ಕ್ಯಾನ್ಸರ್ ರೋಗ ದೇಹಾದ್ಯಂತ ಹರಡದಂತೆ ತಡೆಯುವ ಚಿಕಿತ್ಸಾ ವಿಧಾನ ಬೆಳಕಿಗೆ
ಮೈಸೂರು

ಕ್ಯಾನ್ಸರ್ ರೋಗ ದೇಹಾದ್ಯಂತ ಹರಡದಂತೆ ತಡೆಯುವ ಚಿಕಿತ್ಸಾ ವಿಧಾನ ಬೆಳಕಿಗೆ

May 9, 2019

ಪ್ರೊ. ಕೆ.ಎಸ್.ರಂಗಪ್ಪ ನೇತೃತ್ವದ ಮೈಸೂರು ವಿವಿ ವಿಜ್ಞಾನಿಗಳ ತಂಡದಿಂದ ವಿಶ್ವಮಾನ್ಯ ಯಶಸ್ವಿ ಸಂಶೋಧನೆ

ಮೈಸೂರು: ಕ್ಯಾನ್ಸರ್ ತಡೆಗೆ ಔಷಧಿಗಳನ್ನು ವಿನ್ಯಾಸ ಗೊಳಿಸುವಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಹಾಗೂ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ ನೇತೃತ್ವದ ಸಂಶೋಧನಾ ತಂಡ ಯಶಸ್ವಿ ಯಾಗಿ, ವಿಶ್ವ ಮಾನ್ಯತೆಗೆ ಪಾತ್ರವಾಗಿದೆ.

ಈ ತಂಡದ `Targeting Hepar anase in Cancer’ ಸಂಶೋಧನಾ ಲೇಖನ ವಿಶ್ವದ ಪ್ರಸಿದ್ಧ `iScience’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದು, ಇದು ಮೈಸೂರಿಗರು ಮಾತ್ರವಲ್ಲ ಇಡೀ ದೇಶವೇ ಹೆಮ್ಮೆ ಪಡುವ ವಿಷಯವಾಗಿದೆ.

ಸೆಲ್ ಪ್ರೆಸ್ ಪ್ರಕಾಶನಾಲಯ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ವಿಜ್ಞಾನ ಸಂಶೋಧನಾ ಪ್ರಕಾಶನ ಸಂಸ್ಥೆ ಯಾಗಿದೆ. ಈ ಸಂಸ್ಥೆ `ಐಸೈನ್ಸ್’ ನಿಯತ ಕಾಲಿಕೆಯನ್ನು ಪ್ರಕಟಿಸುತ್ತಿದ್ದು, ಕರ್ನಾ ಟಕದ ವಿಶ್ವ ವಿದ್ಯಾನಿಲಯಗಳಿಂದ ಐಸೈನ್ಸ್ ನಿಯತಕಾಲಿಕೆಯಲ್ಲಿ ಸಂಶೋಧನಾ ಲೇಖನ ಪ್ರಕಟಿಸಿದ ಹೆಮ್ಮೆ ಮೈಸೂರು ವಿವಿಗೆ ಸಲ್ಲುತ್ತದೆ. ಈ ಸಂಶೋಧನಾ ಲೇಖ ನವು ಮೈಸೂರು ವಿವಿಯ ಗೌರವ ವಿಶ್ವ ಮಟ್ಟದಲ್ಲಿ ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ವಿಶ್ವದ ಮೂರು ಉನ್ನತ ಕ್ಯಾನ್ಸರ್ ಜೀವಶಾಸ್ತ್ರಜ್ಞರು ಸಂಶೋಧನಾ ಲೇಖನವನ್ನು ಮೌಲ್ಯಮಾಪನ ಮಾಡಿ, ಅದರ ಪ್ರಕಟಣೆಗಾಗಿ ಶಿಫಾರಸು ಮಾಡಿ ದ್ದಾರೆ. ಇದು ಮೈಸೂರು ವಿಶ್ವವಿದ್ಯಾ ನಿಲಯದಿಂದ ಪ್ರೊ.ಕೆ.ಎಸ್.ರಂಗಪ್ಪ ಮತ್ತು ಇಸ್ರೇಲ್‍ನ ಪ್ರೊ.ಇಸ್ರೇಲ್ ವ್ಲೊಡಾ ವ್ಸ್‍ಕಿ (Prof. Israel Vlodavsky) ನಡುವಿನ ಅಂತಾರಾಷ್ಟ್ರೀಯ ಸಹಭಾಗಿ ತ್ವದ ಫಲಿತಾಂಶವಾಗಿದೆ.

ಮೂರು ವರ್ಷದ ಅವಧಿಗೆ 2016ರಲ್ಲಿ ಅಂತಾರಾಷ್ಟ್ರೀಯ ಸಹ ಯೋಗದ ಸಂಶೋಧನಾ ಯೋಜನೆ ಯನ್ನು ಪ್ರಾರಂಭಿಸಲಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯದ ತಂಡದ ನೇತೃತ್ವವನ್ನು ಪ್ರೊ.ರಂಗಪ್ಪನವರೇ ವಹಿಸಿದ್ದರು. ಡಾ.ಸಿ.ಡಿ.ಮೋಹನ್, ಡಾ.ಆರ್. ಶೋಭಿತ್, ಡಾ.ಚಂದ್ರನಾಯಕ್, ಡಾ. ಬಸಪ್ಪ ಮೈಸೂರು ಸಂಶೋಧನಾ ತಂಡ ದಲ್ಲಿದ್ದಾರೆ. ಇಸ್ರೇಲ್ ತಂಡವು ಪ್ರೊ.ಇಸ್ರೇಲ್ ವ್ಲೊಡಾವ್ಸ್‍ಕಿ ನೇತೃತ್ವ ಹೊಂದಿದೆ.

ಕ್ಯಾನ್ಸರ್ ಕೋಶಗಳು ದೇಹದ ವಿವಿಧ ಭಾಗಗಳಿಗೆ ಹರಡದಂತೆ ತಡೆಗಟ್ಟುವ ಹೊಸ ಚಿಕಿತ್ಸಾ ವಿಧಾನವನ್ನು ಈ ವಿಜ್ಞಾನಿಗಳ ತಂಡ ಕಂಡು ಹಿಡಿದಿದೆ. ದೇಹದ ಭಾಗವೊಂದರಲ್ಲಿ ಕಾಣಿಸಿ ಕೊಳ್ಳುವ ಕ್ಯಾನ್ಸರ್ ಗೆಡ್ಡೆ ಬಳಿಕ ಅದು ದೇಹದ ಇತರ ಭಾಗಗಳಿಗೂ ಹರಡುತ್ತದೆ. ಈ ವಿಜ್ಞಾನಿಗಳ ತಂಡವು ಕಂಡು ಹಿಡಿದಿರುವ ಚಿಕಿತ್ಸಾ ವಿಧಾನವು, ಕ್ಯಾನ್ಸರ್ ಕೋಶಗಳನ್ನು ಒಂದು ಭಾಗದಿಂದ ಇತರ ಭಾಗಗಳಿಗೆ ಕೊಂಡೊಯ್ಯುವ `ಹೆಪಾರನೇಸ್ (Heparanase) ಎಂಬ ಕಿಣ್ವ (Enzyme) ವನ್ನು ನಿಷ್ಕ್ರಿಯಗೊಳಿಸುತ್ತದೆ. ಕ್ಯಾನ್ಸರ್ ಬಾಧಿತ ಅಂಗಕ್ಕೆ ಈ ಚಿಕಿತ್ಸೆ ನೀಡಿದರೆ ಸಾಕು. ಈ ಚಿಕಿತ್ಸಾ ಸೂತ್ರವನ್ನು ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ಇಸ್ರೇಲಿನ ಪ್ರೊ.ಇಸ್ರೇಲ್ ವ್ಲೊಡಾವ್‍ಸ್ಕೀ ನೇತೃತ್ವದ ವಿಜ್ಞಾನಿಗಳ ತಂಡವು ಒಟ್ಟು ರೂ. 40 ಲಕ್ಷ ವೆಚ್ಚದಲ್ಲಿ ಸಂಶೋಧನೆ ಮಾಡಿದೆ. ಸತತ ಮೂರು ವರ್ಷಗಳ ಅವಧಿಯ ಸಂಶೋಧನೆ ಬಳಿಕ ಅನೇಕ ಪ್ರಯೋಗಗಳನ್ನು ನಡೆಸಿ ಅಂತಿಮವಾಗಿ ಚಿಕಿತ್ಸಾ ಸೂತ್ರವನ್ನು ಕಂಡು ಹಿಡಿದಿದ್ದಾರೆ.

ಪ್ರೊ.ಕೆ.ಎಸ್.ರಂಗಪ್ಪ ಅವರ ಹಲ ವಾರು ರಾಸಾಯನಿಕಗಳು ವಿಭಿನ್ನ ರೀತಿಯ ಕ್ಯಾನ್ಸರ್‍ಗಳ ವಿರುದ್ಧ ಮಾನವ ಪ್ರಾಯೋಗಿಕ ಹಂತದಲ್ಲಿವೆ. ಪ್ರೊಸೀ ಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಮತ್ತು ಐಸೈನ್ಸ್ ನಿಯತ ಕಾಲಿಕೆಯಲ್ಲಿ ಸಂಶೋಧನಾ ಲೇಖನ ಪ್ರಕಟವಾದ ನಂತರ, ಫಿನ್‍ಲ್ಯಾಂಡ್, ಚೀನಾ, ಫಿಲಿಪೈನ್ಸ್‍ನ ಪ್ರಮುಖ ವಿಜ್ಞಾನಿ ಗಳು, ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಔಷಧೀಯ ರಾಸಾಯನಿಕಗಳ ಅಭಿವೃದ್ಧಿ ಬಗ್ಗೆ ಚರ್ಚಿಸಲು ಮತ್ತು ಅಂತಾ ರಾಷ್ಟ್ರೀಯ ದ್ವಿಪಕ್ಷೀಯ ಸಹಭಾಗಿತ್ವವನ್ನು ಹೆಚ್ಚಿಸಲು ಆಹ್ವಾನ ನೀಡಿದ್ದಾರೆ.

ಪ್ರೊ.ರಂಗಪ್ಪ ಈಗಾಗಲೇ ಫಿಲಿಫೈನ್ಸ್‍ನ ಯೂನಿವರ್ಸಿಟಿ ಆಫ್ ಸಾಂಟೋ ಥಾಮಸ್‍ನಲ್ಲಿ ಕ್ಯಾನ್ಸರ್ ರೀಸರ್ಚ್ ಇನ್ಸ್‍ಟಿ ಟ್ಯೂಟ್‍ಗೆ ಭೇಟಿ ನೀಡಿ ಅದರ ನಿರ್ದೇಶಕರೊಂದಿಗೆ ಚರ್ಚೆ ಮಾಡಿ ದ್ದಾರೆ. ಮುಂದೆ ಚೈನಾಗೂ ತೆರಳಲಿದ್ದು, ಅಲ್ಲಿಯೂ ಕ್ಯಾನ್ಸರ್ ತಡೆ ಕುರಿತ ಔಷಧಿ ಗಳ ಕುರಿತು ವಿಸ್ತøತವಾಗಿ ಚರ್ಚಿಸಲಿದ್ದಾರೆ.

Translate »