ಎನ್‍ಎಂಸಿ ಮಸೂದೆ ಖಂಡಿಸಿ ದೇಶವ್ಯಾಪಿ ಖಾಸಗಿ ವೈದ್ಯರ ಮುಷ್ಕರ
ಮೈಸೂರು

ಎನ್‍ಎಂಸಿ ಮಸೂದೆ ಖಂಡಿಸಿ ದೇಶವ್ಯಾಪಿ ಖಾಸಗಿ ವೈದ್ಯರ ಮುಷ್ಕರ

August 1, 2019

ಮೈಸೂರು,ಜು.31(ಆರ್‍ಕೆ)- ಸಂಸತ್‍ನಲ್ಲಿ ಎನ್‍ಎಂಸಿ (ನ್ಯಾಷನಲ್ ಮೆಡಿಕಲ್ ಕಮಿಷನ್) ಮಸೂದೆ-2019 ಅನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ದೇಶವ್ಯಾಪ್ತಿ ಖಾಸಗಿ ಆಸ್ಪತ್ರೆ ವೈದ್ಯರು ಓಪಿಡಿ (ಹೊರ ರೋಗಿಗಳ ವಿಭಾಗ) ಬಂದ್ ಮಾಡಿ ಮುಷ್ಕರ ನಡೆಸಿದರು.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಮೈಸೂರು ಶಾಖೆ, ಇಂಡಿಯನ್ ಅಕಾಡೆಮಿ ಆಫ್ ಪೀಡಿ ಯಾಟ್ರಿಕ್ಸ್(ಐಎಪಿ) ಮೈಸೂರು ಜಿಲ್ಲಾ ಘಟಕ ಹಾಗೂ ಮೈಸೂರು ಫಿಜಿಷಿಯನ್ಸ್ ಅಸೋಸಿಯೇಷನ್ (ಎಂಎಫ್‍ಎ) ಸಂಯುಕ್ತಾಶ್ರಯದಲ್ಲಿ 50ಕ್ಕೂ ಹೆಚ್ಚು ಪದಾಧಿಕಾರಿಗಳು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಡಿಷನಲ್ ಡಿಸಿ ಬಿ.ಆರ್. ಪೂರ್ಣಿಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಎನ್‍ಎಂಸಿ ಮಸೂದೆ ಜಾರಿಗೆ ಬಂದರೆ ಎಂಬಿಬಿಎಸ್ ಪದವಿ ವ್ಯಾಸಂಗ ಮಾಡದ ಆಯುರ್ವೇದ, ಹೋಮಿಯೋ ಪತಿ, ಯುನಾನಿ ವಿಷಯದಲ್ಲಿ ಬ್ರಿಡ್ಜ್ ಕೋರ್ಸ್ ಮಾಡಿ ಕೊಂಡ ಹಾಗೂ ಮಾಡೆಲ್ ಪ್ರಾಕ್ಟೀಸ್ ಮಾಡುವ ವೈದ್ಯ ರಲ್ಲದವರೂ ಸಹ ನೋಂದಣಿ ಮಾಡಿಸಿಕೊಂಡು ವೈದ್ಯ ಕೀಯ ಚಿಕಿತ್ಸೆ ನೀಡಲು ಅವಕಾಶ ಕೊಟ್ಟಂತಾಗುತ್ತದೆ ಎಂದು ಮುಷ್ಕರನಿರತ ವೈದ್ಯರು ಆರೋಪಿಸಿದರು.

ನಕಲಿ ವೈದ್ಯರು ಹೆಚ್ಚಾಗಿ ಅದರ ಪರಿಣಾಮ ಜನರ ಆರೋಗ್ಯದ ಮೇಲೆ ಹಾಗೂ ವೈದ್ಯಕೀಯ ಕ್ಷೇತ್ರದ ಮೇಲೆ ಬೀರಲಿದೆಯಾದ್ದರಿಂದ ಸಮಾಜಕ್ಕೆ ಮಾರಕವಾಗಲಿರುವ ಎನ್‍ಎಂಸಿ ಮಸೂದೆ-2019 ಅನ್ನು ಜಾರಿಗೆ ತರ ಬಾರದು ಎಂದೂ ಖಾಸಗಿ ವೈದ್ಯರು ಒತ್ತಾಯಿಸಿದರು.

ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಅಧ್ಯಕ್ಷ ರಾದ ಡಾ.ಎನ್.ಎಸ್.ರಾಜೇಶ್ವರಿ, ಕಾರ್ಯದರ್ಶಿ ಡಾ. ಹೆಚ್.ಸಿ.ಕೃಷ್ಣಕುಮಾರ್, ಖಜಾಂಚಿ ಡಾ.ಆರ್.ರಾಘವೇಂದ್ರ, ಐಎಂಎ ಮೈಸೂರು ಶಾಖೆ ಅಧ್ಯಕ್ಷ ಡಾ.ಎಸ್.ಬಿ.ಪ್ರಕಾಶ್, ಉಪಾಧ್ಯಕ್ಷ ಡಾ.ಬಿ.ಎನ್.ಆನಂದ ರವಿ, ಕಾರ್ಯದರ್ಶಿ ಡಾ.ಎಂ.ಎಸ್.ಜಯಂತ್ ಸೇರಿದಂತೆ ಹಲವರು ಜಿಲ್ಲಾ ಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ(ಆ.1) ಬೆಳಿಗ್ಗೆ 6 ಗಂಟೆವರೆಗೆ ದೇಶಾದ್ಯಂತ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳಲ್ಲಿ ಹೊರ ರೋಗಿ ವಿಭಾಗಗಳನ್ನು ಬಂದ್ ಮಾಡಲು ನೀಡಿದ್ದ ನಿರ್ದೇಶನದಂತೆ ಕರ್ನಾಟಕ ರಾಜ್ಯ ಹಾಗೂ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಎಲ್ಲಾ ಖಾಸಗಿ ಆಸ್ಪತ್ರೆಗಳ ಓಪಿಡಿಗಳು ಬುಧವಾರ ಬಂದ್ ಆಗಿದ್ದವು.

ಒಳರೋಗಿಗಳಾಗಿ ದಾಖಲಾಗಿರುವವರು. ಶಸ್ತ್ರಚಿಕಿತ್ಸೆ, ಅಪಘಾತ, ತುರ್ತು ಚಿಕಿತ್ಸೆ ಹಾಗೂ ಎಮರ್ಜೆನ್ಸಿ ವಾರ್ಡು ಗಳಲ್ಲಿ ಸೇವೆ ಎಂದಿನಂತಿತ್ತು. ಸರ್ಕಾರಿ ಆಸ್ಪತ್ರೆಗಳು, ಪ್ರಾಥ ಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ಕಾರ್ಯನಿರತವಾಗಿದ್ದ ಕಾರಣ, ಖಾಸಗಿ ವೈದ್ಯರ ಮುಷ್ಕರದ ಬಿಸಿ ರೋಗಿಗಳಿಗೆ ತಟ್ಟಲಿಲ್ಲ.

ಖಾಸಗಿ ವೈದ್ಯರ ಮುಷ್ಕರದ ಪರಿಣಾಮ ನಿರೀಕ್ಷೆ ಯಂತೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಇಂದು ಹೆಚ್ಚಿನ ಸಂಖ್ಯೆಯ ರೋಗಿಗಳು ಚಿಕಿತ್ಸೆಗಾಗಿ ಬಂದಿದ್ದರು. ಅದ ಕ್ಕಾಗಿ ಕೆ.ಆರ್. ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಹೆಚ್ಚುವರಿ ವೈದ್ಯರನ್ನು ನಿಯೋಜಿಸಲಾಗಿತ್ತು.

 

Translate »