವುಳ್ಳ ಮೂರು ಕಥೆಗಳ ಮೂಲಕ ಸಭಿಕರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಿದರು. ಮಕ್ಕಳನ್ನೇ ಸರ್ವಸ್ವ ಎಂದು ನಂಬುವ ತಂದೆ-ತಾಯಿಯನ್ನು…
ನಾಮದೇವ ಭವನ ಉದ್ಘಾಟನೆ
August 5, 2019ಮೈಸೂರು, ಆ.4(ಎಂಕೆ)- ಮೈಸೂರಿನ ವಿವೇಕಾನಂದ ನಗರದಲ್ಲಿ ಶಾಸಕ ಮತ್ತು ಸಂಸದರ ಅನುದಾನದೊಂದಿಗೆ ಶ್ರೀ ನಾಮದೇವ ಸಿಂಪಿ ಸಮಾಜದ ವತಿಯಿಂದ ನಿರ್ಮಿಸಿರುವ ನಾಮದೇವ ಭವನವನ್ನು ಶಾಸಕ ಎಸ್.ಎ.ರಾಮದಾಸ್ ಉದ್ಘಾಟಿಸಿದರು. ಇದೇ ವೇಳೆ ನಾಮದೇವ ಸಿಂಪಿ ಸಮಾಜದ ಹಿರಿಯ ಮುಖಂಡರನ್ನು ಅಭಿನಂದಿಸಲಾಯಿತು. ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್, ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಎನ್.ಕೆ.ಚಂದ್ರಪ್ಪ ನಗರಪಾಲಿಕೆ ಸದಸ್ಯರಾದ ಸುನಂದ ಪಾಲನೇತ್ರ, ಬಿ.ವಿ.ಮಂಜುನಾಥ್, ಗೀತಾಶ್ರೀ, ಸಂಘಟನಾ ಕಾರ್ಯದರ್ಶಿ ಸುರೇಶ್ ಬಾಬು, ದೀನೇಶ್, ಸೇಫ್ ವೀಲ್ಸ್‍ನ ಪ್ರಶಾಂತ್, ಮೈಪು ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
ಆ.10ಕ್ಕೆ ಸಂಪುಟ ವಿಸ್ತರಣೆ ಸಾಧ್ಯತೆ
August 4, 2019ಬೆಂಗಳೂರು, ಆ.3-ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ಪೀಕರಿಸಿ, ನಂತರ ವಿಶ್ವಾಸಮತ ಪಡೆದು 10 ದಿನ ಕಳೆದರೂ ಸಚಿವ ಸಂಪುಟ ರಚನೆಯಾಗಿಲ್ಲ, ಏಕವ್ಯಕ್ತಿ ಸರ್ಕಾರ, ಸರ್ವಾಧಿಕಾರಿ ಸರ್ಕಾರವೆಂಬ ಆರೋಪಕ್ಕೆ ಗುರಿಯಾಗಿದ್ದು, ನಡುವೆ ಆಗಸ್ಟ್ 10 ರಂದು ಸಚಿವ ಸಂಪುಟ ರಚನೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಆಗಸ್ಟ್ 5ರಂದು ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಪಕ್ಷದ ವರಿಷ್ಠರನ್ನು ಭೇಟಿ ಮಾಡಿ, ಚರ್ಚೆ ನಡೆಸಿ ಸಂಪುಟಕ್ಕೆ ಸೇರು ವವರ ಪಟ್ಟಿಗೆ ಅನುಮತಿ ಪಡೆದುಕೊಳ್ಳಲಿದ್ದಾರೆ. ಅಲ್ಲದೆ ಆಗಸ್ಟ್ 6ರಂದು ಪ್ರಧಾನಿ ನರೇಂದ್ರ ಮೋದಿ…
ಉತ್ತರ ಕರ್ನಾಟಕದ 4 ಜಿಲ್ಲೆಗಳಲ್ಲಿ ಭೀಕರ ಪ್ರವಾಹ: ಜನಜೀವನ ಅಸ್ತವ್ಯಸ್ತ
August 4, 2019ಬೆಳಗಾವಿ/ರಾಯಚೂರು, ಆ.3- ಮಹಾರಾಷ್ಟ್ರದಲ್ಲಿ ಭಾರಿ ಮಳೆಯ ಕಾರಣ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲ ಕೋಟೆ, ಬಿಜಾಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಎದುರಾಗಿದ್ದು, ಮಾಲ್ವಾಡ ಗ್ರಾಮದ 13 ಕುಟುಂಬ ಗಳನ್ನು ರಕ್ಷಿಸಲಾಗಿದೆ. ಕಳೆದ 3 ದಿನಗಳಲ್ಲಿ 40 ಹಳ್ಳಿ ಗಳು ಜಲಾವೃತವಾಗಿದ್ದು, ಸರ್ಕಾರದ ವತಿ ಯಿಂದ ರಕ್ಷಣಾ ಕಾರ್ಯ ಸಮರೋಪಾದಿ ಯಲ್ಲಿ ಸಾಗಿದೆ. ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ರಾಯ ಚೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾ ಣವಾಗಿದ್ದು, ಇಲ್ಲಿನ ಜಮೀನುಗಳು ಜಲಾ ವೃತವಾಗಿವೆ. ಸೇತುವೆಗಳು ಮುಳುಗಡೆ…
ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ನನ್ನ ಕುಟುಂಬದ ಯಾರೂ ಸ್ಪರ್ಧಿಸಲ್ಲ
August 4, 2019ಕೆ.ಆರ್.ಪೇಟೆ, ಆ. 3(ಶ್ರೀನಿವಾಸ್,ನಾಗಯ್ಯ)- ಕೆ.ಆರ್. ಪೇಟೆ ವಿಧಾನಸಭೆ ಉಪ ಚುನಾವಣೆ ಯಲ್ಲಿ ನಮ್ಮ ಕುಟುಂಬದವರು ಯಾರೂ ಸ್ಪರ್ಧಿ ಸುವುದಿಲ್ಲ ಎಂದು ಘೋಷಿಸಿದ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಅಭ್ಯರ್ಥಿ ವಿಚಾರದಲ್ಲಿ ಸ್ಥಳೀಯವಾಗಿ ಕಾರ್ಯಕರ್ತರು ಕೈಗೊಳ್ಳುವ ನಿರ್ಧಾರವೇ ಅಂತಿಮ ಎಂದರು. ಇಲ್ಲಿನ ಯಶಸ್ವಿನಿ ಕಲ್ಯಾಣ ಮಂಟಪದಲ್ಲಿ ಶನಿ ವಾರ ಸಂಜೆ ನಡೆದ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಭ್ಯರ್ಥಿ ಆಯ್ಕೆಗಾಗಿ ಇಂದಿನ ಸಭೆ ಕರೆದಿಲ್ಲ. ಕಾರ್ಯಕರ್ತರ ಮನದಾಳವನ್ನು ತಿಳಿಯಲು ಸಭೆ ಕರೆದಿದ್ದೇನೆ….










