ಮೈಸೂರು,ಜೂ.23(ಪಿಎಂ)- ಲೋಕಸಭಾ ಚುನಾವಣೆಯಲ್ಲಿ ಸ್ವಾರ್ಥ ರಾಜ ಕಾರಣದಿಂದ ಮೈತ್ರಿ ಅಭ್ಯರ್ಥಿಗಳು ರಾಜ್ಯದಲ್ಲಿ ಸೋತರೇ ಹೊರತು ಬಿಜೆಪಿ ಕಾರಣಕ್ಕಲ್ಲ ಎಂದು ಚಿಂತಕ ದಿನೇಶ್ ಅಮಿನ್‍ಮಟ್ಟು ವಿಶ್ಲೇಷಿಸಿದರು. ಮೈಸೂರಿನ ಕಲಾಮಂದಿರದ ಮನೆ ಯಂಗಳದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಭಾನುವಾರ ಹಮ್ಮಿ ಕೊಂಡಿದ್ದ ಪ್ರಗತಿಪರ ಚಿಂತಕ ಪ್ರೊ.ಕೆ. ರಾಮದಾಸ್ ನೆನಪಿನ ಸಂವಾದ, ಪುಸ್ತಕ ಬಿಡುಗಡೆ, ಲೇಖನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಸೋತರೆ ಯಾರು ಹೆಚ್ಚು ಖುಷಿಪಟ್ಟರು ಎಂಬುದು ಎಲ್ಲರಿಗೂ ಗೊತ್ತಿದೆ. ಇಂದಿನ…
ಮುಂದಿನ ಬೇಸಿಗೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇರದು
June 24, 2019ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಅದಕ್ಕೆ ಎಲ್ಲಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು. ಮೈಸೂರು ತಾಲೂಕಿನ ಮರಟಿ ಕ್ಯಾತನಹಳ್ಳಿ ಗ್ರಾಮದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಶಾಶ್ವತ ಕುಡಿ ಯವ ನೀರು ಒದಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕಬಿನಿ ನದಿಯಿಂದ ವಿಶೇಷವಾಗಿ ಹತ್ತಿರದ ಹಳ್ಳಿ ಗಳಿಗೆ…
ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಚಿವ ಜಿಟಿಡಿ ಚಾಲನೆ
June 24, 2019ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಭಾನುವಾರ ಚಾಲನೆ ನೀಡಿದರು. ಜಯಪುರ ಹೋಬಳಿ ಮರಟಿ ಕ್ಯಾತನಹಳ್ಳಿ ಗ್ರಾಮದಲ್ಲಿ 48 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ರಾಜೀವ್‍ಗಾಂಧಿ ಸೇವಾ ಕೇಂದ್ರ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿದರು. ಗ್ರಾಮದಲ್ಲಿ 46 ಲಕ್ಷ ರೂ. ಅಂದಾಜು ವೆಚ್ಚದ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಕಾಮಗಾರಿಗೂ ಶಂಕು ಸ್ಥಾಪನೆ ನೆರವೇರಿಸಿದರು. ಗ್ರಾಮದ ಸಿಸಿ ರಸ್ತೆ, ಒಳಚರಂಡಿ ಕಾಮಗಾರಿ, ಕುಡಿಯುವ ನೀರಿನ ಘಟಕಗಳಿಗೂ ಚಾಲನೆ…
ಕೇಂದ್ರ ಬಜೆಟ್‍ನಲ್ಲಿ ಹೊಸ ಘೋಷಣೆಗಳಿರುವ ಸಾಧ್ಯತೆ
June 24, 2019ಮೈಸೂರು: ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ಹೊಸ ದಾಗಿ ನಿರೀಕ್ಷೆ ಇಟ್ಟುಕೊಳ್ಳುವಂತದ್ದು ಏನಿಲ್ಲ. ಪ್ರಧಾನಿ ನರೇಂದ್ರ ಮೋದಿ ಕಳೆದ ಫೆಬ್ರವರಿಯಲ್ಲಿಯೇ ಅತ್ಯುತ್ತಮ ಬಜೆಟ್ ನೀಡಿದ್ದಾರೆ. ಈಗ ಕೆಲವು ಹೊಸ ಘೋಷಣೆ ಗಳಿರುವ ಸಾಧ್ಯತೆ ಇದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು. ಮೈಸೂರು ತಾಲೂಕಿನ ಮರಟಿಕ್ಯಾತನ ಹಳ್ಳಿಯಲ್ಲಿ ಸಚಿವ ಜಿ.ಟಿ.ದೇವೇಗೌಡ ರೊಂದಿಗೆ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಚಾಲನೆ ಸಂದರ್ಭದಲ್ಲಿ ಪಾಲ್ಗೊಂ ಡಿದ್ದ ಅವರು ಮಾಧ್ಯಮಗಳೊಂದಿಗೆ ಮಾತ ನಾಡಿದರು. ನರೇಂದ್ರ ಮೋದಿಯವರು ಕಳೆದ 5ವರ್ಷದಲ್ಲಿ ಮಾಡಿದ ಅಭಿವೃದ್ಧಿ ಗಳೇ ಮುಂದಿನ…
ಕುಡುಗೋಲು ಹಿಡಿದು ಗಿಡ-ಗಂಟಿಗಳನ್ನು ಸ್ವಚ್ಛಗೊಳಿಸಿದ ಶಾಸಕ ರಾಮದಾಸ್
June 24, 2019ಮೈಸೂರು, ಜೂ.23(ಆರ್‍ಕೆಬಿ)- ಕೃಷ್ಣ ರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಭಾನುವಾರ 62ನೇ ವಾರ್ಡ್‍ನ ಜೆ.ಪಿ.ನಗರ ಕಂದಾಯ ಕಾಲೋನಿ ವಿಠಲಧಾಮದ ಹಿಂಭಾಗದ ಅಡ್ಡ ರಸ್ತೆ ಗಳಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಸ್ವತಃ ಅವರೇ ಕುಡುಗೋಲಿನಿಂದ ಕತ್ತರಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನ ಕೈಗೊಂಡರು. ವಾರ್ಡ್ ಸದಸ್ಯೆ ಶಾಂತಮ್ಮ ವಡಿವೇಲು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಕಾಲೋನಿ ರಸ್ತೆಗಳಲ್ಲಿ ನೇರಳೆ, ಬೇವು, ಹೊಂಗೆ, ಹತ್ತಿ ಇನ್ನಿತರ ಗಿಡಗಳನ್ನು ಅಲ್ಲಿನ ನಿವಾಸಿಗಳಿಂ ದಲೇ ನೆಡಿಸಿ, ಅವುಗಳು ಬೆಳೆದು ಫಲ ನೀಡುವಂತೆ ಸಂರಕ್ಷಿಸುವಂತೆ…
ಬಂಡೀಪುರ ಸಫಾರಿ ಮಾರ್ಗ ಅಗಲೀಕರಣಕ್ಕೆ ಮುಂದಾದ ಅರಣ್ಯ ಇಲಾಖೆ
June 24, 2019ಮೈಸೂರು, ಜೂ.23(ಎಂಟಿವೈ)-ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ವಲಯದ ರಸ್ತೆಗಳನ್ನು ಅಗಲೀಕರಣ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಸಫಾರಿ ವಾಹನಗಳ ಮೇಲೆ ಕಾಡಾನೆ ದಾಳಿ ನಡೆಸುವುದಕ್ಕೆ ಮುಂದಾದ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಮುಂಜಾಗ್ರತಾ ಕ್ರಮವಾಗಿ ರಸ್ತೆ ಅಗಲೀಕರಣ ಮಾಡುವುದಕ್ಕೆ ಇಲಾಖೆ ನಿರ್ಧರಿಸಿದೆ. ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ 256 ಕಿ.ಮೀ. ಸಫಾರಿ ಮಾರ್ಗ ವನ್ನು ಸಿದ್ಧಪಡಿಸಲಾಗಿದೆ. ಆದರೆ ಅದರಲ್ಲಿ ಕೇವಲ 68 ಕಿ.ಮೀ. ಮಾರ್ಗದಲ್ಲಿ ಮಾತ್ರ ಸಫಾರಿ ವಾಹನದ ಸಂಚಾರಕ್ಕೆ ಕ್ರಮ…
ಯಶಸ್ವಿಯಾದ ಎಸ್‍ಬಿಐ ಗೃಹ, ಕಾರು ಸಾಲ ಉತ್ಸವ
June 24, 2019ಮೈಸೂರು: ಮೈಸೂರಿನ ಬಲ್ಲಾಳ್ ವೃತ್ತದಲ್ಲಿರುವ ನಿತ್ಯೋತ್ಸವ ಸಭಾಂಗಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ನಡೆದ ಎರಡು ದಿನಗಳ ಕಾಲ ಬೃಹತ್ ಗೃಹ ಮತ್ತು ಕಾರು ಸಾಲ ಉತ್ಸವ ಯಶಸ್ವಿಯಾಗಿ ನಡೆಯಿತು. ಸುಮಾರು 36 ದೊಡ್ಡ ದೊಡ್ಡ ಬಿಲ್ಡರ್‍ಗಳು ಸ್ಟಾಲ್‍ಗಳಲ್ಲಿ ಗ್ರಾಹಕರಿಗೆ 2, 3, 4 ಬಿಹೆಚ್‍ಕೆ ಮನೆಗಳು, ವಿಲ್ಲಾಗಳ ಬಗ್ಗೆ ಮಾಹಿತಿ ನೀಡಿದರು. ನೂರಾರು ಮಂದಿ ತಮಗೆ ಅಗತ್ಯವಾದ ಮನೆಗಳ ಕುರಿತು ಮಾಹಿತಿ ಪಡೆದುಕೊಂಡರು. ಮೊದಲ ದಿನವೇ ಉದ್ಘಾಟನೆ ವೇಳೆ 20 ಕೋಟಿ ರೂ.ಗೂ ಹೆಚ್ಚಿನ…
ಆಂತರಿಕ ಗೊಂದಲದಲ್ಲೇ ಮೈತ್ರಿ ಸರ್ಕಾರ ಪತನ
June 23, 2019ಬೆಂಗಳೂರು,ಜೂ.22(ಕೆಎಂಶಿ)-ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಆಂತರಿಕ ಗೊಂದಲದಿಂದಲೇ ಪತನಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಇಂತಹ ಸನ್ನಿವೇಶದಲ್ಲಿ ರಾಜ್ಯದ ಜನತೆ ಮತ್ತೊಂದು ಚುನಾವಣೆ ಎದುರಿಸಲು ಸಿದ್ಧರಿಲ್ಲ, ಜನತೆಯ ಆಶೋ ತ್ತರಗಳಿಗೆ ಸ್ಪಂದಿಸಿ ಬಿಜೆಪಿ ಸರ್ಕಾರ ರಚನೆಗೊಳ್ಳಲಿದೆ ಎಂದರು. ಮಧ್ಯಂತರ ಚುನಾವಣೆಗೆ ಅವಕಾಶ ನೀಡು ವುದಿಲ್ಲ. ಯಾವುದೇ ಪಕ್ಷದ ಶಾಸಕರು ಅಂಜಬೇಕಿಲ್ಲ. ಅಂತಹ ಸನ್ನಿವೇಶ ಎದುರಾದಲ್ಲಿ ಬಿಜೆಪಿ ಜೊತೆ ಕೈಜೋಡಿಸಿ ಎಂದು ಅವರು ಕರೆ ನೀಡಿದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ,…
ದೇವರ ಇಲಾಖೆಗೂ ಕೈ ಹಾಕಿದ ಸೂಪರ್ ಸಿಎಂ
June 23, 2019ಬೆಂಗಳೂರು, ಜೂ.22- ದೇವರ ಇಲಾಖೆಗೂ ಸಿಎಂ ಹಿರಿಯ ಸಹೋದರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕೈ ಹಾಕಿದ್ದು, ಮುಜರಾಯಿ ಇಲಾಖೆ ವ್ಯವಹಾರದಲ್ಲೂ ಮಧ್ಯಪ್ರವೇಶ ಮಾಡಿದ್ದಾರೆ. ಮುಜರಾಯಿ ಇಲಾಖೆಯನ್ನು ಕಾಂಗ್ರೆಸ್ಸಿನ ಪರಮೇಶ್ವರ್ ನಾಯ್ಕ್ ಅವರು ನಿರ್ವಹಿಸುತ್ತಿದ್ದಾರೆ. ಆದರೆ ಈಗ ಕಲ್ಯಾಣ ಮಂಟಪ ಒಂದರ ಗುತ್ತಿಗೆಯನ್ನು ಶೃಂಗೇರಿ ಮಠಕ್ಕೆ ಕೊಡುವಂತೆ ರೇವಣ್ಣ ಅವರು ಪತ್ರ ಬರೆದಿದ್ದಾರೆ. ಈ ರೀತಿ ಪತ್ರ ಬರೆದು ಕಾನೂನು ಮೀರಿ ಕಲ್ಯಾಣ ಮಂಟಪ ಗುತ್ತಿಗೆ ನೀಡಲು ಹೊರಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ರೇವಣ್ಣ ಅವರು…
ನಿಯಮ ಮೀರಿ ಅಧಿಕ ಶಾಲಾ ಮಕ್ಕಳ ಸಾಗಣೆ: 70ಕ್ಕೂ ಹೆಚ್ಚು ವಾಹನಗಳ ವಿರುದ್ಧ ಪ್ರಕರಣ ದಾಖಲು
June 23, 2019ಮೈಸೂರು: ನಿಗದಿಗಿಂತ ಹೆಚ್ಚು ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳ ವಿರುದ್ಧ ಸಂಚಾರ ಪೊಲೀಸರು ಇಂದಿನಿಂದ ವಿಶೇಷ ಕಾರ್ಯಾಚರಣೆ ಆರಂ ಭಿಸಿದ್ದಾರೆ. ವಾಹನಗಳ ಸ್ಥಿತಿ, ಚಾಲಕರ ಕಾರ್ಯಕ್ಷಮತೆ, ದಾಖಲಾತಿ ಹಾಗೂ ಸಾಮ ಥ್ರ್ಯಕ್ಕೆ ತಕ್ಕಂತೆ ಪ್ರಯಾಣಿಕರು ಹಾಗೂ ಶಾಲಾ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆಯೇ ಎಂಬು ದನ್ನು ಪರಿಶೀಲಿಸಿ, ಸುರಕ್ಷಿತ ಸಂಚಾರ ವ್ಯವಸ್ಥೆ ಜಾರಿಗೊಳಿಸಬೇಕೆಂಬ ಸುಪ್ರಿಂ ಕೋರ್ಟ್ ಆದೇ ಶದ ಹಿನ್ನೆಲೆಯಲ್ಲಿ ಮೈಸೂರು ಸಂಚಾರ ಪೊಲೀ ಸರು ವಿಶೇಷ ತಪಾಸಣಾ ಕಾರ್ಯಾಚರಣೆ ಯನ್ನು ಆರಂಭಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ…










