ಮೈಸೂರು,ಆ.1(ವೈಡಿಎಸ್)-ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಚಿಕ್ಕಮಗಳೂರು ರೈಲು ನಿಲ್ದಾಣವು ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ ರೈಲು ನಿಲ್ದಾಣ ಪ್ರಶಸ್ತಿಗೆ ಭಾಜನ ವಾಯಿತು. ಯಾದವಗಿರಿಯ ಚಾಮುಂಡಿ ರೈಲ್ವೆ ಕ್ಲಬ್‍ನಲ್ಲಿ ನೈರುತ್ಯ ರೈಲ್ವೆ ಮೈಸೂರು ವಿಭಾಗದ ವತಿಯಿಂದ ಆಯೋಜಿಸಿದ್ದ 64ನೇ ರೈಲ್ವೆ ಸಪ್ತಾಹ ಕಾರ್ಯಕ್ರಮದಲ್ಲಿ ಅತ್ಯುತ್ತಮ ವಾಗಿ ನಿರ್ವಹಿಸಲ್ಪಟ್ಟ ರೈಲು ನಿಲ್ದಾಣವಾಗಿ ಚಿಕ್ಕಮಗಳೂರು(ಪ್ರ), ಶಿವಮೊಗ್ಗ(ದ್ವಿ) ಪ್ರಶಸ್ತಿ ಪಡೆದರೆ, ಸುಬ್ರಹ್ಮಣ್ಯ ರೋಡ್ ವಿಶ್ರಾಂತ ಕೊಠಡಿಗೆ-ಅತ್ಯುತ್ತಮವಾಗಿ ನಿರ್ವ ಹಿಸಲ್ಪಟ್ಟ ಚಾಲಕರ ವಿಶ್ರಾಂತಿ ಕೊಠಡಿ’ ಪ್ರಶಸ್ತಿ ಹಾಗೂ ಮೈಸೂರಿನ ಎಸ್ ಅಂಡ್ ಟಿ ಕಚೇರಿ `ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ…
ಇಟಲಿಯಿಂದ ಮೈಸೂರಿಗೆ ಬಂದಿವೆ ಎರಡು ಕೋಟಿ ರೂ. ಮೌಲ್ಯದ ಸ್ವಚ್ಛತಾ ಯಂತ್ರಗಳು
August 2, 2019ಮೈಸೂರು,ಆ.1(ಆರ್‍ಕೆ)- ಸ್ವಚ್ಛ ಮೈಸೂರು ಹೆಗ್ಗ ಳಿಕೆಯನ್ನು ಮುಂದುವರಿಸಲು ಜಿಲ್ಲಾಡಳಿತದೊಂದಿಗೆ ನಮ್ಮ ಮೈಸೂರು ಫೌಂಡೇಷನ್ ಸಂಸ್ಥೆಯು ಕೈ ಜೋಡಿ ಸುತ್ತಿದೆ. ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆ ವೇಳೆ ಮೈಸೂರಿನ ರಸ್ತೆಗಳನ್ನು ಗುಡಿಸುವ ಜತೆಗೆ ನೀರಿನಿಂದ ಸ್ವಚ್ಛಗೊಳಿ ಸುವ ಯಂತ್ರಗಳನ್ನೊಳಗೊಂಡ ಎರಡು ವಾಹನ ಗಳನ್ನು `ನಮ್ಮ ಮೈಸೂರು ಫೌಂಡೇಷನ್’ ಸಂಸ್ಥೆಯು ಇಟಲಿಯಿಂದ ತರಿಸಿದೆ ಎಂದು ಸಂಸ್ಥೆ ಟ್ರಸ್ಟಿ ಎನ್.ಮಲ್ಲೇಶ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಭೂಪಾಲ್ ಹೊರತುಪಡಿಸಿದಲ್ಲಿ ಹೈಟೆಕ್ನಾಲಜಿ ಹೊಂದಿರುವ ಅತ್ಯಾಧುನಿಕ ಕಸ ಗುಡಿಸುವ ಯಂತ್ರದ ವಾಹನ ತರಿಸಿರುವುದು ಇಡೀ ದೇಶದಲ್ಲೇ ಮೈಸೂರು…
ಕಬಿನಿ ಜಲಾನಯನದಿಂದ ನಾಲೆಗಳಿಗೆ ನೀರು ಬಿಡುಗಡೆ
August 2, 2019ಮೈಸೂರು, ಆ.1- ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಕಬಿನಿ ಜಲಾನಯದ ವ್ಯಾಪ್ತಿಗೆ ಬರುವ ಕಬಿನಿ ಎಡದಂಡೆ ಮತ್ತು ಬಲದಂಡೆ ನಾಲೆ, ಹುಲ್ಲ ಹಳ್ಳಿ ಅಣೆಕಟ್ಟು ನಾಲೆಗಳಾದ ಹುಲ್ಲಹಳ್ಳಿ ನಾಲೆ ಮತ್ತು ರಾಂಪುರ ನಾಲೆಗಳಿಗೆ ಆ.5ರಿಂದ ನೀರು ಹರಿಸಲು ಕ್ರಮವಹಿಸ ಲಾಗುವುದು ಎಂದು ಕಬಿನಿ ಮತ್ತು ವರುಣಾ ನಾಲಾ ವೃತ್ತದ ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ. ನಾಲೆಗಳಿಗೆ ಹರಿಸುವ ನೀರನ್ನು ಕೆರೆ-ಕಟ್ಟೆಗಳನ್ನು ತುಂಬಿಸಲು ಮತ್ತು ಜನ-ಜಾನುವಾರುಗಳಿಗೆ ಕುಡಿಯುವ ಸಲುವಾಗಿ ಮಾತ್ರ ಉಪಯೋಗಿಸಬೇಕು. ರೈತ ಬಾಂಧವರು ಕಬಿನಿ ನಾಲೆಗಳ ನೀರನ್ನು…
ಇಂದು ವಿವಿಧೆಡೆ ನೀರು ವ್ಯತ್ಯಯ
August 2, 2019ಮೈಸೂರು,ಆ.1-ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಹೊಂಗಳ್ಳಿ ಯಂತ್ರಾಗಾರದಲ್ಲಿ ತುರ್ತು ವಿದ್ಯುತ್ ನಿರ್ವಹಣೆ ಕೈಗೊಂ ಡಿರುವ ಹಿನ್ನೆಲೆಯಲ್ಲಿ ನಾಳೆ (ಆ.2) ಹೆಬ್ಬಾಳು, ಕುಂಬಾರಕೊಪ್ಪಲು, ಕೆ.ಜಿ.ಕೊಪ್ಪಲು, ಲೋಕನಾಯಕನಗರ, ಬೃಂದಾವನ ಬಡಾ ವಣೆ, ಪಡುವಾರಹಳ್ಳಿ(ವಿನಾಯಕ ನಗರ), ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಸರಸ್ವತಿಪುರಂ, ತಿಲಕ್‍ನಗರ, ಯಾದವ ಗಿರಿ, ನಜರ್‍ಬಾದ್ ಸೇರಿದಂತೆ ವಾರ್ಡ್ ನಂ. 1ರಿಂದ 6, 20, 23, 23, 38, 42, 45 ಹಾಗೂ 47ರ ವ್ಯಾಪ್ತಿಯ ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗ ಲಿದೆ ಎಂದು ಪಾಲಿಕೆ ಪ್ರಕಟಣೆ…
ಬಾಕಿ ವೇತನ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಗ್ರಾಪಂ ನೌಕರರ ಪ್ರತಿಭಟನೆ
August 1, 2019ಮೈಸೂರು: ಬಾಕಿ ಉಳಿಸಿಕೊಂಡಿ ರುವ ಗ್ರಾಪಂ ನೌಕರರ ವೇತನ ಪಾವತಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ನೇತೃತ್ವ ದಲ್ಲಿ ಗನ್‍ಹೌಸ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾ ಕಾರರು, ಚಾಮರಾಜ ಜೋಡಿ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಮಸ್ವಾಮಿ ವೃತ್ತದ ಮೂಲಕ ಸಾಗಿ ಬಂದು ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಎದುರು ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು….
ಎನ್‍ಎಂಸಿ ಮಸೂದೆ ಖಂಡಿಸಿ ದೇಶವ್ಯಾಪಿ ಖಾಸಗಿ ವೈದ್ಯರ ಮುಷ್ಕರ
August 1, 2019ಮೈಸೂರು,ಜು.31(ಆರ್‍ಕೆ)- ಸಂಸತ್‍ನಲ್ಲಿ ಎನ್‍ಎಂಸಿ (ನ್ಯಾಷನಲ್ ಮೆಡಿಕಲ್ ಕಮಿಷನ್) ಮಸೂದೆ-2019 ಅನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ದೇಶವ್ಯಾಪ್ತಿ ಖಾಸಗಿ ಆಸ್ಪತ್ರೆ ವೈದ್ಯರು ಓಪಿಡಿ (ಹೊರ ರೋಗಿಗಳ ವಿಭಾಗ) ಬಂದ್ ಮಾಡಿ ಮುಷ್ಕರ ನಡೆಸಿದರು. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಮೈಸೂರು ಶಾಖೆ, ಇಂಡಿಯನ್ ಅಕಾಡೆಮಿ ಆಫ್ ಪೀಡಿ ಯಾಟ್ರಿಕ್ಸ್(ಐಎಪಿ) ಮೈಸೂರು ಜಿಲ್ಲಾ ಘಟಕ ಹಾಗೂ ಮೈಸೂರು ಫಿಜಿಷಿಯನ್ಸ್ ಅಸೋಸಿಯೇಷನ್ (ಎಂಎಫ್‍ಎ) ಸಂಯುಕ್ತಾಶ್ರಯದಲ್ಲಿ 50ಕ್ಕೂ ಹೆಚ್ಚು ಪದಾಧಿಕಾರಿಗಳು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬೇಡಿಕೆ ಈಡೇರಿಕೆಗೆ…
ಚುಟುಕು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು ಸರ್ಕಾರಕ್ಕೆ ಮನವಿ
August 1, 2019ಮೈಸೂರು,ಜು.31(ಪಿಎಂ)-ಚುಟುಕು ಸಾಹಿತ್ಯ ಪರಿಣಾಮಕಾರಿ ಸಾಹಿತ್ಯ ಪ್ರಾಕಾರ ವಾಗಿದ್ದು, ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಹೇಳಿದರು. ಸರಸ್ವತಿಪುರಂನ ಜೆಎಸ್‍ಎಸ್ ಮಹಿಳಾ ಕಾಲೇಜು ಆವರಣದಲ್ಲಿರುವ ಶಿವರಾತ್ರೀಶ್ವರ ಮಹಿಳಾ ಸಮಾಜದಲ್ಲಿ ಚುಟುಕು ಸಾಹಿತ್ಯ ಪರಿಷತ್‍ನ ಮೈಸೂರು ಜಿಲ್ಲಾ ಘಟಕ, ಕೌಸ್ತುಭ ಪ್ರಕಾಶನದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ರತ್ನ ಹಾಲಪ್ಪಗೌಡ ಸಂಪಾದನೆಯ `ಚುಟುಕು ಚಂದನ’ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗದ್ಯಕ್ಕಿಂತ 4 ಸಾಲುಗಳ ಚುಟುಕು…
ಸಿದ್ಧಾರ್ಥ ನಿಗೂಢ ನಾಪತ್ತೆ
July 31, 2019ಬೆಂಗಳೂರು, ಜು.30(ಕೆಎಂಶಿ)-ಸುಮಾರು 50 ಸಾವಿರಕ್ಕೂ ಹೆಚ್ಚು ಕನ್ನಡಿಗರಿಗೆ ಉದ್ಯೋಗ ನೀಡಿದ ಕೆಫೆ ಕಾಫಿ-ಡೇ ಮಾಲೀಕ, ಉದ್ಯಮಿ, ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ್ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಉದ್ಯಮದಲ್ಲಿ ಉಂಟಾದ ಅಪಾರ ನಷ್ಟ, ಆದಾಯ ತೆರಿಗೆ ಇಲಾಖೆಯ ಮಾಜಿ ನಿರ್ದೇಶಕರ ಕಿರುಕುಳ ಹಾಗೂ ಮುಂಬೈ ಮೂಲದ ರಾಷ್ಟ್ರಖ್ಯಾತಿಯ ಉದ್ಯಮಿಯೊಬ್ಬರ ಒತ್ತಡಕ್ಕೆ ಸಿದ್ಧಾರ್ಥ್ ಒಳಗಾಗಿ ದ್ದರು ಎನ್ನಲಾಗಿದೆ. ಮಂಗಳೂರಿನ ತೋಟ ನೋಡಲು ನಿನ್ನೆ ಬೆಳಿಗ್ಗೆ ನಗರದಿಂದ ತೆರಳಿದ ಸಿದ್ಧಾರ್ಥ್, ಸೂರ್ಯ ಮುಳುಗುವ ವೇಳೆ ನೇತ್ರಾ ವತಿ…
ಕೊನೆ ಘಳಿಗೆಯಲ್ಲಿ ಬೋಪಯ್ಯ ಬಿಟ್ಟು ವಿಶ್ವೇಶ್ವರ ಹೆಗಡೆ ಕಾಗೇರಿ ಕಣಕ್ಕೆ
July 31, 2019ಬೆಂಗಳೂರು, ಜು.30(ಕೆಎಂಶಿ)-ರಾಜ್ಯ ವಿಧಾನಸಭಾ ಧ್ಯಕ್ಷರ ಆಯ್ಕೆಯಲ್ಲೂ ಬಿಜೆಪಿ ವರಿಷ್ಠರ ಮಾತೇ ಅಂತಿಮ ವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನವಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಆಪ್ತ ಹಾಗೂ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ನೇಮಿಸಲು ತೀರ್ಮಾನಿಸಿದ್ದರು. ಬೋಪಯ್ಯ ಅವರಿಗೆ ನಾಮಪತ್ರ ಸಲ್ಲಿಸಲು ಸೂಚನೆ ನೀಡಿದ್ದ ಮುಖ್ಯಮಂತ್ರಿ ಅವರು, ಇದೇ ವೇಳೆ ವರಿಷ್ಠರ ಗಮನಕ್ಕೂ ತಂದಿದ್ದರು. ಮುಂಜಾನೆವರೆಗೂ ಯಾವುದೇ ನಿರ್ಧಾರ ತಿಳಿಸದ ವರಿಷ್ಠರು ನಾಮಪತ್ರ ಸಲ್ಲಿಕೆಯ ಕೊನೆ ಸಮಯದಲ್ಲಿ ಆರ್‍ಎಸ್‍ಎಸ್ ಮೂಲ ಹಾಗೂ ಪಕ್ಷದ ನಿಷ್ಠಾವಂತ,…
ಕಾಂಗ್ರೆಸ್‍ನಿಂದ 14 ಅನರ್ಹ ಶಾಸಕರ ಉಚ್ಛಾಟನೆ
July 31, 2019ಮೈಸೂರು, ಜು. 30- ಕೆಪಿಸಿಸಿ ಶಿಫಾರಸ್ಸಿನ ಮೇರೆಗೆ 14 ಅನರ್ಹ ಶಾಸಕರನ್ನು ಉಚ್ಚಾಟಿಸಿ ಎಐಸಿಸಿ ಆದೇಶ ಹೊರಡಿಸಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ರೆಸಾರ್ಟ್‍ಗೆ ತೆರಳಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ, ಅನರ್ಹ ಶಾಸಕರಾದ ರಮೇಶ್ ಜಾರಕಿಹೊಳಿ, ಮುಗುರೇಶ್ ಕುಮಟಳ್ಳಿ, ಭೈರತಿ ಬಸವರಾಜು, ಎಸ್.ಟಿ. ಸೋಮಶೇಖರ್, ಮುನಿರತ್ನ, ರೋಷನ್ ಬೇಗ್, ಪ್ರತಾಪ್ ಗೌಡ ಪಾಟೀಲ್, ಆನಂದ್ ಸಿಂಗ್, ಎಂಟಿಬಿ ನಾಗರಾಜು, ಡಾ. ಕೆ. ಸುಧಾಕರ್, ಬಿ.ಸಿ. ಪಾಟೀಲ್, ಶಿವರಾಂ ಹೆಬ್ಬಾರ್, ಶ್ರೀಮಂತ ಪಾಟೀಲ್ ಮತ್ತು ಕೆಪಿಜೆಪಿ…










