ನಾಳೆಯಿಂದ ಕಲಾಮಂದಿರದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮ
ಮೈಸೂರು

ನಾಳೆಯಿಂದ ಕಲಾಮಂದಿರದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮ

August 4, 2019

ಮೈಸೂರು,ಆ.3(ಎಂಟಿವೈ)-ಸಮಾಜದಲ್ಲಿ ಸಾಮ ರಸ್ಯ ಮೂಡಿಸುವ ನಿಟ್ಟಿನಲ್ಲಿ ಸಹಮತ ವೇದಿಕೆ ವತಿ ಯಿಂದ ಕಲಾಮಂದಿರದಲ್ಲಿ ಆ.5, 6ರಂದು `ಮತ್ತೆ ಕಲ್ಯಾಣ’ ಕಾರ್ಯಕ್ರಮ ಜರುಗಲಿದೆ ಎಂದು ಕಾರ್ಯಾಗಾರ ಸಮಿತಿ ಸದಸ್ಯ ಹೆಚ್.ಜನಾರ್ದನ್(ಜನ್ನಿ) ತಿಳಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಇರುವ ಜಾತಿ ಪದ್ಧತಿ ಯಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗಿ ಶೋಷಣೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಹಮತ ವೇದಿಕೆ 12ನೇ ಶತಮಾನದಲ್ಲಿ ಕ್ರಾಂತಿಕಾರಿ ಬಸವಣ್ಣನವರು ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ದೌರ್ಜನ್ಯಕ್ಕೆ ತಿಲಾಂಜಲಿ ಹಾಡಿ ಒಂದೇ ಧರ್ಮದ ಅಡಿಯಲ್ಲಿ ತರುವ ನಿಟ್ಟಿನಲ್ಲಿ ನೀಡಿದ ಸಂದೇಶದ ಅನುಸಾರ ರಾಜ್ಯದಾದ್ಯಂತ `ಮತ್ತೆ ಕಲ್ಯಾಣ’ ಕಾರ್ಯಕ್ರಮ ಆಯೋಜಿಸುವ ಮೂಲಕ ಜಾಗೃತಿ ಮೂಡಿ ಸಲಾಗುತ್ತಿದೆ ಎಂದರು. ಆ.5ರ ಬೆಳಿಗ್ಗೆ 10.30ಕ್ಕೆ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಎಲ್.ಶಿವಲಿಂಗಪ್ಪ ರಚಿಸಿರುವ `ಮತ್ತೆ ಕಲ್ಯಾಣಕ್ಕೆ ಬಾ ಬಸವಣ್ಣ’ ಚಿತ್ರವನ್ನು ಸಾಹಿತಿ ಪೆÇ್ರ.ಅರವಿಂದ ಮಾಲಗತ್ತಿ ಬಿಡುಗಡೆ ಮಾಡಲಿದ್ದಾರೆ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬಳಿಕ ಬೆಳಿಗ್ಗೆ 11ಕ್ಕೆ ಕಿರುರಂಗ ಮಂದಿರ ದಲ್ಲಿ ವಚನ ಗಾಯನ, ಚಿತ್ರ ರಚನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ವಚನ ಭಾರತ- ದೀಪ್ತಿ ಚಿತ್ರರಚನೆ, ಪ್ರದರ್ಶನವಿದೆ. ಸಂಜೆ 6.30ಕ್ಕೆ ವಚನ ಗಾಯನ, ಪಯಣ ಕಾರ್ಯಕ್ರಮವಿದೆ ಎಂದರು.

ಆ.6ರ ಬೆಳಿಗ್ಗೆ 10 ಗಂಟೆಗೆ ನಡೆವ ಮುಕ್ತ ಸಂವಾದ ದಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಡಾ. ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂವಾದ ನಡೆಸು ವರು. ಪೆÇ್ರ. ಮೊರಬದ ಮಲ್ಲಿಕಾರ್ಜುನ, ಹೆಚ್. ಜನಾ ರ್ದನ್ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಗನ್‍ಹೌಸ್ ಬಳಿ ಇರುವ ಬಸವ ಪ್ರತಿಮೆಯಿಂದ ಸಾಮ ರಸ್ಯ ನಡಿಗೆ ಆರಂಭವಾಗಲಿದೆ. ಮಹಾತ್ಮ ಗಾಂಧಿ ವೃತ್ತ ತಲುಪಿ, ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿ ಮುಕ್ತಾಯವಾಗಲಿದೆ. ಕಲಾಮಂದಿರದಲ್ಲಿ ಅಂದು ಸಂಜೆ 6 ಗಂಟೆಗೆ ಸಾರ್ವಜನಿಕ ಸಮಾವೇಶದಲ್ಲಿ ಸಾಹಿತಿ ಪೆÇ್ರ.ಜಿ.ಕೆ.ಗೋವಿಂದರಾವ್ ಅಧ್ಯಕ್ಷತೆ ವಹಿಸಲಿ ದ್ದಾರೆ. ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಡಾ.ರಂಜಾನ್ ದರ್ಗಾ, ಡಾ.ಬಿ.ಟಿ.ಲಲಿತಾ ನಾಯಕ್ ಉಪನ್ಯಾಸ ನೀಡಲಿದ್ದಾರೆ. ಸಂಜೆ 7 ಗಂಟೆಗೆ `ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನವಿದೆ. ರಾತ್ರಿ 8.30ಕ್ಕೆ ಸಾಮರಸ್ಯ ಭೋಜನವಿದೆ ಎಂದರು. ಗೋಷ್ಠಿ ಯಲ್ಲಿ ಮಹಾದೇವಪ್ಪ, ಗೋಪಾಲಕೃಷ್ಣ, ಡಾ.ವೈ.ಡಿ. ರಾಜಣ್ಣ, ಕೆ.ಎಸ್.ಶಿವರಾಮು, ಜವರಪ್ಪ ಇದ್ದರು.

Translate »