ಇಟಲಿಯಿಂದ ಮೈಸೂರಿಗೆ ಬಂದಿವೆ ಎರಡು ಕೋಟಿ ರೂ. ಮೌಲ್ಯದ ಸ್ವಚ್ಛತಾ ಯಂತ್ರಗಳು
ಮೈಸೂರು

ಇಟಲಿಯಿಂದ ಮೈಸೂರಿಗೆ ಬಂದಿವೆ ಎರಡು ಕೋಟಿ ರೂ. ಮೌಲ್ಯದ ಸ್ವಚ್ಛತಾ ಯಂತ್ರಗಳು

August 2, 2019

ಮೈಸೂರು,ಆ.1(ಆರ್‍ಕೆ)- ಸ್ವಚ್ಛ ಮೈಸೂರು ಹೆಗ್ಗ ಳಿಕೆಯನ್ನು ಮುಂದುವರಿಸಲು ಜಿಲ್ಲಾಡಳಿತದೊಂದಿಗೆ ನಮ್ಮ ಮೈಸೂರು ಫೌಂಡೇಷನ್ ಸಂಸ್ಥೆಯು ಕೈ ಜೋಡಿ ಸುತ್ತಿದೆ. ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆ ವೇಳೆ ಮೈಸೂರಿನ ರಸ್ತೆಗಳನ್ನು ಗುಡಿಸುವ ಜತೆಗೆ ನೀರಿನಿಂದ ಸ್ವಚ್ಛಗೊಳಿ ಸುವ ಯಂತ್ರಗಳನ್ನೊಳಗೊಂಡ ಎರಡು ವಾಹನ ಗಳನ್ನು `ನಮ್ಮ ಮೈಸೂರು ಫೌಂಡೇಷನ್’ ಸಂಸ್ಥೆಯು ಇಟಲಿಯಿಂದ ತರಿಸಿದೆ ಎಂದು ಸಂಸ್ಥೆ ಟ್ರಸ್ಟಿ ಎನ್.ಮಲ್ಲೇಶ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಭೂಪಾಲ್ ಹೊರತುಪಡಿಸಿದಲ್ಲಿ ಹೈಟೆಕ್ನಾಲಜಿ ಹೊಂದಿರುವ ಅತ್ಯಾಧುನಿಕ ಕಸ ಗುಡಿಸುವ ಯಂತ್ರದ ವಾಹನ ತರಿಸಿರುವುದು ಇಡೀ ದೇಶದಲ್ಲೇ ಮೈಸೂರು ಎರಡನೇ ನಗರವಾಗಿದ್ದು, ದಕ್ಷಿಣ ಭಾರತದಲ್ಲಿ ಮೊದಲನೇ ನಗರವಾಗಿದೆ. ಮ್ಯಾಕ್ರೋ ಎಂ-60 ಎಂಬ ಇಟಲಿಯಲ್ಲಿ ತಯಾರಾಗಿರುವ ಡೀಸೆಲ್ ಇಂಜಿನ್ ವಾಹನದಿಂದ ಪಾದಚಾರಿ ರಸ್ತೆ, ಮುಖ್ಯ ರಸ್ತೆಯಲ್ಲಿರುವ ಸಣ್ಣ ಪುಟ್ಟ ಕಲ್ಲು, ಕಡ್ಡಿ-ಕಸ, ಧೂಳನ್ನು ಹೀರಿಕೊಳ್ಳುವ ಯಂತ್ರ ಅಳವಡಿಸಲಾಗಿದೆ.

ಅದು ರಸ್ತೆಯ ಕಸ ಗುಡಿಸುವುದಲ್ಲದೆ, ನೀರಿನಿಂದ ಸ್ವಚ್ಛಗೊಳಿಸುತ್ತದೆ. ಆರು ಟನ್ ಸಾಮಥ್ರ್ಯದ ಕಸ ಸಂಗ್ರಹಣಾ ತೊಟ್ಟಿ ನೀರಿನ ಟ್ಯಾಂಕ್ ಇರುವುದರಿಂದ ಎಂಟು ಗಂಟೆ ಕಾಲ 70 ಮಂದಿ ಕಾರ್ಮಿಕರು ಮಾಡುವ ಕೆಲಸವನ್ನು ಈ ಯಂತ್ರ ಒಂದೇ ನಿರ್ವಹಿಸುತ್ತದೆ. ಎಂಟು ತಾಸಿನಲ್ಲಿ ಆರು ಕಿ.ಮೀವರೆಗೆ ರಸ್ತೆಯನ್ನು ಸಂಪೂರ್ಣ ಸ್ವಚ್ಛಗೊಳಿಸಬಹುದು.

ಬ್ಯಾಂಕ್ ಆಫ್ ಬರೋಡಾದಿಂದ ಹಣಕಾಸು ಸೌಲಭ್ಯ ಪಡೆದು ತರಿಸಿರುವ ಈ ಎರಡು ವಾಹನ ಗಳಿಗೆ ಎರಡು ಕೋಟಿ ರೂ. ಖರ್ಚಾಗಿದೆ. ಮೈಸೂರು ನಗರದ ರಸ್ತೆಗಳನ್ನು ಸ್ವಚ್ಛಗೊಳಿಸಿ ಸ್ವಚ್ಛತಾ ಪ್ರಶಸ್ತಿ ಗಳಿಸಲು ನೆರವಾಗುವ ಉದ್ದೇಶದಿಂದ ತರಿಸ ಲಾಗಿದೆ ಎಂದು ಮಲ್ಲೇಶ ಅವರು ನುಡಿದರು.

ದಸರಾ ಮಹೋತ್ಸವದ ವೇಳೆಯೂ ಅರಮನೆ ಸುತ್ತಲಿನ ರಸ್ತೆಗಳು, ರಾಜಮಾರ್ಗ ಡಿ.ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ಅಶೋಕ ರಸ್ತೆ, ಇರ್ವಿನ್ ರಸ್ತೆ, ಮಹಾತ್ಮಾಗಾಂಧಿ ರಸ್ತೆ ಸೇರಿದಂತೆ ಮೈಸೂರಿನ ಹಲವು ಮುಖ್ಯ ರಸ್ತೆಗಳನ್ನು ಕಸಗುಡಿಸಿ ಸ್ವಚ್ಛಗೊಳಿಸಲು ಈ ಯಂತ್ರದಿಂದ ಅನುಕೂಲ ವಾಗಲಿದೆ ಎಂದು ನಮ್ಮ ಮೈಸೂರು ಫೌಂಡೇಷನ್ ಅಧ್ಯಕ್ಷ ದಶರಥ ತಿಳಿಸಿದ್ದಾರೆ.

ಮೈಸೂರು ಮಹಾನಗರಪಾಲಿಕೆಯು ಎಸ್.ಆರ್. ದರ ನಿಗದಿ ಮಾಡಿ ಈ ವಾಹನವನ್ನು ಪಡೆದು ಬಳಸಿ ಕೊಳ್ಳಬಹುದಾಗಿದೆ. ಸ್ವಚ್ಛ ಸಮೀಕ್ಷೆ ಹಾಗೂ ದಸರಾ ವೇಳೆ ಪಾಲಿಕೆ ಬಳಸಿಕೊಂಡರೆ, ಉಳಿದ ಅವಧಿಯಲ್ಲಿ ಇಲ್ಲಿರುವ ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ನೀಡ ಬಹುದೆಂಬ ಉದ್ದೇಶದಿಂದ ಈ ವಾಹನವನ್ನು ತರಿಸ ಲಾಗಿದೆ ಎಂದು `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »