Tag: Mysore

ಮೈಸೂರಲ್ಲಿ ಭಾರೀ ಗುಡುಗು ಸಹಿತ ಮಳೆ
ಮೈಸೂರು

ಮೈಸೂರಲ್ಲಿ ಭಾರೀ ಗುಡುಗು ಸಹಿತ ಮಳೆ

May 9, 2019

ಮೈಸೂರು: ಮೈಸೂರಿನಲ್ಲಿ ಬುಧವಾರ ಸಂಜೆ ಗಾಳಿ, ಗುಡುಗು ಸಹಿತ ಸುರಿದ ಜೋರು ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಬೈಕ್ ಸವಾರರೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಧವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತಾದರೂ ಸಂಜೆ 6.30ರವೇಳೆಗೆ ಗಾಳಿ, ಮಿಂಚು-ಗುಡುಗಿನೊಂದಿಗೆ ಜೋರು ಮಳೆ ಸುರಿಯಿತು. ಇದರಿಂದ ನಗರದ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ರಸ್ತೆ ಸಂಚಾರ ಅಸ್ತವ್ಯಸ್ತವಾಗಿ, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು, ಬೀದಿಬದಿ ವ್ಯಾಪಾರಿಗಳು…

ಕ್ಯಾನ್ಸರ್ ರೋಗ ದೇಹಾದ್ಯಂತ ಹರಡದಂತೆ ತಡೆಯುವ ಚಿಕಿತ್ಸಾ ವಿಧಾನ ಬೆಳಕಿಗೆ
ಮೈಸೂರು

ಕ್ಯಾನ್ಸರ್ ರೋಗ ದೇಹಾದ್ಯಂತ ಹರಡದಂತೆ ತಡೆಯುವ ಚಿಕಿತ್ಸಾ ವಿಧಾನ ಬೆಳಕಿಗೆ

May 9, 2019

ಪ್ರೊ. ಕೆ.ಎಸ್.ರಂಗಪ್ಪ ನೇತೃತ್ವದ ಮೈಸೂರು ವಿವಿ ವಿಜ್ಞಾನಿಗಳ ತಂಡದಿಂದ ವಿಶ್ವಮಾನ್ಯ ಯಶಸ್ವಿ ಸಂಶೋಧನೆ ಮೈಸೂರು: ಕ್ಯಾನ್ಸರ್ ತಡೆಗೆ ಔಷಧಿಗಳನ್ನು ವಿನ್ಯಾಸ ಗೊಳಿಸುವಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಹಾಗೂ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ ನೇತೃತ್ವದ ಸಂಶೋಧನಾ ತಂಡ ಯಶಸ್ವಿ ಯಾಗಿ, ವಿಶ್ವ ಮಾನ್ಯತೆಗೆ ಪಾತ್ರವಾಗಿದೆ. ಈ ತಂಡದ `Targeting Hepar anase in Cancer’ ಸಂಶೋಧನಾ ಲೇಖನ ವಿಶ್ವದ ಪ್ರಸಿದ್ಧ `iScience’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದು, ಇದು ಮೈಸೂರಿಗರು ಮಾತ್ರವಲ್ಲ ಇಡೀ ದೇಶವೇ ಹೆಮ್ಮೆ ಪಡುವ…

ಅಶ್ವದಳ ಅಧಿಕಾರಿ ಭುಜಂಗರಾವ್ ಪ್ರತಿಮೆ ಸುರಕ್ಷಿತ ಸ್ಥಳಾಂತರ
ಮೈಸೂರು

ಅಶ್ವದಳ ಅಧಿಕಾರಿ ಭುಜಂಗರಾವ್ ಪ್ರತಿಮೆ ಸುರಕ್ಷಿತ ಸ್ಥಳಾಂತರ

May 9, 2019

ಮೈಸೂರು: ಶತ ಮಾನದಷ್ಟು ಹಳೆಯ ಮೈಸೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಂದಿನ ಮೈಸೂರು ಸಂಸ್ಥಾನದ ಅಶ್ವದಳದ ಅಧಿಕಾರಿ ಭುಜಂಗರಾವ್ ಅವರ ಪ್ರತಿಮೆ ಬುಧವಾರ ಸುರಕ್ಷಿತವಾಗಿ ಸ್ಥಳಾಂತರಗೊಂಡಿತು. ಸುರಕ್ಷಿತ-ಸಂಪ್ರದಾಯಿಕ ವಿಧಾನದ ಮೂಲಕ ಮಂಗಳವಾರ ಅಂಚೆ ವಿತರಕ ಬಸಪ್ಪ ಪ್ರತಿಮೆ ಸ್ಥಳಾಂತರ ಯಶಸ್ವಿಗೊಂಡಿತ್ತು. ಇಂದು ಅದೇ ವಿಧಾನದಲ್ಲಿ ಭುಜಂಗರಾವ್ ಪ್ರತಿಮೆ ಸ್ಥಳಾಂತರಗೊಳಿ ಸಲಾಯಿತು. ಇದೀಗ ಎರಡೂ ಪ್ರತಿಮೆ ಗಳು ಕರ್ನಾಟಕ ಸಶಸ್ತ್ರ ಮೀಸಲು ಪೊಲೀಸ್‍ನ (ಕೆಎಆರ್‍ಪಿ) ಅಶ್ವಾರೋಹಿ ದಳದ ಆವರಣದಲ್ಲಿ ಸುರಕ್ಷಿತಗೊಂಡಂತಾಗಿದೆ. ಈ ಮೊದಲೇ ಭುಜಂಗರಾವ್ ಪ್ರತಿಮೆಗೆ ಪೇಪರ್ ಹುಲ್ಲು,…

ಸರಗಳ್ಳತನದ ಬಗ್ಗೆ ಜಾಗೃತಿ
ಮೈಸೂರು

ಸರಗಳ್ಳತನದ ಬಗ್ಗೆ ಜಾಗೃತಿ

May 9, 2019

ಮೈಸೂರು: ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳತನದ ಹಿನ್ನಲೆ ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ನೇತೃತ್ವ ದಲ್ಲಿ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಉದ್ಯಾನವನದಲ್ಲಿ ಜನ ಜಾಗೃತಿ ಮೂಡಿಸಲಾಯಿತು. ಬೆಲೆ ಬಾಳುವ ಒಡವೆಗಳನ್ನು ಧರಿಸಿ ಒಂಟಿಯಾಗಿ ತಿರುಗಾಡಬೇಡಿ, ಚಿನ್ನದ ಆಭರಣಗಳನ್ನು ಧರಿಸಿ ತಿರುಗಾಡುವ ಸಂದರ್ಭದಲ್ಲಿ ಬಟ್ಟೆಯಿಂದ ಮರೆಮಾಡಿ ಕೊಳ್ಳಿ, ನಗ-ನಾಣ್ಯಗಳನ್ನು ಪರ್ಸ್, ವ್ಯಾನಿಟಿ ಬ್ಯಾಗ್‍ಗಳನ್ನು ತೆಗೆದುಕೊಂಡು ಹೋಗುವಾಗ ಜಾಗೃತರಾಗಿರಿ ಎಂಬಿ ತ್ಯಾದಿ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿ ಸುವ ಮೂಲಕ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಗರ ಪಾಲಿಕೆ ಸದಸ್ಯೆ ಪ್ರಮೀಳಾ…

ಬರ ಬರುತ್ತಾ ಔಷಧಿಗಳೇ ಆಹಾರವಾಗಿವೆ
ಮೈಸೂರು

ಬರ ಬರುತ್ತಾ ಔಷಧಿಗಳೇ ಆಹಾರವಾಗಿವೆ

May 9, 2019

ಮೈಸೂರು: ಇಂದು ಔಷಧಿಗಳ ಬಳಕೆ ಹೆಚ್ಚಾಗಿದ್ದು, ಔಷಧಿ ಗಳೇ ಆಹಾರವಾಗಿ ಬದಲಾಗಿವೆ ಎಂದು ಆರೋಗ್ಯ ನಿರ್ವಹಣೆ ತಜ್ಞ ಡಾ.ಬಿ.ಆರ್.ಪೈ ತಿಳಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇನ್ಸ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮುದ್ರೆಯಿಂದ ನೋವು ನಿರ್ವಹಣೆ’ ಕುರಿತ ಉಪನ್ಯಾಸ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ವರ್ಷ ದಿಂದ ವರ್ಷಕ್ಕೆ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಮನುಷ್ಯ ಔಷಧಿಯ ದಾಸನಾಗುತ್ತಿದ್ದಾನೆ ಎಂದರು. ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕಾಂಶ ವುಳ್ಳ ಆಹಾರವನ್ನು ಸೇವಸುವುದರ ಜತೆಗೆ ದೈಹಿಕ ವ್ಯಾಯಾಮಗಳನ್ನು ಮಾಡುವ ಬದಲು ತಕ್ಷಣವೇ…

ಮಳೆಗಾಲ ಎದುರಿಸಲು ಪಾಲಿಕೆ ಸಜ್ಜು
ಮೈಸೂರು

ಮಳೆಗಾಲ ಎದುರಿಸಲು ಪಾಲಿಕೆ ಸಜ್ಜು

May 9, 2019

ಮೈಸೂರು: ಮಳೆಗಾಲ ಆರಂಭವಾಗಿದ್ದು, ನಗರದಲ್ಲಿ ಯಾವುದೇ ಮಳೆ ಅನಾಹುತ ಸಂಭವಿಸದಂತೆ ಎಚ್ಚರ ವಹಿಸಲು ಮೈಸೂರು ನಗರ ಪಾಲಿಕೆ ಮುಂದಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಚರಂಡಿಯಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಯುವ ಕಾರ್ಯ ಆರಂಭಿಸಿದೆ. ಜತೆಗೆ ಮೂರು ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನೂ ರಚಿಸಿದೆ. ಮಳೆಗಾಲದಲ್ಲಿ ಎದುರಾಗುವ ಸಮಸ್ಯೆ, ಸವಾಲು ಗಳನ್ನು ಸಮರ್ಥವಾಗಿ ಎದುರಿಸಲು ಮೈಸೂರು ನಗರ ಪಾಲಿಕೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಆಯುಕ್ತರಾದ ಶಿಲ್ಪಾನಾಗ್ ‘ಮೈಸೂರು ಮಿತ್ರ’ನೊಂ ದಿಗೆ ಬುಧವಾರ ಮಾತನಾಡಿದರು. ಈ ಬಾರಿ ನಗರಪಾಲಿಕೆ ಮಳೆಗಾಲದಲ್ಲಿ ಎದು ರಾಗುವ ಸಮಸ್ಯೆಗಳನ್ನು…

ಕಟ್ಟಡ ನಿರ್ಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ ನಿಯಂತ್ರಣ ವಿಧಾನ ಅಳವಡಿಕೆಗೆ ಇಂಜಿನಿಯರ್‍ಗಳಿಗೆ ಸಲಹೆ
ಮೈಸೂರು

ಕಟ್ಟಡ ನಿರ್ಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ ನಿಯಂತ್ರಣ ವಿಧಾನ ಅಳವಡಿಕೆಗೆ ಇಂಜಿನಿಯರ್‍ಗಳಿಗೆ ಸಲಹೆ

May 9, 2019

ಮೈಸೂರು: ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆ ಕಡಿತಗೊಳಿ ಸುವ ವಿಧಾನಗಳನ್ನು ಕಟ್ಟಡ ನಿರ್ಮಾಣ ದಲ್ಲಿ ಅಳವಡಿಸಿಕೊಳ್ಳಲು ಸಿವಿಲ್ ಇಂಜಿನಿ ಯರ್‍ಗಳು ಹಾಗೂ ವಾಸ್ತುಶಿಲ್ಪಿಗಳು ಮುಂದಾಗಬೇಕು ಎಂದು ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‍ವೈರ್ನ ಮೆಂಟ್‍ನ ಕಾರ್ಯಕ್ರಮ ನಿರ್ದೇಶಕ ರಜನೇಶ್ ಸರೇನ್ ತಿಳಿಸಿದರು. ಮೈಸೂರು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‍ವೈರ್ನ ಮೆಂಟ್ ಹಾಗೂ ಮೈಸೂರು ವಿವಿಯ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಟರ್ (ಎಸ್‍ಪಿಎ) ಜಂಟಿ ಆಶ್ರಯದಲ್ಲಿ `ನಿರ್ಮಿತ…

ಅಧಿಕಾರಿಗಳೊಂದಿಗೆ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥಶೆಟ್ಟಿ ಸಭೆ
ಮೈಸೂರು

ಅಧಿಕಾರಿಗಳೊಂದಿಗೆ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥಶೆಟ್ಟಿ ಸಭೆ

May 9, 2019

ಮೈಸೂರು: ವಿವಿಧ ಇಲಾಖೆಗಳ ಕಾರ್ಯಚಟುವಟಿಕೆ ಸಂಬಂಧ ಲೋಕಾಯುಕ್ತ ಅಧಿಕಾರಿಗಳಿಂದ ವರದಿ ಪಡೆದಿದ್ದು, ಅಗತ್ಯವಿದ್ದರೆ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ ತಿಳಿಸಿದರು. ಮೈಸೂರಿನ ಲೋಕಾಯುಕ್ತ ಎಸ್‍ಪಿ ಕಚೇರಿಯಲ್ಲಿ ಬುಧವಾರ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಬಳಿಕ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ನಮ್ಮ ಅಧಿಕಾರಿಗಳು ತಮ್ಮ ದೈನಂದಿನ ಕರ್ತವ್ಯದಲ್ಲಿ ಸಿದ್ಧಪಡಿಸಿ ರುವ ವರದಿ ಅವಲೋಕಿಸಿ, ಅವರಿಂದ ಅಗತ್ಯವಿದ್ದ ಮಾಹಿತಿ ಪಡೆದಿದ್ದೇನೆ. ಈ ಸಂಬಂಧ ಪರಿಶೀಲಿಸಿ ಅಗತ್ಯವಿದ್ದರೆ ಸ್ವಯಂ ಪ್ರೇರಿತ (ಸುಮೊಟೊ ಪ್ರಕರಣ) ಪ್ರಕರಣ…

ಕೌಟಿಲ್ಯ ವಿದ್ಯಾಲಯದ ಡಾ.ಎಲ್.ಸವಿತಾ ಅವರಿಗೆ ‘ಅವಂತಿಕಾ ಡಾ.ಎಪಿಜೆ ಅಬ್ದುಲ್ ಕಲಾಂ’ ಪ್ರಶಸ್ತಿ
ಮೈಸೂರು

ಕೌಟಿಲ್ಯ ವಿದ್ಯಾಲಯದ ಡಾ.ಎಲ್.ಸವಿತಾ ಅವರಿಗೆ ‘ಅವಂತಿಕಾ ಡಾ.ಎಪಿಜೆ ಅಬ್ದುಲ್ ಕಲಾಂ’ ಪ್ರಶಸ್ತಿ

May 9, 2019

ಮೈಸೂರು: ಮೈಸೂರು ಕೌಟಿಲ್ಯ ವಿದ್ಯಾ ಲಯದ ಪ್ರಾಂಶುಪಾಲ ರಾದ ಡಾ.ಎಲ್.ಸವಿತಾ ಅವರಿಗೆ ‘ಅವಂತಿಕಾ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ ಲಭಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಇವರು ಮಾಡಿರುವ ಸಾಧನೆಗಳನ್ನು ಗುರುತಿಸಿ ನವದೆಹಲಿಯ ‘ಅವಂತಿಕಾ’ ಸಮಕಾಲೀನ ಕಲಾವಿದರು ಮತ್ತು ಬುದ್ಧಿ ಜೀವಿಗಳ ಸಂಘಟನೆ 2019 ನೇ ಸಾಲಿನ ಪ್ರಶಸ್ತಿಗೆ ಡಾ. ಎಲ್.ಸವಿತಾ ಅವರನ್ನು ಆಯ್ಕೆ ಮಾಡಿದೆ. ಮೈಸೂ ರಿನ ಬಹದ್ದೂರ್ ಇನ್ಸ್‍ಟಿ ಟ್ಯೂಟ್ ಆಫ್ ಮ್ಯಾನೇಜ್ ಮೆಂಟ್‍ನ ಪ್ರ್ರಾಧ್ಯಾಪಕ ಡಾ.ಪ್ರಸಾದ್ ಸಂಸ್ಥೆಯ ಪರವಾಗಿ ಪ್ರಶಸ್ತಿ ಪ್ರದಾನ ಮಾಡಿದರು.

ಚಿಪ್ಪು ಹಂದಿ ಮಾರಾಟ: ವ್ಯಕ್ತಿ ಬಂಧನ
ಮೈಸೂರು

ಚಿಪ್ಪು ಹಂದಿ ಮಾರಾಟ: ವ್ಯಕ್ತಿ ಬಂಧನ

May 9, 2019

ಮೈಸೂರು: ಅಕ್ರಮ ವಾಗಿ ಕಾಡು ಚಿಪ್ಪು ಹಂದಿ (ಪೆಂಗೋಲಿ ಯನ್) ಮಾರಾಟ ಮಾಡುತ್ತಿದ್ಧ ವ್ಯಕ್ತಿಯನ್ನು ಅರಣ್ಯ ಸಂಚಾರ ದಳ(Forest mobile squad)ದ ಪೊಲೀಸರು ಬಂಧಿಸಿದ್ದಾರೆ. ಹಾಸನದ ಸಿದ್ದಯ್ಯ ನಗರ ನಿವಾಸಿ ಲೇಟ್ ಎಲ್ಲಯ್ಯ ಅವರ ಮಗ ಅಣ್ಣಪ್ಪ(30) ಬಂಧಿತ. ಆತನಿಂದ ಎರಡೂವರೆ ಕೆ.ಜಿ. ತೂಕದ ಕಾಡು ಚಿಪ್ಪುಹಂದಿ, ಎರಡು ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಆಧರಿಸಿ ಸಿಬ್ಬಂದಿ ಗಳೊಂದಿಗೆ ಕಾರ್ಯಾಚರಣೆ ನಡೆಸಿದ ಮೈಸೂರು ಜಿಲ್ಲೆಯ ಅರಣ್ಯ ಸಂಚಾರಿ ದಳದ ಪ್ರಭಾರ ಸಬ್‍ಇನ್ಸ್‍ಸ್ಪೆಕ್ಟರ್ ಎಂ.ಬಿ. ರಮೇಶ್, ಕೆ.ಆರ್.ನಗರ ತಾಲೂಕು,…

1 320 321 322 323 324 330
Translate »