ಮೈಸೂರು, ಜ.17(ಆರ್‍ಕೆ)- ಬಹು ನಿರೀಕ್ಷಿತ ಮೈಸೂರು-ಬೆಳಗಾವಿ ನಡುವೆ ವಿಮಾನ ಹಾರಾಟ ಇಂದಿನಿಂದ ಆರಂಭ ವಾಯಿತು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ದಲ್ಲಿ ಇಂದು ಬೆಳಿಗ್ಗೆ 11 ಗಂಟೆ ವೇಳೆಗೆ ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್, ಮೈಸೂರಿ ನಿಂದ ಬೆಳಗಾವಿಗೆ ನಿತ್ಯ ಹಾರಾಡುವ 72 ಆಸನ ಸಾಮಥ್ರ್ಯದ ಟ್ರೂಜೆಟ್ ವಿಮಾನ ಸೇವೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಮೈಸೂರಿನಿಂದ ವಿವಿಧ ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ 8ನೇ ವಿಮಾನ ಇದಾ ಗಿದ್ದು, ಮಂಡಕಳ್ಳಿ ವಿಮಾನ ನಿಲ್ದಾಣವೀಗ ಪ್ರತಿದಿನ…
ಮೈಸೂರು ವಿಮಾನ ನಿಲ್ದಾಣ ಭದ್ರತೆಗೆ `ಬಾಂಬ್ ಸೂಟ್’ ರೆಡಿ
January 18, 2020ಮೈಸೂರು, ಜ. 17(ಆರ್‍ಕೆ)- ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಸುರಕ್ಷತೆ ಹಾಗೂ ಭದ್ರತೆಗಾಗಿ ಇದೀಗ ಅತ್ಯಾಧುನಿಕ ತಂತ್ರಜ್ಞಾನದ `ಬಾಂಬ್ ಸೂಟ್’ ಖರೀದಿ ಸಲಾಗಿದೆ. ಮೂರು ದಿನಗಳ ಹಿಂದಷ್ಟೇ 25 ಲಕ್ಷ ರೂ. ಮೌಲ್ಯದ ಈ ಬಾಂಬ್ ಸೂಟ್ ಖರೀದಿಸ ಲಾಗಿದೆ. ಈ ಸೂಟ್ ಬಾಂಬ್ ನಿಷ್ಕ್ರಿಯಗೊಳಿಸಲು ಸಹಕಾರಿಯಾಗಲಿದೆ ಎಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್ ತಿಳಿಸಿದ್ದಾರೆ. ಈ ಬಾಂಬ್ ಸೂಟ್, ಸ್ಫೋಟಕಗಳನ್ನು ನಿಷ್ಕ್ರಿಯಗೊಳಿ ಸುವ ವೇಳೆ ಬಳಸಲಾಗುತ್ತದೆ. ಸ್ಫೋಟ ಸಂಭವಿಸಿದರೂ ಈ ಸೂಟ್ ಧರಿಸುವ…
ಪಾಂಡವಪುರ, ಚುಂಚನಕಟ್ಟೆ ಸಕ್ಕರೆ ಕಾರ್ಖಾನೆ ಗುತ್ತಿಗೆ ನೀಡಲು ಸಂಪುಟ ತೀರ್ಮಾನ
January 18, 2020ಬೆಂಗಳೂರು, ಜ.17(ಕೆಎಂಶಿ)- ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಚುಂಚನಕಟ್ಟೆಯ ಶ್ರೀರಾಮ ಸಕ್ಕರೆ ಕಾರ್ಖಾನೆಯ 40 ವರ್ಷ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಸಚಿವ ಸಂಪುಟ ಸಭೆ ತೀರ್ಮಾನ ಮಾಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ವಿವರ ಗಳನ್ನು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ವಿವರಿಸಿದರು. ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಚುಂಚನಕಟ್ಟೆಯ ಶ್ರೀರಾಮ ಸಕ್ಕರೆ ಕಾರ್ಖಾನೆ ತೀವ್ರ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಮುಚ್ಚಲ್ಪಟ್ಟಿದೆ. ಈ…
ಬೈಕ್ ಕದಿಯುತ್ತಿದ್ದ ಯುವಕ ಬಂಧನ: 11 ಬೈಕ್ ವಶ
January 18, 2020ಮೈಸೂರು, ಜ.17(ಎಸ್‍ಬಿಡಿ)- ಸುಲಭವಾಗಿ ಹಣ ಸಂಪಾದಿಸಲೆಂದು ಬೈಕ್ ಕಳ್ಳತನ ರೂಢಿಸಿಕೊಂಡಿದ್ದ ಯುವಕನನ್ನು ಮೈಸೂರಿನ ಸಿಸಿಬಿ ಪೊಲೀಸರು ಬಂಧಿಸಿ, 11 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಕೆ.ಆರ್.ನಗರ ತಾಲೂಕು, ಲಕ್ಷ್ಮೀಪುರ ಗ್ರಾಮದ ಮಹದೇವ(22) ಬಂಧಿತ ಬೈಕ್ ಕಳ್ಳ. ಈತ ಮೈಸೂರಿನ ಹೂಟಗಳ್ಳಿ ಎಸ್‍ಆರ್‍ಎಸ್ ಕಾಲೋನಿಯಲ್ಲಿ ಪೊಲೀಸ ರಿಗೆ ಸಿಕ್ಕಿಬಿದ್ದಿದ್ದಾನೆ. ಯುವಕನೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಪೊಲೀಸರು, ಸ್ಥಳಕ್ಕೆ ದೌಡಾಯಿಸಿ ಬೈಕ್‍ನಲ್ಲಿ ಸಂಚರಿಸುತ್ತಿದ್ದ ಮಹದೇವ ನನ್ನು ತಡೆದು ನಿಲ್ಲಿಸಿ, ವಿಚಾರಣೆ ನಡೆಸಿದ್ದಾರೆ. ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ತೋರಿಸದ…
ನಾಗರಹೊಳೆ ಅಭಯಾರಣ್ಯದಲ್ಲಿ `ಕಾಡ್ಗಿಚ್ಚು’ ತಡೆಗೆ ಕಣ್ಗಾವಲು
January 18, 2020ಮೈಸೂರು,ಜ.17- ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ನಾಗರಹೊಳೆ ಅಭಯಾರಣ್ಯ ಉರಿ ಬಿಸಿಲಿನಿಂದಾಗಿ ಒಣಗುತ್ತಿದೆ. ಮುಂಬ ರುವ ಬೇಸಿಗೆಯಲ್ಲಿ ಸಂಭವಿಸಬಹುದಾದ ಅಗ್ನಿ ಆಕಸ್ಮಿಕ ತಡೆಗೆ ಸಜ್ಜಾಗಿರುವ ಅರಣ್ಯ ಇಲಾಖೆ ಈ ಬಾರಿ 688 ಕಿ.ಮೀ ಹೆಚ್ಚು ವರಿ ಫೈರ್‍ಲೈನ್ ಸೇರಿದಂತೆ ಒಟ್ಟು 2677 ಕಿ.ಮೀ ಬೆಂಕಿ ರೇಖೆ ನಿರ್ಮಿಸಲಾಗಿದೆ. ಪ್ರತಿ ಬೇಸಿಗೆಯಲ್ಲಿ ಅರಣ್ಯ ಹಾಗೂ ವನ್ಯಜೀವಿ ಸಂಕುಲದ ರಕ್ಷಣೆಯೇ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣ ಮಿಸುತ್ತದೆ. ಡಿಸೆಂಬರ್‍ನಿಂದ ಮಾರ್ಚ್ ಅಂತ್ಯದವರೆಗೆ ಅರಣ್ಯ ಪ್ರದೇಶವನ್ನು ಕಾಪಾಡಿ ಕೊಳ್ಳುವುದಕ್ಕೆ ಇಲಾಖೆ ಎಲ್ಲಿಲ್ಲದ…
ಸಮರ್ಪಕ ಕುಡಿಯುವ ನೀರು ಪೂರೈಸಿ, ಕಸದ ರಾಶಿ ತೆರವುಗೊಳಿಸಿ: ಶಾಸಕ ನಾಗೇಂದ್ರ ಸೂಚನೆ
January 18, 2020ಮೈಸೂರು, ಜ.17(ಆರ್‍ಕೆ)-ನಜರ್ ಬಾದ್ ಬಡಾವಣೆ ನಿವಾಸಿಗಳಿಗೆ ಸಮರ್ಪಕ ವಾಗಿ ಕುಡಿಯುವ ನೀರು ಪೂರೈಸಿ ಕಸದ ರಾಶಿಗಳನ್ನು ತೆಗೆಸಿ ಸ್ವಚ್ಛಗೊಳಿಸುವಂತೆ ಶಾಸಕ ಎಲ್.ನಾಗೇಂದ್ರ ಅವರು ಅಧಿ ಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪಾಲಿಕೆ 40ನೇ ವಾರ್ಡ್‍ನ ನಜರ್ ಬಾದ್‍ನಲ್ಲಿ ಇಂದು ಪಾದಯಾತ್ರೆ ಕೈಗೊಂಡು ಸಾರ್ವಜನಿಕ ಕುಂದು-ಕೊರತೆ ಪರಿಶೀಲಿ ಸಿದ ಅವರು, ಚಾಮುಂಡಿ ವಿಹಾರ ಕ್ರೀಡಾಂಗಣದ ರಸ್ತೆ ಬದಿ, ಪಾರ್ಕುಗಳಲ್ಲಿ ಸಂಗ್ರಹವಾಗಿರುವ ಘನ ತ್ಯಾಜ್ಯವನ್ನು 5 ದಿನದೊಳಗಾಗಿ ತೆರವುಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು. 20 ಲಕ್ಷ ರೂ. ನಗರೋತ್ಥಾನ ಯೋಜನೆ ಅನುದಾನದಲ್ಲಿ…
ಎನ್‍ಆರ್ ಸಂಚಾರ ಠಾಣೆಗೆ ಹೈವೇ ಗಸ್ತು ವಾಹನ ಸೇವೆ
January 18, 2020ಮೈಸೂರು, ಜ. 17(ಆರ್‍ಕೆ)- ಮೈಸೂ ರಿನ ಎನ್‍ಆರ್ ಸಂಚಾರ ಠಾಣೆಗೆ ಹೊಸ ಇನ್ನೋವಾ ಕ್ರಿಸ್ಟಾ ಹೈವೇ ಗಸ್ತು ವಾಹನ ವನ್ನು ಒದಗಿಸಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದಲ್ಲಿ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಮಹಿಳೆಯರ ನೆರವಿಗೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ಅನು ಕೂಲವಾಗುವಂತೆ ಈ ಹೈವೇ ಗಸ್ತು ವಾಹನ ವನ್ನು ಮೈಸೂರು ನಗರ ಪೊಲೀಸ್ ಘಟಕದ ವತಿಯಿಂದ ಒದಗಿಸಲಾಗಿದೆ. ವಾಹನದಲ್ಲಿ 1 ಕ್ಯಾಮರಾ, 1 ಸ್ಪೀಡ್ ರೀಡರ್, 1 ಸರ್ಕುಲೇಟ್ ಲೈಟ್, ಗಾಯಾಳು…
ಬ್ಯಾಕ್‍ಲಾಗ್ ಹುದ್ದೆಗಳ ತ್ವರಿತ ನೇಮಕಾತಿಗೆ ಡಿಸಿಎಂ ಕಾರಜೋಳ ಸೂಚನೆ
January 18, 2020ಬೆಂಗಳೂರು,ಜ.17: ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಸಹಕಾರ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ 2508 ಬ್ಯಾಕ್ ಲಾಗ್ ಹುದ್ದೆಗಳನ್ನು ಒಂದು ತಿಂಗಳೊಳಗೆ ನೇಮಕಾತಿ ಮಾಡು ವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ತಿಳಿಸಿದರು. ಬ್ಯಾಕ್‍ಲಾಗ್ ಹುದ್ದೆಗಳ ನೇಮಕಾತಿ ಕುರಿತು ಸಚಿವ ಸಂಪುಟ ಉಪ ಸಮಿತಿ ಸಭೆಯನ್ನು ನಡೆಸಿ, ಪ್ರಗತಿ ಪರಿಶೀಲನೆ ನಡೆಸಲಾಯಿತು. ಉನ್ನತ ಶಿಕ್ಷಣ ಇಲಾಖೆಯಲ್ಲಿ 882 ಹುದ್ದೆ, ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 432, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ 346, ಲೋಕೋಪಯೋಗಿ ಇಲಾಖೆಯಲ್ಲಿ…
ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ 89 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್ ಕಳವು
January 18, 2020ಮೈಸೂರು,ಜ.17(ಆರ್‍ಕೆ)- ಕೆಎಸ್‍ಆರ್‍ಟಿಸಿ ಬಸ್ಸಿನ ಕ್ಯಾರಿಯರ್‍ನಲ್ಲಿರಿಸಿದ್ದ 2.7 ಲಕ್ಷ ರೂ. ಬೆಲೆಬಾಳುವ 89 ಗ್ರಾಂ ಚಿನ್ನಾಭರಣಗಳಿದ್ದ ಪ್ರಯಾಣಿಕರ ಬ್ಯಾಗ್ ಕಳವಾಗಿ ರುವ ಘಟನೆ ಮೈಸೂರಿನ ಸಬರ್ಬನ್ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಮಡಿಕೇರಿಯ ಪ್ರೇಮಾ ಎಂಬುವರೇ ಆಭರಣವಿದ್ದ ಬ್ಯಾಗ್ ಕಳೆದುಕೊಂಡ ಪ್ರಯಾಣಿಕರು. ಜನವರಿ 16ರಂದು ಬೆಳಿಗ್ಗೆ 8.10 ಗಂಟೆ ವೇಳೆಗೆ ರಾಮನಗರದಿಂದ ಮಡಿಕೇರಿಗೆ ಹೋಗುವ ಕೆಎಸ್‍ಆರ್‍ಟಿಸಿ ಬಸ್ಸಿಗೆ ಹತ್ತಿದ್ದ ಪ್ರೇಮಾ ಅವರು, ಬೆಳಿಗ್ಗೆ 10.15 ಗಂಟೆ ವೇಳೆಗೆ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದರು. ಬಸ್ಸು 7ನೇ…
ಎಣ್ಣೆ ನಿಮ್ದು… ಊಟ ನಮ್ದು.. ಹಾಡುಗಳೇ ಹೆಚ್ಚು ಪ್ರಚಾರಕ್ಕೆ
January 18, 2020ಮೈಸೂರು, ಜ.17(ಆರ್‍ಕೆಬಿ)- ಕನ್ನಡ ಚಿತ್ರರಂಗಕ್ಕೆ ಬೇಕಿರುವುದು ಆರ್ಥಿಕತೆ ಮತ್ತು ಬೌಧ್ಧಿಕತೆಯೇ ಹೊರತು ಆರ್ಥಿಕ ಗುತ್ತಿಗೆದಾರರು ಮತ್ತು ಬೌದ್ಧಿಕ ಗುತ್ತಿಗೆ ದಾರರು ಬೇಕಿಲ್ಲ ಎಂದು ಸಾಹಿತಿ, ಚಲನಚಿತ್ರ ನಿರ್ದೇ ಶಕ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಮೈಸೂರಿನ ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಮಹಾವಿದ್ಯಾಲಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಎಸ್‍ಡಿಎಂ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಕನ್ನಡ ಚಲನಚಿತ್ರಗಳು ಮತ್ತು ಕನ್ನಡ ಸಾಹಿತ್ಯ ವರ್ತಮಾನದ ಸವಾಲುಗಳು’ ಕುರಿತ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿ ರಣಕ್ಕೆ ಚಾಲನೆ ನೀಡಿ…










